ಭಂಡಾರಿ ಸಮಾಜ ಸಂಘ (ರಿ) ಬೆಂಗಳೂರು ಇದರ ಸೆಪ್ಟೆಂಬರ್ 2021 ರ ಮಾಸಿಕ ಸಭೆಯು ದಿನಾಂಕ: 26/09/2021 ರ ಭಾನುವಾರದಂದು ಮಧ್ಯಾಹ್ನ 4 ಘಂಟೆಗೆ ಸಂಘದ ಗೌರಾವಾಧ್ಯಕ್ಷರಾದ ಶ್ರೀಯುತ ಲಕ್ಷ್ಮಣ ಭಂಡಾರಿ ಕರಾವಳಿ ರವರ ಅಧ್ಯಕ್ಷತೆಯಲ್ಲಿ ಹೋಟೆಲ್ ಕದಂಬ ರಾಜಾಜಿನಗರ ಬೆಂಗಳೂರು ಇಲ್ಲಿ ಜರಗಿತು.
ವಲಯದ ಪ್ರಧಾನ ಕಾರ್ಯದರ್ಶಿ ಶ್ರೀ ಸುಧಾಕರ ಭಂಡಾರಿಯವರು ಹಾಜರಿದ್ದ ಎಲ್ಲರನ್ನೂ ಸ್ವಾಗತಿಸಿದರು. ಮೊದಲು ಈ ಹಿಂದಿನ ಸಭೆಯಿಂದ ಇದುವರೆಗೆ ನಮ್ಮನ್ನಗಲಿದ ಸಂಘದ ಸದಸ್ಯರು ವಿಶೇಷವಾಗಿ ವಲಯದ ಮಾಜಿ ಕೋಶಾದಿಕಾರಿ ಶ್ರೀಯುತ ಗೋಪಾಲ ಕೃಷ್ಣ ಭಂಡಾರಿ, ಸಂಘದ ಸದಸ್ಯರು ಹಾಗೂ ದಾನಿಗಳೂ ಆಗಿದ್ದ ಶ್ರೀಯುತ ವಿ ಆನಂದಸ್ವಾಮಿ ಮತ್ತು ಸಂಘದ ಸದಸ್ಯರಾಗಿದ್ದ ಶ್ರೀಮತಿ ಸರೋಜಿನಿ ಭಂಡಾರಿ ಕತ್ರಿಗುಪ್ಪೆ ಹಾಗೂ ಇತರ ಪದಾಧಿಕಾರಿಗಳು ಹಾಗೂ ಬಂಧುಗಳಿಗೆ ಒಂದು ನಿಮಿಷದ ಮೌನಾಚಾರಣೆ ಮೂಲಕ ಶ್ರದ್ಧಾಂಜಲಿ ಅರ್ಪಿಸಿತು. ಪ್ರದಾನ ಕಾರ್ಯದರ್ಶಿಯವರು ಸಭೆಯ ಅಜೆಂಡಾವನ್ನು ಓದಿ ಹೇಳಿದರು.
ಚರ್ಚಿತ ವಿಷಯಗಳು:
· ಪ್ರತಿವರ್ಷದ ಪದ್ದತಿಯಂತೆ ವಲಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ (ವಿದ್ಯಾ ಪ್ರೋತ್ಸಾಹ) ನೀಡುವ ಬಗ್ಗೆ ಚರ್ಚಿಸಲಾಯಿತು. ವಲಯದ ಕೋಶಾಧಿಕಾರಿ ಶ್ರೀ ಕುಶಲ್ ಭಂಡಾರಿ ಯವರು ಲಭ್ಯವಿರುವ ಸಂಪನ್ಮೂಲಗಳ ಬಗ್ಗೆ ಮಾಹಿತಿ ನೀಡಿದರು. ಹಾಜರಿದ್ದ ಸದಸ್ಯರು ಪ್ರತಿ ವರ್ಷದಂತೆ ಸಮಾಜದ ಮುಖವಾಣಿ ಕಚ್ಚೂರು ವಾಣಿ ಪತ್ರಿಕೆಯಲ್ಲಿ ಸದರಿ ವಿಷಯದ ಬಗ್ಗೆ ಪ್ರಚಾರ ನೀಡಿ, ಘಟಕಗಳ ಮುಖಾಂತರ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಮಾಹಿತಿಯನ್ನು ಸಂಗ್ರಹಿಸಿ ವಲಯದ ಕೇಂದ್ರ ಕಛೇರಿಯಿಂದ ಪರಿಶೀಲಿಸಿ ವಿದ್ಯಾರ್ಥಿ ವೇತನ ನೀಡುವುದು ಎಂದು ತೀರ್ಮಾನಿಸಿದರು. ಈ ಪ್ರಯುಕ್ತ ಕೂಡಲೇ ಮಾಹಿತಿಯನ್ನು ಕಚ್ಚೂರುವಾಣಿ ಪತ್ರಿಕೆಗೆ ನೀಡುವುದು ಹಾಗೂ ಅರ್ಜಿ ಸಲ್ಲಿಸಲು ನವೆಂಬರ್ 20 ನ್ನು ಕೊನೆಯ ದಿನವೆಂದು ಪರಿಗಣಿಸುವುದು ಎಂದು ತೀರ್ಮಾನಿಸಿತು. ಈ ಸಂಬಂಧ ಬೆಂಗಳೂರು ವಲಯದ ಕಾರ್ಯವ್ಯಾಪ್ತಿಯಲ್ಲಿ ಬರುವ ಘಟಕಗಳಿಗೆ ಮಾಹಿತಿ ನೀಡುವುದು ಎಂದು ತೀರ್ಮಾನಿಸಿತು.
ಸಂಘದ ಮಾಜಿ ಅಧ್ಯಕ್ಷರಾದ ಶ್ರೀಯುತ ಬಾಲಕೃಷ್ಣ ಭಂಡಾರಿಯವರು ತಮ್ಮ ತಂದೆ ತಾಯಿಯವರ ಸ್ಮರಣೆಗಾಗಿ ಹತ್ತನೇ ತರಗತಿ ಮತ್ತು ಪಿಯುಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದಿರುವ ವಲಯದ ವಿದ್ಯಾರ್ಥಿಗಳಿಗೆ ಪ್ರತೀ ವರ್ಷ ನೀಡುತ್ತಿದ್ದ ಪ್ರತಿಭಾ ಪುರಸ್ಕಾರವನ್ನು ಈ ವರ್ಷವೂ ನೀಡುವುದೆಂದು ತೀರ್ಮಾನಿಸಿದ್ದು, ಪ್ರತಿಭಾ ಪುರಸ್ಕಾರಕ್ಕಾಗಿ ಪ್ರತ್ಯೇಕ ಅರ್ಜಿಯನ್ನು ಪಡೆದು ಆಯ್ಕೆಯಾದ ವಿದ್ಯಾರ್ಥಿಗಳನ್ನು ಸಂಘದ ವಾರ್ಷಿಕ ಮಹಾಸಭೆಯಲ್ಲಿ ಸನ್ಮಾನಿಸುವುದು ಎಂದು ತೀರ್ಮಾನಿಸಲಾಯಿತು.
· ಈಗಾಗಲೇ ಸಂಘದ ವಿದ್ಯಾರ್ಥಿ ನಿಧಿಗೆ ವಾರ್ಷಿಕ ಧನ ಸಹಾಯ ನೀಡುತ್ತಿದ್ದ ಸಂಘದ ಸದಸ್ಯರನ್ನು ಕೂಡಲೇ ಸಂಪರ್ಕಿಸಿ ಆರ್ಥಿಕ ಕ್ರೋಢೀಕರಣ ಹೆಚ್ಚು ಮಾಡುವುದು ಹಾಗೂ ಹೊಸ ದಾನಿಗಳನ್ನು ಗುರುತಿಸಿ ಸಹಾಯ ಪಡೆಯುವುದು ಎಂದು ಸಭೆ ತೀರ್ಮಾನಿಸಿತು.
ಈ ಹಿಂದೆ ವಿದ್ಯಾರ್ಥಿ ವೇತನ ಪಡೆದು ಶಿಕ್ಷಣ ಪೂರೈಸಿ ಉದ್ಯೋಗದಲ್ಲಿ ಇರುವ ವಲಯದ ಸದಸ್ಯರನ್ನು ಘಟಕಗಳ ಮುಖಾಂತರ ಸಂಪರ್ಕಿಸಿ ಅವರು ಸಮಾಜ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವಲ್ಲಿ ಸಹಕರಿಸುವಂತೆ ಮಾಡಬೇಕು, ಇದಕ್ಕೆ ಶೀಘ್ರವಾಗಿ ವಲಯದ ಪ್ರಮುಖರು ಕ್ರೀಯಾಶೀಲರಾಗುವಂತೆ ಮಾಡಬೇಕೆಂದು ಸಭೆ ಕಾರ್ಯಕಾರಿ ಮಂಡಳಿಯನ್ನು ಒತ್ತಾಯಿಸಿತು. ಉತ್ತಮವಾದ ಸಲಹೆಯನ್ನು ಒಪ್ಪಿದ ಗೌರವಾಧ್ಯಕ್ಷರು ಎಲ್ಲಾ ಸದಸ್ಯರು ಇದಕ್ಕೆ ಸಹರಿಸಿ ಮುಂದಿನ ದಿನಗಳಲ್ಲಿ ಆರ್ಥಿಕ ಕ್ರೋಢೀಕರಣ ಹೆಚ್ಚಿಸುವಂತೆ ಮಾಡುವಲ್ಲಿ ಎಲ್ಲರೂ ಕೈ ಜೋಡಿಸುವಂತೆ ಕೇಳಿಕೊಂಡರು.
· ಪ್ರತಿ ವರ್ಷದ ಪದ್ದತಿಯಂತೆ ಡಿಸೆಂಬರ್ ನಲ್ಲಿ ನಡೆಯಬೇಕಾದ ವಾರ್ಷಿಕ ಸ್ನೇಹ ಕೂಟ ಮತ್ತು ಕಾರ್ಯಕಾರಿ ಸಮಿತಿಯ ಬದಲಾವಣೆ ಪ್ರಕ್ರಿಯೆ ಕೊರೋನಾದ ಕಾರಣದಿಂದ ಕಳೆದ ವರ್ಷ ಆಗಿರಲಿಲ್ಲ ಆದ್ದರಿಂದ ಈ ವರ್ಷ ನಡೆಸುವುದು. ಅದಕ್ಕೆ ಅವಶ್ಯವಾದ ಹಣಕಾಸಿನ ಸಂಪನ್ಮೂಲ ಮತ್ತು ಇತರೆ ವ್ಯವಸ್ಥೆಯನ್ನು ಪ್ರಾರಂಭಿಸುವಂತೆ ಸಭೆಗೆ ತಿಳಿಸಲಾಯಿತು.
· ಅಕ್ಟೋಬರ್ 2ನೇ ತಾರೀಕು ದೇವಸ್ಥಾನದಲ್ಲಿ ವಾರ್ಷಿಕ ಮಹಾ ಸಭೆ ಇರುವುದರಿಂದ ಅಕ್ಟೋಬರ್ ತಿಂಗಳ ಮಾಸಿಕ ಸಭೆಯನ್ನು 24ನೇ ತಾರೀಕು ನಡೆಸುವುದು ಮತ್ತು ಆ ಸಭೆಯಲ್ಲಿ ವಾರ್ಷಿಕ ಸ್ನೇಹ ಕೂಟದ ಪೂರ್ವಭಾವಿ ಚರ್ಚೆಯನ್ನು ಹಾಗೂ ಶೀಘ್ರ ಆಗಬೇಕಾದ ಕೆಲಸಗಳ ಬಗ್ಗೆ ಚರ್ಚಿಸುವುದು ಎಂದು ಸಭೆ ತೀರ್ಮಾನಿಸಿತು.
ಲಘು ಉಪಹಾರದ ನಂತರ ಕೋಶಾಧಿಕಾರಿಯವರ ವಂದನಾರ್ಪಣೆಯೊಂದಿಗೆ ಸಭೆಯನ್ನು ಮುಖ್ತಾಯಗೊಳಿಸಲಾಯಿತು.
ವರದಿ : ಸುಧಾಕರ ಭಂಡಾರಿ ಶಿರಾಳಕೊಪ್ಪ
No comments:
Post a Comment