BhandaryVarthe Team

BhandaryVarthe Team
Bhandary Varthe Team

Monday 30 August 2021

ಶ್ರೀ ಕೃಷ್ಣ ಜನ್ಮಾಷ್ಟಮಿ ಅಂದು ಮತ್ತೆ ಇಂದು-ಹರಿಣಿ ಮಧುಕರ್ ಕೊಯಿಲ, ಬಂಟ್ವಾಳ್

 ಆಷಾಡ ಕಳೆದು ಶ್ರಾವಣ ಮಾಸದಲ್ಲಿ ಬರುವ ಮೊದಲ ಹಬ್ಬವೇ ಶ್ರೀ ಕೃಷ್ಣ ಜನ್ಮಾಷ್ಟಮಿ.ಅಷ್ಟಮಿ ಬಂತೆoದರೆ ಪ್ರತಿಯೊಬ್ಬರ ಮನೆಯಲ್ಲೂ ಹಬ್ಬದ ಸಂಭ್ರಮ ,ಮಕ್ಕ ಳಿಗಂತೂ ಎಲ್ಲಿಲ್ಲದ ಖುಷಿ ,ಕೃಷ್ಣ ವೇಷ, ಮೊಸರು ಕುಡಿಕೆ, ಭಜನಾವಳಿಗಳು ,ನೃತ್ಯ ಸ್ಪರ್ದೇ ಮೊದಲಾದ ಕಾರ್ಯಕ್ರಮ ಗಳನ್ನೂ ಮುಗಿಸಿ ಬರುವಷ್ಟ ರಲ್ಲಿ ಅಮ್ಮನ ಬಿಸಿ ಬಿಸಿ ಪಾಯಸ ಮೂಡೆ ತೆಂಗಿನ ಹಾಲು ಭರ್ಜರಿ ಊಟ ತಯಾರಾಗಿರುತ್ತೆ. ಪಾಯಸ ತಿಂದು ಹೊಸ ಹೊಸ ಬಟ್ಟೆಗಳನ್ನು ಧರಿಸಿ ಸಂಭ್ರಮವೊ ಸಂಭ್ರಮ.


ಆದರೇ ಇಂದು ಅಷ್ಟಮಿ ಯು ಒಂದೇ ಅಮಾವಾಸ್ಯೆಯು ಒಂದೇ. ಯಾವ ಆಚರಣೆ ಯು ಇಲ್ಲ ಯಾವ ಸಂಭ್ರಮವು ಇಲ್ಲ ಹೀಗೆ ಮುಂದುವರಿದರೆ ಮುಂದಿನ ಪೀಳಿಗೆಗೆ ಹಬ್ಬದ ಅರಿವೇ ಇರೋದಿಲ್ಲ ಕೋರೋಣ ಬಂದ ಮೇಲೆ ಅಂತೂ ಕೇಳುವುದೇ ಬೇಡ ಎಲ್ಲಾ ಹಬ್ಬಗಳು ಮೂಲೆಗುಂಪಾಗಿ ಹೋಗಿವೆ. ಈ ಮಹಾಮಾರಿ ತೊಲಗಿ ಹಿಂದಿನ ಹಾಗೆ ಮುಂದೆಯೂ ಹಬ್ಬಗಳನ್ನು ಸಂಭ್ರಮಿಸುವಂತಾಗಲೀ ಎಂದು ಆಶಿಸುತ್ತೇನೆ.






ಹರಿಣಿ ಮಧುಕರ್
ಕೊಯಿಲ ಬಂಟ್ವಾಳ್




No comments:

Post a Comment