ಶ್ರೀಕೃಷ್ಣನ ಜನ್ಮದಿನವನ್ನು ಚಾಂದ್ರಮಾನ ರೀತಿಯಲ್ಲಿ ಶ್ರಾವಣ ಕೃಷ್ಣ ಅಷ್ಟಮಿಯ ಸೌರಮಾನ ರೀತಿಯಲ್ಲಿ ಸಿಂಹ ಮಾಸದ ರೋಹಿಣಿ ನಕ್ಷತ್ರದ ದಿನ ಆಚರಿಸುತ್ತಾರೆ. ಕೃಷ್ಣನ ತಂದೆ ವಾಸುದೇವ ತಾಯಿ ದೇವಕಿ ಆತನ ಸಾಕುತಾಯಿ ಯಶೋದೆ. ಮಹಾಭಾರತದಲ್ಲಿ ಅರ್ಜುನನ ಸಾರಥಿಯಾಗಿ ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರನ್ನು ಗೆಲ್ಲಿಸಲು ಶ್ರೀಕೃಷ್ಣನ ಪಾತ್ರ ಬಹು ಮುಖ್ಯವಾದದ್ದು.
ಇತ್ತೀಚಿನ ದಿನಗಳಲ್ಲಿ ತಂದೆ-ತಾಯಂದಿರು ತಮ್ಮ ಚಿಕ್ಕ ಮಕ್ಕಳಿಗೆ ಶ್ರೀಕೃಷ್ಣನ ವೇಷವನ್ನು ಹಾಕಿ ಕೃಷ್ಣನ ಬಾಲ್ಯದ ತುಂಟಾಟವನ್ನು ಮಕ್ಕಳಲ್ಲಿ ಕಾಣುತ್ತಾರೆ. ಶ್ರೀಕೃಷ್ಣಜನ್ಮಾಷ್ಟಮಿಯ ದಿನದಂದು ವಿಶೇಷವಾಗಿ ಕೆಲವು ಕಡೆ ಮೊಸರುಕುಡಿಕೆ ಕಾರ್ಯಕ್ರಮವನ್ನು ವಿಜ್ರಂಭಣೆಯಿಂದ ಆಚರಿಸುತ್ತಾರೆ ಮೊಸರುಕುಡಿಕೆ ನೋಡಲು ತುಂಬಾ ಖುಷಿಯಾಗುತ್ತೆ.
ಆದರೆ ಮೊಸರು ಕುಡಿಕೆಯಲ್ಲಿ ಎಚ್ಚರ ತಪ್ಪಿದರೆ ಅಪಾಯ ಜಾಸ್ತಿಯಾಗಿರುತ್ತದೆ. ಶ್ರೀಕೃಷ್ಣಜನ್ಮಾಷ್ಟಮಿಯು ಅಂದು ನಾವು ಶಾಲೆಗೆ ಹೋಗುವ ಸಂದರ್ಭದಲ್ಲಿ ಕೃಷ್ಣಜನ್ಮಾಷ್ಟಮಿಗೆ ರಜೆ ಸಿಗುವುದು ತುಂಬಾ ಅಪರೂಪ ಕೆಲವು ಸಲ ಮಕ್ಕಳ ಒತ್ತಾಯಕ್ಕೆ ಶಾಲೆಯಲ್ಲಿ ಕೊಡುತ್ತಿದ್ದರು. ನಾವು ತುಂಬಾ ಖುಷಿಯಿಂದ ಸಾರ್ವಜನಿಕ ಕೃಷ್ಣ ಜನ್ಮಾಷ್ಟಮಿಗೆ ಹೋಗುತ್ತಿದ್ದೆವು. ಅಲ್ಲಿ ಮೊಸರು ಕುಡಿಕೆ ಜೊತೆಗೆ ಜಾರು ಕಂಬ ಸ್ಪರ್ಧೆ, ಹಗ್ಗ ಜಗ್ಗಾಟ, ಗುಂಡುಎಸೆತ, ಮಕ್ಕಳಿಗೆ ಓಟದ ಸ್ಪರ್ಧೆ ಲಕ್ಕಿ ಗೇಮ್ ಮುಂತಾದ ಆಟೋಟ ಸ್ಪರ್ಧೆಯಲ್ಲಿ ಭಾಗವಹಿಸುವ ಖುಷಿ ಎಲ್ಲೂ ಸಿಗುವುದಿಲ್ಲ. ಆದರೆ ಇತ್ತೀಚಿನ ದಿನದಲ್ಲಿ ಮಕ್ಕಳನ್ನು ಯಾವುದೇ ಕಾರ್ಯಕ್ರಮಕ್ಕೆ ಅಥವಾ ಆಟೋಟ ಸ್ಪರ್ಧೆಗೆ ಭಾಗವಹಿಸಲು ಬಿಡುವುದೇ ಅಪರೂಪವಾಗಿದೆ ಕಾರಣ ಮಕ್ಕಳು ಎಲ್ಲಿ ಬಿದ್ದು ಗಾಯ ಮಾಡಿಕೊಳ್ಳುತ್ತಾರೆ ಅನ್ನುವ ಭಯವೇ ಪೋಷಕರಿಗೆ ಜಾಸ್ತಿಯಾಗಿದೆ. ಕೃಷ್ಣಾಷ್ಟಮಿಯಂದು ಅಲ್ಲಿಗೆ ಬರುತ್ತಿದ್ದ ಐಸ್ ಕ್ಯಾಂಡಿಯನ್ನು 1 ರೂಪಾಯಿಗೆ ಕೊಳ್ಳುತ್ತಿದ್ದೆವು. ಐಸ್ ಕ್ಯಾಂಡಿ ತಿನ್ನುವಾಗ ಹಣ ತರದ ಅದೆಷ್ಟು ಸಪ್ಪೆ ಮುಖಮಾಡಿಕೊಂಡ ಅದೆಷ್ಟೋ ಮಕ್ಕಳು. ಸಾರ್ವಜನಿಕವಾಗಿ ಆಚರಿಸುವ ಶ್ರೀಕೃಷ್ಣಜನ್ಮಾಷ್ಟಮಿಯು ಇಂದು ಮನೆಯಲ್ಲಿ ಹೆಚ್ಚಾಗಿ ಆಚರಿಸುತ್ತಾರೆ.
ಎಲ್ಲಾ ಭಂಡಾರಿ ವಾರ್ತೆಯ ಓದುಗರಿಗೆ ಶ್ರೀಕೃಷ್ಣಜನ್ಮಾಷ್ಟಮಿಯ ಶುಭಾಶಯಗಳು.
✍️ ಅಶ್ವಿನಿ ಪ್ರವೀಣ್ ಭಂಡಾರಿ ಅಂಜರಾಡಿ, ಜಾರಿಗೆಕಟ್ಟೆ
No comments:
Post a Comment