ಉಡುಪಿ ದೆಂದೂರುಕಟ್ಟೆಯ ಶ್ರೀ ತಿಮ್ಮಪ್ಪ ಭಂಡಾರಿಯವರು ತಾರೀಕು 13 ಆಗಸ್ಟ್ 2021 ರ ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ವಿಧಿವಶರಾದರು.
ಅವರಿಗೆ 90 ವರ್ಷವಯಸ್ಸಾಗಿತ್ತು.ಸದಾ ಚಟುವಟಿಕೆಯಿಂದಿದ್ದ ತಿಮ್ಮಪ್ಪ ಭಂಡಾರಿಯವರು ಎರಡು ತಿಂಗಳಿನಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು . ದಿವಂಗತರು ಮೂವರು ಹೆಣ್ಣು ಮತ್ತು ಓರ್ವ ಪುತ್ರನನ್ನು ಅಗಲಿರುತ್ತಾರೆ. ದೆಂದೂರುಕಟ್ಟೆ ಕುಟುಂಬಸ್ಥರ ದೈವಗಳ ಪೂಜೆ ಮಾಡುವ ಮುಕ್ಕಾಲ್ದಿಯಾಗಿ ಸುಧೀರ್ಘ ಸೇವೆ ಸಲ್ಲಿಸಿರುತ್ತಾರೆ.
ಮೃತರ ಅಂತ್ಯಕ್ರಿಯೆ ಅವರ ಸ್ವಗೃಹ, ದೆಂದೂರುಕಟ್ಟೆಯಲ್ಲಿ ತಾರೀಕು 14 ರ ಶನಿವಾರದಂದು ನೆರವೇರಲಿರುವುದು.
ಅಗಲಿದ ದಿವ್ಯಾತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ, ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಕುಟುಂಬಕ್ಕೆ ನೀಡಲಿ ಎಂದು ಭಂಡಾರಿ ಕುಟುಂಬದ ಮನೆ ಮನ ಮಾತು ಭಂಡಾರಿ ವಾರ್ತೆ ಪ್ರಾರ್ಥಿಸುತ್ತಿದೆ .
-ಭಂಡಾರಿ ವಾರ್ತೆ
No comments:
Post a Comment