ಭಂಡಾರಿ ಸಮಾಜದ ಕುಲಕಸಬು ಕ್ಷೌರಿಕ ವೃತ್ತಿ ಇಂದು ದೊಡ್ಡ ಉದ್ಯಮವಾಗಿ ಬೆಳೆದಿದೆ ಮೇಲ್ವರ್ಗದವರು ದೊಡ್ಡ ಮೊತ್ತದ ಬಂಡವಾಳ ಹಾಕಿ ಸೋದರ ಸಮಾಜದವರನ್ನು ಕೆಲಸಕ್ಕೆ ನೇಮಿಸುತ್ತಾರೆ ಇದರ ಮಧ್ಯೆ ನಮ್ಮ ಸಮಾಜದ ಆರ್ಥಿಕವಾಗಿ ಹಿಂದುಳಿದ ಬಂಧುಗಳಿಗೆ ಇವರೊಡನೆ ಪೈಪೋಟಿ ನೀಡಲು ಬಹಳ ಕಷ್ಟವಾಗುತ್ತದೆ ಏನೇ ಆದರೂ ನಮ್ಮ ಸಮಾಜದ ವೃತ್ತಿ ಕಸುಬಿಗೆ ಭಂಡಾರಿ ಸಮಾಜದ ಬಂಧುಗಳು ಕೂಡಾ ಇವರೊಡನೆ ಪೈಪೋಟಿ ನೀಡಲು ಸಿದ್ಧರಾಗಿದ್ದಾರೆ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕೇಶಕರ್ತನ ಕೆಲಸವನ್ನು ಭಂಡಾರಿ ಸಮಾಜದವರು ಮಾಡಿದರೆ ಆ ಸೆಲೂನಿನ ಗ್ರಾಹಕರಿಗೆ ಹೆಚ್ಚಿನ ಅಭಿಮಾನ ದೊರೆಯುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ ಐಟಿ ಬಿಟಿ ಕಾಲದಲ್ಲಿ ಕೂಡ ಭಂಡಾರಿ ಸಮಾಜದ ಕುಲ ಕಸಬುನ್ನು ಉಳಿಸಿಕೊಳ್ಳುವುದಕ್ಕೋಸ್ಕರ ನಮ್ಮ ಬಂಧುಗಳು ವೃತ್ತಿ ಕೆಲಸವನ್ನು ಮಾಡುವುದು ನಮಗೆ ದೊಡ್ಡ ಹೆಮ್ಮೆಯೇ ಸರಿ.
ಕ್ಷೌರಿಕ ವೃತ್ತಿಯಲ್ಲಿಯೂ ಸಮಾಜಸೇವೆ ಮಾಡಲು ಮುಂದಾಗಿರುವ ಬೆಳ್ತಂಗಡಿ ತಾಲ್ಲೂಕು ಮುಂಡಾಜೆ ಗ್ರಾಮದ ದಿವಂಗತ ನಾಗರಾಜ ಭಂಡಾರಿ ಮತ್ತು ಶ್ರೀಮತಿ ಸುಮತಿ ಎನ್. ಭಂಡಾರಿ ದಂಪತಿಯ ಪುತ್ರ ರವಿಚಂದ್ರ ಭಂಡಾರಿಯವರ ಕಾರ್ಯ ಸಮಾಜಕ್ಕೆ ಮಾದರಿಯಾಗಿದೆ.
ಕಳೆದ ಇಪ್ಪತ್ತು ವರ್ಷಗಳಿಂದ ಕುಲ ಕಸುಬಿನಲ್ಲಿ ತೊಡಗಿಸಿ ಕೊಂಡಿರುವ ರವಿಚಂದ್ರ ಭಂಡಾರಿಯವರು ಮುಂಡಾಜೆ ಗ್ರಾಮದ ಸೋಮಂತಡ್ಕ ಪೇಟೆಯಲ್ಲಿ ತನ್ನ ಸ್ವಂತ ಸೆಲೂನ್ ನಲ್ಲಿ ವೃತ್ತಿ ಜೀವನ ನಡೆಸುತ್ತಿದ್ದರೆ ಕಳೆದ 5 ವರ್ಷಗಳಿಂದ ಸೋಮಂತಡ್ಕ ಮರಿಯ ಶ್ರೀನಿಕೇತನ ವಿಶೇಷಚೇತನ ಮಕ್ಕಳ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಕೇಶಕರ್ತನ ಕಾರ್ಯ ಮಾಡುತ್ತಿದ್ದಾರೆ ಇದರ ಜೊತೆಗೆ ಮುಂಡಾಜೆಯಿಂದ 15 ಕಿಲೋ ಮೀಟರ್ ದೂರದಲ್ಲಿರುವ ನೆರಿಯ ಸಿಯೋನ್ ಆಶ್ರಮಕ್ಕೆ ತನ್ನ ಸ್ವಂತ ಖರ್ಚಿನಲ್ಲಿ ತೆರಳಿ ಆಶ್ರಯದಲ್ಲಿರುವ ಸುಮಾರು 150 ಕ್ಕೂ ಹೆಚ್ಚಿನ ಆಶ್ರಮವಾಸಿಗಳಿಗೆ ಉಚಿತವಾಗಿ ಪ್ರತಿ ತಿಂಗಳು ಕ್ಷೌರ ಮಾಡುತ್ತಿದ್ದರೆ .
ತನ್ನ ವೃತ್ತಿಯಿಂದ ನಿವೃತ್ತಿ ಆಗುವ ತನಕ ಆಶ್ರಮ ವಾಸಿಗಳಿಗೆ ಉಚಿತವಾಗಿ ಕ್ಷೌರ ಮಾಡುವ ಪಣ ತೊಟ್ಟಿರುವುದಾಗಿ ರವಿಚಂದ್ರ ಭಂಡಾರಿಯವರು ಭಂಡಾರಿ ವಾರ್ತೆಯ ಜೊತೆ ತನ್ನ ಸಮಾಜ ಸೇವೆಯನ್ನು ಮುಂದುವರಿಸಲು ಬಯಸುವುದಾಗಿ ಹೇಳಿಕೊಂಡಿದ್ದಾರೆ ಏನೇ ಆಗಲಿ ಈ ಮಾದರಿ ಕೆಲಸಕ್ಕೆ ನಾವು ನೀವು ಬಿಗ್ ಸೆಲ್ಯೂಟ್ ಹೊಡೆಯಲೇಬೇಕು ಮುಂಡಾಜೆ ಶಾರದಾನಗರದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ತೊಡಗಿಸಿಕೊಂಡಿದ್ದರೆ ಮುಂಡಾಜೆಯಲ್ಲಿ ತಾಯಿ ಸುಮತಿ ಎನ್. ಭಂಡಾರಿ ಪತ್ನಿ ಶ್ರೀಮತಿ ಪ್ರತಿಮಾ ರವಿಚಂದ್ರ ಪುತ್ರ ಮಾ॥ ಧನುಷ್ ಪುತ್ರಿ ಬೇಬಿ॥ ದಿಶಾನಿ ಜೊತೆ ಸಂತೃಪ್ತಿ ಜೀವನ ನಡೆಸುತ್ತಿದ್ದಾರೆ.
ರವಿಚಂದ್ರ ಭಂಡಾರಿಯವರ ಸಮಾಜಮುಖಿ ಕೆಲಸ ನಿರಂತರವಾಗಿ ಮುಂದುವರಿಯಲಿ ಸಮಾಜ ಸಂಘ ಸಂಸ್ಥೆಗಳು ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಶುಭಹಾರೈಸುತ್ತದೆ.
-- ಭಂಡಾರಿ ವಾರ್ತೆ
No comments:
Post a Comment