ರಾಜಕೀಯವೆಂದರೆ ಒಂದು ದೇಶದ ಆಡಳಿತ,
ಅಭಿವೃದ್ಧಿಯನ್ನು ವಿಮರ್ಶಿಸುವ ರಂಗ ಎನ್ನಬಹುದು. ರಾಜಕೀಯವನ್ನು ನಾವೀಗ ಸುಲಭವಾಗಿ ತಿಳಿಯಬಹುದು.
ಆಧುನಿಕತೆಯ ಬಿರುಗಾಳಿ ಬೀಸುವ ಇಂದಿನ ಐಟಿ-ಬಿಟಿ ಯುಗದಲ್ಲಿ ಎಲ್ಲವೂ ಕ್ಷಣಾರ್ಧದಲ್ಲಿ
ಸಿಗುತ್ತದೆ. ಜಾಹಿರಾತು, ಮಾಧ್ಯಮಗಳಿಂದ ರಾಜಕೀಯದ ವಿವಿಧ ಸ್ವರೂಪವನ್ನು ತಿಳಿಯಬಹುದು.
ರಾಜಕೀಯವೆಂಬುದು ಕೇವಲ ಆಧುನಿಕ
ಯುಗದಲ್ಲಿ ಮಾತ್ರ ಇದ್ದಂತಹದ್ದಲ್ಲ. ಅರಿಸ್ಟ್ರಾಟಲ್ ನನ್ನು ರಾಜಕೀಯದ ಪಿತಾಮಹ ಎನ್ನಲು
ಕಾರಣವೇನೆಂದರೆ ಅವನು ರಾಜಕೀಯದ ಬಗ್ಗೆ ಬರೆದಿರುವ ಪುಸ್ತಕ. ಹೀಗೆ ಪ್ಲೇಟೋ, ಸಾಕ್ರಟಿಸ್
ಮೊದಲಾದವರೆಲ್ಲ ರಾಜಕೀಯ ಚಿಂತಕರೆನಿಸಿಕೊಂಡವರು. ರಾಜಕೀಯದಲ್ಲಿ ಅದರಲ್ಲೂ ಪ್ರಜಾಪ್ರಭುತ್ವ
ಮಾದರಿಯ ಸರ್ಕಾರವನ್ನು ರಚಿಸಿದ್ದರು. ಸಂವಿಧಾನವನ್ನು ಕೂಡ ರಚನೆ ಮಾಡಿದ್ದರು. ಡಾ| ಬಾಬು
ರಾಜೇಂದ್ರ ಪ್ರಸಾದ್ರವರು ಸಂವಿಧಾನ ಸಮಿತಿಯ ಅಧ್ಯಕ್ಷರಾಗಿದ್ದರು ಮತ್ತು ಡಾ| ಬಿ.ಆರ್.ಅಂಬೇಡ್ಕರ್
ರವರು ಕರಡು ಸಮಿತಿಯ ಅಧ್ಯಕ್ಷರಾಗಿದ್ದರು. ಭಾರತದ ಪ್ರಥಮ ಪ್ರಧಾನಿಯಾದ ಜವಾಹರಲಾಲ್ ನೆಹರೂರವರು
ಭಾರತೀಯ ಕಾಂಗ್ರೆಸ್ ಪಕ್ಷದವರಾಗಿದ್ದರು. ನಂತರ ಬಂದ ರಾಜಕೀಯವನ್ನು ಇಂದಿನ ಕವಿಗಳು ಈ ರೀತಿಯಾಗಿ ವರ್ಣಿಸಿದ್ದಾರೆ. ರ
ಎಂದರೆ ರಾವಣ, ಜ ಎಂದರೆ ಜರಾಸಂಧ, ಕಿ ಎಂದರೆ ಕೀಚಕ, ಯ ಎಂದರೆ ಯಮನೆಂದು. ಇದನ್ನೇ ನಾನು ಈ
ರೀತಿಯಾಗಿ ಹೇಳಲು ಇಚ್ಛಿಸುತ್ತೇನೆ. ರಾಜಕೀಯವೆಂದರೆ ರಾಜನಿಲ್ಲದ ಆಡಳಿತ, ಜನರಿಲ್ಲದೆ ಇರುವ ಸಂವಿಧಾನ,
ಕಿರುಚಾಡುತ್ತಿರುವ ಶಾಸಕರು, ಯಮನಂತೆ ಇರುವ ಪ್ರತಿನಿಧಿಗಳು ಎಂದು. ಇಂದಿನ ರಾಜಕೀಯ ಪರಿಸ್ಥಿತಿಯು
ಇದೇ ರೀತಿ ಆಗಿದೆ. ರಾವಣ, ಕೀಚಕ, ಜರಾಸಂಧ, ಯಮ ಇವರೇ ತುಂಬಿಕೊಂಡುಬಿಟ್ಟಿದ್ದಾರೆ..
ಭ್ರಷ್ಟಾಚಾರ ಎನ್ನುವುದು ರಾಜಕೀಯದಲ್ಲಿ
ಸಾಮಾನ್ಯವಾಗಿಬಿಟ್ಟಿದೆ ಭರವಸೆಗಳನ್ನು ಕೊಟ್ಟು ಅಧಿಕಾರಕ್ಕೆ ಬರುವ ರಾಜಕಾರಣಿಗಳು ಜನರನ್ನ ಮರೆತು
ಹೆಣ್ಣು,ಹೊನ್ನು,ಮಣ್ಣಿನ ಆಸೆಗೆ ಚುನಾವಣೆಗೇ ಮುನ್ನ ಇಟ್ಟುಕೊಂಡಿದ್ದ ಆದರ್ಶಗಳನ್ನು ದೂರಮಾಡಿ
ಆಡಂಬರದ ಜೀವನಕ್ಕೆ ಜೋತುಬೀಳುತ್ತಾರೆ. ಲಂಚವನ್ನು ನೀಡದೆ ಈಗ ಯಾವುದೇ ಕೆಲಸ ಕಾರ್ಯಗಳು
ಸುಸೂತ್ರವಾಗಿ ನಡೆಯಲಾರದು ಎನ್ನುವುದು ಬೇಸರದ ಸಂಗತಿ.
ಉಪಸಂಹಾರ
ರಾಜಕೀಯವೆನ್ನುವುದು ಶಕ್ತಿ ಇದ್ದ ಹಾಗೆ.ಯುಕ್ತಿ ಇರಬೇಕು,ಆದರೆ ಕುಯುಕ್ತಿ
ಇರಬಾರದು.ಪ್ರಜೆಗಳನ್ನು ಮಕ್ಕಳ ಹಾಗೇ ನೋಡಿಕೊಳ್ಳುವವನೇ ನಿಜವಾದ ನಾಯಕ, ಅಂತಹ ನಾಯಕನನ್ನು
ಪ್ರಜೆಗಳಾದ ನಾವು ಆರಿಸಬೇಕು.ಆಗ ಮಾತ್ರ ಸುಸ್ಥಿರ ಸಂವಿಧಾನ,ಸಮಾನ ಆಡಳಿತವನ್ನು ನೀಡಲು ಸಾಧ್ಯ.
✍ ನಾಗಶ್ರೀ ಭಂಡಾರಿ, ಮೂಡುಬಿದಿರೆ |
ರಾಜಕೀಯ ಮತ್ತು ಭ್ರಷ್ಟಾಚಾರ ಒಂದೇ ನಾಣ್ಯದ ಎರಡು ಮುಖಗಳು ಅನ್ನೋದನ್ನ ಸೂಕ್ಷ್ಮವಾಗಿ ವಿವರಿಸಿದ್ದೀರಿ...ಚೆನ್ನಾಗಿದೆ ಬರಹ.
ReplyDelete