BhandaryVarthe Team

BhandaryVarthe Team
Bhandary Varthe Team

Monday, 16 August 2021

ಬೆಂಗಳೂರು ಬನಶಂಕರಿ ಶ್ರೀಮತಿ ಸರೋಜಿನಿ ಭೋಜ ಭಂಡಾರಿ ವಿಧಿವಶ

 ಬಂಟ್ವಾಳ ದಿವಂಗತ ತಿಮ್ಮಪ್ಪ ಭಂಡಾರಿ ಮತ್ತು ದಿವಂಗತ ಗಿರಿಜಾ ಭಂಡಾರಿ ದಂಪತಿಯ ಪುತ್ರಿ ಹಾಗೂ ಬೆಂಗಳೂರು ಬನಶಂಕರಿ ದಿವಂಗತ ಭೋಜ ಭಂಡಾರಿ ಪಾಂಗಾಳ ಅವರ ಧರ್ಮಪತ್ನಿ ಶ್ರೀಮತಿ ಸರೋಜಿನಿ ಬೋಜ ಭಂಡಾರಿ ( 68 ವರ್ಷ ) ಇವರು ಮುಂಬಯಿಯ ವಸಾಯಿ ಖಾಸಗಿ ಆಸ್ಪತ್ರೆಯಲ್ಲಿ ಕೆಲವು ದಿನಗಳಿಂದ ಆಸೌಖ್ಯ ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆಗೆ ಸ್ಪಂದಿಸದೆ ದಿನಾಂಕ 16.08.2021 ನೇ ಸೋಮವಾರದಂದು ಮುಂಜಾನೆ ವಿಧಿವಶರಾದರು .


ಪುತ್ರಿ ಶ್ರೀಮತಿ ಸವಿತಾ ವೇಣುಗೋಪಾಲ್ ವಸಾಯಿ ಮುಂಬಯಿ ಪುತ್ರರಾದ ಶ್ರೀ ಸಂಜನ್ ಭಂಡಾರಿ ಬೆಂಗಳೂರು ಮತ್ತು ಶ್ರೀ ರಂಜನ್ ಭಂಡಾರಿ ಬೆಂಗಳೂರು ಹಾಗೂ ಸಹೋದರರಾದ ಶ್ರೀ ಆನಂದ ಭಂಡಾರಿ ಬಂಟ್ವಾಳ , ಶ್ರೀ ಗಣೇಶ್ ಭಂಡಾರಿ ಮಲಾಡ್ ಮುಂಬಯಿ ಸಹೋದರಿಯರಾದ ಶ್ರೀಮತಿ ಸುಮತಿ ಸುಂದರ ಭಂಡಾರಿ ಘಾಟ್ಕೋಪರ್ ಮುಂಬಯಿ , ಶ್ರೀಮತಿ ಲಲಿತಾ ಕೃಷ್ಣಪ್ಪ ಭಂಡಾರಿ ಯೆಯ್ಯಾಡಿ ಮಂಗಳೂರು , ಶ್ರೀಮತಿ ಇಂದಿರಾ ಆನಂದ ಭಂಡಾರಿ ಕದ್ರಿ ಮಂಗಳೂರು ,ಶ್ರೀಮತಿ ಗೀತಾ ವಿಠಲ ಭಂಡಾರಿ ಕುತ್ಯಾರು ಮಂಗಳೂರು ಮತ್ತು ಅಳಿಯ , ಸೊಸೆ , ಮೊಮ್ಮಕ್ಕಳು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

ಮೃತರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಿ ಮಕ್ಕಳು ಮತ್ತು ಕುಟುಂಬಸ್ಥರಿಗೆ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತನು ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಪ್ರಾರ್ಥನೆ.

-ಭಂಡಾರಿ ವಾರ್ತೆ

No comments:

Post a Comment