BhandaryVarthe Team

BhandaryVarthe Team
Bhandary Varthe Team

Monday 10 July 2017

ಹಿರಿಯ ಆರ್ ಎಸ್ ಎಸ್ ಮುಖಂಡ ರಾಮಣ್ಣ ಭಂಡಾರಿ ಬೊಟ್ಯಾಡಿ ನಿಧನ

ಭಂಡಾರಿವಾರ್ತೆ
ಪುತ್ತೂರು: ಹಿರಿಯ ಅರ್ ಎಸ್ ಎಸ್ ಮುಖಂಡ ರಾಮಣ್ಣ ಭಂಡಾರಿ ಬೊಟ್ಯಾಡಿ(75)ಅಲ್ಪಕಾಲದ ಆಸೌಖ್ಯದಿಂದ ,ಜು.3ರಂದು ಮಂಗಳೂರು ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾದರು. ಸರ್ವೆ ಗ್ರಾಮದ ಬೊಟ್ಯಾಡಿಯಲ್ಲಿ ವಾಸವಾಗಿದ್ದ ರಾಮಣ್ಣ ಭಂಡಾರಿಯವರು ಸಣ್ಣ ಪ್ರಾಯದಲ್ಲೇ ಆರ್ ಎಸ್ ಎಸ್ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಂಘದಲ್ಲಿ ವಿವಿಧ ಜವಾಬ್ಧಾರಿ ನಿಭಾಯಿಸಿದ್ದಾರು.
           ಗ್ರಾಮಾಂತರ ಪ್ರದೇಶದಲ್ಲಿ ಸಂಘವನ್ನು ಬೆಳೆಸುವಲ್ಲಿ ಮತ್ತು ಬಿಜೆಪಿ ಪಕ್ಷವನ್ನು ಸಂಘಟಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.ವೃತಿಯಲ್ಲಿ ಕೃಷಿಕರಾಗಿದ್ದ ಅವರು ಉತ್ತಮ ಭಾಷಣಕಾರರಾಗಿದ್ದರು.ಭಕ್ತಕೋಡಿ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷರಾಗಿ, ಮುಂಡೂರು ಸಿಎ ಬ್ಯಾಂಕ್ ಸದಸ್ಯರಾಗಿ ಹಾಗೂ ಇನ್ನಿತರ ಹಲವು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದ ಅವರು ಮುಂಡೂರು ಗ್ರಾಮ ಪಂಚಾಯತಿ ಚುನಾವಣೆಯಲ್ಲಿಯೂ ಸ್ಪರ್ಧಿಸಿದ್ದರು. ಸಾಮಾಜಿಕ ಹಾಗೂ ಧಾರ್ಮಿಕವಾಗಿಯೂ ತನ್ನನ್ನು ಹಲವು ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು.ಮೃತರು ಪತ್ನಿ,ಪುತ್ರರಾದ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡರ ಆಪ್ತ ಭದ್ರತಾ ಆಧಿಕಾರಿ ಆಗಿರುವ ಚೇತನ್.ಬಿಜೆಪಿ ಯುವಮೋರ್ಚಾ ರಾಜ್ಯ ಮಾಜಿ ಉಪಾಧ್ಯಕ್ಷರು,. ಜಿಲ್ಲಾ ಕಾರ್ಯಕಾರಿಣಿ  ಸದಸ್ಯ ಕಿಶೋರ್ ಕುಮಾರ್,ಶ್ರೀರಾಂ ಫೈನಾನ್ಸ್ ಉದ್ಯೋಗಿ ಕಿರಣ್ ಹಾಗೂ ಪುತ್ರಿಯರಾದ ಸೌಮ್ಯ ಹಾಗೂ ರಚನ ಅವರನ್ನು ಅಗಲಿದ್ದಾರೆ.
ಪೂಜ್ಯರ ಆತ್ಮಕ್ಕೆ ಭಗವಂತನು ಸದ್ಗತಿ ನೀಡಲೆಂದು ಭಂಡಾರಿ ವಾರ್ತೆಯು ಶಾಂತಿ ಕೋರುತ್ತದೆ
....................................................................

🏻ವೆಂಕಟೇಶ ಭಂಡಾರಿ, ಸಂಪಾದಕರು, ಭಂಡಾರಿ ವಾರ್ತೆ
.....................................................................
Senior RSS Leader RamannaBhandary passed away

BhandaryVarthe: Puttur: Senior RSS leader RamannaBhandaryBotyadi (75 years) resided at Botyadi village, died following brief illness on July 3rd at KMC Hospital in Mangalore.
At a young age, he was actively engaged in the organization of RSS and had many kind of responsibility in the Sangh.
He played a key role in developing  Sangh and BJP party furthermore in rural zone. He was an agriculturist and a good speaker. He was President of BhaktakodiSriramaBajanamandira,  member of Madnooru CA Bank & several other organizations. He also contested in the MadnooruGramaPanchayath Elections.  He was involved in the field of social and religious organizations.

He is survived by his wife, 2 sons and 2 daughters.
Elder son Mr Chethan is security officer of union Minister Mr D. V Sadananda Gowda.
Second son, Mr Kishor Kumar Vice President of BJP yuvamorcha, executive member of D. K district.
Youngest son Mr Kiran employee of Sriram finance and daughters Sowmya&Rachana.


Translation: 
Shruthi Bhandary Mangalore

1 comment: