BhandaryVarthe Team

BhandaryVarthe Team
Bhandary Varthe Team

Thursday, 22 July 2021

ಕನಸಲ್ಲಿ ನಾಗದೇವರು

 ಪ್ರತಿಯೋರ್ವ ಮನುಷ್ಯನೂ ಜೀವನದಲ್ಲಿ ಒಂದಲ್ಲ ಒಂದು ದಿನ ಹಾವಿನ ಕನಸು ಕಾಣುತ್ತಾನೆ. ದೇವರಲ್ಲಿ ಅತಿ ಹೆಚ್ಚು ಭಕ್ತಿ ಉಳ್ಳವನಾಗಿದ್ದರೆ ನಾಗನನ್ನು ಆರಾಧಿಸುವವನು ಆಗಿದ್ದರೆ ಆತನು ಆಗಾಗ್ಗೆ ಹಾವಿನ ಕನಸು ಕಾಣುತ್ತಾನೆ. ಕನಸಲ್ಲಿ ವಿವಿಧ ಭಂಗಿಯಲ್ಲಿ ಹಾವನ್ನು ಕಾಣುತ್ತಾನೆ.ನಮ ಗೆ ನಿಜವಾದ ಪ್ರತ್ಯಕ್ಷ ದೇವರೆಂದರೆ ಸೂರ್ಯ. ಆದರೆ ಜೀವ ಇರುವ ಪ್ರತ್ಯಕ್ಷ ದೇವರೆಂದರೆ ಅದು ನಾಗದೇವರು ಮಾತ್ರ. ಹೆಚ್ಚಿನ ಎಲ್ಲಾ ಹಿಂದೂ ದೇವರಲ್ಲಿ ನಾಗ ದೇವರು ಇರುತ್ತಾರೆ ಎಂಬ ನಂಬಿಕೆ.ಆ ದೇವರುಗಳೇ ನಾಗದೇವರನ್ನು ಭಕ್ತರ ಕಡೆಗೆ ಕಳುಹಿಸಿರಬಹುದು.

ಕನಸಲ್ಲಿ ನಾಗನು ಹೆಡೆ ಎತ್ತಿ ನಿಂತಿರುವುದು, ಹೆಡೆ ಎತ್ತಿ ಟಾಟಾ ಮಾಡುವುದು, ದಾರಿಯಲ್ಲಿ ಸಂಚರಿಸುವುದು, ಹಾವನ್ನು ಅಡ್ಡಲಾಗಿ ದಾಟುವುದು, ಹಾವನ್ನು ಒದೆಯುವಂತೆ ಭಾಸ ಆಗುವುದು, ಹಾವು ಕಚ್ಚುವುದು, ಕಚ್ಚಿ ರಕ್ತ ಬರುವುದು, ಹಾವನ್ನು ಹುತ್ತದಲ್ಲಿ ಕಾಣುವುದು, ಹಾವನ್ನು ನಾಗಬನದಲ್ಲಿ ಕಾಣುವುದು, ಮನೆಯೊಳಗೆ ಕಾಣುವುದು, ಮಲಗಿದ್ದ ಚಾಪೆಯಲ್ಲಿ ಹಾಸಿಗೆಯಲ್ಲಿ ಉರುಳಿದಂತೆ ಕಂಡುಬರುವುದು, ಆದಿಶೇಷನಂತೆ ಹಲವು ಹೆಡೆಗಳನ್ನು ಬಿಚ್ಚಿರುವ ದೃಶ್ಯಾ, ಹಲವು ಹೆಡೆಗಳನ್ನು ತೋರುವ ನಾಗನನ್ನುನಾವು ಸ್ಪರ್ಶಿಸಿದಂತೆ ಭಾಸ ಆಗುವುದು, ಹಲವು ಹೆಡೆಗಳಿರುವ ಹಾವನ್ನು ನಾವು ಕೈಯಲ್ಲಿ ಸವರುವುದು, ಸವರುವಸಮಯದಲ್ಲಿ ನಾಗನು ತಲೆತಗ್ಗಿಸಿ ಇನ್ನಷ್ಟು ಸವರುವಂತೆಮಾಡುವುದು, ತಲೆ ತಗ್ಗಿಸಿ ಮಂದಹಾಸ ಬೀರುವುದು,ಇತ್ಯಾದಿ. ಈ ಎಲ್ಲಾ ಕನಸುಗಳು ನಾಗನೇ ಕೊಡುವ ಶುಭಸೂಚನೆಗಳು.ಇವರಿಗೆಲ್ಲಾ ದೈವ ದೇವರುಗಳ ದಯೆ, ಕರುಣೆ,ಆಶೀರ್ವಾದ ಇದೆ ಎಂದು ಭಾವಿಸ ಬೇಕು. ಇವುಗಳೆಲ್ಲನಾಗ ದೋಷಗಳಲ್ಲ. ಬದಲಾಗಿ ಪುಣ್ಯದ ಫಲಗಳು. ಈ ಕಾರಣದಿಂದಲೇ ತುಲುವರು ಆದಿ ಆರಂಭದಲ್ಲೇ ನಾಗದೇವರನ್ನು ಕಲ್ಲು ಹಾಕಿ ನಂಬಿ ಆರಾಧಿಸುತ್ತಾ ಬಂದರು.ಈಕನಸುಗಳು ಕಂಡರೆ ಭಯಪಟ್ಟು ಜೋತಿಷ್ಯರ ಹತ್ತಿರ ಓಡುವುದಲ್ಲ.

ಕನಸಲ್ಲಿ ನಾಗನ ತಲೆಯನ್ನು ಪ್ರೀತಿಯಿಂದ ಸವರುವ ಸಮಯಕ್ಕೆ ನಾಗನು ತನ್ನ ಹೆಡೆಯನ್ನು ತಗ್ಗಿಸಿ ಭಕ್ತನಲ್ಲಿಇನ್ನಷ್ಟು ಸವರುವಂತೆ ಪ್ರೇರೆಪಿಸುತ್ತಾ ಮಂದಹಾಸ ಬೀರಿದರೆ ಆ ಕನಸು ಅದ್ಭುತ. ಅಂತವರಿಗೆ ನಾಗನಿಂದ ವಿಶೇಷಶಕ್ತಿ ಒದಗಿ ಬರುತ್ತದೆ. ಅಂತವರಿಗೆ ನಾಗದೇವರು ಪ್ರೇರಣಾಶಕ್ತಿ ಒದಗಿಸುವರು.ಆತನು ಒಂದು ಊರಿನ, ಪ್ರದೇಶದ, ಸ್ಥಳೀಯ ಚರಿತ್ರೆ, ಮಹಿಮೆಗಳನ್ನು ಈವರೆಗೆ ಬಿಚ್ಚಿಡದ ಸತ್ಯ ಸಂಗತಿಗಳನ್ನು ಅರಿಯುತ್ತಾನೆ.ತನ್ನ ಹಿಂದಿನ ಜನ್ಮಗಳದೃಶ್ಯಗಳು ಅಂತವರಿಗೆ ಲಭಿಸುತ್ತದೆ. ಬಾಲ್ಯದಲ್ಲಿ ಕಂಡ ಕನಸುಗಳು ಮುಂದಿನ ವರ್ಷಗಳಲ್ಲಿ ಅದು ಸತ್ಯವಾಗಿ ಪರಿಣಮಿಸುತ್ತದೆ.ನಾವು ನಂಬಿರುವ ಬೂತೊಲು ಕೂಡಾ ಕನಸಲ್ಲಿ ಬಂದು " ನಾವು ನಿಮ್ಮ ಬೆನ್ನ ಹಿಂದೆ ಇದ್ದೇವೆ " ಎಂಬ ಮಾಹಿತಿ ಯನ್ನು ಕೊಡುತ್ತವೆ. ಕನಸಲ್ಲಿ ದೈವಗಳು ಎಂದರೆನಾಗ ಮತ್ತು ಬೂತೊಲು ಬಂದರೆ ಅವುಗಳು ಶುಭ ಫಲಗಳೇ ಆಗಿರುತ್ತದೆ.

ನಾಗನು ದೇವ ದೂತನಾಗಿರುವನು. ಈ ಧೂತನು ತನ್ನಭಕ್ತರಿಗೆ ಪ್ರತ್ಯಕ್ಷವಾಗಿ ಹಾರೈಸುವನು."ನಾನು ಸದಾ ನಿಮ್ಮಬೆನ್ನಲ್ಲೇ ಇರುವೆನು" ಎಂದು ದೃಢ ಪಡಿಸಲು ಕನಸಲ್ಲಿ ಅಥವಾ ನನಸಲ್ಲಿ ಕಾಣುವನು. ಯಾವುದೇ ದೇವರನ್ನುಕಾಣುವುದು ಸಾಧ್ಯವಿಲ್ಲ. ಅವನ ನಿಜ ಸ್ವರೂಪ ಹೇಗಿರಬಹುದು ಎಂದು ಊಹಿಸಲು ಅಸಾಧ್ಯ. ನಾವು ಕಾಣುವ ದೇವರ ಫೋಟೋಗಳು ಕಾಲ್ಪನಿಕ ರೂಪದ್ದು ಆಗಿರುತ್ತದೆ. ನಾವು ಪೃತ್ಯಕ್ಷ ಕಾಣುವ ದೇವರೆಂದು ಅರಿತು ಅಂದು ತುಲುವರು ತುಲುನಾಡ್ ಇಲ್ಲಿ ಹೊಲ ಗದ್ದೆಗಳ ನಿರ್ಮಾಣ ಮಾಡುವ ಕಾಲದಲ್ಲಿ ನಾಗನಿಗಾಗಿ ಪ್ರತ್ಯೇಕವಾಗಿ ವಿಶಾಲವಾದ ಭೂಮಿಯನ್ನು ಬಿಟ್ಟರು. ಅಲ್ಲಿ ಕಾಡು ಬೆಳೆಸಿದರು. ನಾಗನಿಗಾಗಿ ಬಿಟ್ಟ ಕಾಡು ಎಂದರು. ನಾಗ ಬನ ಎಂದು ಕರೆದರು.ಈ ಭೂಮಿಯಲ್ಲಿ ನಾಗಗಳ ವಂಶಾಭಿವೃಧ್ಧಿ ಆಗಲೆಂದು ಬಯಸಿದರು.ಸ್ವಾಭಾವಿಕವಾಗಿ, ತಸ್ಮೋಸದಿಂದ ಸತ್ತ ನಾಗಸರ್ಪ ಮರಿ ಉಚ್ಚುಗಳನ್ನು ಈ ನಾಗ ಬನದಲ್ಲಿ ದಫನ ಮಾಡಿದರು. ಕಲ್ಲು ಹಾಕಿ ನಂಬಿದರು. ನಾಗಪ್ರೇತಗಳನ್ನು ಆರಾಧಿಸುತ್ತಾ ಬಂದರು. ಆದಿ ಶೇಷನೇ ಇಡೀ ಭೂಮಿಯನ್ನು ತನ್ನ ಹೆಡೆಯಲ್ಲಿಟ್ಟು ಎಲ್ಲರನ್ನೂ ರಕ್ಷಿಸುತ್ತಾಇದ್ದಾನೆ ಎಂಬ ಹಿರಿಯರು ಹೇಳಿದ ಮಾತನ್ನು ನಂಬುತ್ತಾಬಂದರು.

ನಾಗ ದೇವರು ಭಕ್ತರಿಗೆ ತಮ್ಮ ಕುಟುಂಬದಲ್ಲಿ ಮುಂದೆ ಬರುವ ಅಶುಭ ಫಲ ಸೂಚನೆಗಳನ್ನು ಕೊಡುವರು. ಜಾಗ್ರತೆ ವಹಿಸಲು ಸೂಚಿಸುವರು. ಸಾವು,ನೋವು, ಆಘಾತ,ಅಪಘಾತಗಳ ಮುನ್ಸೂಚನೆಯನ್ನು ಕನಸಿನಲ್ಲಿ ತೋರಿಸುವರು.ಆ ಕನಸುಗಳು ಎಂದರೆ ನಾಗನು ಪೆಟ್ಟಾಗಿ ಬಿದ್ದಿರುವುದು.ಜೀವನ್ಮರಣದಲ್ಲಿ ಹೊರಳಾಡುವುದು ,ನಾಗ ಸತ್ತಿರುವುದು,ಸತ್ತ ನಾಗನನ್ನು ದಫನ ಮಾಡಲು ಅಥವಾ ಭಸ್ಮ ಮಾಡಲು ಒಯ್ಯುವ ದೃಶ್ಯ , ಸರಾಗವಾಗಿ ನಾಗನಿಗೆ ಸಂಚರಿಸಲು ಆಗದಿರುವುದು ಇತ್ಯಾದಿ. ಇವೆಲ್ಲಾ ನಾಗ ದೋಷಗಳು ಅಲ್ಲ. ಬದಲಾಗಿ ನಮ್ಮನ್ನು ನಾವು ರಕ್ಷಿಸಿ ಕೊಳ್ಳಲು ನಾಗ ದೇವರೇ ಕೊಡುವ ಸೂಚನೆಗಳು. ಇಂತಹ ಅಶುಭ ಕನಸುಗಳು ಬಿದ್ದರೆ ಭಯಪಡದೆ ನಾಗಬನದಲ್ಲಿ ತಂಬಿಲ ಇತ್ಯಾದಿ ಪೂಜಾರಾಧನೆ ಮಾಡಬೇಕು.ಸಂಸಾರ ಕುಟುಂಬದಲ್ಲಿ ಯಾವುದೇ ತರದಸಾವು ನೋವು, ಆಘಾತ, ಅಪಘಾತಗಳು ನಡೆಯಬಾರದೆಂದು ದೈವದೇವರಲ್ಲಿ ಸ್ಮರಿಸಬೇಕು. ನಾಗಬನಕ್ಕೆ ಹೋಗಿ ನಾಗಬನದ ಮಣ್ಣನ್ನು ಹಣೆಗೆ ಇಡುವುದು.ನಾಗಬನದ ಪ್ರದೇಶದಲ್ಲಿ ನಿರ್ಮಿಸಿದ ಆಲಡೆ ಕ್ಷೇತ್ರ,ತಮ್ಮಆದಿಮೂಲದಲ್ಲಿ ನಾಗನಲ್ಲಿ ಪ್ರಾರ್ಥನೆ ಮಾಡುವುದು.ದುಃಸ್ವಪ್ನ ನಿವಾರಣೆಗೆ ನಾಗದೇವರಲ್ಲೇ ಬೇಡುವುದು. ಜ್ಯೋತಿಷಿಗಳು, ಅರ್ಚಕರು ತಮ್ಮ ಮನೆ ಪಕ್ಕದಲ್ಲಿ ಪ್ರತಿಷ್ಟೆಮಾಡಿದ ನಾಗಕಲ್ಲುಗಳು ಇಂತಹಾ ಶಾಂತಿ ಪೂಜೆಗಳಿಗೆಯೋಗ್ಯವಲ್ಲ.ಏಕೆಂದರೆ ಇದು ನಾಗಬನವಲ್ಲ.ಈ ಕಾಲದಲ್ಲಿನಾಗಬನ ರಚಿಸಲು ಸಾಧ್ಯವಿಲ್ಲ. ಆದಿಮೂಲ ಅಥವಾ ಮಹಾಲಿಂಗೇಶ್ವರ ದೇವಾಲ ಯ ಎಂದು ಕರೆಯುವ ದೇವಾಲಯವು ಬಲು ಪವಿತ್ರ.ಏಕೆಂದರೆ ಇಲ್ಲಿ ನಾಗಬನದಲ್ಲೇ ಶಿವಾಲಯವನ್ನು ನಿರ್ಮಾಣ ಮಾಡಿದ್ದಾರೆ. ಇದು ಎಲ್ಲಾ ಸೂದ್ರರನ್ನೂಆಕರ್ಷಿಸುವ ಅಂದಿನ ಉಪಾಯ ಆಗಿತ್ತು. ದೈವದೊದೊಡನೆ ದೇವರನ್ನೂ ಆರಾಧಿಸಲೆಂಬ ಬಯಕೆ.ನಾಗಕನಸಲ್ಲಿ ಸೂಚಿಸಿದ ದುಸ್ವಪ್ನದ ಶಾಂತಿಗೆ ನಾಗಬನ,ನಾಗಕ್ಷೇತ್ರಗಳಂತೆ,ಈ ಹೆಸರುಳ್ಳ ದೇವಾಲಯಗಳೂಸೂಕ್ತ.ದೊಡ್ಡ ಪೂಜೆ ಮಾಡಿದರೆ ಬೇಗ ಪ್ರಾಯಶ್ಚಿತ್ತ ಆಗುವುದು ಎಂದಿಲ್ಲ.ಹತ್ತಿರದ ಯಾವುದೇ ನಾಗಬನದಲ್ಲಿ ಕೈಮುಗಿದು ಪ್ರಾರ್ಥನೆ ಮಾಡಿದರೂ ಸಾಲುತ್ತದೆ.

 

ನನಸಲ್ಲಿ ಅಂದರೆ ನಿಜ ಜೀವನದಲ್ಲಿ ನಾಗದೇವರನ್ನುಅಂದರೆ ಹಾವು ಕಂಡರೆ ಎಲ್ಲವೂ ಶುಭ ಸೂಚನೆಗಳೇಆಗಿವೆ. ಯಾವುದೇ ರೀತಿಯ ಭಂಗಿಯಲ್ಲಿದ್ದರೂ ಸರಿ.ಹಗಲಲ್ಲಿ ಅಂದರೆ ನನಸಲ್ಲಿ ಸತ್ತ ನಾಗನನ್ನು ಕಂಡರೆ ಅವುಗಳನ್ನು ದಫನ ಇಲ್ಲವೇ ಭಸ್ಮ ಮಾಡುವುದು. ಕ್ರಿಯೆಇತ್ಯಾದಿಗಳನ್ನು ಮಾಡಿ ಪುಣ್ಯಾತ್ಮರಾಗುವುದು. ನಾಗನನ್ನು ಉದ್ದೇಶಪೂರ್ವವಾಗಿ ಹಿಂಸಿಸುವುದು,ಸಾಯಿಸುವುದು, ಸಾಯಿಸುವಂತೆ ಪ್ರಚೋದಿಸುವುದುಇವುಗಳು ಪಾಪ ದೋಷಗಳು. ಈ ದೋಷಗಳು ಪ್ರಚೋದಿಸಿದವರಿಗೆ ಮತ್ತು ಸಾಯಿಸಿದವರಿಗೆ ಮಾತ್ರ. ಅದು ಅವರ ಮರುಜನ್ಮದಲ್ಲೂ ತಟ್ಟುತ್ತದೆ. ತಸ್ಮೋಸದಿಂದನಾಗ ಮಾನವನ ಕೈಯಲ್ಲಿ ನಾಶವಾದರೆ ಪ್ರಾಯಶ್ಚಿತ್ತಕ್ಕಾಗಿನಾಗಬನ, ಕ್ಷೇತ್ರಗಳಲ್ಲಿ ಶಾಂತಿ ಮಾಡುವುದು. ತಪ್ಪನ್ನುಮನ್ನಿಸಲು ಆತನಲ್ಲೇ ಸದಾ ಪ್ರಾರ್ಥಿಸುವುದು.ಮೈಯ ಚರ್ಮ ಬಿಳಿಯಾಗುವುದು ನಾಗದೋಷ ಅಲ್ಲ ಅದು ಒಂದು ಕಾಯಿಲೆ.

 

ಆದಿ ಮೂಲದಲ್ಲಿ ಎಕ್ರೆಗಟ್ಟಲೆ ಭೂಮಿಯನ್ನು ನಾಗಬನಕ್ಕಾಗಿ ಮೀಸಲಾಗಿಟ್ಟಿದ್ದರು. ವಿವಿಧ ಮರಗಳು ದಟ್ಟವಾಗಿ ಬೆಳೆಯುತ್ತಿತ್ತು. ಹಣ್ಣು ಹಂಪಲುಗಳಿದ್ದವು. ವಿವಿಧ ಪಕ್ಷಿಗಳು ಹಣ್ಣಿಗಾಗಿ ಬರುತ್ತಿದ್ದವು. ಅವುಗಳ ಕೂಗು ದೂರದವರೆಗೂ ಕೇಳಿಬರುತ್ತಿತ್ತು. ಬನದಲ್ಲಿ ಹಾವುಗಳ ವಂಶಾಭಿವೃಧ್ಧಿಆದಂತೆ ಮೃಗ ಪಕ್ಷಿಗಳ ವಂಶವು ಈ ಬನದಲ್ಲಿ ಬೆಳೆಯುತ್ತಿತ್ತು.ನಾಗಸರ್ಪ ಮರಿ ಉಚ್ಚುಗಳಿಗೂ ಆಹಾರ ಈ ವನದಲ್ಲಿ ದೊರೆಯುತ್ತಿತ್ತು.

ಅಂದು ನಾಗಬನ ಇಂದು ನಾಗರಣ
ಅಂದು ಊರೊಳಗಿನ ಬೊಟ್ಟು ಹೊಲಗಳ, ಗದ್ದೆಗಳ,ಪಡ್ಪು,ಲಚ್ಚಿಲ್ ಇತ್ಯಾದಿ ಭೂಮಿಗಳ ಹೊರತು ಪಡಿಸಿ ಉಳಿದ ಎಲ್ಲಾ ಭೂಮಿಯು ನಾಗಬನಕ್ಕೆ ಸೇರಿತ್ತು. ನಾಗಬನಕ್ಕೆ ಸೇರಿದ ಭೂಮಿಯಿಂದ ಸೊಪ್ಪು ಕಟ್ಟಿಗೆ ಮನೆಗಳಿಗೆ ತರಬಹುದಾಗಿತ್ತು. ಕಾಡು ಉತ್ಪತ್ತಿಗಳನ್ನು ಉಪಯೋಗಿಸ ಬಹುದಾಗಿತ್ತು. ಆದರೆ ಯಾವುದೇ ಕೃಷಿ ಮಾಡುವ ಹಾಗಿರಲಿಲ್ಲ.ವಾಸ ಮಾಡುವಂತಿರಲಿಲ್ಲ.ಆದರೆ ಇಂದು ಅದೇ ನಾಗಬನದ ಭೂಮಿಯನ್ನು ಸರಕಾರದ ಭೂಮಿ ಎಂದು ಎಲ್ಲರೂ ಆಕ್ರಮಣ ಮಾಡಿದ್ದಾರೆ. ನಾಗಬನದಲ್ಲಿ ಬೃಹತ್ ಮರಗಳಿಲ್ಲ. ಮೃಗ ಪಕ್ಷಿಗಳಿಲ್ಲ.ಆದರೆ ಮಾನವನು ವಾಸಮಾಡುತ್ತಿದ್ದಾರೆ.ಅಂದಿನ ತಂಪಾದ ನಾಗಬನವು ನಾಗರಣವಾಗಿದೆ. ರಣಬಿಸಿಲಿನಿಂದ ಸುಡುವತಾಪದಿಂದ ಕೂಡಿದೆ.ನಾಗಬನದ ಭೂಮಿಯನ್ನು ಸರಕಾರದ ಭೂಮಿ ಎಂದು ಆಕ್ರಮಿಸಲು ರಣರಂಗವೇ ,ಕಾಳಗವೇ ನಡೆಯುತ್ತಿದೆ. ಒಟ್ಟಾರೆ ನಾಗಬನ ಅಥವಾ ನಾಗವನ, ನಾಗನ ಕಾಡ್ ಅಥವಾ ನಾಗನ ಕಾಡು ಎಂಬ ಹೆಸರು ಹೆಸರಿಗೆ ಮಾತ್ರ ಇದೆ. ನೋಡಲು ನಾಗಬನ ಇಲ್ಲದೆ ಅದು ನಾಗರಣ ಆಗಿದೆ.ನಾಗಬನವನ್ನು ಜೀರ್ಣೋದ್ಧಾ ರ ಎಂದು ಕೆಡವಿದ್ದಾರೆ.ಆದಿಮೂಲದ ಕಲ್ಲುಗಳನ್ನು ಹೊಳೆಗೆ ಎಸೆಯಲಾಗಿದೆ.ನಾಗನಿಗೆ ಎತ್ತರದ ಕಟ್ಟೆಕಟ್ಟಿ ಮಾಡು ನಿರ್ಮಿಸಲಾಗಿದೆ. ಇದು ನಾಗನಿಗಾಗಿ ಮಾಡಿದ ವ್ಯವಸ್ಥೆ ಅಲ್ಲ. ಬದಲಾಗಿ ವೈದಿಕರನ್ನು ಮಳೆ ಮತ್ತು ಬಿಸಿಲಿನಿಂದ ರಕ್ಷಿಸಲು ಆಗಿರುತ್ತದೆ.

 

ದೈವರಾಧನೆ (ನಾಗ ಮತ್ತು ಬೂತೊಲು)ಯನ್ನು ನಮ್ಮಪೂರ್ವಜರು ಆಚರಣೆ ಮಾಡುವ ಕಾಲದಲ್ಲಿ ಈಗಿನ ಜ್ಯೋತಿಷ್ಯ,ನಾಗದೋಷಗಳು,ಬೂತದ ಉಪದ್ರ,ಪ್ರೇತಬಾಧೆ,ಭಯ ಆತಂಕಗಳು ಇರಲೇ ಇಲ್ಲ.ಈಗಲೂ ಇದನ್ನುಹಚ್ಚಿಕೊಳ್ಳಬಾರದು.ದೈವದೇವರ ನಂಬಿಕೆ ಇದ್ದರೆ ಸಾಕು.ನಮಗೆ ಬರುವ ತೊಂದರೆಗಳು ದೈವದೇವರಿಂದಲ್ಲವೇ ಅಲ್ಲ.ಅದು ಅವರವರ ಕರ್ಮಗಳ ಫಲ.ದೈವ ದೇವರಲ್ಲಿನಂಬಿಕೆ ಇಟ್ಟು ಕಷ್ಟ ಪಟ್ಟು ಸಂಪಾದಿಸಿದ ಹಣವನ್ನು ದೈವದೇವರ ಹೆಸರಲ್ಲಿ ಪೋಲು ಮಾಡಬಾರದು.ನಮ್ಮ ಭವಿ ಷ್ಯ ಹೇಳಲು ಆಗುವುದಿಲ್ಲ.ನಮ್ಮ ತಲೆಗೆ ನಮ್ಮ ದೇ ಕೈ. ಸಹಾಯಕ್ಕಾಗಿ ಯಾರೂ ಬರೊಲ್ಲ. ಹಣ ಉಳಿದರೆ ಊಟಕ್ಕಾಗಿ ಕಷ್ಟಪಡುವವರಿಗೆ ಕೊಡಿ.ಆದರೆ ನಾವು ನಮ್ಮನ್ನೇ ವಂಚಿಸಿ ಕೊಂಡು ಕೂಡಿಡುವುದಲ್ಲ ಜಾಗ್ರತರಾಗೋಣ. ನಿಮಗೆ ಇರುವ ದೈವ ದೇವರ ಭಯ ಹೆದರಿಕೆಗಳನ್ನುನಿಮ್ಮ ಕಿರಿಯರಿಗೆ ಹರಡಿಸಬೇಡಿ.ಈಗಿನ ದೈವ ದೇವರುಗಳ ಕತೆಯನ್ನು ತಿಳಿಸುವುದು ಬೇಡ.ಹಿರಿಯರಿಗೆ ಗೌರವಕೊಡಲು ಕಳಿಸಿ.ನಮ್ಮ ಮುಂದಿನ ಪೀಳಿಗೆ ವಿದ್ಯಾವಂ ರಾಗಬೇಕು.

ದೈವ ದೇವರಲ್ಲಿ ನಂಬಿಕೆ ಇಟ್ಟು ಅವರಿಗೆ ಭಯಪಡದೆ ಯಾರಿಗೂ ತೊಂದರೆ ಕೊಡದೆ ಬದುಕುವ ಜೀವನವನ್ನುದೈವದೇವರು ಮೆಚ್ಚುವರು.ಸದಾ ದೈವ ದೇವರುಗಳನ್ನೇಹಚ್ಚಿ ಕೊಂಡವರು ತುಂಬಾ ಭಯಭೀತರಾಗುವರು.ಅವರಲ್ಲದೆ ಕೆಳಗಿನ ಪೀಳಿಗೆಗೆ ಆ ಕಾಯಿಲೆಯನ್ನು ಹರಡಿಸಿ ಬಿಡುತ್ತಾರೆ.ಎಚ್ಚರಿಕೆ....

  ಇಗೋ.ಭಂಡಾರಿ (ನಿವೃತ್ತ ಬ್ಯಾಂಕ್ ಮ್ಯಾನೇಜರ್) ಕಾರ್ಕಳ

No comments:

Post a Comment