BhandaryVarthe Team

BhandaryVarthe Team
Bhandary Varthe Team

Saturday, 12 August 2017

ಮನೆಯ ಕೆಲಸವೆಲ್ಲ ಮಾಡಿ ಓಡೋಡಿ ಬರುವರು..

ನೆಯ  ಕೆಲಸವೆಲ್ಲ  ಮಾಡಿ ಓಡೋಡಿ  ಬರುವರು
ತಮ್ಮ  ನಿಯತ್ತಿನ  ಕರ್ತವ್ಯಕ್ಕೆ ನಗುನಗುತ್ತಾ ಹಾಜರಾಗುವರು
ಅದೇನೇ  ಬೇಸರ  ನೋವುಗಳಿದ್ದರು ತೋರಿಸಲ್ಲ  ಮಕ್ಕಳೆದುರು
ಅದೆಷ್ಟೋ  ಮಕ್ಕಳಿಗೆ  ದಾರಿದೀಪವಾದವರಿವರು

ನಸು  ನಗುತ್ತ  ಮಕ್ಕಳೊಂದಿಗೆ  ಮಕ್ಕಳಾಗುವರು
ಕೆಲವು ಸಲ ತನ್ನದಲ್ಲದ   ತಪ್ಪಿಗೆ ಬಯ್ಯಿಸಿಕೊಳ್ಳುವರು
ದಾನದಲ್ಲಿಯೇ  ಶ್ರೇಷ್ಠ  ದಾನವೆಂದರೆ ವಿದ್ಯಾದಾನ
ವಿದ್ಯೆಯ ಉಣಿಸುತ್ತಾ ಅದರಲ್ಲೆ ನೆಮ್ಮದಿಯ ಕಾಣುವರು ಇಡೀದಿನ

ಮಕ್ಕಳಿಗೆ ನೋವಾದಾಗಲೆಲ್ಲ ಸಂತೈಸುವರು ತಾಯಿಯಂತೆ
ಆದರೆ ಇವರನ್ನು ಸಂತೈಸುವವರು ಯಾರಿಲ್ಲ ತಮ್ಮವರಂತೆ
ಆದರೂ ಮಕ್ಕಳ ಕುಡಿ ನೋಟ ನೊಡಿದರೆ ಸಾಕು ಇದಾವುದರ ಪರಿವಿಲ್ಲ
ನಡೆದಾಡುತ್ತಾ ಪಾಠಪ್ರವಚನ ನೀಡುತ್ತಾ ಸಾಗಿದರೂ ಅವರಿಗೆ ದಣಿವಿಲ್ಲ

ನಿರಂತರ ನಿರರ್ಗಳವಾಗಿ ಮಾತನಾಡುವರು
ಮಕ್ಕಳ  ಜೊತೆ ತನ್ನ ಆರೋಗ್ಯವ. ಲೆಕ್ಕಿಸದೇ ಬೆರೆಯುವರು
ಹಂಗಿಸುವರು ಅವರ ಹಾಗಂತೆ ಹೀಗಂತೆ ಎಂದು
ವಿದ್ಯಾರ್ಥಿಗಳಲ್ಲಿ ಭೇಧ ಭಾವ ಮಾಡಲಿಲ್ಲ ಇವರು ನೊಂದು

ಆದರು ಯಾರ ಹಂಗನ್ನು ಬಯಸದ ನಿಸ್ವಾರ್ಥ ಸೇವೆ ಸಲ್ಲಿಸುವರು
ಶಾಲೆಯೇ ನಮ್ಮ ದೇಗುಲವೆಂದು ಕೈಮುಗಿದು ಜೀವಿಸುವರು      
ಬೆಲೆ ಕಟ್ಟಲಾಗದು ಅವರಿಗೆ  ಎಂದೆಂದೂ 
ಬೆಲೆಕಟ್ಟಲಾಗದ ಸಂಪತ್ತು ದಾನಮಾಡಿರುವರು ನಮಗಂದು

ಮರೆಯದಿರಿ ನಿಮ್ಮ ಜೀವನಕ್ಕೆ ದಾರಿ ನೀಡಿದ ನಿಮ್ಮೆಲ್ಲ ಅಚ್ಚು ಮೆಚ್ಚಿನ ಶಿಕ್ಷಕರ
ನಕ್ಕು ಬಿಡಿ ಒಮ್ಮೆ ನಿಮ್ಮೆದುರು ಬಂದಾಗ ನೋಡಿ ಅವರ
ಅಷ್ಟೆ ಸಾಕು ಆ ಜೀವಕೆ ತನ್ನ ಸಾರ್ಥಕ ಬದುಕಿಗೆ
ವಿದ್ಯಾರ್ಥಿಗಳ ಸಾಧನೆಯ ಕಂಡು ಸಂಭ್ರಮಿಸುವ ಗುರುವಿಗೆ.

: ಸುಪ್ರೀತ ಭಂಡಾರಿ, ಸೂರಿಂಜೆ

3 comments: