BhandaryVarthe Team

BhandaryVarthe Team
Bhandary Varthe Team

Thursday 26 August 2021

ಉಡುಪಿ ಮುದರಂಗಡಿ ಪೆಲತ್ತಕಟ್ಟೆ ಶ್ರೀಮತಿ ಗಿರಿಜಾ ನಾರಾಯಣ ಭಂಡಾರಿ ವಿಧಿವಶ

 ಉಡುಪಿ ಮುದರಂಗಡಿ ಪೆಲತ್ತಕಟ್ಟೆ ದಿವಂಗತ ತಚ್ಚಿಲ ನಾರಾಯಣ ಭಂಡಾರಿಯವರ ಧರ್ಮಪತ್ನಿ ಶ್ರೀಮತಿ ಗಿರಿಜಾ ನಾರಾಯಣ ಭಂಡಾರಿ (88 ವರ್ಷ) ಅವರು ದಿನಾಂಕ 25.08.2021 ನೇ ಗುರುವಾರ ಸಾಯಂಕಾಲ ಸುಮಾರು 4:00 ಗಂಟೆಗೆ ವಯೋಸಹಜ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು .



ದಿವಂಗತರ ಅಂತ್ಯಸಂಸ್ಕಾರದ ವಿಧಿ ವಿಧಾನಗಳು ಶುಕ್ರವಾರದಂದು ಮುಂಜಾನೆ 9 :00 ರಿಂದ 10:00 ಗಂಟೆಯ ಮಧ್ಯೆ ಸ್ವಗೃಹದಲ್ಲಿ ನಡೆಸಲಾಗುವುದು ಕುಟುಂಬಸ್ಥರು ಭಂಡಾರಿ ವಾರ್ತೆಗೆ ತಿಳಿಸಿದ್ದಾರೆ.

ಶ್ರೀಮತಿ ಗಿರಿಜಾ ಭಂಡಾರಿಯವರು ಇಬ್ಬರು ಪುತ್ರರು ಮತ್ತು ಮೂರು ಮಂದಿ ಪುತ್ರಿಯರನ್ನು , ಮೊಮ್ಮಕ್ಕಳು , ಕುಟುಂಬಸ್ಥರನ್ನು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

ಮೃತರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಿ ಮಕ್ಕಳಿಗೆ ಮತ್ತು ಬಂಧು ಬಳಗಕ್ಕೆ ಇವರ ನಿಧನದ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಪ್ರಾರ್ಥನೆ.

No comments:

Post a Comment