15 ಆಗಸ್ಟ್ 1947 ರಂದು ಭಾರತವು ಆಂಗ್ಲರ ದಾಸ್ಯತ್ವದಿಂದ ಸ್ವತಂತ್ರವಾಯಿತು.ಇಂದು ಭಾರತ ತನ್ನ 75ನೇ ವರ್ಷದ ಸ್ವಾತಂತ್ರೋತ್ಸವವನ್ನು ಆಚರಿಸುತ್ತಿದೆ.ಆದರೆ ಹಿಂದಿನ ದಿನಗಳಲ್ಲಿ ಆಚರಿಸುವಾಗ ಇದ್ದ ಸಂಭ್ರಮ,ಸಡಗರ,ಆಸಕ್ತಿ,ದೇಶಪ್ರಮ ಪ್ರಸ್ತುತ ಸಮಾಜದಲ್ಲಿ ಕಡಿಮೆಯಾಗಿದೆ.
ಈಗ ಸಮಾಜದಲ್ಲಿ ವಿಜ್ಞಾನ ತಂತ್ರಜ್ಞಾನಗಳ ಬೆಳವಣಿಗೆ ಆದರೂ ಮನುಷ್ಯರಲ್ಲಿ ಹಿಂದಿನ ಕಾಲದಲ್ಲಿ ಇದ್ದಂತಹ ಶೃದ್ದೆ,ವಿನಯತೆ,ಆಚಾರ ವಿಚಾರಗಳ ಅರಿವು,ಶಿಸ್ತು,ಸಂಯಮ ಕಡಿಮೆಯಾಗಿದೆ,ಅದರಲ್ಲೂ ದೇಶದ ಬಗ್ಗೆ ಅಂತೂ ಸಾಮಾನ್ಯ ಜ್ಞಾನವೂ ಇಲ್ಲದಂತಾಗಿದೆ.ಇಂದಿನ ಜನಾಂಗದ ಕೆಲವರಿಗೆ ರಾಷ್ಟ್ರಧ್ವಜ,ರಾಷ್ಟ್ರಗೀತೆಗೆ ಹೇಗೆ ಗೌರವ ಕೊಡಬೇಕೆಂಬುದೂ ತಿಳಿದಿಲ್ಲ.ಇನ್ನು ಕೆಲವರಂತೂ ರಾಷ್ಟ್ರ ಧ್ವಜವನ್ನು ಉರಿಸುವುದು,ಕೆಡಿಸುವು ದು,ಕಾಲಡಿಯಲ್ಲಿ ಹಾಕಿ ತುಳಿಯುವುದು ಹೀಗೆ ಅಗೌರವ ತೋರುತ್ತಾ ಮೆರೆಯುತ್ತಾರೆ.ಇಂತಹ ಕೃತ್ಯಕ್ಕೆ ಕಾನೂನು ಸರಿಯಾದ ಕ್ರಮಕೈಗೊಳ್ಳಬೇಕು.
ರಾಷ್ಟ್ರಪ್ರೇಮವು ನೆಲಕ್ಕಚ್ಚುವ ಮುನ್ನ ನಾವು ಇದರ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ.ದೇಶಪ್ರೇಮದ ಕಿಡಿ ವಿದ್ಯಾರ್ಥಿ ಜೀವನದಲ್ಲೇ ಆರಂಭವಾಗಬೇಕು.ಇದರಲ್ಲಿ ಶಿಕ್ಷಕರ ಮತ್ತು ಹೆತ್ತವರ ಪಾತ್ರ ಬಹಳ ಮುಖ್ಯವಾಗಿರುತ್ತದೆ.ದೇಶದ ಪ್ರತಿಯೊಂದು ಕೆಲಸವೂ ಪವಿತ್ರವಾದುದು ಮತ್ತು ದೇಶದ ಗೌರವ ಕಾಪಾಡುವುದು ಪ್ರತಿಯೊಬ್ಬ ಪ್ರಜೆಯ ಜನ್ಮಸಿದ್ದ ಹಕ್ಕು ಎಂಬ ಭಾವನೆಯ ಕಿಚ್ಚು ವಿದ್ಯಾರ್ಥಿಗಳಲ್ಲಿ ಮೂಡಬೇಕು.
ಪ್ರಸ್ತುತ ಸಮಾಜದಲ್ಲಿ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆಯ ಹೊರತು ಉಳಿದ ದಿನಗಳಲ್ಲಿ ರಾಷ್ಟ್ರ ಭಕ್ತಿ ಹುಟ್ಟಿಸುವ ವಿಷಯಗಳ ಕುರಿತು ಚರ್ಚಿಸುವುದು ವಿರಳವಾಗಿದೆ.ಆದರಿಂದ ಭಾರತದ ಪ್ರಜೆಯಾಗಿ ನಾವು ನಮ್ಮ ದೇಶದ ಬಗ್ಗೆ ಅರಿವು ಮತ್ತು ಒಲವು ಬೆಳಿಸಿ ಅದನ್ನು ಇತರರಿಗೆ ತಿಳಿಸಿ ಒಂದು ಸುಂದರ ಅರೋಗ್ಯಕರ ಸಮಾಜದ ನಿರ್ಮಾಣಕ್ಕೆ ಕೈಜೋಡಿಸಬೇಕಾಗಿದೆ.
🖊️ ಪೂರ್ಣಿಮಾ ಅನಿಲ್ ಭಂಡಾರಿ, ಮಣಿಪಾಲ.
No comments:
Post a Comment