BhandaryVarthe Team

BhandaryVarthe Team
Bhandary Varthe Team

Sunday, 22 August 2021

ಪುತ್ತೂರಿನಲ್ಲಿದ್ದ ಪ್ರತಿಷ್ಠಿತ ದಿನೇಶ್ ಬೇಕರಿಯ ಶ್ರೀ ಐತಪ್ಪ ಭಂಡಾರಿಯವರ ಧರ್ಮ ಪತ್ನಿ ಶ್ರೀಮತಿ ಭಾರತಿ ಐತಪ್ಪ ಭಂಡಾರಿ ವಿಧಿವಶ

 ಪುತ್ತೂರಿನಲ್ಲಿದ್ದ ಪ್ರತಿಷ್ಠಿತ ದಿನೇಶ್ ಬೇಕರಿ ಯ ಐತಪ್ಪ ಭಂಡಾರಿಯವರ ಧರ್ಮ ಪತ್ನಿ ಶ್ರೀಮತಿ ಭಾರತಿ ಐತಪ್ಪ ಭಂಡಾರಿ ಯವರು ಅಲ್ಪಕಾಲದ ಅಸೌಖ್ಯದಿಂದ ಆಗಸ್ಟ್ 21 ರ ರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.ಅವರಿಗೆ 65 ವರ್ಷ ವಯಸ್ಸಾಗಿತ್ತು.

 

ಒಂದು ಸಮಯದಲ್ಲಿ ಪುತ್ತೂರಿನಲ್ಲಿ ದಿನೇಶ್ ಬೇಕರಿ ಎಂದರೆ ನಮ್ಮ ಸಮಾಜದಲ್ಲಿ ಖ್ಯಾತಿ ಪಡೆದಿತ್ತು.

ಮೃತರು ಗಂಡ ಐತಪ್ಪ ಭಂಡಾರಿ, 4 ಗಂಡು ಮಕ್ಕಳನ್ನುಹಾಗೂ  ಅಪಾರ ಬಂಧುವರ್ಗವನ್ನು ಅಗಲಿದ್ದಾರೆ .

ದಿವಂಗತರು ಕೊಡುಗೈ ದಾನಿಯಾಗಿದ್ದು , ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಉತ್ಸವ ಸಮಿತಿಯ ಉಪಾಧ್ಯಕ್ಷರಾಗಿದ್ದರು

ಮೃತರ ಅಂತ್ಯಕ್ರಿಯೆಯು ತಾರೀಕು 23 ರ ಸೋಮವಾರ ಬೆಳಿಗ್ಗೆ ಮಂಜೇಶ್ವರದ ಬೆಜ್ಜದಲ್ಲಿ ನಡೆಯಲಿದೆಯೆಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.

ದಿವಂಗತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ನಿಧನದ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತನು ಕುಟುಂಬಕ್ಕೆ ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.

-ಭಂಡಾರಿ ವಾರ್ತೆ

No comments:

Post a Comment