BhandaryVarthe Team

BhandaryVarthe Team
Bhandary Varthe Team

Sunday 1 August 2021

ಸ್ನೇಹ ಮತ್ತು ಸ್ನೇಹಿತರು. ‌‌. ‌. ✍-ಸುಧಾಕರ ಬನ್ನಂಜೆ

ಈ ಜಗತ್ತಿನಲ್ಲಿ ಸ್ನೇಹ ಹಾಗೂ ಸ್ನೇಹಿತರಿಗೆ ಮಹತ್ವದ ಸ್ಥಾನ.  ನಮ್ಮ ಕಷ್ಟ ಸುಖ ಗಳನ್ನು ಅನಿಸಿಕೆ ಗಳನ್ನು ಕೆಲವು ಬಾರಿ ತಂದೆ ತಾಯಿ ಹೆಂಡತಿ ಮಕ್ಕಳ ಜೊತೆ ಹಂಚಿ ಕೊಳ್ಳಲು ಆಗಲ್ಲ. ಆದರೆ ಸ್ನೇಹಿತರ ಜೊತೆ ಹಂಚಿಕೊಂಡು ಮನಸು ಹಗುರ ಮಾಡಿಕೊಳ್ಳಲು ಬಹುದು. ಆತನಿಂದ ಸಲಹೆ ಪಡೆಯಬಹುದು. ಒಂದು ತಿಳಿದು ಕೊಳ್ಳಬೇಕು ಪರಿಚಿತರೆಲ್ಲರು ಸ್ನೇಹಿತರಲ್ಲ ಸ್ನೇಹಿತರ ಆಯ್ಕೆ ಮಾಡಿ ಕೊಳ್ಳುವಾಗ ಎಚ್ಚರಿಕೆ ಅಗತ್ಯ. ನಮ್ಮ ಗುಟ್ಟನ್ನು ಊರಿಡಿ ಹೇಳಿ ನಮ್ಮನ್ನು ಸಿಕ್ಕಿಸಿ ಹಾಕುವವರು ಇರುತ್ತಾರೆ. ನಮ್ಮಲಿ ಹಣ ಇದ್ದಾಗ ತಿಂದು ತೇಗಿ ಹಣ ಇಲ್ಲದಾಗ ಹತ್ತಿರ ಬರದವರು ಸಹ ಇರುತ್ತಾರೆ  ಜೊತೆ ಇದ್ದು ನಮ್ಮ ಏಳಿಗೆಗೆ ಅಡ್ಡ ಹಾಕುವ ಮತ್ಸರ ಪಡುವವರು ಸಹ ಇರುತ್ತಾರೆ. ಹಾಗಾಗಿ ನಮಗೆ ನಿಜವಾದ ಸ್ನೇಹಿತರ ಆಯ್ಕೆ ತುಂಬಾ ಕಷ್ಟ.

ಹಾಗಂತ ಎಲ್ಲರನ್ನೂ ಸಂಶಯದಿಂದ ನೋಡುವ ಅಗತ್ಯ ಇಲ್ಲ. ಕಷ್ಟಕಾಲದಲ್ಲಿ ನೆರವಾಗುವ ಅನೇಕರು ಇದ್ದಾರೆ. ಕೆಲವು ಸಲ ನಮ್ಮ ಸ್ನೇಹಿತರಿಗೆ ತೊಂದರೆ ಇದ್ದು ಅವರು ನಮ್ಮ ಕಷ್ಟ ಕಾಲದಲ್ಲಿ ಸಹಾಯ ಮಾಡಲು ಅಸಮರ್ಥರಿರುತ್ತಾರೆ. ಅದನ್ನು ನಾವು ತಪ್ಪು ತಿಳಿದುಕೊಂಡು ಸ್ನೇಹ ಬಿಡಬಾರದು .

 ಸ್ನೇಹಿತರ ಅಭಿರುಚಿ ನಮ್ಮ ಅಭಿರುಚಿಗೆ ಹೊಂದಿಕೊಳ್ಳುವ ರೀತಿ ಇರಬೇಕು ದುಶ್ಚಟಗಳು ಇರುವವರಿಂದ ಸ್ನೇಹಿತರು ಹಾಳಾಗುತ್ತಾರೆ. ದುಶ್ಚಟಗಳ ಸ್ನೇಹಿತರಿಂದ ನಾವು ಹಾಳಾಗುತ್ತೇವೆ ಎಂಬ ತಿಳುವಳಿಕೆ ಅಗತ್ಯ .

ಪುರಾಣದಲ್ಲಿ ಸಹ ಹಲವಾರು ಖ್ಯಾತ ಸ್ನೇಹಿತರು ದೊರೆಯುತ್ತಾರೆ. ಶ್ರೀಕೃಷ್ಣ ಸುಧಾಮನ ಸ್ನೇಹ ಬಡವ ಬಲ್ಲಿದ ಅಂತರ ತೊಡೆದು ಹಾಕುವ ಸ್ನೇಹ . ದ್ರೋಣ ದ್ರುಪದ ರ ಸ್ನೇಹ ಅಹಂಕಾರ ತೋರಿಸಿದ ಸ್ನೇಹ . ಕರ್ಣ ಸುಯೋಧನ ಸ್ನೇಹ ನಂಬಿಕೆಗೆ ಪ್ರತೀಕವಾದದ್ದು. ಶ್ರೀರಾಮ ಹನುಮಂತ ಸ್ನೇಹ ಭಕ್ತಿ ಸೇವೆ ಗೆ ಆದರ್ಶ . ಶ್ರೀರಾಮ ವಿಭೀಷಣ ಸ್ನೇಹ ಶ್ರೀಕೃಷ್ಣ ಪಾಂಡವರ ಸ್ನೇಹ ರಾಜಕೀಯ ಧರ್ಮ ರಕ್ಷಣೆ ಗೆ ಒಳಗಾದ ದ್ದು.     
ಈಗಿನ ರಾಜಕೀಯ ಪಕ್ಷಗಳೂ  ವ್ಯಕ್ತಿ ಗಳು ಸಹ ರಾಜಕೀಯ ಸ್ನೇಹ ಮಾಡಿ ಕೊಳ್ಳುತ್ತಾರೆ ಇಲ್ಲಿ ಸಿದ್ದಾಂತ ಸಂವಿಧಾನ ಇಲ್ಲ ಕೇವಲ ಮತ ಅಧಿಕಾರ ಅಷ್ಟೇ.
"ಪ್ರಾಮಾಣಿಕ ಸ್ನೇಹಿತರ ಸಹವಾಸದಿಂದ ನಾವು ಒಳ್ಳೆಯವರಾಗಿ ಜೀವನ ನಡೆಸಲು ಸಾಧ್ಯವಿದೆ. ನಿಜವಾದ ಸ್ನೇಹ ಕ್ಕೆ ಜಾತಿ ಮತ ಧರ್ಮ ವರ್ಣ ವರ್ಗ ರಾಜಕೀಯ ಯಾವುದೇ ಸಂಬಂಧವಿಲ್ಲ
ಒಟ್ಟಿನಲ್ಲಿ ಸ್ನೇಹ  ಸ್ನೇಹಿತರು ಇಲ್ಲದವರು ಇಲ್ಲವೇ ಇಲ್ಲ."


-ಸುಧಾಕರ ಬನ್ನಂಜೆ

No comments:

Post a Comment