ಭಂಡಾರಿ ಸಮಾಜ ಸಂಘ ಬೆಂಗಳೂರು ವಲಯದ ಮಾಜೀ ಕೋಶಾಧಿಕಾರಿ ಉಡುಪಿ ಕಲ್ಯಾಣಪುರ ಗೋಪಾಲಕೃಷ್ಣ. ಕೆ ಅಲ್ಪ ಕಾಲದ ಅಸೌಖ್ಯದಿಂದ ತಾರೀಕು 24 ಜುಲೈ 2021 ರ ಶನಿವಾರ ಮುಂಜಾನೆ 3 ಗಂಟೆಗೆ ಬೈಕಾಡಿಯ ತಮ್ಮ ಮನೆಯಲ್ಲಿ ಕೊನೆಯುಸಿರೆಳೆದರು. ಅವರಿಗೆ ಸುಮಾರು 71 ವರ್ಷ ವಯಸ್ಸಾಗಿತ್ತು.
ದಿವಂಗತರು ಪತ್ನಿ ಬಿ ಶಾರದ, ಮೂವರು ಮಕ್ಕಳಾದ ಶ್ರೀಮತಿ ಮೀರಾ , ಶ್ರೀಮತಿ ತಾರಾ ರಾಘವೇಂದ್ರ, ಶ್ರೀಮತಿ ವಾಣಿ ಸಚಿನ್ ಮತ್ತು ಮೊಮ್ಮಕ್ಕಳು ಹಾಗೂ ಓರ್ವ ಸಹೋದರನನ್ನು ಅಗಲಿದ್ದಾರೆ .
ಬೆಂಗಳೂರಿನ ಪ್ರಸಿದ್ಧ ಸಂಸ್ಥೆಯಾದ ಮೈಕೋ ಬಾಷ್ ನಲ್ಲಿ ದೀರ್ಘ ಕಾಲ ಸೇವೆ ಸಲ್ಲಿಸಿರುವ ಶ್ರೀ ಗೋಪಾಲಕೃಷ್ಣರವರು 2008 ರ ಮಾರ್ಚ್ ನಲ್ಲಿ ನಿವೃತ್ತಿ ಹೊಂದಿದರು.
ಸಮಾಜ ಸೇವೆಯಲ್ಲಿ ಒಲವು ಹೊಂದಿದ್ದ ಗೋಪಾಲಕೃಷ್ಣರವರು ಭಂಡಾರಿ ಸಮಾಜ ಸಂಘ ಬೆಂಗಳೂರು ವಲಯದಲ್ಲಿ 2008 ರಿಂದ 2010 ರ ವರೆಗೆ ಕೋಶಾಧಿಕಾರಿಯಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ. ಬೆಂಗಳೂರು ಭಂಡಾರಿ ಸಮಾಜ ಸಂಘದ ಉಸ್ತುವಾರಿಯಲ್ಲಿ 2010 ರಲ್ಲಿ ನಡೆದ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಉತ್ಸವದ ಸಂದರ್ಭದಲ್ಲಿ ಕೋಶಾಧಿಕಾರಿಯಾಗಿ ಅತ್ಯಂತ ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಿ ಉತ್ಸವ ಯಶಸ್ವಿಯಾಗಿ ನಡೆಯುವಲ್ಲಿ ಶ್ರಮ ವಹಿಸಿದ್ದರು.
ಅತ್ಯಂತ ಸೌಮ್ಯ, ಸರಳ ಸ್ವಭಾವದ ವ್ಯಕ್ತಿಯಾಗಿದ್ದ ಗೋಪಾಲಕೃಷ್ಣರವರು ಯಾವುದೇ ವ್ಯಕ್ತಿಯೊಂದಿಗೆ ಬಹಳ ಬೇಗ ಹೊಂದಿಕೊಳ್ಳುತ್ತಿದ್ದರು.
ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ , ಕುಟುಂಬಕ್ಕೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲೆಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಈ ಸಂದರ್ಭದಲ್ಲಿ ಪ್ರಾರ್ಥಿಸುತ್ತದೆ .
-ಭಂಡಾರಿ ವಾರ್ತೆ
No comments:
Post a Comment