ಕುಂಬಳೆ ಶ್ರೀಮತಿ ಜಲಜಾಕ್ಷಿ ಮತ್ತು ದಿವಂಗತ ಚಂದ್ರಶೇಖರ ಭಂಡಾರಿ ದಂಪತಿಯ ಪುತ್ರ
ಚಿ॥ ರಾ॥ ಸಚಿನ್
ರಿಪ್ಪನ್ ಪೇಟೆ
ಶ್ರೀ ರಾಘವೇಂದ್ರ ಭಂಡಾರಿ ಮತ್ತು ಶ್ರೀಮತಿ ಭಾರತಿ ಆರ್.ಭಂಡಾರಿ ದಂಪತಿಯ ಪುತ್ರಿ
ಚಿ॥ಸೌ॥ ಬೀನಾ ಆರ್.(ಬಿಂದು)
ಇವರು ಜುಲೈ 15 ನೇ ಗುರುವಾರದಂದು ತಮ್ಮ ದಾಂಪತ್ಯ ಜೀವನದ ಸಪ್ತಪದಿಯನ್ನು ಮುಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಿಯ ಸನ್ನಿಧಾನದಲ್ಲಿ ಅಗ್ನಿಸಾಕ್ಷಿಯಾಗಿ ಗುರುಹಿರಿಯರ ಕುಟುಂಬಸ್ಥರ ಶುಭ ಆಶೀರ್ವಾದದೊಂದಿಗೆ ಹೂವಿನ ಹಾರ ಬದಲಾಯಿಸಿಕೊಂಡು ಪುರೋಹಿತರ ಮಂತ್ರ ಪಠಣೆಯೊಂದಿಗೆ ವಧುವಿಗೆ ಮಾಂಗಲ್ಯ ಧಾರಣೆ ಮಾಡಿ ಶುಭ ವಿವಾಹ ಮಾಡಿಕೊಂಡರು.
ನವ ದಂಪತಿಗಳ ದಾಂಪತ್ಯ ಜೀವನವು ಚಿರಕಾಲ ಅನ್ಯೋನ್ಯತೆಯಿಂದ , ಸುಖ, ಸಂತೋಷ , ಸಮೃದ್ಧಿಯಿಂದ ಸಾಂಸಾರಿಕ ಜೀವನವನ್ನು ಮುನ್ನಡೆಸಲು ಭಗವಂತನ ಅನುಗ್ರಹ ಸದಾ ಇರಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಶುಭಹಾರೈಸುತ್ತದೆ
No comments:
Post a Comment