ಸವ್ಯಕಾಲಸರ್ಪದೋಷ ಮತ್ತು ಅಪಸವ್ಯಕಾಲಸರ್ಪದೋಷ
ಅಗ್ರಭಾಗದಲ್ಲಿ ರಾಹು, ಅಧೋ ಭಾಗದಲ್ಲಿ ಕೇತುವಿದ್ದು, ಮಧ್ಯದಲ್ಲಿ 6 ಗ್ರಹಗಳು ಇದ್ದರೆ ಅದು ಸವ್ಯಸರ್ಪಕಾಲ ದೋಷವೆಂದು, ಅಗ್ರಭಾಗದಲ್ಲಿ ರಾಹುವಿದ್ದು ಮಧ್ಯದಲ್ಲಿ 7 ಗ್ರಹಗಳಿದ್ದರೆ ಅದು ಅಪಸವ್ಯಕಾಲಸರ್ಪದೋಷ ಎಂದು ಕರೆಯಲಾಗುತ್ತದೆ.
ಸವ್ಯ, ಅಪಸವ್ಯಕಾಲ ಸರ್ಪ ದೋಷ ವಂಶಪಾರಂಪರ್ಯವಾಗಿಯೂ ಪ್ರಾಪ್ತಿಯಾಗುತ್ತದೆ. ಇದರ ಪ್ರಭಾವ ವಿಂಶೋತ್ತರದಶಾ ಕಾಲಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ.
ಈ ದೋಷದ ಪ್ರಭಾವದಿಂದಾಗಿ ಉಂಟಾಗುವ ದುಷ್ಫಲಗಳು;
ಮೃತಶಿಶುವನ್ನು ಪ್ರಸವಿಸುವುದು
ಗರ್ಭದಲ್ಲೇ ಶಿಶು ಮರಣಿಸುವುದು
ಅಂಗವೈಕಲ್ಯದಿಂದ ಸಂತಾನ ಉಂಟಾಗುವುದು
ಗರ್ಭನಿಲ್ಲದಿರುವುದು
ವೀರ್ಯಕಣಗಳಲ್ಲಿನ ಜೀವ ನಶಿಸುವುದು
ತಡವಾಗಿ ವಿವಾಹವಾಗುವುದು
ಮದುವೆ ಪ್ರಯತ್ನಗಳು ವಿಫಲವಾಗುವುದು
ವೈವಾಹಿಕ ಜೀವನದಲ್ಲಿ ಅಸಂತೃಪ್ತಿ
ಮೆದುಳು ಬೆಳವಣಿಗೆಯಾಗದಿರುವುದು
ವಿವಾಹ ಕಾರ್ಯಹಾನಿ
ಲೈಂಗಿಕ ಸಂಬಂಧಿತ ರೋಗಗಳು
ಕ್ಯಾನ್ಸರ್, ಮೂತ್ರ ಕೋಶ ರೋಗ
ಭ್ರಾಂತಿ, ಅನ್ನದ್ವೇಷ
ಇವೆಲ್ಲವೂ ಪ್ರಬಲ ಸರ್ಪ ದೋಷ ಲಕ್ಷಣಗಳು.
✍🏻 ಎಸ್. ಕೆ.ಬಂಗಾಡಿ
No comments:
Post a Comment