ಗೆಳೆತನ.
ತಿಳಿಯಲಿಲ್ಲ ಆ ಕ್ಷಣ
ಗೆಳೆತನ ಮೂಡಲು ಕಾರಣ
ಬಾಳಿಗಿಂದು ಅದುವೇ ಆಶಾಕಿರಣ.
ಬಿಡಿಸಲಾಗದ ಅಮೂಲ್ಯ ಬಂಧನ
ಜೊತೆಗಿದ್ದರೆ ಬಾಳಲ್ಲಿ ಈ ಗೆಳೆತನ
ತಂಪೆನಿಸುವುದು ತನುಮನ.
ದೇಹವನು ತೊರೆಯುವ ಮುನ್ನ ಪ್ರಾಣ
ದೂರಕೆ ಸಾಗಲಿ ಈ ಪಯಣ
ನೀಡುತ ಜಗಕೆ ಪ್ರೇರಣ.
ಜೊತೆಯಲಿ ಸಾಗುವ ವಚನ
ಶಾಶ್ವತ ಸ್ನೇಹದ ಸಾರ್ಥಕ ಜೀವನ
ಒದಗಿಸಿದ ದೇವನಿಗೊಂದು ನನ್ನ ನಮನ.
ರಚನೆ. -ಪ್ರಕೃತಿ ಭಂಡಾರಿ ಆಲಂಕಾರು
No comments:
Post a Comment