BhandaryVarthe Team

BhandaryVarthe Team
Bhandary Varthe Team

Tuesday, 21 September 2021

ಕಾರ್ -ಬಾರ್-ಐ.ಜಿ.ಭಂಡಾರಿ,ನಿವೃತ್ತ ಬ್ಯಾಂಕ್ ಮ್ಯಾನೇಜರ್, ಕಾರ್ಲ .

 ಚೆನ್ನಾಗಿದ್ದೀರಾ? ಏನು ಸಮಾಚಾರ? ಕ್ಷೇಮವೇ? ಹೀಗೆ ವಿಚಾರಿಸುವುದನ್ನು ತುಲು ಭಾಷೆಯಲ್ಲಿ "ದಾನೆ ಕಾರ್ ಬಾರ್" ಎನ್ನುವರು.ದಾನೆ ಎಂದರೆ ಏನು ಎಂಬ ಅರ್ಥ.


ತುಲು ಭಾಷೆಯಲ್ಲಿ "ಲ" ಕಾರಕ್ಕೆ "ರ" ಕಾರವಾಗಿ ಉಚ್ಛರಿಸುವ ತುಂಬ ಶಬ್ಧಗಳಿವೆ.ಅದರಂತೆ ಇಲ್ಲಿ
"ಕಾಲ"ಎಂಬ ಪದವು "ಕಾರ" ಎಂದಾಗಿದೆ.ಈ ಪದವನ್ನು ಬಳಸುವಾಗ ಉಚ್ಛಾರಣೆಯಲ್ಲಿ ಚಿಕ್ಕದಾಗಿ
"ಕಾರ"ವನ್ನು "ಕಾರ್"ಎಂದಿದ್ದಾರೆ.ಕಾಲ ಅಥವಾ ಕಾರ್ ಎಂದರೆ ಕಾಲವಾದ, ಮುಗಿದು ಹೋದ,
(ಕರಿದ್ ಪೋಯಿನ) ಸುದ್ದಿ ಸಮಾಚಾರಗಳು.ಅಂದ ರೆ ಭೂತಕಾಲದ ಸುದ್ದಿ ಸಮಾಚಾರಗಳು.ಅವುಗಳು
ಕೃಷಿ, ವ್ಯಾಪಾರ, ಆರೋಗ್ಯ ಇನ್ನಿತರ ಯಾವುದೇ ವಿಷಯಗಳು ಇದ್ದಿರಬಹುದು. ಇನ್ನು "ಬಾಲ್"(ಬಾಳು) ಎಂಬ ಪದವನ್ನು "ಬಾರ್"ಎಂದಿದ್ದಾರೆ.ಬಾರ್ ಎಂದರೆ ಪ್ರಸ್ತುತ ಅಥವಾ ವರ್ತಮಾನದ ಮತ್ತು ಭವಿಷ್ಯತ್ಕಾಲದ ಸುದ್ದಿ ಸಮಾಚಾರಗಳು.ಅಂದರೆ ಇಂದಿನ ಈಗಿನ ಬದುಕಿನ ಜೀವನದ ಸುದ್ದಿ ಸಮಾಚಾರಗಳು.ಇಲ್ಲೂ ಯಾವುದೇ ವಿಚಾರಗಳು ಇರಬಹುದು.


 ಪನ್ಲೆಗೆ (ಹೇಳಿಯಂತೆ)ಕಾರ್ ಬಾರ್ ಎಂದರೆ ಅಂದಿನ,ಇಂದಿನ, ಮುಂದಿನ ಎಲ್ಲಾ ಸುದ್ದಿ ಸಮಾಚಾರಗಳನ್ನು ಹೇಳಲು ಕೇಳುವುದು.ಅವರು ಇವರ ಕಾರ್ ಬಾರ್ ವಿಚಾರಿಸಿದಾಗ ಇವರು ಅವರ ಕಾರ್ ಬಾರ್ ಕೇಳುವರು.ನಂತರ ಪಟ್ಟಾಂಗ ಹೊಡೆಯುತ್ತಾ ಇರುತ್ತಾರೆ.



 ಅರಿ ಬಾರ್(ಅಕ್ಕಿ ಭತ್ತ)ಇಲ್ಲೂ ಅರಿ ಎಂದರೆ ಮುಗಿಯಿತು ಎಂದಾಗುತ್ತದೆ.ಅಂದರೆ ಅನ್ನ ಮಾಡಿ
ಊಟ ಮಾಡಿದರೆ ಅಕ್ಕಿಯ ಕತೆ ಮುಗಿದ ಹಾಗೆ.ಬಾರ್ ಎಂದರೆ ಮುಂದಿನ ಬದುಕು ಎಂದಾಗುತ್ತದೆ.ಭತ್ತ
ದಿಂದ ಪುನಃ ಭತ್ತ ತೆಗೆಯಲು ಬರುತ್ತದೆ.ಬಾರ್ ಅಂದರೆ ಬಾಳು‌.ಈಗಿನ ಮತ್ತು ಮುಂದಿನ ಬಾಳು.ಕಾರ್-ಬಾರ್ ಎಂದರೆ ಕಾಲವಾದ ದಿನಗಳ(Past) ಮತ್ತು ಈಗಿನ(Present)ಸುದ್ದಿ ಸಮಾಚಾರಗಳು ಹಾಗು ಮುಂದಿನ ಯೋಜನೆ ಉಪಾಯಗಳ ವಿವರಣೆಗಳನ್ನುಹಂಚಿಕೊಳ್ಳುವುದು.

-ಐ.ಜಿ.ಭಂಡಾರಿ,ನಿವೃತ್ತ ಬ್ಯಾಂಕ್ ಮ್ಯಾನೇಜರ್, ಕಾರ್ಲ . 

No comments:

Post a Comment