BhandaryVarthe Team

BhandaryVarthe Team
Bhandary Varthe Team

Tuesday, 7 September 2021

ಬದುಕಿನ ಇಳಿ ಸಂಜೆಗೆ ಕಾಡುವ ನೋವು ಸಂಧಿವಾತ

 

ಇತ್ತೀಚಿಗೆ ಜನರಲ್ಲಿ ಮೈ ಕೈ ನೋವು ಹೇಗೆ ಹೆಚ್ಚಾಗುತ್ತಿದೆ ಅದೇ ರೀತಿ ಕೀಲುಗಳ ನೋವು ಹಾಗೂ ಮೂಳೆಗಳಿಗೆ ಸಂಬಂಧ ಪಟ್ಟ ಆರ್ಥ್ರೈಟಿಸ್ ಸಮಸ್ಯೆ ಅಥವಾ ಸಂಧಿವಾತ ಕೂಡ ಹೆಚ್ಚಾಗುತ್ತಿದೆ. ಸಾಕಷ್ಟು ಜನರಿಗೆ ವಿಚಾರದಲ್ಲಿ ಆಸ್ಪತ್ರೆಗಳಿಗೆ ಸುತ್ತಿ ಸುತ್ತಿ ಬೇಸರವಾಗಿ ಬಿಟ್ಟಿದೆ.

ವಿವಿಧ ಜನರು ವಿವಿಧ ಬಗೆಯ ಜೀವನ ಶೈಲಿಗಳನ್ನು ಅಳವಡಿಸಿಕೊಂಡು ತಮ್ಮ ಆಹಾರ ಪದ್ಧತಿಯಲ್ಲಿ ಇಲ್ಲದ ಬದಲಾವಣೆಗಳನ್ನು ತಂದುಕೊಂಡು ತಮ್ಮ ದೇಹದ ಅನಾರೋಗ್ಯ ಸ್ಥಿತಿಯನ್ನು ಹೆಚ್ಚು ಮಾಡಿಕೊಳ್ಳುತ್ತಿದ್ದಾರೆ.



ಇವತ್ತಿನ ದಿನಗಳಲ್ಲಿ ಬಹುತೇಕ ಕಾಯಿಲೆಗಳು ನಮ್ಮ ಜೀವನ ಶೈಲಿಯಿಂದಲೇ ಪ್ರಾರಂಭವಾಗುತ್ತದೆ. ಅದರಲ್ಲಿ ಕೀಲು ನೋವು ಕೂಡ ಒಂದು. ಒಬ್ಬ ಆರೋಗ್ಯವಂತ ಮನುಷ್ಯ ಸುಮ್ಮನೇ ಕೂರುವಂತಿಲ್ಲ. ಸೂರ್ಯೋದಯದಿಂದ ಸೂರ್ಯಾಸ್ತದವರೆಗೂ ದೈಹಿಕ ಚಟುವಟಿಕೆಯುಳ್ಳ ಕೆಲಸದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕು. ಹಸಿವಾದಾಗ ಊಟ ಮಾಡಬೇಕು.

ದುಡಿಮೆಯಿಂದ ದೈಹಿಕ ದಣಿವು ಉಂಟಾದಾಗ ರಾತ್ರಿ ಸರಾಗವಾಗಿ ನಿದ್ದೆ ಹತ್ತುತ್ತದೆ. ಮನುಷ್ಯನ ದೇಹದಲ್ಲಿ ಎಲ್ಲವೂ ಸಮತೋಲನದಲ್ಲಿರುತ್ತದೆ. ಮೂಲಕ ಅನಾರೋಗ್ಯ ಆತನ ಹತ್ತಿರವೂ ಸುಳಿಯುವುದಿಲ್ಲ. ಆದರೆ ಇಂದು ಬದಲಾದ ಜೀವನ ಶೈಲಿ ಎಲ್ಲವನ್ನು ಬದಲಿಸಿದೆ.

ಪಾದ ಬಿಸಿಯಾಗಿರಲಿ, ತಲೆ ತಣ್ಣಗಿರಲಿ

ಮನುಷ್ಯನ ಪಾದ ಬಿಸಿ ಇರಬೇಕು, ತಲೆ ತಣ್ಣಗಿರಬೇಕು. ಇದು ಆರೋಗ್ಯವಂತನ ದಿನಚರಿ ಎನ್ನುತ್ತಿದ್ದರು ಹಿರಿಯರು. ಅಂದರೆ ಹೆಚ್ಚು ಹೆಚ್ಚು ನಡಿಗೆ ಇರಬೇಕು. ತಲೆಯಲ್ಲಿ ಯಾವುದೇ ಚಿಂತೆ, ಒತ್ತಡಗಳಿರಬಾರದು. ಆಗ ಮಾತ್ರವೇ ದೀರ್ಘಾಯುಷ್ಯ ಪಡೆಯಬಹುದು ಅನ್ನೋದು ಹಿರಿಯರ ಅನುಭದ ನುಡಿ. ಆದರೆ ಇಂದು ಮಾತು ಅದಲಿ ಬದಲಿಯಾಗಿದೆ. ಪಾದ ತಣ್ಣಗಿದೆ, ತಲೆ ಬಿಸಿಯಾಗಿದೆ. ಕಾರಣಕ್ಕೆ ಇನ್ನಿಲ್ಲದ ಆರೋಗ್ಯ ಸಮಸ್ಯೆಗಳು ಮನುಕುಲವನ್ನು ಬೆನ್ನತ್ತಿವೆ.

 ಆರ್ಥರೈಟೀಸ್ ಬಗ್ಗೆ ತಿಳಿದಿರಲಿ

ಕೀಲು ನೋವು ಅಥವಾ ಆರ್ಥರೈಟೀಸ್ ಇವತ್ತಿನ ದಿನಗಳಲ್ಲಿ ಬಹುತೇಕರನ್ನು ಬಾಧಿಸುತ್ತಿರುವ ಮೂಳೆಗೆ ಸಂಬಂಧಿಸಿದ ಸಮಸ್ಯೆಯಾಗಿದೆ. ಅದರಲ್ಲೂ 40 ವರ್ಷ ಮೇಲ್ಪಟ್ಟವರಲ್ಲಿ ಸಮಸ್ಯೆ ಕಾಣಿಸಿಕೊಳ್ಳುವುದು ಹೆಚ್ಚಾಗಿದೆ. ನಿಟ್ಟಿನಲ್ಲಿ ಆರ್ಥರೈಟೀಸ್ ಅಂದರೆ ಏನು?

ಮೂಳೆಸಂಧುಗಳಲ್ಲಿ ಎದುರಾಗಿರುವ ಉರಿಯೂತದ ಕಾರಣ ಮೂಳೆಗಳ ಸಂಧುಗಳು ಜಾರುಕದ್ರವದಲ್ಲಿ ಸಾಮಾನ್ಯ ಸ್ಥಿತಿಯಲ್ಲಿ ಜಾರುವಂತೆ ಜಾರಲು ಸಾಧ್ಯವಾಗದೇ ಬಿಗಿಯಾಗಿರುವುದು ಮತ್ತು ಚಲನೆಗೆ ಪ್ರಯತ್ನಿಸಿದರೆ ಭಾಗದಲ್ಲಿ ನೋವಾಗುವುದೇ ಸಂಧಿವಾತ.

ಅಮೇರಿಕನ್ ಕಾಲೇಜ್ ಆಫ್ ರುಮಟಾಲಜಿ ಪ್ರಕಾರ, 40 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರಲ್ಲಿ ಸಾಮಾನ್ಯವಾಗಿ ಸಂಧಿವಾತ ಕಂಡು ಬರುತ್ತದೆ. ನಿಧಾನವಾಗಿ ಕಾಣಿಸಿಕೊಳ್ಳುವ ಸಂಧಿವಾತ ಸಮಯ ಸರಿದಂತೆ ಕೀಲು ನೋವಿನ ಸಮಸ್ಯೆಯಾಗಿ ಪರಿವರ್ತನೆಯಾಗುತ್ತದೆ. ಮಣಿಕಟ್ಟುಗಳು , ಕೈಗಳು, ಸೊಂಟ, ಮಂಡಿಗಳಲ್ಲಿ ಸಾಮಾನ್ಯವಾಗಿ ಸಂಧಿವಾತ ಕಾಣಿಸಿಕೊಳ್ಳುತ್ತದೆ.

ಕೀಲು ನೋವು ನಮ್ಮ ಅಸಮರ್ಪಕ ಜೀವನ ಶೈಲಿಯ ಕೊಡುಗೆಯಾಗಿದೆ. ಪ್ರತಿನಿತ್ಯ ದೈಹಿಕ ಚಟುವಟಿಕೆಗೆ ನಮ್ಮನ್ನು ನಾವು ಎಷ್ಟು ತೊಡಗಿಸಿಕೊಂಡಿದ್ದೇವೆ ಎನ್ನುವುದು ಕೂಡ ಕೀಲು ನೋವಿನ ಸಮಸ್ಯೆಯನ್ನು ನಿರ್ಧರಿಸುತ್ತದೆ.

ಸಂಧಿವಾತ ಸಮಸ್ಯೆಯ ಲಕ್ಷಣ ಮತ್ತು ಕಾರಣ

ಸಂಧಿವಾತ ಅಥವಾ ಕೀಲು ನೋವು ಅಧಿಕವಾಗಿ ಮಧ್ಯ ವಯಸ್ಸು ದಾಟಿದವರಲ್ಲಿ ಕಂಡು ಬರುತ್ತದೆ. ಕಾಯಿಲೆ ಬಂದಾಗ ಮೊಣಕಾಲುಗಳು ಉರಿಯುತ್ತದೆ ಮತ್ತು ನೋವು ಉಂಟಾಗುತ್ತದೆ

 

ಸಂಧಿವಾತದ ಲಕ್ಷಣಗಳು ರೀತಿ ಇರುತ್ತದೆ.

1.
ಮೊಣಕಾಲು, ಮೊಣಕೈ, ಮಣಿಕಟ್ಟುಗಳಲ್ಲಿ ನೋವು ಕಂಡು ಬರುತ್ತದೆ

2. ರೀತಿಯ ನೋವಿನ ಜೊತೆ ಉರಿಯು ಸಹ ಉಂಟಾಗುತ್ತದೆ

3. ಮಣಿಕಟ್ಟುಗಳು ಕೆಂಪಾಗುತ್ತವೆ ಅಥವಾ ಊದಿಕೊಳ್ಳುತ್ತದೆ.

 4. ಏಳಲು ಮತ್ತು ಕೂರಲು ಕಷ್ಟವಾಗುವುದು

5. ನಿಲ್ಲವಾಗ ಮತ್ತು ನಡೆಯುವಾಗ ಸಹ ನೋವು ಕಂಡು ಬರುತ್ತದೆ.

6.
ಕೈ ಕಾಲುಗಳಿಗೆ ಜುಮ್ಮು ಹಿಡಿಯುವುದು

7. ಜ್ವರ ಮತ್ತು ತೂಕ ಕಡಿಮೆಯಾಗುವಿಕೆ

8. ತಲೆ ಸುತ್ತುವುದು

9. ನಿಶ್ಯಕ್ತಿ 

10. ಸುಸ್ತು 

11. ದೇಹದಲ್ಲಿ ಸಡಿಲತೆ ಕಡಿಮೆಯಾಗುವುದು ಮತ್ತು ಮಲವಿಸರ್ಜನೆಯಲ್ಲಿ ತೊಂದರೆ ಕಾಣಿಸಿಕೊಳ್ಳುತ್ತದೆ.

ಸಂಧಿವಾತಕ್ಕೆ ಕೆಲವಾರು ಕಾರಣಗಳಿವೆ. ಇವುಗಳಲ್ಲಿ ಪ್ರಮುಖವಾದವು ಎಂದರೆ:

  • ಮೂಳೆ ಸಂಧುಗಳಿಗೆ ಆದ ಪೆಟ್ಟಿನಿಂದ ಎದುರಾಗುವ ನೋವು, ಕಾಲಕಳೆದಂತೆ ನೋವು ಹೆಚ್ಚುತ್ತಾ ಹೋಗುತ್ತದೆ.
  • ಮೂಳೆಸಂಧುಗಳ ಸವೆಯುವಿಕೆ.
  • ಅಸಹಜ ಜೀವ ರಾಸಾಯನಿಕ ಕ್ರಿಯೆ, ಯೂರಿಕ್ ಆಮ್ಲದ ಚಯಾಪಚಯ ಕ್ರಿಯೆ ಸರಿಯಾಗಿ ನಡೆಯದಿರುವುದು
  • ಅನುವಂಶಿಕ ಕಾರಣಗಳು
  • ಇತರ ಕಾಯಿಲೆಗಳ ಸೋಂಕಿನಿಂದ ಎದುರಾಗುವುದು
  • ರೋಗ ನಿರೋಧಕ ಶಕ್ತಿಯ ಉಡುಗುವಿಕೆ.

ಕೀಲುನೋವಿಗೆ ಕಾರಣಗಳೇನು?


ಕೀಲುನೋವನ್ನು 2 ವಿಧದಲ್ಲಿ ವಿಭಾಗಿಸಲಾಗುತ್ತದೆ. ಪ್ರಾಥಮಿಕ ಮತ್ತು ದ್ವಿತೀಯಾ ಹಂತಗಳಲ್ಲಿ ಇದನ್ನು ಗುರುತಿಸುತ್ತೇವೆ.

ಪ್ರಾಥಮಿಕ ಹಂತ


ಪ್ರಾಥಮಿಕ ಹಂತದಲ್ಲಿ ಕೀಲುನೋವಿಗೆ ನಿರ್ದಿಷ್ಟ ಕಾರಣವನ್ನು ಹೇಳಲಾಗುವುದಿಲ್ಲ. ನೋವನ್ನು ಮಾತ್ರ ಗುರುತಿಸಲಾಗುತ್ತದೆ. ಅದರ ಮೂಲವನ್ನು ಪತ್ತೆ ಹಚ್ಚಲಾಗುವುದಿಲ್ಲ. ಇದಕ್ಕೆ ವೈಜ್ಗಾನಿಕ ಕಾರಣಗಳು ತಿಳಿಯುವುದಿಲ್ಲ.


ದ್ವಿತೀಯಾ ಹಂತ ಅನುವಂಶೀಯ ಬಳುವಳಿ



ಎರಡನೇ ಹಂತದಲ್ಲಿ ಕೆಲವು ಕಾರಣಗಳನ್ನು ಗುರುತಿಸಲಾಗುತ್ತದೆ. ಆರ್ಥರೈಟೀಸ್ ಅನುವಂಶೀಯವಾಗಿಯೂ ಕಾಣಿಸಿಕೊಂಡಿರಬಹುದು. ಮನೆಯಲ್ಲಿ ತಂದೆ, ತಾಯಿ, ಅಜ್ಜಿ, ತಾತಾ ಹೀಗೆ ಪೀಳಿಗೆಯಿಂದ ಪೀಳಿಗೆಗೂ ಕಾಯಿಲೆ ವರ್ಗಾವಣೆಯಾಗುವ ಸಾಧ್ಯತೆಗಳಿವೆ.

ದೈಹಿಕ ಚಟುವಟಿಕೆಯ ಕೊರತೆ


ಅನುವಂಶೀಯವಾಗಿ ಕೀಲು ನೋವು ಕಂಡು ಬಂದರೂ ಸಹ ಮೊದಲೇ ನಮ್ಮ ಜೀವನ ಶೈಲಿ ಉತ್ತಮವಾಗಿದ್ದರೆ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ. ಆದರೆ ಈಗ ನಮ್ಮ ಜೀವನ ಶೈಲಿ ಮೊದಲಿನಂತಿಲ್ಲ. ಮನುಷ್ಯನ ವಿಕಾಸವನ್ನು ಗಮನಿಸಿದರೆ, ಮನುಷ್ಯ ಬೇಟೆಯಾಡುತ್ತಾ ಆಹಾರವನ್ನು ಹುಡುಕಿಕೊಂಡು ಹಸಿವು ತಣಿಸಿಕೊಳ್ಳುತ್ತಿದ್ದ. ಆದರೆ ಇಂದು ನಾವು ಎಲ್ಲೂ ಓಡಾಡದೇ ಪ್ರಮುಖ ಸಮಯವನ್ನು ಕಂಪ್ಯೂಟರ್ ಮುಂದೆ ಕಳೆಯುತ್ತಿದ್ದೇವೆ. ಇದರಿಂದ ದೈಹಿಕ ಚಟುವಟಿಕೆ ಇಲ್ಲದೇ ಕೀಲು ನೋವಿನಂಥ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಕೀಲುಗಳಲ್ಲಿ ಇನ್ಫೆಕ್ಷನ್


ಪ್ರತಿನಿತ್ಯ ವ್ಯಾಯಾಮ ಮಾಡಬೇಕು. ಇದರಿಂದ ಕೀಲು ನೋವು ನಿಯಂತ್ರಿಸಬಹುದು. ಇಲ್ಲವಾದಲ್ಲಿ ಕೀಲುಗಳಲ್ಲಿ ಇನ್ಫೆಕ್ಷನ್ ಆಗಿ ಆರ್ಥರೈಟೀಸ್ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಮೂಳೆಗಳಲ್ಲಿ ಕ್ಯಾನ್ಸರ್ ಬೋನ್ನ ಬೆಳವಣಿಗೆಯಾಗಿಯೂ ಆರ್ಥರೈಟೀಸ್ ಬರಬಹುದು.

​40 ನಂತರ ಕೀಲುಗಳಿಗೆ ಬೇಕು ಎಕ್ಸ್ಟ್ರಾ ಕೇರ್

40 ನಂತರ ದೇಹಕ್ಕೆ ಪ್ರತಿಹೆಜ್ಜೆಯೂ ಜೋಪಾನವಾಗಿರಬೇಕು. ಕೆಲವೊಮ್ಮೆ 40 ನಂತರ ಕಾಲು ನೋವು, ಫ್ಯಾಕ್ಚರ್, ಟ್ವಿಸ್ಟ್ ಆಗಬಹುದು. ಇದರಿಂದ ಕಾಲು ಡೊಂಕಾಗುವ ಸಾಧ್ಯತೆಗಳಿರುತ್ತವೆ. ಇದು ಜಾಯಿಂಟ್ಸ್ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಾಗ ಅದರ ಹಿಂದಿರುವ ಕಾರಣಗಳನ್ನು ಮೊದಲು ಕಂಡುಕೊಳ್ಳಬೇಕು

ಇದಕ್ಕೆ ಅನುಕೂಲವಾಗುವಂತೆ ವೈದ್ಯರ ಸಲಹೆ ಮೇರೆಗೆ ಕೆಳಗಿನ ಕೆಲವೊಂದು ಮನೆ ಮದ್ದುಗಳನ್ನು ನಿಮಗಾಗಿ ಪರಿಚಯ ಮಾಡಿಕೊಡಲಾಗಿದೆ. ನಿಮ್ಮ ಆರ್ಥ್ರೈಟಿಸ್ ಸಮಸ್ಯೆಗೆ ಪರಿಹಾರವಾಗಿ ಮನೆಮದ್ದುಗಳನ್ನು ನೀವು ಸಹ ಒಮ್ಮೆ ಪ್ರಯತ್ನಿಸಿ ನೋಡಿ.

ಆಗಾಗ ವ್ಯಾಯಾಮ ಮಾಡಿ

·         ನಿಯಮಿತವಾಗಿ ವ್ಯಾಯಾಮದ ಅಭ್ಯಾಸವನ್ನು ಮಾಡಿಕೊಳ್ಳುವುದರಿಂದ ದೇಹದ ಕೀಲುಗಳ ಭಾಗ ಸರಾಗವಾಗಿ ಆಡಲು ಅನುಕೂಲವಾಗುತ್ತದೆ.



·         ಆರ್ಥ್ರೈಟಿಸ್ ಸಮಸ್ಯೆ ಹೆಚ್ಚಾಗಿರುವವರು ಮತ್ತು ದೀರ್ಘ ಕಾಲದಿಂದ ಸಮಸ್ಯೆಯಲ್ಲಿ ಬಳಲುತ್ತಿರುವವರು ಹೆಚ್ಚು ಆಯಾಸವಾಗದಂತೆ ದೈಹಿಕ ವ್ಯಾಯಾಮವನ್ನು ಮಾಡಿ ತಮ್ಮ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಬಹುದು.

ಬಿಸಿ ಹಾಗೂ ತಂಪಿನ ಥೆರಫಿ

·         ಒಂದು ಬಟ್ಟೆಯಲ್ಲಿ ಐಸ್ ಕ್ಯೂಬ್ ಗಳನ್ನು ತುಂಬಿಕೊಂಡು ಬಟ್ಟೆಯನ್ನು ಸುತ್ತಿ ಕೀಲು ನೋವು ಕಂಡುಬರುವ ಭಾಗದಲ್ಲಿ ಅದನ್ನು ಇಡುವುದರಿಂದ ಬಹಳ ಬೇಗನೆ ನೋವು ಮತ್ತು ಊತ ಕಡಿಮೆಯಾಗುತ್ತದೆ.



·         ಇದೇ ರೀತಿ ಬಿಸಿ ನೀರಿನಲ್ಲಿ ಒಂದು ಬಟ್ಟೆಯನ್ನು ಸುತ್ತಿಕೊಂಡು ಅದ್ದಿ ಅದನ್ನು ಇಡುವುದರಿಂದ ನೋವಿನ ನಿವಾರಣೆಯಾಗುತ್ತದೆ. ಬೇಕೆಂದರೆ ಬೆಳಗಿನ ಸಮಯದಲ್ಲಿ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಬಹುದು. ಇದರಿಂದ ಮೈಕೈ ನೋವು ದೂರವಾಗುತ್ತದೆ.

ಆಹಾರ ಪದ್ಧತಿಯಲ್ಲಿ ಅರಿಶಿನವನ್ನು ಸೇರಿಸಿ

·         ಅರಿಶಿನದಲ್ಲಿ ನಿಮ್ಮ ಮೈ ಕೈ ನೋವಿನ ನಿವಾರಣೆಯಲ್ಲಿ ಕೆಲಸ ಮಾಡುವ ಹಾಗೆ curcumin ಎಂಬ ಅಂಶ ಅಡಗಿದೆ. ಇದು ಆರ್ಥರೈಟಿಸ್ ಸಮಸ್ಯೆ ನಿವಾರಣೆಯಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.



·         ಆಂಟಿ ಇನ್ಫಾಮೇಟರಿ ಗುಣಲಕ್ಷಣಗಳನ್ನು ಒಳಗೊಂಡ ಅಂಶ ಹಲವಾರು ಪ್ರಯೋಜನಗಳನ್ನು ಸಹ ಹೊಂದಿದೆ. ಇದರಿಂದ ಹೆಚ್ಚು ಅನುಕೂಲಕರವಾಗಿ ಹಾಗೂ ಆರೋಗ್ಯವಾಗಿರಲು ಅನುಕೂಲವಾಗುತ್ತದೆ.

  • ನಿಮ್ಮ ದೇಹದ ತೂಕ ನಿಮ್ಮ ವಯಸ್ಸಿಗೆ ಅನುಗುಣವಾಗಿ ಇದ್ದರೆ ತುಂಬಾ ಒಳ್ಳೆಯದು. ಕೆಲವರು ಅತಿಯಾದ ದೇಹದ ತೂಕವನ್ನು ಹೊಂದಿ ಅನಾರೋಗ್ಯಕರ ಜೀವನ ಶೈಲಿಯಿಂದ ದೇಹದಲ್ಲಿ ಬೊಜ್ಜನ್ನು ತುಂಬಿಕೊಂಡು ಮಂಡಿಗಳ ಭಾಗದ ಮೇಲೆ ಒತ್ತಡ ಹೆಚ್ಚು ಉಂಟಾಗುವಂತೆ ಮಾಡಿಕೊಳ್ಳುತ್ತಾರೆ.



  • ಇದರಿಂದ ಸ್ವಲ್ಪ ಹೊತ್ತು ನಿಂತುಕೊಂಡರೆ ಇದ್ದಕ್ಕಿದ್ದಂತೆ ಮಂಡಿನೋವು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ. ನೋವು ನಿವಾರಣೆಗೆ ಹಾಗೂ ನಿಮ್ಮ ಮೂಳೆಗಳು ಸರಾಗವಾಗಿ ಆಡಲು ಅನುಕೂಲವಾಗುವಂತೆ ನೀವು ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವ ಬಗ್ಗೆ ಆಲೋಚನೆ ಮಾಡಬೇಕು.
  • ಯಾವುದೇ ಉಪಕರಣಗಳು ಇಲ್ಲದೆ ಮಾಡಬಹುದಾದ ಒಂದು ಸುಲಭವಾದ ವ್ಯಾಯಾಮ ಎಂದರೆ ಅದು ಯೋಗ. ನಿಮ್ಮ ದೇಹದ ಉರಿಯೂತವನ್ನು ಹಾಗೂ ಮಾನಸಿಕ ಒತ್ತಡವನ್ನು ಕಡಿಮೆ ಮಾಡುವ ಗುಣಲಕ್ಷಣವನ್ನು ಇದು ಹೊಂದಿದೆ.
  • ಸಂಪೂರ್ಣವಾದ ಜೀವನದ ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಯೋಗಾಭ್ಯಾಸವನ್ನು ನಿಮ್ಮ ಪ್ರತಿದಿನದ ಅಭ್ಯಾಸವನ್ನಾಗಿ ಮಾಡಿಕೊಳ್ಳಿ.

ಧ್ಯಾನ ಮಾಡಿ

·         ಧ್ಯಾನ ಮಾಡುವುದರಿಂದ ಮಾನಸಿಕ ಆತಂಕ ಮತ್ತು ಮಾನಸಿಕ ಖಿನ್ನತೆ ದೂರವಾಗುತ್ತದೆ. ಮೆದುಳಿನಿಂದ ಹೊರಡುವ ಸಂಕೇತಗಳು ಸರಿಯಾಗಿ ಕಾರ್ಯ ನಿರ್ವಹಿಸಲು ಅನುಕೂಲವಾಗಿ ದೈಹಿಕ ಅಸ್ವಸ್ಥತೆ ನಿವಾರಣೆಯಾಗುತ್ತದೆ.



·         ಬೆಳಗಿನ ಸಮಯದಲ್ಲಿ ಶಾಂತವಾಗಿ ಅರ್ಧ ಗಂಟೆಗಳ ಕಾಲ ಯೋಗ ಮಾಡುವುದರಿಂದ ಮನಸ್ಸಿಗೆ ಹಾಗೂ ದೇಹಕ್ಕೆ ಹೆಚ್ಚಿನ ಉಲ್ಲಾಸ ಸಿಕ್ಕಿದಂತಾಗಿ ಮೈ ಕೈ ನೋವು ಮತ್ತು ಕೀಲು ನೋವು ದೂರವಾಗುತ್ತದೆ.

ದೀರ್ಘವಾದ ಉಸಿರಾಟ ನಡೆಸುವಿಕೆ ಪ್ರಕ್ರಿಯೆ



ದೀರ್ಘವಾದ ಉಸಿರಾಟ ನಡೆಸುವುದರಿಂದಲೂ ಸಹ ಮೆದುಳು ಶಾಂತವಾಗಿ ಮೈ ಕೈ ನೋವಿನ ನಿವಾರಣೆ ಆಗುತ್ತದೆ. ದೀರ್ಘ ಕಾಲದ ಆರ್ಥ್ರೈಟಿಸ್ ಸಮಸ್ಯೆ ಸುಲಭವಾಗಿ ಬಗೆಹರಿಯಲು ಅನುಕೂಲವಾಗುತ್ತದೆ. ಧ್ಯಾನ ಮಾಡುವಾಗ ಸಾಮಾನ್ಯವಾಗಿ ತಂತ್ರವನ್ನು ಅನುಸರಿಸಬಹುದು.

 

ಎಪ್ಸಂ ಉಪ್ಪಿನ ಸ್ನಾನ




ಎಪ್ಸಂ ಉಪ್ಪಿನಲ್ಲಿ ಮೆಗ್ನೇಶಿಯಂ ಮತ್ತು ಸಲ್ಫೇಟ್ ಪ್ರಮುಖ ಅಂಶವಾಗಿವೆ. ಇವೆರಡೂ ನೋವನ್ನು ಗುಣಪಡಿಸಲು ನೆರವಾಗುವ ಪೋಷಕಾಂಶಗಳಾಗಿವೆ. ಮೆಗ್ನೀಶಿಯಂ ಸ್ನಾಯುಗಳು ಮತ್ತು ನರಗಳ ಕಾರ್ಯನಿರ್ವಹಣೆಗೆ ಅಗತ್ಯವಾಗಿದೆ. ಉತ್ತಮ ಪ್ರಮಾಣದ ಮೆಗ್ನೀಶಿಯಂ ದೇಹದಲ್ಲಿ ಎದುರಾದ ಉರಿಯೂತವನ್ನು ನಿವಾರಿಸಬಲ್ಲುದು. ತನ್ಮೂಲಕ ಬೆರಳು ಸಂಧುಗಳ ನಡುವೆ ಎದುರಾಗಿದ್ದ ಊತವನ್ನು ನಿವಾರಿಸಿ ನೋವನ್ನು ಕಡಿಮೆ ಮಾಡುತ್ತದೆ. ಒಂದು ವೇಳೆ ಇಡಿಯ ದೇಹದ ಸಂಧುಗಳಲ್ಲಿ ನೋವಿದ್ದರೆ ಸ್ನಾನದ ನೀರಿಗೆ ಒಂದು ಕಪ್ ಎಪ್ಸಂ ಉಪ್ಪು ಹಾಕಿ ನೀರಿನಲ್ಲಿ ನಿತ್ಯವೂ ಸ್ನಾನಮಾಡಬೇಕು. ಒಂದು ವೇಳೆ ಕೈಬೆರಳು ಅಥವಾ ಕಾಲುಬೆರಳುಗಳಲ್ಲಿ ಸಂಧಿವಾತ ಇದ್ದರೆ ಉಪ್ಪು ಬೆರೆತಿರುವ ಬಿಸಿನೀರಿನಲ್ಲಿ ಹಸ್ತ ಮತ್ತು ಪಾದಗಳನ್ನು ಸುಮಾರು ಹದಿನೈದು ನಿಮಿಷದಷ್ಟು ಹೊತ್ತು ಮುಳುಗಿಸಿಡಬೇಕು.

ಪುದೀನಾ ಮತ್ತು ನೀಲಗಿರಿ ಎಣ್ಣೆ



ಇವೆರಡೂ ಎಣ್ಣೆಗಳು ನರಗಳನ್ನು ಸಡಿಲಗೊಳಿಸಿ ರಕ್ತಪ್ರಸಾರವನ್ನು ಹೆಚ್ಚಿಸುವ ಜೊತೆಗೇ ತಂಪನ್ನೂ ನೀಡುತ್ತವೆ. ಮೂಲಕ ಉರಿ ಮತ್ತು ನೋವು ಇಲ್ಲವಾಗುತ್ತದೆ. ಸಂಧಿವಾತದ ತೊಂದರೆಗೆ ಇವೆರಡೂ ಎಣ್ಣೆಗಳನ್ನು ತಲಾ ಹತ್ತು ತೊಟ್ಟುಗಳಷ್ಟನ್ನು ಒಂದರಿಂದ ಎರಡು ದೊಡ್ಡ ಚಮಚ ಆಲಿವ್ ಎಣ್ಣೆಯೊಂದಿಗೆ ಬೆರೆಸಿ ಮಿಶ್ರಣ ಮಾಡಿ ಬಾಟಲಿಯಲ್ಲಿ ಸಂಗ್ರಹಿಸಿ. ಬಾಟಲಿಯನ್ನು ಬಿಸಿಲು ತಾಕುವಲ್ಲಿ ಇರಿಸಬಾರದು. ಎಣ್ಣೆಯನ್ನು ದಿನದಲ್ಲಿ ಕೆಲವಾರು ಬಾರಿ ನೋವಿರುವ ಭಾಗಗಳಿಗೆ ಹಚ್ಚುತ್ತಿರಬೇಕು

ಸೇಬಿನ ಶಿರ್ಕಾ (Apple cider vinegar)



ಇದರಲ್ಲಿ ಕ್ಯಾಲ್ಸಿಯಂ, ಮೆಗ್ನೀಶಿಯಂ, ಪೊಟ್ಯಾಶಿಯಂ ಮತ್ತು ಗಂಧಕ ಸಮೃದ್ದವಾಗಿದ್ದು ಸಂಧಿವಾತಕ್ಕೆ ಸೂಕ್ತ ಔಷಧಿಯೂ ಆಗಿದೆ. ವಿಶೇಷವಾಗಿ ಮೂಳೆಸಂಧುಗಳು ಊದಿಕೊಂಡಿದ್ದರೆ ವಿಧಾನ ಹೆಚ್ಚು ಸೂಕ್ತವಾಗಿದೆ. ಸ್ನಾಯುಸೆಡೆತನ್ನೂ ಇದು ಉತ್ತಮವಾಗಿದೆ. ಇದಕ್ಕಾಗಿ ಒಂದು ಲೋಟ ಉಗುರುಬೆಚ್ಚನೆಯ ನೀರಿನಲ್ಲಿ ಅರ್ಧ ಚಿಕ್ಕ ಚಮಚ ಜೇನು ಮತ್ತು ಒಂದು ಚಿಕ್ಕ ಚಮಚ ಸೇಬಿನ ಶಿರ್ಕಾ ಬೆರೆಸಿ ಕುಡಿಯಬೇಕು. ನಿತ್ಯವೂ ಒಂದು ಲೋಟದಷ್ಟು ಪ್ರಮಾಣವನ್ನು ದಿನದ ಪ್ರಥಮ ಆಹಾರವಾಗಿ ಸೇವಿಸಿದರೆ ಉತ್ತಮ ಪರಿಣಾಮ

ಹಸಿಶುಂಠಿ ಮತ್ತು ಅರಿಶಿನದ ಟೀ



ಇವೆರಡರಲ್ಲಿಯೂ ಉರಿಯುತ ನಿವಾರಕ ಗುಣಗಳು ಪ್ರಬಲವಾಗಿವೆ ಹಾಗೂ ಉತ್ತಮ ಫಲವನ್ನು ನೀಡುತ್ತವೆ. ಅರಿಶಿನದಲ್ಲಿರುವ ಕುರ್ಕುಮಿನ್ ಎಂಬ ಪೋಷಕಾಂಶ ಒಂದು ಪ್ರಬಲ ಆಂಟಿ ಆಕ್ಸಿಡೆಂಟ್ ಸಹಾ ಆಗಿದ್ದು ರ್ಹೂಮಟಾಯ್ಡ್ ಸಂಧಿವಾತ ಅಥವಾ ಮೂಳೆಗಳ ನಡುವಣ ಅಂತರ ತೀರಾ ಕಡಿಮೆಯಾಗಿರುವ ಸಂಧಿವಾತವನ್ನು ಗುಣಪಡಿಸುತ್ತದೆ. ಶುಂಠಿ ರಕ್ತಪರಿಚಲನೆಯನ್ನು ಹೆಚ್ಚಿಸುತ್ತದೆ. ಇವೆರಡೂ ಗುಣಗಳು ಒಟ್ಟುಗೂಡಿದಾಗ ಸಂಧಿವಾತ ಶೀಘ್ರವೇ ಗುಣವಾಗುತ್ತದೆ. ಇದಕ್ಕಾಗಿ ತಲಾ ಅರ್ಧ ಚಿಕ್ಕ ಚಮಚ ಅರೆದ ಶುಂಠಿ ಮತ್ತು ಅರಿಶಿನ ಪುಡಿಯನ್ನು ಎರಡು ಲೋಟ ನೀರಿಗೆ ಹಾಕಿ ಚೆನ್ನಾಗಿ ಕುದಿಸಬೇಕು. ಚಿಕ್ಕ ಉರಿಯಲ್ಲಿ ಹತ್ತರಿಂದ ಹದಿನೈದು ನಿಮಿಷ ಕುದಿಸಿದ ಬಳಿಕ ಉಳಿದ ನೀರನ್ನು ಸೋಸಿ ರುಚಿಗೆ ತಕ್ಕಷ್ಟು ಜೇನನ್ನು ಬೆರೆಸಿ ಕುಡಿಯಿರಿ. ಉತ್ತಮ ಪರಿಣಾಮಕ್ಕಾಗಿ ದಿನಕ್ಕೆರಡು ಲೋಟ ಕುಡಿಯಬೇಕು.

ಬಿಸಿ ಮತ್ತು ತಣ್ಣನೆಯ ಒತ್ತಡ


ಸಂಧಿವಾತಕ್ಕೆ ಬಿಸಿನೀರಿನ ಸ್ನಾನವೂ ಸಾಕಷ್ಟು ಆರಾಮವನ್ನು ನೀಡುತ್ತದೆ. ಆದರೆ ಇಡಿಯ ದಿನ ಸ್ನಾನ ಮಾಡುತ್ತಲೇ ಇರಲಾಗುವುದಿಲ್ಲವಲ್ಲ! ಹಾಗಾಗಿ ದಿನದ ಇತರ ಸಮಯದಲ್ಲಿ ಹಾಗೂ ರಾತ್ರಿಯ ಸಮಯದಲ್ಲಿ ಬಿಸಿ ಶಾಖವನ್ನು ನೀಡುವ ಹಾಟ್ ಬ್ಯಾಗ್ ಅಥವಾ ಹಾಟ್ ಪ್ಯಾಕ್ ಎಂಬ ಉಪಕರಣಗಳಲ್ಲಿ ಬಿಸಿನೀರು ತುಂಬಿಸಿ ಸುಮಾರು ಒಂದು ಘಂಟೆಯವರೆಗೆ ಬೆಚ್ಚಗಾಗಿಸುತ್ತಿರಬೇಕು. ಕೆಲವು ಸಂದರ್ಭಗಳಲ್ಲಿ ನೀರನ್ನು ತಣ್ಣನೆಯ ನೀರಿಗೆ ಬದಲಿಸಿಕೊಳ್ಳುವ ಮೂಲಕವೂ ಆರಾಮ ದೊರಕುತ್ತದೆ. ಇದಕ್ಕಾಗಿ ದಪ್ಪನೆಯ ಟವೆಲ್ಲಿನಲ್ಲಿ ಮಂಜುಗಡ್ಡೆಯ ತುಂಡನ್ನು ಸುತ್ತಿ ಇರಿಸಬಹುದು. ಒಂದು ವೇಳೆ ನೋವು ಸಾಮಾನ್ಯವಾಗಿದ್ದರೆ ಬಿಸಿನೀರನ್ನು ಬಳಸಬಹುದು ಹಾಗೂ ತೀಕ್ಷ್ಣ ನೋವು ಇದ್ದರೆ ತಣ್ಣನೆಯ ವಿಧಾನ ಸೂಕ್ತ.

ಎಪ್ಸಂ ಉಪ್ಪು ಮತ್ತು ಲಿಂಬೆ



ತಲಾ ಮೂರು ದೊಡ್ಡ ಚಮಚ ಎಪ್ಸಂ ಉಪ್ಪು ಮತ್ತು ಲಿಂಬೆರಸವನ್ನು ಬೆರೆಸಿ ಒಂದು ದೊಡ್ಡ ಲೋಟ ನೀರಿಗೆ ಬೆರೆಸಿ ನೀರನ್ನು ಬಿಸಿಮಾಡಿ.

ನೀರಿನಲ್ಲಿ ಸುಮಾರು ಒಂದು ದೊಡ್ಡ ಚಮಚದಷ್ಟು ಪ್ರಮಾಣವನ್ನು ದಿನಾ ಬೆಳಿಗ್ಗೆ ಮತ್ತು ರಾತ್ರಿ ಸೇವಿಸಿ

ಬೆಳ್ಳುಳ್ಳಿ



ಇದರಲ್ಲಿರುವ ಘಾಟಿಗೆ ಗಂಧಕ ಕಾರಣವಾಗಿದೆ. ಅಲ್ಲದೇ ಸೆಲೆನಿಯಂ ಸಹಾ ಉತ್ತಮ ಪ್ರಮಾಣದಲ್ಲಿದೆ. ಇವೆರಡೂ ಸಂಧಿವಾತ ಮತ್ತು ಗಂಟುನೋವನ್ನು ಗುಣಪಡಿಸಲು ಉತ್ತಮವಾಗಿವೆ. ಇದಕ್ಕಾಗಿ ಬೆಳ್ಳುಳ್ಳಿಯನ್ನು ಸಾಕಷ್ಟು ಪ್ರಮಾಣದಲ್ಲಿ ಆಹಾರದ ಮೂಲಕ ಸೇವಿಸಿದರೆ ಸಾಕು. ಪ್ರತಿ ಊಟದ ಬಳಿಕ ಒಂದೆರಡು ಹಸಿ ಬೆಳ್ಳುಳ್ಳಿ ಎಸಳುಗಳನ್ನು ಜಗಿದು ನುಂಗಬೇಕು.

ಚುರುಚುರಿಕೆ ಗಿಡ (Nettle)




ತುರಿಕೆ ಗಿಡ ಎಂದೂ ಕರೆಯುವ ಗಿಡದ ಎಲೆಗಳಲ್ಲಿ ಸೂಕ್ಷ್ಮ ಮುಳ್ಳುಗಳಿದ್ದು ಇವು ಚುಚ್ಚಿದರೆ ಅಪಾರ ತುರಿಕೆ ಮತ್ತು ಉರಿ ಪ್ರಾರಂಭವಾಗುತ್ತದೆ. ವಾಸ್ತವದಲ್ಲಿ, ಗುಣವನ್ನೇ ನೋವು ನಿವಾರಿಸಲೂ ಬಳಸಬಹುದು. ಗಿಡದಲ್ಲಿ ಬೋರಾನ್ ಎಂಬ ಖನಿಜ ಉತ್ತಮ ಪ್ರಮಾಣದಲ್ಲಿದ್ದು ಮೂಳೆ ಮತ್ತು ಮೂಳೆಸಂಧುಗಳನ್ನು ಬಳಪಡಿಸಲು ನೆರವಾಗುತ್ತದೆ. ಮೂಳೆ ಸಂಧುಗಳಲ್ಲಿ, ವಿಶೇಷವಾಗಿ ಮೊಣಕಾಲಿನಲ್ಲಿ ನೋವಿದ್ದರೆ ಎಲೆಗಳನ್ನು ಜಜ್ಜಿ ಹಿಂಡಿ ತೆಗೆದ ರಸವನ್ನು ಸೇವಿಸುವ ಮೂಲಕ ಶೀಘ್ರ ಉಪಶಮನ ಪಡೆಯಬಹುದು. ಗಿಡದ ಔಷಧೀಯ ಉತ್ಪನ್ನವೂ ಮಾರುಕಟ್ಟೆಯಲ್ಲಿ ದೊರಕುತ್ತದೆ. ಇದನ್ನೂ ಬಳಸಬಹುದು.


  ಮೂಲ : ವಿಜಯ ಕರ್ನಾಟಕ 

ಸಂಗ್ರಹ : ಕುಶಲ್ ಭಂಡಾರಿ , ಬೆಂಗಳೂರು 

No comments:

Post a Comment