BhandaryVarthe Team

BhandaryVarthe Team
Bhandary Varthe Team

Monday 31 July 2017

ಮಂಗಳೂರಿನಲ್ಲಿ ಭಂಡಾರಿ ಸಮಾಜದಿಂದ ಆಟಿಡೊಂಜಿ ದಿನ


         ಮಂ  ಗಳೂರು ಭಂಡಾರಿ ಸಮಾಜ ಸಂಘ, ಭಂಡಾರಿ ಯುವ ವೇದಿಕೆ ಹಾಗೂ ಭಂಡಾರಿ ಸ್ವಯಂ ಸೇವಕ ಸಂಘ ಇದರ ನೇತೃತ್ವದಲ್ಲಿ ಮಂಗಳೂರಿನ ಕದ್ರಿ ಸುಮ ಸದನದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ಜರುಗಿತು. ಸಂಘದ ಅಧ್ಯಕ್ಷ ನಾಗೇಶ್.ಎಂ ಭಂಡಾರಿ ಅವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮವನ್ನು ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಕವಿತಾ ಸನಿಲ್ ಕಾರ್ಕಳದ ನಿಕಟಪೂರ್ವ ಶಾಸಕ. ಎಚ್ ಗೋಪಾಲ ಭಂಡಾರಿಯವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಮೇಯರ್ ಕವಿತಾ ಸನಿಲ್, ಆಟಿಡೊಂಜಿ ದಿನವನ್ನು ಯಾವ ಉದ್ದೇಶ ಇಟ್ಟುಕೊಂಡು ಆಯೋಜನೆ ಮಾಡಿದ್ದೀರೋ ಆ ನಿಮ್ಮ ಉದ್ದೇಶ ಈಡೇರಲಿ ಎಂದರು. ಆಟಿ ಆಚರಣೆ ಒಳ್ಳೆಯ ಕಾರ್ಯಕ್ರಮ. ಆಟಿಯ ಹೆಸರಿನಲ್ಲಿ ಜನರು ಸಮಾಜ ಸಂಘಟನೆಯತ್ತ ಮುಖ ಮಾಡಲು ಸಾಧ್ಯವಾಗುತ್ತದೆ ಎಂದು ಮಾಜಿ ಶಾಸಕ ಗೋಪಾಲ ಭಂಡಾರಿಯವರು ತಿಳಿಸಿದರು. ಇಂದಿನ ಮಕ್ಕಳು ಆಟಿಯ ಬದಲು ಐಟಿ ಬಿಟಿ ಯತ್ತ ಮುಖ ಮಾಡಿದ್ದಾರೆ ಎಂಬ ಪ್ರಾಸದ ಮೂಲಕ ಚಲನಚಿತ್ರ ನಟ ಹಾಗೂ ಸಾಹಿತಿ ಶೇಖರ ಭಂಡಾರಿ ಕಾರ್ಕಳ ಜನರನ್ನು ರಂಜಿಸಿದರು. ಆಟಿದ ಮದಿಪು ಬಗ್ಗೆ ಕಚ್ಚೂರು ವಾಣಿ ಮಾಸ ಪತ್ರಿಕೆಯ ಮಾಜಿ ಸಂಪಾದಕ ಎ .ಕೆ. ಭಂಡಾರಿ ಮಾತನಾಡಿದರು. ಮಂಗಳೂರಿನಲ್ಲಿ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಿನಲ್ಲಿ ಭಂಡಾರಿ ಯುವ ಸಂಗಮ ಎಂಬ ಕಾರ್ಯಕ್ರಮವನ್ನು  ನಡೆಸಲಾಗುವುದು ಎಂದು ಭಂಡಾರಿ ಯುವ ವೇದಿಕೆಯ ಅಧ್ಯಕ್ಷ ಸತ್ಯರಂಜನ್ ಭಂಡಾರಿ ಕುತ್ತೆತ್ತೂರು ಹೇಳಿದರು. ಪಡುಬಿದ್ರೆ ಭಂಡಾರಿ ಸಮಾಜ ಸಂಘದ ಅಧ್ಯಕ್ಷ ಸಂದೀಪ್ ಪಲಿಮಾರು, ಭಂಡಾರಿ ಮಹಾಮಂಡಲ ಅಧ್ಯಕ್ಷ ಸದಾಶಿವ ಭಂಡಾರಿ ಸಕಲೇಶಪುರ ಆಟಿಯ ವಿಶೇಷತೆ ಬಗ್ಗೆ ಮಾತನಾಡಿದರು. ವೇದಿಕೆಯಲ್ಲಿ ಸುರತ್ಕಲ್ ಭಂಡಾರಿ ಸಮಾಜ ಸಂಘದ ಅಧ್ಯಕ್ಷ ಪ್ರಮೋದ್.ಎಸ್ ಭಂಡಾರಿ, ಬೆಳ್ತಂಗಡಿ ಭಂಡಾರಿ ಸಮಾಜ ಸಂಘದ ಅಧ್ಯಕ್ಷ ಪೂವಪ್ಪ ಭಂಡಾರಿ, ಕಚ್ಚೂರು  ಶ್ರೀ  ನಾಗೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರರಾದ ವಿಶ್ವನಾಥ ಭಂಡಾರಿ ಕಾಡಬೆಟ್ಟು, ಕೋಶಾಧಿಕಾರಿ ಸಂಜೀವ ಭಂಡಾರಿ, ಸಹ ಕೋಶಾಧಿಕಾರಿ ವಾರಿಜಾ ವಾಸುದೇವ ಭಂಡಾರಿ, ಟ್ರಸ್ಟಿ ಅಶೋಕ್ ಭಂಡಾರಿ ಕುತ್ಪಾಡಿ, ಉಡುಪಿ ಭಂಡಾರಿ ಸಮಾಜ ಸಂಘದ ಅಧ್ಯಕ್ಷ ಹರೀಶ್ ರಾಮ್ ಭಂಡಾರಿ ಸ್ವಯಂ ಸೇವಕ ಸಂಘದ ಅಧ್ಯಕ್ಷೆ ವಾಣಿ. ಎಸ್ ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಬಳಿಕ ಸಮಾಜ ಬಾಂಧವರು ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಜನರನ್ನು ರಂಜಿಸಿದರು. ಅರುವತ್ತು ಬಗೆಯ ವಿವಿಧ ತಿಂಡಿ ತಿನಿಸುಗಳು, ಸೊಪ್ಪು, ಪಲ್ಯಗಳು ಕಾರ್ಯಕ್ರಮದ ವಿಶೇಷತೆಗಳಲ್ಲೊಂದಾಗಿತ್ತು.

ವರದಿ: ಕಿಶೊರ್ ಕುಮಾರ್ ಸೊರ್ನಾಡು
  Aatodonji dina at Bhandary Samaja Sangha Mangalore

                 Aatidonji dina program was jointly organized by Mangaluru Bhandary samaja sangha, Bhandary Yuva Vedike and Bhandary Swayamsevaka Sangh at  Suma Sadana hall Kadri in Mangaluru on 30th July 2017.The program was presided over by the Sangha president  Nagesh. M. Bhandary and was inaugurated by lighting the traditional lamp by the honorable mayor of Mangaluru City Corporation Mrs. Kavita Sanil and former MLA from Karkala Shri Gopal Bhandary Hebri. Speaking on the occasion, Mayor Kavita Sanil said, "Let your intention to organize Aatidonji dina be fulfilled." "Aati is a good celebration. People join in the social organisations in the name of Aati celebration" Gopala Bhandary Hebri addressed the gathering & advised to be United in the community. Film actor and writer Shekhar Bhandary Karkala entertained the crowd by his timely chutuku deliveries & also said that today's children enjoy IT & BT instead of Aati. Former editor of the Kachuru Vani monthly newspaper, A.K. Bhandary spoke about Aatida madipu. Bhandary Yuva Vedike President Satyarajan Bhandary Kuthethuru announced that Bhandary yuva sangama will be held in Mangaluru during October or November of this year. Sadashiva Sakleshapura, President of Bhandary Mahamandala and president of padubidri bhandary samaja sangha, Sandeep Palimar spoke few words about specialities of Aati.  President of Suratkal Bhandary samaja sangha, Pramod Bhandary, President of Beltangady Bhandary samaja sangh, Poovappa Bhandary, Kachuru sri Nageshwara temple former managing trustee Vishwanath Bhandary Kadabettu, treasurer Sanjeeva Bhandary Bannanje, co-treasurer Varija Vasudeva Bhandary Kappettu, trustee Ashok Bhandary Kutpady, President of Udupi Bhandary Samaj Sangha, Harishram Bhandary, president of Swayamsevaka sangha Vani.S.Bhandary were present on the dias. After the stage program there was entertainment & cultural programs by the community members. Sixty two varieties of traditional aati cuisines, lentils, and salads were offered for lunch.  Specialties of the program were delicious food.

Report: Kishore Kumar Sornadu
Translation: Shruthika Bhandary, Bangalore

2 comments:

  1. "ಆಟಿಡೊಂಜಿ "ಕಾರ್ಯಕ್ರಮ ಭಂಡಾರಿ ಸಮುದಾಯದ ವಾರ್ಷಿಕ ಸ್ನೇಹ ಸಮ್ಮಿಲನವಾಗಿ, ನಿರಂತರ ಸಾಗಲಿ.

    ReplyDelete