BhandaryVarthe Team

BhandaryVarthe Team
Bhandary Varthe Team

Sunday, 30 July 2017

ಮುಂಬೈ ಭಂಡಾರಿ ಸೇವಾ ಸಮಿತಿಯ 64 ನೇ ವಾರ್ಷಿಕ ಮಹಾಸಭೆ



          ಭಂಡಾರಿ ಸೇವಾ ಸಮಿತಿ ಮುಂಬೈ ಇದರ 64ನೇ ವಾರ್ಷಿಕ ಮಹಾಸಭೆ ಜುಲೈ 23ರಂದು ಸಯಾನ್ ಪಶ್ಚಿಮದ ಸ್ವಾಮಿ ನಿತ್ಯಾನಂದ ಸಭಾಗೃಹದಲ್ಲಿ ನಡೆಯಿತು. ದೀಪ ಪ್ರಜ್ವಲಿಸಿ ಕುಲದೇವರಾದ ಕಚ್ಚೂರು ಶ್ರೀ ನಾಗೇಶ್ವರ ದೇವರಿಗೆ ಪೂಜೆ ಸಲ್ಲಿಸಿ ಕಾರ್ಯಾಕ್ರಮ ಉದ್ಘಾಟಿಸಲಾಯ್ತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಭಂಡಾರಿ ಸೇವಾ ಸಮಿತಿ ಮುಂಬಯಿ ಇದರ ಅಧ್ಯಕ್ಷ ನ್ಯಾಯವಾದಿ ಶೇಖರ್ ಎಸ್ ಭಂಡಾರಿ ಭಾಂಡೂಪ್ ಮಾತನಾಡಿ , ಸದಸ್ಯರ ಸಕ್ರಿಯ ಸೇವೆಯಿಂದ ಸಮಾಜದ ಸುಭದ್ರ ಸಂಘಟನೆ ಸಾಧ್ಯವಾಗುವುದು ಎಂದರು. ಸಭೆಯ ಆದಿಯಲ್ಲಿ ಅಗಲಿದ ಸರ್ವ ಭಂಡಾರಿ ಬಂಧುಗಳು ಹಾಗೂ ಗಣ್ಯರಿಗೆ ಶ್ರದ್ಧಾಂಜಲಿ ಕೋರಲಾಯ್ತು. ಸಭಿಕರ ಪರವಾಗಿ ರಂಜಿತ್ ಎಸ್. ಭಂಡಾರಿ, ರಮೇಶ್ ಭಂಡಾರಿ ಪೊವಾಯಿ ಸಲಹೆ ಸೂಚನೆಗಳನ್ನಿತ್ತರು. ಜತೆ ಕಾರ್ಯದರ್ಶಿ ಪುರುಷೋತ್ತಮ ಜಿ. ಭಂಡಾರಿ ಪ್ರಾಸ್ತಾವಿಕ ಭಾಷಣಗೈದರು. ಜೊತೆ ಕಾರ್ಯದರ್ಶಿ ಶಶಿಧರ್ ಡಿ.ಭಂಡಾರಿ ಗತ ವಾರ್ಷಿಕ ಕಾರ್ಯಚಟುವಟಿಕೆಗಳ ಮಾಹಿತಿಯನ್ನಿತ್ತರು. ಗೌರವ ಕೋಶಾಧಿಕಾರಿ ಕರುಣಾಕರ ಜಿ.ಭಂಡಾರಿ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಪ್ರಧಾನ ಕಾರ್ಯದರ್ಶಿ ವಿಜಯ ಆರ್. ಭಂಡಾರಿ ಪ್ರಾರ್ಥನೆಗೈದು ವಂದಿಸಿದರು. ಮಹಾಸಭೆಯ ಬಳಿಕ ಪದಾಧಿಕಾರಿಗಳು ಸಮಿತಿಯ ಸದಸ್ಯರ ಮಕ್ಕಳಿಗೆ ಶೈಕ್ಷಣಿಕ ವಿದ್ಯಾರ್ಥಿ ವೇತನ ನೀಡಿ ಶುಭ ಹಾರೈಸಿದರು. ಸೇವಾಸಮಿತಿಯ ಉಪಾಧ್ಯಕ್ಷರಾದ ನ್ಯಾಯವಾದಿ ರಾಮಣ್ಣ ಎಂ.ಭಂಡಾರಿ, ಪ್ರಭಾಕರ ಪಿ. ಭಂಡಾರಿ, ಸಲಹಾ ಸಮಿತಿಯ ಕಾರ್ಯಾಧ್ಯಕ್ಷ ನ್ಯಾಯವಾದಿ ಸುಂದರ್ ಜಿ.ಭಂಡಾರಿ, ಮಹಿಳಾ ವಿಭಾಗಾಧ್ಯಕ್ಷೆ ಶೋಭಾ ಸುರೇಶ್ ಭಂಡಾರಿ, ಉಪಕಾರ್ಯಾಧ್ಯಕ್ಷೆ ಪಲ್ಲವಿ ರಂಜಿತ್ ಭಂಡಾರಿ , ಕಾರ್ಯದರ್ಶಿ ರೇಖಾ . ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು



The 64th Annual General Meeting of the Mumbai Bhandary Seva Samiti




           Bhandary Seva Samiti held its 64th Annual General Assembly on July 23 at the Swami Nityananda Hall in the Sion west. The function was inaugurated by lighting up the lamp and worshiping the Lord Kachuru Sri Nageshwara. Chaired by the Sangha president, Shekhar S Bhandary, Bhandup said, the progressive service of the community would be possible by the active service of the members. At the beginning of the meeting,  Bhandary community members and dignitaries paid tribute to the bereaved members of the community. Ranjith s Bhandary, Ramesh Bhandary Powai gave few suggestions.

Secretary Purushotham G. Bhandary gave an introductory speech. Secretary Shashidhar D. Bhandary report of the past year's activities. Honorary treasurer Karunakara G Bhandary presented the annual accounting. General Secretary Vijaya R. Bhandary gave vote of thanks. After the annual general body meeting,  academic scholarships were distributed to the children of the community members. Advocate Ramanna M. Bhandary, Vice President of Seva Samiti, Prabhakar P. Bhandary, Advisory Committee Chairman, Lawyer Sundar G Bhandary, Women's wing President Shobha Suresh Bhandary, Vice President Pallavi Ranjit Bhandary, Secretary Rekha A. Bhandary and others were present.  


Translation: Divya ujire

1 comment:

  1. ಮುಂಬಯಿ ಭಂಡಾರಿ ಸೇವಾ ಸಮಿತಿಗೆ ಶುಭಾಶಯಗಳು.

    ReplyDelete