BhandaryVarthe Team

BhandaryVarthe Team
Bhandary Varthe Team

Monday, 19 July 2021

ಮುಂಬಯಿನ ಶಿವಾಸ್ ಹೇರ್ ಡಿಸೈನ್ ಪ್ರೈವೇಟ್ ಲಿ.ನ 22ನೇ ಶಾಖೆ ಸಲೂನ್ ಶಿವಾಸ್ ಸ್ಯಾಲ್ಯೂಟ್ (SALUTE) ಶುಭಾರಂಭ

 ಬಾಲಿವುಡ್ ಸೆಲೆಬ್ರಿಟಿಗಳು ಸೇರಿದಂತೆ ಹಲವು ಪ್ರತಿಷ್ಠಿತ ಗಣ್ಯರ ಕೇಶ ವಿನ್ಯಾಸದ ಮೂಲಕ ಹೆಸರುವಾಸಿಯಾಗಿರುವ ಕಾರ್ಕಳ ಮೂಲದ ಹೇರ್ ಎಕ್ಸ್ ಪರ್ಟ್ ಡಾ| ಶಿವರಾಮ ಕೃಷ್ಣ ಭಂಡಾರಿ ಅವರ ಶಿವಾಸ್ ಹೇರ್ ಡಿಸೈನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ 22ನೇ ಶಾಖೆ ಸಲೂನ್ ಶಿವಾಸ್ ಸ್ಯಾಲ್ಯೂಟ್ ಮುಂಬಯಿ ಕಾರ್ ಪಶ್ಚಿಮದ ಸೂರ್ಯಲೋಕ್ ಸಂಕೀರ್ಣದಲ್ಲಿ ಶುಭಾರಂಭಗೊಂಡಿತು.  

 

 


ನೂತನ ಸಂಸ್ಥೆಗೆ ಶುಭಹಾರೈಸಿದ ಭಾರತೀಯ ನೌಕಾಪಡೆಯ ನಿವೃತ್ತ ಕಮಾಂಡರ್ ಸಿ.ಕೆ.ದಾವರ್, ಕೇಶ ವಿನ್ಯಾಸವು ವೃತ್ತಿ ಸೌಂದರ್ಯದ ಮೆರುಗನ್ನು ಇಮ್ಮಡಿಗೊಳಿಸುತ್ತಿದ್ದು, ಕೇಶ ಸಂರಕ್ಷಣೆಯು ಜೀವನದ ಪ್ರತಿಷ್ಠೆ ರೂಪಿಸುವಲ್ಲಿಯೂ ಮಹತ್ತರ ಪಾತ್ರ ವಹಿಸುತ್ತದೆ. ಅಂತಾರಾಷ್ಟ್ರೀಯ ಪ್ರಸಿದ್ಧಿಯ ಡಾ| ಶಿವರಾಮ ಭಂಡಾರಿ ಅವರು ಕೇಶ ವಿನ್ಯಾಸ ತಜ್ಞರಾಗಿ ಚಿರಪರಿಚಿತರಾಗಿದ್ದು, ದೇಶ ಕಾಯುವ ಸೈನಿಕ ಸೇವೆಯ ಮಹತ್ವವನ್ನು ಸಾರುವ ನಿಟ್ಟಿನಲ್ಲಿ ವಿಭಿನ್ನ ಪ್ರಯತ್ನವಾಗಿ ನೂತನ ಸಂಸ್ಥೆ ಲೋಕಾರ್ಪಣೆಗೊಳಿಸಿರುವುದು ಹೆಮ್ಮೆಯ ವಿಚಾರ ಎಂದರು.

[video width="512" height="640" mp4="https://www.bhandaryvarthe.in/wp-content/uploads/2021/07/sivas-salute-1.mp4"][/video]

ಭಾರತ-ಪಾಕಿಸ್ಥಾನ ಯುದ್ಧದಲ್ಲಿ ಮಡಿದ ಹುತಾತ್ಮ ಯೋಧ ಕ್ಯಾ| ವಿನಾಯಕ್ ವಿಷ್ಣುಗೋರೆ ಅವರ ತಾಯಿ, ಪಾರ್ಲೆ ತಿಲಕ್ ವಿದ್ಯಾಲಯದ ಮುಖ್ಯಶಿಕ್ಷಕಿ ಅನುರಾಧ ವಿ.ವಿಷ್ಣುಗೋರೆ ಅವರು ರಿಬ್ಬನ್ ಕತ್ತರಿಸುವ ಮೂಲಕ ಸಲೂನ್ ಶಿವಾಸ್ ಸ್ಯಾಲ್ಯೂಟ್ ಉದ್ಘಾಟಿಸಿ ಮಾತನಾಡಿ, ವರ್ಷಗಳು ಕಳೆದಂತೆ ಜೀವನ ಶೈಲಿಗಳು ಬಲಾಗುತ್ತಿದ್ದು, ಅದಕ್ಕೆ ಪೂರಕವಾಗಿ ಕೇಶ ವಿನ್ಯಾಸವೂ ವಿಭಿನ್ನ ಶೈಲಿಯನ್ನು ಪಡೆಯುತ್ತಿದೆ. ಹೇರ್ ಸ್ಟೈಲ್ ಕ್ರೇಝ್ ಪುರುಷ-ಮಹಿಳೆ ಎಂಬ ಬೇಧವಿಲ್ಲದೆ ಮಹತ್ವವನ್ನು ಪಡೆದುಕೊಳ್ಳುತ್ತಿದೆ ಎಂದರು.


ಸಹೃದಯಿ ವ್ಯಕ್ತಿತ್ವದ ಸಜ್ಜನ ವ್ಯಕ್ತಿಯಾಗಿರುವ ಶಿವ ನನ್ನ ಆಪ್ತಮಿತ್ರನಿಗಿಂತಲೂ ಮಿಗಿಲಾಗಿ ಬಂಧುವೂ ಆಗಿದ್ದು, ನನ್ನ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ಅವರ ಕೆಲಸವೇ ಪ್ರತಿಷ್ಠೆಯನ್ನು ತಿಳಿಸುತ್ತಿದ್ದು, ಸಿನಿಮಾ, ಕ್ರೀಡಾ, ರಾಜಕೀಯ ಹೀಗೆ ಎಲ್ಲಾ ಪ್ರತಿಷ್ಠಿತ ವ್ಯಕ್ತಿತ್ವಗಳ ಕೇಶ ವಿನ್ಯಾಸದ ಗರಿಮೆ ಶಿವ ಅವರಿಗೆ ಸಲ್ಲುತ್ತದೆ ಎಂದು ಭಾರತೀಯ ಚಿತ್ರ ನಿರ್ದೇಶಕ ಮಧೂರ್ ಭಂಡಾರ್ಕಾರ್ ಅವರು ಶುಭಹಾರೈಸಿದರು.


ವಿದ್ವಾನ್ ಕೆ.ಕೃಷ್ಣರಾಜ ತಂತ್ರಿ ಬೊರಿವಿಲಾ ಅವರು ವಾಸ್ತುಪೂಜೆ, ಸತ್ಯನಾರಾಯಣ ಪೂಜೆ ನೆರವೇರಿಸಿದರು. ಕೃಷ್ಣ ಭಟ್, ರಾಮದಾಸ ಭಟ್, ಕುಶ ತಿವಾರಿ, ಪ್ರಸಾದ್ ಭಟ್ ಅವರು ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ರಾಘವ ವಿ.ಭಂಡಾರಿ, ಶ್ವೇತಾ ಆರ್.ಭಂಡಾರಿ, ಶಿವರಾಮ ಕೆ.ಭಂಡಾರಿ, ಅನುಶ್ರೀ ಎಸ್.ಭಂಡಾರಿ ಅವರು ಪೂಜೆಯಲ್ಲಿ ಪಾಲ್ಗೊಂಡರು. ಮಕ್ಕಳಾದ ರೋಹಿಲ್ ಭಂಡಾರಿ, ಆರಾಧ್ಯ ಭಂಡಾರಿ ಪಾಲ್ಗೊಂಡಿದ್ದರು. ಪ್ರವರ್ತಕರ ಕುಲದೇವರಾದ ಕಚ್ಚೂರು ಶ್ರೀ ನಾಗೇಶ್ವರ ದೇವರಿಗೆ ಆರತಿಯನ್ನು ಬೆಳಗಿ ಸ್ವರ್ಗಸ್ಥರಾದ ತಾಯಿ ಗುಲಾಬಿ ಕೆ.ಭಂಡಾರಿ ಅವರನ್ನು ಸ್ಮರಿಸಿ ಚಾಲನೆ ನೀಡಲಾಯಿತು.

ಭಾರತೀಯ ರಕ್ಷಣಾ ಪಡೆಗಳಿಂದ ಪ್ರೇರಿತನಾಗಿ ಸ್ಯಾಲ್ಯೂಟ್ ಹೆಸರಿನೊಂದಿಗೆ ಈ ಸೆಲೂನ್ ಕೆಲಸ ಮಾಡಲಿದ್ದು, ರಾಷ್ಟ್ರ ರಕ್ಷಣಾ ಯೋಧರ ಶೌರ್ಯ, ತ್ಯಾಗದ ಸೇವೆಗಾಗಿ ಇದನ್ನು ಸಮರ್ಪಿಸುತ್ತಿದ್ದೇವೆ. ಈ ಸೆಲೂನ್‌ನಲ್ಲಿ ಮಿಲಿಟಿರಿ ಕ್ಷೌರ ಮಾಡುವ ಪರಿಣಿತ ಕೇಶ ವಿನ್ಯಾಸಕರಿದ್ದು, ವಿಶೇಷ ತರಬೇತಿಯೊಂದಿಗೆ ಕೆಲಸ ಮಾಡಲಿದ್ದಾರೆ. ಕೋವಿಡ್ ನಿಯಮಾನುಸಾರ ಇದು ಕಾರ್ಯಾಚರಿಸಲಿದೆ ಎಂದು ಪ್ರವರ್ತಕ ಡಾ| ಶಿವರಾಮ ಕೃಷ್ಣ ಭಂಡಾರಿ ತಿಳಿಸಿದರು.
ವಿಶೇಷ ಆಹ್ವಾನಿತರಾಗಿ ನಟ ಅರ್ಜುನ್ ಬದ್ಪಾ, ಮುಂಬಯಿ ದಕ್ಷಿಣ ಮಧ್ಯ ಕ್ಷೇತ್ರದ ಸಂಸದ ರಾಹುಲ್ ಆರ್.ಶಿವಾಲೆ, ಸೆಲೂನ್ ನಿರೂಪಕ ರಾಜು ಕನ್ವಾಲಾಲ್, ಡಿಸಿಪಿ ಜಯಂತ್ ಶಿತ್ರೆ, ಎಸಿಪಿಗಳಾದ ಸಂದೀಪ್ ಕಾರ್ಣಿಕ್, ವಿಲಾಸ್ ಸಿಂಗ್ ಸಂಜಯ್, ಬ್ರೈಟ್ ಪಬ್ಲಿಸಿಟಿಯ ಆಡಳಿತ ನಿರ್ದೇಶಕ ಯೋಗೇಶ್ ಲಕಾನಿ, ಅನಿಲ್‌ಕುಮಾರ್ ಶರ್ಮ, ಛಾಯಾಗ್ರಾಹಕ ಗೋಪಾಲ ಶೆಟ್ಟಿ, ಅಶೋಕ್ ದಮನ್‌ಕರ್, ರಾಕಿ ಜುಂಜುನ್‌ವಾಲಾ ಸೇರಿದಂತೆ ಹಲವು ಗಣ್ಯರು, ಶಿವಾಸ್ ಪರಿವಾರದ ಪ್ರಮುಖರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. 

ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿವಾರ್ತೆ ತಂಡ ಶ್ರೀ ಶಿವರಾಮ್ ಹಾಗೂ ಅವರ ತಂಡಕ್ಕೆ ಉತ್ತರೋತ್ತರ ಯಶಸ್ಸು ಸಿಗಲೆಂದು ಶುಭ ಹಾರೈಸಿ SALUTE ಮಾಡುತ್ತಿದೆ.

No comments:

Post a Comment