BhandaryVarthe Team

BhandaryVarthe Team
Bhandary Varthe Team

Sunday 15 August 2021

ಸ್ವಾತಂತ್ರ್ಯ ದಿನಾಚರಣೆಯ ಮಹತ್ವ-ಅಶ್ವಿನಿ ಪ್ರವೀಣ್ ಭಂಡಾರಿ ಅಂಜರಾಡಿ, ಜಾರಿಗೆಕಟ್ಟೆ

 1947 ಆಗೋಸ್ಟ್ 14ರ ಮಧ್ಯರಾತ್ರಿ ಹಲವು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ-ಬಲಿದಾನದ ಫಲವಾಗಿ ನಾವು 75ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿದ್ದೇವೆ ನಮ್ಮ ತಾಯಿ ಭಾರತ ಮಾತೆ ಬ್ರಿಟಿಷರಿಂದ ಮುಕ್ತಿಪಡೆದು ಭಾರತದ ಇತಿಹಾಸದ ಪುಟದಲ್ಲಿ ಸುವರ್ಣಾಕ್ಷರದಲ್ಲಿ ಬರೆದ ಈ ದಿನ ನಮಗೆ ಮಹತ್ವ ದಿನ.

1757 ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪೆನಿಯು ವ್ಯಾಪಾರಕ್ಕೆಂದು ಬಂದು ರಾಜರುಗಳ ಸಾಮ್ರಾಜ್ಯವನ್ನು ಪತನ ಗೊಳಿಸಿ ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸಿದರು. ಭಾರತವು ಸುಮಾರು 150 ವರ್ಷಗಳ ಕಾಲ ಬ್ರಿಟಿಷರ ಅಧೀನದಲ್ಲಿ ಬದುಕಬೇಕಾಯಿತು. ನಂತರ ಅನೇಕ ದೇಶಭಕ್ತರ ತ್ಯಾಗ ಬಲಿದಾನದಿಂದ, ಗಾಂಧೀಜಿಯವರ ಅಹಿಂಸಾತ್ಮಕ ಹೋರಾಟ, ಸುಭಾಶ್ಚಂದ್ರರ ಮಿಲಿಟರಿ ಹೋರಾಟ, ಭಗತ್ ಸಿಂಗರ ಕ್ರಾಂತಿಕಾರಿ ಹೋರಾಟ ಫಲವಾಗಿ ಸ್ವತಂತ್ರರಾದೆವು.


ಸ್ವಾತಂತ್ರ್ಯ ದಿನಾಚರಣೆಯು ರಾಷ್ಟ್ರೀಯ ಹಬ್ಬವಾಗಿ ಜಾತಿ, ಧರ್ಮ ಪ್ರಾಂತ್ಯ, ಸಂಸ್ಕೃತಿಗಿಂತ ದೊಡ್ಡದಾಗಿದೆ. ಧ್ವಜದಲ್ಲಿರುವ ಕೇಸರಿ, ಬಿಳಿ, ಹಸಿರು ಬಣ್ಣದ ನಡುವೆ ಇರುವ ಅಶೋಕ ಚಕ್ರ ಬೌದ್ಧ ದೊರೆ ಸಾಮ್ರಾಟ್ ಅಶೋಕನ ಚಿಹ್ನೆಯಾಗಿದ್ದು ರಾಷ್ಟ್ರಧ್ವಜದಲ್ಲಿರುವ ಚಕ್ರವು ಧರ್ಮವನ್ನು ಚಕ್ರದಲ್ಲಿರುವ 24 ಗೆರೆ ವಿವಿಧ ಆಚರಣೆ, ಸಂಸ್ಕೃತಿಯನ್ನು ಸೂಚಿಸುತ್ತದೆ. ಧ್ವಜದಲ್ಲಿ ಇರುವ ಬಣ್ಣದ ಮಹತ್ವ. ಕೇಸರಿಯು ಧೈರ್ಯ ಮತ್ತು ಬಲಿದಾನದ ಸಂಕೇತ.ಬಿಳಿಯು ಸತ್ಯ ಶಾಂತಿ ಶುದ್ಧತೆಯ ಸಂಕೇತ. ಹಸಿರು ಬಣ್ಣ ಪ್ರಗತಿಯ ಸಂಕೇತ.

ಅಗೋಸ್ಟ್ 1947 ನಂತರ ದೆಹಲಿಯ ಕೆಂಪುಕೋಟೆಯಲಿ ಮಾನ್ಯ ಪ್ರಧಾನಮಂತ್ರಿಗಳ ಕೈಯಲ್ಲಿ ತ್ರೀವರ್ಣ ಧ್ವಜವು ರಾಷ್ಟ್ರಗೀತೆಯೊಂದಿಗೆ ಧ್ವಜರೋಹಣ ಗೊಳ್ಳುತ್ತದೆ. ಇದಕ್ಕೆ ಸೇನಾಪಡೆ ಪಥಸಂಚಲನ ಮಿಲಿಟರಿ ಪಡೆ ಸಾಥ್ ನೀಡುತ್ತದೆ.

ನಾವು ಆಚರಿಸುತ್ತಿರುವ 75ನೇ ಸ್ವಾತಂತ್ರ್ಯ ದಿನಾಚರಣೆಯ ನಮ್ಮ ಪೂರ್ವಜರು ಮಾಡಿರುವ ತ್ಯಾಗದ ಫಲ ಅವರ ಬಲಿದಾನವನ್ನು ಸ್ಮರಿಸುತ್ತ ನಮ್ಮ ದೇಶವನ್ನು ಉತ್ತುಂಗಕ್ಕೆ ಏರಿಸುವ ಜವಾಬ್ದಾರಿ ನಮ್ಮ ಮೇಲೆ ಇದೆ


ಆದರೆ ಒಂದು ವಿಷಯ ನಾವು ನೆನಪಿಡಬೇಕು ಅಂದು ಮಹಾತ್ಮರು ಮಾಡಿದ ಫಲವಾಗಿ ಸ್ವಾತಂತ್ರ್ಯ ಸಿಕ್ಕಿತು. ಆದರೆ ಇವಾಗ ನಾವು ಸ್ವತಂತ್ರವಾಗಿ ಇದ್ದೇವೆಂದರೆ ಅದಕ್ಕೆ ಕಾರಣ ನಮ್ಮ ಯೋಧರು ಅವರಿಗೊಂದು ನನ್ನ ನಮನ.






✍️ ಅಶ್ವಿನಿ ಪ್ರವೀಣ್ ಭಂಡಾರಿ ಅಂಜರಾಡಿ, ಜಾರಿಗೆಕಟ್ಟೆ

No comments:

Post a Comment