ಪೂನಾದ ಕ್ಯಾಬಿನೆಟ್ ಸಿಸ್ಟಮ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಪ್ರವರ್ತಕ ಪುತ್ತೂರು ಬಾಲಕೃಷ್ಣ ಭಂಡಾರಿಯವರಿಗೆ ಸಣ್ಣ ಮತ್ತು ಮಧ್ಯಮ ವಲಯದ (SME) ಉದ್ಯಮಗಳಲ್ಲಿ ಇಂಜಿನಿಯರಿಂಗ್ ವಿಭಾಗದಲ್ಲಿ ಎಸ್ ಎಂ ಇ ಇಂಜಿನಿಯರಿಂಗ್ ಇಂಡಿಯಾ ಅವಾರ್ಡ್ 2021 ಒಲಿದಿದೆ.
ದೇಶದ 45 ಲಕ್ಷಕ್ಕೂ ಅಧಿಕ ಎಸ್.ಎಂ.ಇ ಗಳಲ್ಲಿ ಈ ಅಯ್ಕೆ ನಡೆಸಲಾಗಿದೆ. ರಾಜಧಾನಿ ಹೊಸದಿಲ್ಲಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೇಂದ್ರ ಸಚಿವೆ ಅನುಪ್ರಿಯಾ ಪಟೇಲ್ ಸಮ್ಮುಖದಲ್ಲಿ ಬಾಲಕೃಷ್ಣ ಭಂಡಾರಿಯವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಕಂಪನಿಯ ವಿವಿಧ ಉತ್ಪನ್ನಗಳನ್ನು ವಿವಿಧ ದೇಶಗಳಿಗೆ ರಫ್ತು ಮಾಡುತ್ತಿದ್ದು, ಇದರಲ್ಲಿ ಕಂಪನಿ ಸಾಧಿಸಿದ ಗಮನಾರ್ಹ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.
ಸುರತ್ಕಲ್ ನ ಕರ್ನಾಟಕ ರೀಜನಲ್ ಇಂಜಿನಿಯರಿಂಗ್ ಕಾಲೇಜ್ ಸುರತ್ಕಲ್ ( ಈಗಿನ NITK ) ಇಲ್ಲಿಯ ವಿದ್ಯಾ ಸಂಸ್ಥೆಯಲ್ಲಿ ಅತ್ಯುತ್ತಮ ಅಂಕದೊಂದಿಗೆ ಎಲೆಕ್ಟ್ರಿಕಲ್ ಪವರ್ ನಲ್ಲಿ
ಬಿ ಟೆಕ್ ಎಂಜಿನಿಯರಿಂಗ್ ಪದವಿಯನ್ನು ಪೂರೈಸಿದ ಭಂಡಾರಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದರು. ಕಳೆದ 24 ವರ್ಷಗಳಿಂದ ಪೂನಾದಲ್ಲಿ ಕ್ಯಾಬಿನೆಟ್ ಸಿಸ್ಟಮ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯನ್ನು ನಡೆಸಿಕೊಂಡಿದ್ದು, ಇದರ ಉತ್ಪನ್ನ ವಿಶ್ವದಾದ್ಯಂತ ಜಗತ್ಪಸಿದ್ಧವಾಗಿದೆ.
ಕ್ಯಾಬಿನೆಟ್ ಸಿಸ್ಟಮ್ಸ್ ಮತ್ತು ಕಂಟ್ರೋಲ್ಸ್ ಪ್ರೈ. LTD. 1997 ರಲ್ಲಿ ಸ್ಥಾಪಿಸಲಾಯಿತು. ಕಂಪನಿಯು ಪೈಪ್ ಪ್ಲಾಂಟ್, ಕಬ್ಬಿಣ ಮತ್ತು ಉಕ್ಕು, ಪೇಪರ್, ಕೆಮಿಕಲ್ ಮತ್ತು ಮೆಟೀರಿಯಲ್ ಹ್ಯಾಂಡ್ಲಿಂಗ್ ನಂತಹ ವಿವಿಧ ಕ್ಷೇತ್ರಗಳಲ್ಲಿ ಕೈಗಾರಿಕಾ ಆಟೊಮೇಷನ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದೆ.
ಇದೀಗ ಈ ಪ್ರತಿಷ್ಠಿತ ಪ್ರಶಸ್ತಿ ಪಡೆಯುವ ಮೂಲಕ ಕಂಪನಿಯು ಹೊಸ ಮೈಲುಗಲ್ಲನ್ನು ಸ್ಥಾಪಿಸಿದೆ.
ಭಂಡಾರಿ ಸಮಾಜದಲ್ಲಿ ಎಲ್ಲರಿಗೂ ಚಿರಪರಿಚಿತರಾಗಿರುವ ಶಿಕ್ಷಣ ಪ್ರೇಮಿ, ಸಮಾಜದ ಕೊಡುಗೈ ದಾನಿ , ಉದ್ಯಮಿ ಬಾಲಕೃಷ್ಣ ಭಂಡಾರಿ ಪೂನಾ ಇವರು ಪುತ್ತೂರಿನಲ್ಲಿ ತಂದೆಯ ನೆನಪಿಗಾಗಿ ಮಹಾಲಿಂಗ ಭಂಡಾರಿ ಚಾರಿಟೇಬಲ್ ಸೇವಾ ಟ್ರಸ್ಟ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಕಳೆದ ಹದಿನೇಳು ವರ್ಷಗಳಿಂದ ಭಂಡಾರಿ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಸಹಾಯ ಮಾಡುತ್ತಿದ್ದಾರೆ ಹಾಗೂ ಮುಂಬೈಯಲ್ಲಿ ತಂದೆ ದಿವಂಗತ ಮಾಲಿಂಗ ಭಂಡಾರಿ ಮತ್ತು ಅತ್ತೆ ದಿವಂಗತ ಸುಶೀಲ ಭಂಡಾರಿ ಬನ್ನಂಜೆ ನೆನಪಿಗಾಗಿ ರೂಪಾಯಿ 2,50,000.00 ಹಣವನ್ನು ಠೇವಣೆಯಾಗಿ ಇಟ್ಟು ಮುಂಬೈ ಭಂಡಾರಿ ಸೇವಾ ಸಮಿತಿಯ ವತಿಯಿಂದ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಕಳೆದ ಹನ್ನೆರಡು ವರ್ಷಗಳಿಂದ ಪ್ರೋತ್ಸಾಹ ಧನ ನೀಡುತ್ತಿದ್ದಾರೆ .
ಇವರ ಮೊದಲ ಪುತ್ರಿ ಶ್ರೀಮತಿ ಹರ್ಷಿಕಾ BE , MBA. ವ್ಯಾಸಂಗ ಮಾಡಿ ಪತಿ ಶ್ರೀ ಕಾರ್ತಿಕ್ ಇವರೊಂದಿಗೆ ಕುವೈಟ್ ನಲ್ಲಿ ವೃತ್ತಿ ಹಾಗೂ ಸಾಂಸಾರಿಕ ಜೀವನ ನಡೆಸುತ್ತಿದ್ದಾರೆ . ಇನ್ನೋರ್ವ ಪುತ್ರಿ ಡಾ॥ ನಮ್ರತಾ ಬಾಲಕೃಷ್ಣ ಉನ್ನತ ವೈದ್ಯಕೀಯ ಶಿಕ್ಷಣ ಪದವಿ ಪಡೆಯುವ ಸಿದ್ಧತೆಯಲ್ಲಿದ್ದಾರೆ.ಭಂಡಾರಿ ಸಮಾಜದಲ್ಲಿ ಉತ್ತಮ ಸಾಧನೆ ಮಾಡುತ್ತಿರುವ ಶ್ರೀ ಬಾಲಕೃಷ್ಣ ಭಂಡಾರಿ ಅವರಿಗೆ ಧರ್ಮಪತ್ನಿ ಶ್ರೀಮತಿ ಸುಲೋಚನಾ ಬಾಲಕೃಷ್ಣ ಇವರ ಉದ್ಯಮಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ ಎನ್ನುತ್ತಾರೆ ಬಾಲಕೃಷ್ಣ ಭಂಡಾರಿ ಪುತ್ತೂರು.
ಈ ಶುಭ ಸಂದರ್ಭದಲ್ಲಿ ತಮ್ಮ ಸಂತಸವನ್ನು ಭಂಡಾರಿ ವಾರ್ತೆ ಜೊತೆ ಕೂಡಾ ಹಂಚಿಕೊಂಡರು.ತಮ್ಮ ಉದ್ಯಮ ಕ್ಷೇತ್ರದಲ್ಲಿ ದೇಶಕ್ಕೆ ಟಾಪರ್ ಆಗಿ ಸಮಾಜಕ್ಕೆ ಉತ್ತಮ ಸೇವೆ ಲಭಿಸಲಿ ಎಂಬುದಾಗಿ ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಶುಭ ಹಾರೈಸುತ್ತದೆ.
-ಭಂಡಾರಿ ವಾರ್ತೆ
No comments:
Post a Comment