ಮರೆಯಾಗುವ ಮುನ್ನ
ನಿನ್ನ ನೆನಪೆಂಬ ದಾರಿ ಕೊನೆಯಾಗುತ್ತಿದೆ
ನಿನ್ನ ನೆನಪಲ್ಲೇ ಬದುಕೋಣವೆಂದು ಮನಸ್ಸು ಹೇಳುತ್ತಿದೆ
ನನ್ನ ಮನದಿ ಕಟ್ಟಿದ ಆಸೆ ಆಕಾಂಕ್ಷೆಗೆ ಬೆಂಕಿ ಇಟ್ಟಾಗಿದೆ
ನಿನ್ನ ಜೊತೆ ಕಳೆದ ದಿನಗಳೇ ಮನದಿ ಮರುಕಳಿಸುತ್ತಿದೆ
ಪ್ರೀತಿಯ ಮಂಪರಿನಲ್ಲಿ ಹುಚ್ಚನಾಗುವೆನೆ ಎಂದು ತಿಳಿಯದಾಗಿದೆ
ಈ ಹುಚ್ಚು ಪ್ರೀತಿಯಲಿ
ಬೆಂದು ಹೋಗಿರುವೆನು ನಾನು
ಮರೆಯಾಗುವ ಮುನ್ನ ಯೋಚಿಸು ನೀನು
ಪ್ರೀತಿಯ ಸುತ್ತ
ಯಾಕಾದರೂ ಬಂದಿರುವೆ ನನ್ನ ಬಾಳಲ್ಲಿ,
ಪ್ರೀತಿಯೆಂಬ ದೀಪ ಹಿಡಿದು ಬೆಳಕ ಚೆಲ್ಲುತಲಿ,
ಯಾಕಾದರೂ ನನ್ನ ಬದುಕಲ್ಲಿ ಹೊಸ ಆಸೆಗೆ ಸ್ಪೂರ್ತಿಯಾದೆ,
ನಿನಗಾಗಿ ನಾನು ಎಂಬ ಬೀಜ ಬಿತ್ತಿ, ಮೊಳಕೆಯೊಡೆಸಿ
ಹೆಮ್ಮರವಾಗುವಂತೆ ಮಾಡಿದೆ,
ನಿನ್ನ ಮಾತಲ್ಲಿ ಮಾತಾಗಿದ್ದೆ ನಾನು,
ನಿನ್ನ ಉಸಿರಲ್ಲಿ ಉಸಿರಾಗಿದ್ದೆ ನಾನು,
ಆದರೆ ಇಂದೇಕೋ ನಿನಗೆ ಬೇಡವಾದೆನೇ ನಾನು.
✍🏻 ನಿತಿನ್ ಭಂಡಾರಿ |
Super ..
ReplyDeleteಮೊದಲ ಪ್ರೀತಿಯ ಕೆಲಸವೇ
ReplyDeleteಅಷ್ಟು...
ಹೃದಯದಲ್ಲಿ ಪ್ರೀತಿದೀಪ
ಅಂಟಿಸುವಷ್ಟು.....!!!
Nice bro
ReplyDelete