ತುಳುನಾಡಿನಲ್ಲಿ ಪ್ರತಿಯೊಂದು ತಿಂಗಳಿಗೂ ತನ್ನದೇ ಆದ ಮಹತ್ವ ಇದೆ.ಜುಲೈ ಸಂಕ್ರಾಂತಿಯ ನಂತರ ಆಗಸ್ಟ್ ಸಂಕ್ರಾಂತಿಯವರೆಗೆ ಬರುವ ದಿನಗಳನ್ನು ತುಳುವಿನಲ್ಲಿ ಆಟಿ ತಿಂಗಳು ಎನ್ನಲಾಗುತ್ತದೆ.
ಆರ್ಥಿಕವಾಗಿ ಕಷ್ಟದ ತಿಂಗಳು ಆಟಿ ಎಂದು ತುಳುವರು ಹಿಂದಿನಿಂದಲೂ ನಂಬಿದ್ದರಿಂದ ಈ ಸಮಯದಲ್ಲಿ ಪ್ರಕೃತಿದತ್ತ ಆರೋಗ್ಯಕರ ಆಹಾರ ಸೇವಿಸುತ್ತಾರೆ. ಕಣಿಲೆ,ತಜಂಕ್,ಕೆಸುವಿನೆಲೆ, ನುಗ್ಗೆಸೊಪ್ಪು ಮುಂತಾದುವುಗಳನ್ನು ಆಹಾರಕ್ಕಾಗಿ ಬಳಸಲಾಗುತ್ತದೆ. ಆಟಿ ತಿಂಗಳ ತಿನಿಸುಗಳೆಂದರೆ ಬಾಯಲ್ಲಿ ನೀರು ಬರುತ್ತದೆ.ಅದರಲ್ಲೂ ಪತ್ರೋಡ್ಡೆಯಂತೂ ತುಳುನಾಡಿನ ಬ್ರ್ಯಾಂಡ್ ಡಿಶ್ ಎಂದು ಪ್ರಸಿಧ್ಧಿಯಾಗಿದೆ.
"ಎಂತಾ ಮಳೆಯಪ್ಪ ಹೊರಗೆ ಕಾಲಿಡಲು ಆಗಲ್ಲ" ಈ ಡೈಲಾಗ್ ಅಂತೂ ಆಟಿ ಟೈಮ್ ಲ್ಲಿ ಕಾಮನ್.ಜಿರಿಜಿರಿ ಮಳೆ ಇರುವುದರಿಂದ ನಮ್ಮ ಹಿರಿಯರು ಆರೋಗ್ಯಕರ ಸಾಂಪ್ರದಾಯವನ್ನು ಬಹಳ ಹಿಂದೆಯೇ ತಂದಿದ್ದಾರೆ.
ಬೆಳಗ್ಗಿನ ಜಾವ ಐದು ಗಂಟೆಯ ಹೊತ್ತಿಗೆ ಮನೆಯ ಗಂಡಸು ಬೆತ್ತಲೆಯಾಗಿ ಹಾಲೆಮರ(ಪಾಲೆಮರ)ದ ಬುಡಕ್ಕೆ ಹೋಗಿ ಕಲ್ಲಿನಿಂದ ಜಜ್ಜಿ ರಸವನ್ನು ತಂದು ಅದಕ್ಕೆ ಕರಿಮೆಣಸು,ಬೆಳ್ಳುಳ್ಳಿ,ಜೀರಿಗೆ,ಓಮ ಹಾಕಿ ಮನೆಯವರೆಲ್ಲರೂ ಅ ರಸವನ್ನು ಕುಡಿಯುವ ಪದ್ಧತಿ ಈಗಲೂ ಇದೆ.ಈ ಕಷಾಯ ವೈಜ್ಞಾನಿಕವಾಗಿ ಔಷದೀಯ ಗುಣ ಹೊಂದಿದೆ ಎಂದು ಸಾಬೀತಾಗಿದೆ.ರಸ ಸ್ವಲ್ಪ ಕಹಿ ಇರುವುದರಿಂದ ಎಷ್ಟೂ ದೊಡ್ಡವರಾದರೂ ಅಮ್ಮನ ಬಳಿ ಕುಡಿಯಲ್ಲಾ ಅಂತ ಹಠ ಮಾಡಿದಾಗ ಅಮ್ಮ ಬೆಲ್ಲ ಕೊಟ್ಟು ಸಮಾಧಾನಿಸಿ ರಸವನ್ನು ಕುಡಿಸುವ ಪರಿಯೇ ಒಂಥಾರ ಆನಂದ.
ಹಿಂದಿನ ಕಾಲದಿಂದಲೂ ಹೊಸದಾಗಿ ಮದುವೆಯಾದ ಮದುಮಗಳನ್ನು ತವರು ಮನೆಯವರು ಹೋಗಿ ಗಂಡನ ಮನೆಯಿಂದ ಕರೆದಕೊಂಡು ಬರುತ್ತಾರೆ.ಇದನ್ನು ಆಟಿ ಕುಲ್ಲುನ ಎಂದು ಕರೆಯಲಾಗುತ್ತದೆ.ಆಟಿ ತಿಂಗಳು ಮುಗಿಯುವ ಹೊತ್ತಿಗೆ ಗಂಡನ ಮನೆಯವರು ಬಂದು ಕರೆದುಕೊಂಡು ಹೋಗುತ್ತಾರೆ.
ಇತ್ತೀಚಿನ ದಿನಗಳಲ್ಲಿ ಬ್ಯುಸಿ ಇರುವುದರಿಂದ ಈಗಿನ ಮಕ್ಕಳಿಗೆ ಶಾಲಾ,ಕಾಲೇಜು ಹಾಗೂ ಇನ್ನಿತರ ಸಂಘಟನೆಗಳು ಆಟಿಕೂಟ ಕಾರ್ಯಕ್ರಮದ ಮೂಲಕ ಆಟಿ ತಿಂಗಳ ಮಹತ್ವ ತಿಳಿಸುವುದು ಅನಿವಾರ್ಯವಾಗಿದೆ.
ಪ್ರಥಮ ಎಂ.ಎ
ಅರ್ಥಶಾಸ್ತ್ರ ವಿಭಾಗ
ವಿಶ್ವವಿದ್ಯಾನಿಲಯ ಕಾಲೇಜು
ಮಂಗಳೂರು
No comments:
Post a Comment