ಪಡಿತರ ಚೀಟಿದಾರರ E-KYC ಸಂಗ್ರಹಿಸುವ ಕಾರ್ಯವು ಚಾಲ್ತಿಯಲ್ಲಿದ್ದು ಆಗಸ್ಟ್ 1 ರಿಂದ 10 ನೇ ತಾರೀಖಿನ ತನಕ ಈ ಪ್ರಕ್ರಿಯೆ ನಿಮ್ಮ ಗ್ರಾಮದ ನ್ಯಾಯಬೆಲೆ ಅಂಗಡಿಗಳಲ್ಲಿ ನಡೆಯಲಿದೆ.
ಈ-ಕೆವೈಸಿ ಅಂದರೆ ಪಡಿತರ ಚೀಟಿಯಲ್ಲಿನ ಪ್ರತಿಯೊಬ್ಬ ಸದಸ್ಯರು ತಮ್ಮ ಇರುವಿಕೆಯ ಬಗ್ಗೆ ದೃಢೀಕರಣ ನೀಡುವುದು.
ಈ ಕಾರ್ಯವು ಶೇಕಡಾ 58 ರಷ್ಟು ಮಾತ್ರ ಮುಗಿದಿದ್ದು, ಪ್ರತಿಯೊಬ್ಬನ EKYC ಮಾಡದಿದ್ದರೆ EKYC ಮಾಡಿಸದವರ ಪಡಿತರ ಹಂಚಿಕೆ ಸ್ಥಗಿತಗೊಳ್ಳುತ್ತದೆ.
ಆದುದರಿಂದ ತಾಲೂಕು ಆಹಾರ ಇಲಾಖೆಯಿಂದ ಈಗಾಗಲೇ EKYC ಮಾಡಿಸಲು ಬಾಕಿ ಇರುವವರ ಪಟ್ಟಿಯನ್ನು ನ್ಯಾಯಬೆಲೆ ಅಂಗಡಿಗೆ ನೀಡಲಾಗಿದೆ. ಬಾಕಿ ಇರುವ ಪಡಿತರ ಚೀಟಿದಾರರು 10ನೇ ತಾರೀಖಿನ ಒಳಗಾಗಿ ನ್ಯಾಯಬೆಲೆ ಅಂಗಡಿಗೆ ತೆರಳಿ ಬಯೋ(ಥಂಬ್) ನೀಡುವುದು.
ತೆಗೆದುಕೊಂಡು ಹೋಗಬೇಕಾದ ದಾಖಲೆಗಳು-
👇👇👇👇
*ಪಡಿತರ ಚೀಟಿ
*ಆಧಾರ್ ಕಾರ್ಡ್
*ಗ್ಯಾಸ್ ಪುಸ್ತಕ
*ಜಾತಿ-ಆದಾಯ ಪ್ರಮಾಣ ಪತ್ರ(ಇದ್ದಲ್ಲಿ)
*ಮೊಬೈಲ್ ಸಂಖ್ಯೆ.
No comments:
Post a Comment