ಆತ್ಮೀಯ ಬಂಧುಗಳೇ...
ವಧು-ವರಾನ್ವೇಷಣೆಯಲ್ಲಿರುವ ಭಂಡಾರಿ ಸಮಾಜದ ಯುವಕ ಯುವತಿಯರು ತಮ್ಮ ನಿರೀಕ್ಷೆಯ ವಧುವರರ ಆಯ್ಕೆಗಾಗಿ, ಪೋಷಕರು ತಮ್ಮ ಕುಟುಂಬಕ್ಕೆ ಸರಿಹೊಂದುವ ಅಳಿಯ ಅಥವಾ ಸೊಸೆಯ ಆಯ್ಕೆಗಾಗಿ, ನಿಮ್ಮ ಅಭಿರುಚಿಗೆ ತಕ್ಕುದಾದ ಕುಟುಂಬಗಳ ಆಯ್ಕೆ ಮಾಡಬಹುದಾದ ಉತ್ಕೃಷ್ಟ ತಂತ್ರಜ್ಞಾನವುಳ್ಳ ವಿವಾಹ ವೆಬ್ಸೈಟ್ ವೊಂದು ಪ್ರಾರಂಭಗೊಂಡಿದೆಯೆಂದು ತಿಳಿಸಲು ಹರ್ಷವೆನಿಸುತ್ತದೆ.
ವೆಬ್ಸೈಟ್ ನ ವಿಳಾಸ :
www.bhandaryvivaha.com
ಈ ವೆಬ್ಸೈಟ್ ನ ಬಳಕೆಯ ಮುನ್ನ ಕೆಲವು ಸೂಚನೆಗಳನ್ನು, ನಿಬಂಧನೆಗಳನ್ನು ತಾವುಗಳು ಮನದಟ್ಟು ಮಾಡಿಕೊಳ್ಳಬೇಕು.
# ಮೊತ್ತ ಮೊದಲಿಗೆ ತಾವೊಂದು ಇ-ಮೇಲ್ ಐಡಿ ಹೊಂದಿರುವುದು ಕಡ್ಡಾಯ.
# ವೆಬ್ಸೈಟ್ ನೋಂದಾವಣೆಗೆ ನೀವೊಂದು ಪಾಸ್ ವರ್ಡ್ ಅಗತ್ಯವಾಗಿ ನಮೂದಿಸಬೇಕು ಮತ್ತು ಅದನ್ನು ಪ್ರತೀ ಬಾರಿಯೂ ನೆನಪಿಟ್ಟುಕೊಳ್ಳಬೇಕು.
# ನೀವು ಉಪಯೋಗಿಸುತ್ತಿರುವ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು.ಯಾಕೆಂದರೆ ಅರ್ಜಿ ತುಂಬುವಾಗ ನಿಮ್ಮ ಮೊಬೈಲ್ ಗೆ ಓ ಟಿ ಪಿ (One Time Password) ರವಾನೆಯಾಗುತ್ತದೆ.ಅದನ್ನು ಪರಿಶೀಲಿಸಿದ ನಂತರವೇ ಅರ್ಜಿ ತುಂಬಲು ಸಾಧ್ಯ.
# ನಿಮ್ಮ ಕುಟುಂಬದ ಹಿನ್ನೆಲೆಯನ್ನು ತಿಳಿಯಲು ನಿಮ್ಮ ನಾಗ ಮೂಲ ಹಾಗೂ ದೈವ ಮೂಲ ಸ್ಥಾನಗಳ ಬಗ್ಗೆ ಅರ್ಜಿ ಸಲಿಸುವ ಮೊದಲು ತಿಳಿದುಕೊಂಡು ಅರ್ಜಿಯಲ್ಲಿ ನಮೂದಿಸಬೇಕಾಗುತ್ತದೆ.
# ತಮ್ಮ ಕುಟುಂಬದ ಬಗ್ಗೆ ಎಲ್ಲಾ ವಿವರಗಳನ್ನು ನೆನಪಿನಲ್ಲಿಟ್ಟುಕೊಂಡಿರಬೇಕು.
# ನಿಮ್ಮ ರಕ್ತದ ಗುಂಪಿನ ಸಹಿತ ಅರ್ಜಿಯಲ್ಲಿ ಕೇಳಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಬೇಕಾಗುತ್ತದೆ.
# ನೀವು ಸಲ್ಲಿಸಿರುವ ಅರ್ಜಿಯನ್ನು ಭಂಡಾರಿ ವಿವಾಹದ ಅಡ್ಮಿನ್ ಒಂದು ವಾರದೊಳಗೆ ಪರಿಶೀಲಿಸಿ ಅಂಗೀಕಾರಗೊಂಡ ನಂತರ ನಿಮ್ಮ ಪ್ರೊಫೈಲ್ ನ್ನು ಬೇರೆಯವರು ನೋಡಲು ಸಾಧ್ಯವಾಗುತ್ತದೆ.
# ನಿಮ್ಮ ಅರ್ಜಿಯನ್ನು ಭಂಡಾರಿ ವಿವಾಹದ ಅಡ್ಮಿನ್ ಅಂಗೀಕರಿಸಿದ ನಂತರ ನೀವು ಇತರ ಅರ್ಜಿಗಳನ್ನು,ಪ್ರೊಫೈಲ್ ಗಳನ್ನು ನೋಡಬಹುದು.ನಿಮಗೆ ಯೋಗ್ಯವೆನಿಸಿದ ಅರ್ಜಿದಾರರಿಗೆ ಯಾವುದೇ ಮಧ್ಯವರ್ತಿಗಳ ರಗಳೆಯಿಲ್ಲದೇ ನೇರವಾಗಿ ಸಂಪರ್ಕಿಸಬಹುದು.
# ನಿಮ್ಮ ಮೊಬೈಲ್ ನಲ್ಲಿ ಅರ್ಜಿ ತುಂಬುವ ಪ್ರಯತ್ನ ಬೇಡ.ಪ್ರೊಫೈಲ್ ನಲ್ಲಿ ನಿಮ್ಮ ಫೋಟೋ ಕಡ್ಡಾಯವಾಗಿರುವುದರಿಂದ ಮೊಬೈಲ್ ನಿಂದ ಫೋಟೋ ಅಪ್ಲೋಡ್ ಮಾಡುವುದು ಕಷ್ಟ.ಆದ್ದರಿಂದ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ನಿಂದ ಪ್ರಯತ್ನಿಸಿ.
# ಅರ್ಜಿಯ ವಿವರಗಳು ವೆಬ್ಸೈಟ್ ನಲ್ಲಿ ಲಭ್ಯವಿದೆ.
# ವೆಬ್ಸೈಟ್ ನ ಪ್ರತಿಯೊಂದು ಹಂತವನ್ನೂ ಸರಿಯಾಗಿ ಪಾಲಿಸಬೇಕು. ಸದಾ ಕಾಲವೂ ಇದರ ಉಪಯೋಗ ಪಡೆಯುವುದಕ್ಕೋಸ್ಕರ ನಿಯಮಗಳನ್ನು ಎಲ್ಲಿಯಾದರೂ ಶೇಖರಿಸಿಟ್ಟುಕೊಳ್ಳಿ.
# ಪ್ರತಿಯೊಬ್ಬರಿಗೂ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಭಂಡಾರಿ ವಿವಾಹ ವೆಬ್ಸೈಟ್ ರಚನೆಯಾಗಿದೆ .
# ಫಲಾನುಭವಿಗಳು ಅಥವಾ ಬೇರೆ ಯಾರಾದರೂ ಈ ವೆಬ್ಸೈಟ್ ನ ಅಥವಾ ಇಲ್ಲಿ ದಾಖಲಾಗಿರುವ ಫೋನ್ ನಂಬರ್ ಗಳ ದುರುಪಯೋಗ ಮಾಡಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಫೋನ್ ನಂಬರ್ ಗಳ ದುರ್ಬಳಕೆ ಗಮನಕ್ಕೆ ಬಂದರೆ ಅಡ್ಮಿನ್ ಕ್ರಮ ಕೈಗೊಳ್ಳಲು ಸರ್ವಸ್ವತಂತ್ರರಾಗಿರುತ್ತಾರೆ.
# ಭಂಡಾರಿ ವಿವಾಹದಲ್ಲಿ ನೀವು ನೋಂದಾಯಿಸಿದ ನಂತರ ಸೂಕ್ತ ವಧು - ವರ ಸಿಕ್ಕಿ ಮದುವೆ ಆದಲ್ಲಿ ಕೂಡಲೇ ನಮಗೆ ಮಾಹಿತಿ ತಿಳಿಸಬೇಕು ಅಥವಾ ನಿಮ್ಮ ಪ್ರೊಫೈಲ್ ನ್ನು ವೆಬ್ಸೈಟ್ ನಿಂದ ಡಿಲೀಟ್ ಮಾಡಲು ವಿನಂತಿಸುತ್ತೇವೆ.
ಭಂಡಾರಿ ಬಂಧುಗಳ ಮೇಲಿರುವ ಸಾಮಾಜಿಕ ಕಳಕಳಿಯಿಂದ ಭಂಡಾರಿವಿವಾಹ ವೆಬ್ಸೈಟ್ ರೂಪಿಸಲು ಶ್ರಮಿಸಲಾಗಿದ್ದು ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಮತ್ತು ಅಗತ್ಯವಿರುವವರಿಗೆ ಭಂಡಾರಿವಿವಾಹ ವೆಬ್ಸೈಟ್ ನ ಮಾಹಿತಿ ನೀಡುವುದರೊಂದಿಗೆ ಸಹಕರಿಸಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇನೆ.
ವಂದನೆಗಳೊಂದಿಗೆ....
ಪ್ರಕಾಶ್ ಭಂಡಾರಿ ಕಟ್ಲಾ.
ಅಧ್ಯಕ್ಷರು ಮತ್ತು ಮುಖ್ಯ ಕಾರ್ಯ ನಿರ್ವಾಹಕರು.
ಭಂಡಾರಿ ಮೀಡಿಯಾ ನೆಟ್ ವರ್ಕ್.
WhatsApp: 9845125214
No comments:
Post a Comment