BhandaryVarthe Team

BhandaryVarthe Team
Bhandary Varthe Team

Sunday 22 August 2021

ರಕ್ಷಾಬಂಧನದ ವಿಶೇಷತೆ - ರಜನಿ ಭಂಡಾರಿ ಕುಂದಾಪುರ.

 ಸಹೋದರ ಸಹೋದರಿಯರ ಅವಿನಾಭಾವ ಸಂಬಂಧವನ್ನು ರಕ್ಷಿಸುವ ಬಂಧನವೇ ರಕ್ಷಾ ಬಂಧನ. ಈ ಹಬ್ಬವನ್ನು ಭಾರತದೆಲ್ಲೆಡೆ ಆಚರಿಸುತ್ತಾರೆ. ಈ ಸಂದರ್ಭದಲ್ಲಿ ತಂಗಿ ಅಣ್ಣನಿಗೆ, ಅಕ್ಕ ತಮ್ಮನಿಗೆ ರಕ್ಷಾಬಂಧನವನ್ನು ಕಟ್ಟುತ್ತಾರೆ. ದೊಡ್ಡವರಿಂದ ಆಶೀರ್ವಾದವನ್ನು ಪಡೆದುಕೊಳ್ಳುತ್ತಾರೆ, ಚಿಕ್ಕವರಿಗೆ ಆಶೀರ್ವಾದ ಮಾಡುತ್ತಾರೆ.


ಭಾರತ ಹಬ್ಬಗಳ ತವರೂರು ಇಲ್ಲಿ ಪ್ರಕೃತಿ ಮಾತೆಯನ್ನು ಪೂಜಿಸುವ, ವೈಜ್ಞಾನಿಕ ಹಿನ್ನೆಲೆ ಇರುವ ಹಲವಾರು ಹಬ್ಬಗಳನ್ನು ಆಚರಿಸುತ್ತಾರೆ. ರಕ್ಷಾಬಂಧನ ಸಹೋದರತೆಯ ಮೌಲ್ಯವನ್ನು ಸಾರುವ ವಿಶೇಷವಾದ ಹಬ್ಬ. ಈ ವರ್ಷ August 22, ಭಾನುವಾರ ರಕ್ಷಾಬಂಧನವನ್ನು ಆಚರಿಸುತ್ತಿದ್ದೇವೆ .




ಎಲ್ಲಾ ಸಹೋದರ ಸಹೋದರಿಯರಿಗೆ ರಕ್ಷಾಬಂಧನದ ಶುಭಾಶಯಗಳು.






- ರಜನಿ ಭಂಡಾರಿ ಕುಂದಾಪುರ.

No comments:

Post a Comment