BhandaryVarthe Team

BhandaryVarthe Team
Bhandary Varthe Team

Saturday 18 September 2021

ಜೀವನದ ಇಳಿ ವಯಸ್ಸಲ್ಲಿ ಪ್ಯಾಂಟು ZIP ಜಾರಿದಾಗ-ಸೀತಾರಾಮ ಭಂಡಾರಿ M P , ಕೋಣಾಜೆ

 Zip ಯುಗ ಬಂದು ಕೆಲವು ದಶಕಗಳೇ ಸಂದು ಹೋದವು. ಆಗ ನಾವು ಯುವ-ಕರುಗಳಾಗಿದ್ದೆವು .😃

ಆಗ ಈ Zip ಪ್ಯಾಂಟಿನ ಸಮಸ್ಯೆ ನಮಗೆ ಗೊತ್ತಾಗಲೇ ಇಲ್ಲ. ಈಗ ನಾವು ಆಗಿದ್ದೇವೆ ಮುದು- ಕರು🤓.

ನನ್ನಲ್ಲೀಗ ಕೆಲವು ವಯೋಸಹಜ ಲಕ್ಷಣಗಳು ಕಾಣಲಾರಂಬಿಸಿದೆ ಎಂದು ನನಗೆ ತಿಳಿಯುವ ಮೊದಲೇ ನನ್ನ ಪತ್ನಿ ಗುರುತಿಸಿದ್ದಳು.

ನಾನು ಕೆಲವೊಮ್ಮೆ ಪತ್ನಿಯ ಹುಕುಮಿನಂತೆ ಸಾಂಬಾರು ಜೀನಸ್ಸು ಪದಾರ್ಥಗಳನ್ನು ತರಲು ತ್ವರಿತಗತವಾಗಿ ಪ್ಯಾಂಟ್ ಶರ್ಟ್ ತೊಟ್ಟು ( inshirt) ಇನ್ನೇನು ಅಂಗಳಕ್ಕೆ ಇಳಿಯುವಷ್ಟರಲ್ಲಿ ನನ್ನವಳು ನನ್ನ ಕೈಯ್ಯಲ್ಲಿ ಹಣವಿದೆಯೇ ಎಂದು ಕೇಳುವುದಿಲ್ಲ🤔 ಆದರೆ ನಿಮ್ಮ ಪ್ಯಾಂಟಿನ ಜಿಪ್ ಎಳೆದಿದ್ದೀರಾ ಎಂದುಗೌಜಿ ಮಾಡಿ 😡 ನನಗೆ ನೋಡಲು ನಾಚಿಕೆ ಆಗುತ್ತದೆ 🤦‍♀️ ಎನ್ನುತ್ತಾಳೆ. PantZip ಎಳೆಯುವಷ್ಟು ಪುರುಸೊತ್ತು ನೀಡದೆ ಮನೆಯಿಂದ ಹೊರದಬ್ಬುವುದು ಬೇರೆ Zip ಹಾಕಿಲ್ಲ ಎಂದು ಗದರಿಸುವುದು ಬೇರೆ😩

 

ಆಯಿತು ಅಂಗಡಿಗೆ ಹೋಗಿ ಹಿಂತಿರುಗುವ ವೇಳೆ ಬಹಿರ್ದೆಸೆಯ ಸಮಸ್ಯೆ ಒಳಗಾದರೆ ತಕ್ಷಣವೇ ಆರೋಗ್ಯದ ಹಿತ ದೃಷ್ಟಿಯಿಂದ ಶ್ವಾನದಂತೆ🐕 ವಿಲೇವಾರಿ ಮಾಡ ಬೇಕೆಂದು ವೈದ್ಯರೇ ಸಲಹೆ ಕೊಟ್ಟಿದ್ದಾರೆ. ಜನ ನೋಡಿಯಾರು ಎಂಬ ಭಯದಿಂದ ಒಮ್ಮೆ ಇಲ್ಲಿಂದ ತೆರಳುವ ಗಡಿಬಿಡಿಯಲ್ಲಿ ಪ್ಯಾಂಟಿನ Zip ಹಾಕುಲು ಮರೆತು ಹೋಗುವುದು ನನ್ನ ತಪ್ಪೇ? ಅಥವಾ ಪ್ರಾಯದ ತಪ್ಪೇ? ಎಂದು ಹೌದು ಸ್ವಾಮಿ ನೀವೇ ಹೇಳಿ🤓

ಮನೆಗೆ ಸರಕು ಸರಂಜಾಮುಗಳನ್ನು ಹೆಗಲಲ್ಲಿ, ಕೈಯ್ಯಲ್ಲಿ ಕೆಲವೊಮ್ಮೆ ತಲೆಯಲ್ಲಿ ( bcz no cycle or vehicle) ಹೊತ್ತು ಕೊಂಡು ಹೋದ ಸಾಮಾನುಗಳನ್ನು ಕೆಳಗಿಳಿಸುವ ಮೊದಲೇ ಮತ್ತೇ ಅದೇ ರಾಗ. ನಿಮಗೆ ನಾಚಿಕೆ ಆಗೋಲ್ಲ! ನನಗೆ ನಾಚಿಕೆ ಆಗುತ್ತದೆ, ನೀವೀಗ ಮಾರ್ಗದಲ್ಲಿ ಬರುವಾಗ ಜನ ನೋಡಿ ಏನೆಂದಾರು? ನೋಡುವವರಿಗೆ ನಾಚುಗೆ ಆಗ್ತದೆ!! ನಿಮ್ಮ ಪ್ಯಾಂಟಿನ zip ಜಾರಿದೆಯಲ್ಲಾ, ನಿಮಗೆ zip ಮೇಲೆ ಎಳೆಯಲು ಸಂಕಟವೇ ಎಂದು ಗದರಿಸುವಳು 😬🥱



 ಇಲ್ಲ ಮಾರಾಯ್ತಿ zip ತನ್ನಷ್ಟಕ್ಕೆ ಲೂಸಾಗಿ ಕೆಳಗೆ ಜಾರಿತು. ಸರಿಪಡಿಸೋಣ ಎಂದರೆ ಕೈಗಳಲ್ಲಿ, ತಲೆಯಲ್ಲಿ ಚೀಲದ ಗಂಟುಗಳು ಮಂಗನಂತೆ ಕುಳಿತಿವೆ , ಎಲ್ಲದ್ದಕ್ಕೂ ನನಗೆ ಪ್ರಾಯವಾಗಿದೆ, ನಾನೊಬ್ಬ ಹಿರಿಯ ಜೀವಿಯಲ್ಲವೇ? ಜನರು ನೋಡಿದರೇನಾಯ್ತು? ಹಿರಿಯರಾದ ನಮಗೆ ನಾಚಿಕೆ ಯಾಗುವುದಿಲ್ಲ? ನಾಚಿಕೆ ಆಗುವುದಿದ್ದರೆ ಅವರಿಗೆ ನಾಚಿಕೆ ಆಗಬೇಕು.

ಸಾರ್ವಜನಿಕವಾಗಿ ಪ್ಯಾಂಟು ಶರ್ಟು ಧರಿಸಿ ಹಿರಿಯರು ಹೋದಾಗ ಧರಿಸಿದ ಬಟ್ಟೆ ಅಥವಾ ಪ್ಯಾಂಟ್ zip ಜಾರಿದ್ದರೆ ಅದನ್ನು ಸರಿಪಡಿಸಿಕೊಳ್ಳಿ ಅಂಕಲ್ ಅಥವಾ ಅಜ್ಜಾ ಎಂದು ಹೇಳುವ ಜವಾಬ್ದಾರಿ ಯುವ ಪೀಳಿಗೆಗೆ ಇಲ್ಲವೇ? ಎಂದು ನಾನೇ ಪ್ರಶ್ನಿಸಿ ನನ್ನನ್ನು ನಾನೇ ಸಮರ್ಥಿಸಿಕೊಂಡೆ👍

ನನಗೀಗ ಸಂಶಯ ಪ್ಯಾಂಟಿನ zip ಜಾರಿಕೊಂಡು ಬರುವುದು ಪ್ರಾಯ ಆದ ಮೇಲೆಯೇ? ಅಥವಾ ಪ್ರಾಯ ಹೋದ ಮೇಲೆಯೇ? 🤔

ಹಿರಿಯ ಗಂಡಸರಲ್ಲಿ ಕಾಣುವ ಪ್ಯಾಂಟಿನ ಈ zip ಮರೆವು ಯಾವ ರೋಗಲಕ್ಷಣದ ವ್ಯಾಪ್ತಿಯಲ್ಲಿ ಬರುತ್ತದೆ? ವೈರಸ್ ಅಲ್ಲ ಸಾಂಕ್ರಾಮಿಕವೂ ಅಲ್ಲ ಅಥವಾ Zip manufacturing defect ಆಗಿರಬಹುದೇ?🤔😝

ಅದಕ್ಕೇ ಬಹುಶಃ ನಮ್ಮ ಸಿನಿಮಾರಂಗದ ಉಪೇಂದ್ರನ ಹಾಡಲ್ಲಿ ಮೂಡಿ ಬರುವುದು ಸೊಂಟ ಸೂಪರೂ, ಅದು ಬಲು ಡೇಂಜರೂ😱😲 ಹಾಗೆಯೇ "ಸೊಂಟದ ವಿಷ್ಯಾ ಬೇಡವೋ ಶಿಷ್ಯಾ" ಎಂದು ಬಹುಶಃ ನಮ್ಮಂತಹವರ ಮರೆಗುಳಿಯ zip ಜಾರುವವರಿಗೆ ಹೇಳಿರಬೇಕು🤔🤓

ಈಗ ನನಗೆ ಪ್ರಾಯ ಹೆಚ್ಚುತ್ತಾ ಹೋದಂತೆ ನಾನು ಮನೆಯಿಂದ ನಿರ್ಗಮಿಸುವಾಗ & ಆಗಮಿಸುವಾಗ ನನ್ನ ಪತ್ನಿಗೆ ನನ್ನ ಸೊಂಟದ ಪ್ಯಾಂಟಿನ ಮೇಲೇಯೇ ತೀವ್ರ ನಿಗಾ😝

ಈಗ ಎಲ್ಲಿಯವರೆಗೆ ನನ್ನ ಸ್ಥಿತಿ ತಲುಪಿದೆ ಎಂದರೆ ನಾನು ಎಲ್ಲಿ ಓಡಾಡುತಿದ್ದರೂ ನನ್ನ Mobile phone ಗೆ ಕರೆ ಮಾಡಿ ನೀವು ಎಲ್ಲಿದ್ದೀರಾ? ಪ್ಯಾಂಟಿನ ಜಿಪ್ ಹಾಕಿದ್ದೀರಾ? ಜಾರಿದ್ದರೆzip ನ್ನು ಮೇಲಕ್ಕೆ ಎಳೆಯಿರಿ ಎಂದು warning & controlling system ಕರೆ ಬರುತ್ತದೆ.

ಹೆಚ್ಚು ಕಡಿಮೆ Mobile ನಲ್ಲಿ ಕೊರೋನಾ ಎಚ್ಚರಿಕೆ ಸಂದೇಶ ಬಂದಂತೆ😫

ನಾನು ಅವಳಿಗೆ ಹೇಳಿದೆ ಹಲವು ಬಾರಿ🙏 ನನಗೆ ಪ್ರಾಯ ಆಗಿದೆ.ನೀನು ನನ್ನ ಪ್ಯಾಂಟಿನ zip ಬಗ್ಗೆ ತಲೆ ಬಿಸಿ ಮಾಡಬೇಡ ಎಂದು.

 ಆದರೆ ಆಕೆಯ ವಾದ ಏನೆಂದರೆ ನಿಮಗೆ ಪ್ರಾಯ ಆಗಿದೆ ಸರಿ! ಆದರೆ ನಾನು ಪ್ರಾಯದಲ್ಲಿ ನಿಮಗಿಂತ ಏಷ್ಟೋ ಕಿರಿಯವಳು. ನೀವು zip ಹಾಕದೆ ಹೀಗೆ ಹೋದರೆ ನಿಮ್ಮ ಪತ್ನಿಯಾದ ನನಗೆ ನಾಚುಗೆಯಾಗುತ್ತದೆ ಅನ್ನುತ್ತಾಳೆ🤦‍♀️

ನಾನು ಅವಳಿಗೆ ಸಮಾಧಾನ ಮಾಡಿ ಹೇಳಿದೆ " ನೋಡು ಹಳ್ಳಿಯಲ್ಲಾಗಲಿ ನಗರದಲ್ಲಿಯಾಗಲಿ, ನನ್ನ ಹಾಗೆ ಕೆಲವು ಹಿರಿಯರಿಗೆ ಈ ರೀತಿಯ ಸಮಸ್ಯೆಗಳು ಸ್ವಾಭಾವಿಕ."

ಸಾರ್ವಜನಿಕ ಜೀವನದಲ್ಲಿ ಜನರು ಮೈ ಮರೆತು ಓಡಾಡುವಾಗ, ಅಥವಾ ಧರಿಸಿಕೊಂಡ ಬಟ್ಟೆಗಳು ಕೆಲವೊಮ್ಮೆ ಗೊತ್ತಿಲ್ಲದೆ ಅವ್ಯವಸ್ಥೆಯಲ್ಲಿರುವ ವೇಳೆ, ಗೊತ್ತಿಲ್ಲದೆ ಬಟನ್, zip ಗಳು ಜಾರಿದ ಸ್ಥಿತಿಯಲ್ಲಿರುವ ತಪ್ಪುಗಳನ್ನು ನೋಡುಗರ ಕಣ್ಣುಗಳು ಬೇಗನೆ ಗಮನಿಸುತ್ತಿರುತ್ತದೆ, ಆದರೆ ನಮಗರಿವಿಲ್ಲದ ನಮ್ಮ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಿ ಎಂದು ಪುರುಷ ಸಮಾಜ ಪುರುಷರಿಗೂ ಹೇಳುವುದಿಲ್ಲ ಇಲ್ಲವೇ ಮಹಿಳೆಯರು ಕೂಡಾ ಕೆಲವು ಸಂಧರ್ಭಗಳಲ್ಲಿ ಮಹಿಳೆಯರಿಗೆ ಹೇಳಲು ಮಹಿಳೇಯರೇ ಸಂಕೋಚಿಸುವುದು ತಪ್ಪೆಂದು ಹಿರಿಯವನಾದ ನನ್ನ ಭಾವನೆ

ಅಂತಿಮ ಸಂಶೋಧನೆ

Zip ಪುರಾಣದಿಂದ ಪಾರಾಗಲು ನಮ್ಮ ತಂಡ ಯಾವುದೇ fellowship ಇಲ್ಲದೆ ಸಂಶೋಧನೆ ನಡೆಸಿದೆ.
70 ವರುಷ ದಾಟಿದ ( zip ಜಾರುವವರಿಗೆ ಮಾತ್ರ) ನಾನು ಸೇರಿದಂತೆ ಇತರ ಹಿರಿಯ ಪ್ಯಾಂಟು ಧರಿಸುವ ಹಿರಿಯ ಗಂಡಸರಿಗೆ zip ಪ್ಯಾಂಟು ಬದಲು ಜಿಪ್ಪೇ ಇಲ್ಲದ Sports pant ನ್ನು ಖಡ್ಡಾಯವಾಗಿ ಧರಿಸುವಂತೆ
ಆಯಾಯ ಮನೆಯ care taker ನವರು ಒತ್ತಾಯಿಸುವ ಪದ್ಧತಿಯನ್ನು ಜ್ಯಾರಿಗೊಳಿಸುವಂತೆ ತಾತ್ಕಾಲೀಕ ಸಂಶೋಧನಾ ವರದಿ ಅಂತಿಮ ಹಂತದಲ್ಲಿದೆ🤓🙏🙏🙏

ಇಲ್ಲಿಗೆ zip ಪುರಾಣ ಕಥೆ ಮುಗಿಯಿತು. ಈ ಲೇಖನ ಬರೆಯಲು ನನ್ನಾಕೆಯ ಮೌಖಿಕ ಅಪ್ಪಣೆ ಪಡೆದಿದ್ದೇನೆ ಮತ್ತು ನನ್ನ ನಿತ್ಯ ಬದುಕಿನ ವ್ಯವಹಾರದ ಜವಾಬ್ದಾರಿ ಆಕೆಯೇ ಹೊತ್ತುಕೊಂಡಿರುವುದರಿಂದ ನನ್ನ ಈ ಹಾಸ್ಯ/ದುಖಃದ ಲೇಖನವನ್ನು ನನ್ನ ಮಡದಿಗೆ ಅರ್ಪಣೆ 🙏🙏🙏


 

 

 


-ಸೀತಾರಾಮ ಭಂಡಾರಿ M P , ಕೋಣಾಜೆ


No comments:

Post a Comment