ಕೋವಿಡ್ -19 ಲಸಿಕೆ ಪ್ರಮಾಣಪತ್ರವನ್ನು ಈಗ ಸೆಕೆಂಡುಗಳಲ್ಲಿ WhatsApp ಮೂಲಕ ಪಡೆಯಬಹುದು ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯವರ ಕಚೇರಿ ಭಾನುವಾರ ಮಾಹಿತಿ ನೀಡಿದೆ.
"ಮೊದಲು +91 9013151515 ಮೊಬೈಲ್ ಸಂಖ್ಯೆಯನ್ನು ಸೇವ್ ಮಾಡಿಕೊಳ್ಳಿರಿ. ನಂತರದಲ್ಲಿ ವಾಟ್ಸಾಪ್ ಮೂಲಕ "covid certificate" ಎಂದು ಕಳುಹಿಸಿರಿ. ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ OTP ಅನ್ನು ನಮೂದಿಸಿದ ಕೆಲವೇ ಸೆಕೆಂಡ್ ನಲ್ಲಿ ನಿಮ್ಮ ವಾಟ್ಸಾಪ್ ಸಂಖ್ಯೆಗೆ ಲಸಿಕೆ ಪ್ರಮಾಣಪತ್ರವನ್ನು ಕಳುಹಿಸಲಾಗುತ್ತದೆ." ಎಂದು ಮಾಂಡವಿಯವರ ಕಚೇರಿ ಟ್ವೀಟ್ ಮಾಡಿದೆ.
No comments:
Post a Comment