ಹಿಂದೂ ಸಮಾಜದಲ್ಲಿ ಯಾವುದೇ ಹಬ್ಬವಿರಲಿ ಅದಕ್ಕೆ ತನ್ನದೇ ಆದಂತಹ ವೈಶಿಷ್ಟ್ಯವಿದೆ . ಶ್ರಾವಣ ಹುಣ್ಣಿಮೆ ದಿನ ಆಚರಿಸುವ ಈ ಹಬ್ಬ ತನ್ನದೇ ಆದ ಮಹತ್ವವನ್ನು ಹೊಂದಿದೆ. ರಕ್ಷಾಬಂಧನ ಹಬ್ಬವು ಅಣ್ಣ-ತಂಗಿಯರ ಹಬ್ಬವಾಗಿ ಮನೆಯಲ್ಲಿ ಆಚರಿಸುತ್ತಾರೆ. ಅಣ್ಣ ಎಂದರೆ ಒಡಹುಟ್ಟಿದವರು ಆಗಬೇಕು ಅಂತ ಇಲ್ಲ ಪರಿಶುದ್ಧ ಮನಸ್ಸುಳ್ಳ ಎಲ್ಲಾ ಕಷ್ಟದಲ್ಲೂ ಸುಖದಲ್ಲೂ ಭಾಗಿಯಾಗುವ ಅಣ್ಣನ ಸ್ಥಾನದಲ್ಲಿ ನಿಂತು ರಕ್ಷಣೆ ಮಾಡುವನು ಕೂಡ ಒಬ್ಬ ಅಣ್ಣನೇ. ರಾಕಿ ಹಬ್ಬದಂದು ಸಹೋದರಿಯರು ಸಹೋದರರ ಕೈಗೆ ರಾಖಿಯನ್ನು ಕಟ್ಟಿ ಆರತಿ ಮಾಡಿ ಆಶೀರ್ವಾದ ಪಡೆಯುತ್ತಾರೆ. ರಕ್ಷಾಬಂಧನವನ್ನು ಭಾರತ ಮತ್ತು ನೇಪಾಲದ ಕೆಲವು ಕಡೆ ಆಚರಿಸುತ್ತಾರೆ. ರಕ್ಷಾ ಬಂಧನ ಎನ್ನುವುದು ರಕ್ಷೆ ಸಂಕೇತ. ರಕ್ಷ ಎಂದರೆ ರಕ್ಷಣೆ ಬಂಧನ ಎಂದರೆ ಸಂಬಂಧ. ತನ್ನ ಸಹೋದರಿ ನನಗೆ ರಕ್ಷಣೆ ನೀಡು ಎಂದು ಕಟ್ಟುವ ದಾರವೆ ರಾಖಿ.
ರಕ್ಷಾಬಂಧನ ಹಬ್ಬದ ಹಿಂದೆ ಪುರಾಣ ಕಥೆಯಿದೆ. ಶಿಶುಪಾಲನನ್ನು ಕೊಲ್ಲಲು ಸುದರ್ಶನ ಚಕ್ರ ಬಳಸಲು ಹೊರಟ ಕೃಷ್ಣನ ಕೈಬೆರಳಿಗೆ ಗಾಯವಾದಾಗ ದ್ರೌಪದಿ ತನ್ನ ಸೀರೆಯನ್ನು ಹರಿದು ಕೃಷ್ಣನ ಕೈ ಕೈಬೆರಳಿಗೆ ಕಟ್ಟುತ್ತಾಳೆ. ಇದಕ್ಕೆ ಪ್ರತಿಯಾಗಿ ಶ್ರೀಕೃಷ್ಣನು ದುಶ್ಯಾಸನ ದ್ರೌಪದಿಯ ಸೀರೆ ಎಳೆಯುವಾಗ ಶ್ರೀಕೃಷ್ಣ ದ್ರೌಪದಿಗೆ ಸೀರೆಯನ್ನು ದಯಪಾಲಿಸುತ್ತಾನೆ.
ನಾನು ದುಡ್ಡುಕೊಟ್ಟು ರಾಖಿಯನ್ನು ತರುವುದರ ಬದಲು ಅಣ್ಣನ ಕೈಯಲ್ಲಿ ರಾಖಿ ತರಿಸಿ ಅವನಿಗೆ ಕೈಗೆ ಕಟ್ಟಿ ಅವನ ಕೈಯಲ್ಲಿ ಹಣ ಕೇಳಿದ್ದೆ ಹೆಚ್ಚು. ಆದರೆ ಈಗಿನ ಕಾಲದಲ್ಲಿ ರಕ್ಷಾ ಬಂಧನದಲ್ಲಿ ಕೂಡ ಬ್ರಾ0ಡೆಡ್, ವೆರೈಟಿ ನೋಡುತ್ತಾರೆ ಎನ್ನುವುದೇ ವಿಪರ್ಯಾಸ. ₹2 ರಾಖಿಯ ಒಂದೇ ನೂರು ರೂಪಾಯಿಯ ರಾಖಿಯು ಒಂದೇ ಆದರೆ ಒಳ್ಳೆಯ ಮನಸ್ಸಿರಬೇಕಷ್ಟೆ. ಕಾಲೇಜಿನಲ್ಲಿ ರಕ್ಷಾಬಂಧನದ ದಿನ ಅದೆಷ್ಟು ಹುಡುಗರು ಹುಡುಗಿಯರು ರಾಕಿ ಕಟ್ಟುತ್ತಾರೆ ಅಂತ ರಜೆ ಮಾಡಿದ ಹುಡುಗರೇ ಹೆಚ್ಚು.ಎಲ್ಲರಲ್ಲೂ ಪ್ರೀತಿ, ವಿಶ್ವಾಸ, ಸೌಹಾರ್ದತೆ, ಶಾಂತಿ,ಹೊಂದಾಣಿಕೆ, ಮಮತೆಯನ್ನು ಅಣ್ಣ ತಂಗಿಯ ಸಂಬಂಧವನ್ನು ಗಟ್ಟಿಗೊಳಿಸುತದೆ ಈ ಕೇಸರಿ ಬಣ್ಣದ ರಾಖಿ.
ಎಲ್ಲಾ ನನ್ನ ಸಹೋದರರಿಗೂ ಹಾಗೂ ಭಂಡಾರಿ ವಾರ್ತೆಯ ಎಲ್ಲಾ ಓದುಗರಿಗೂ ರಕ್ಷಾಬಂಧನದ ಶುಭಾಶಯಗಳು.
✍️ ಅಶ್ವಿನಿ ಪ್ರವೀಣ್ ಭಂಡಾರಿ. ಅಂಜರಾಡಿ, ಜಾರಿಗೆಕಟ್ಟೆ.
No comments:
Post a Comment