BhandaryVarthe Team

BhandaryVarthe Team
Bhandary Varthe Team

Friday, 25 August 2017

ಸ್ವಾಗತ

ಬಾ ಗಣಪ ಬಾರೋ...
ಬಾ ಬೆನಕ ಬಾರೋ...
ಭಾದ್ರಪದ ಚೌತಿಯ ಬಂಧುವೇ ಬಾರೋ.||
ಒಂದನೆಯ ದಿನ ನಾ ವಂದಿಸುವೆ ಬಾರೋ.
ಒಂದು ವರವ ನೀ ನೀಡೆನಗೆ ಬಾರೋ.||
ಎರಡನೆಯ ದಿನ ನಾ ಎಡೆಯಿಡುವೆ ಬಾರೋ.
ಒಡಗೂಡಿ ಬಾಳುವ ವರವ ನೀ ತಾರೋ.||
ಮೂರನೆಯ ದಿನ ನಿನಗೆ ಮುಡಿಪಿಡುವೆ ಬಾರೋ.
ಮೂಜಗವನಾಳುವ ದೊರೆಯೆ ನೀ ಬಾರೋ.||
ನಾಲ್ಕನೆಯ ದಿನವೂ ನಾ ನಮಿಸುವೆನು ಬಾರೋ.
ನಾಮಾಮೃತವ ಜಪಿಸೊ ಭಾಗ್ಯ ನೀ ತಾರೋ.||
ಐದನೆಯ ದಿನ ನಾ ಕೈಮುಗಿವೆ ಬಾರೋ.
ಐಸಿರಿಯ ನೀ ನೀಡಿ ಹರಸೆನಗೆ ಬಾರೋ.||
ಆರನೆಯ ದಿನ ಹರಳೆ ಆರತಿಯು ಬಾರೋ.
ಆರದಿರುವ ಜ್ಞಾನ ಜ್ಯೋತಿಯನು ತಾರೋ.||
ಏಳನೆಯ ದಿನ ಎಳ್ಳುಬೆಲ್ಲದ ನೈವೇದ್ಯ ಬಾರೋ.
ಏಳೇಳು ಜನ್ಮಕೂ ಆರೋಗ್ಯ ಭಾಗ್ಯ ತಾರೋ.||
ಎಂಟನೆಯ ದಿನ ಬಾಳೆ ಮಂಟಪವು ಬಾರೋ.
ಎಂಟು ದಿಕ್ಕುಗಳಿಂದ ಅಷ್ಟೈಶ್ವರ್ಯ ತಾರೋ.||
ಒಂಬತ್ತನೆಯ ದಿನವೂ ಹಂಬಲಿಸುವೆನು ಬಾರೋ.
ಒಂದಾಗಿ ನವಧಾನ್ಯ ಸಿರಿಯ ನೀ ತಾರೋ.||
ಹತ್ತನೆಯ ದಿನ ತುಪ್ಪದಾರತಿಯು ಬಾರೋ.
ಉತ್ತು-ಬಿತ್ತುವ ಶಕ್ತಿಯನು ನನಗೆ ನೀ ತಾರೋ.||
ಹನ್ನೊಂದನೆಯ ದಿನ ಹಣ್ಣುಕಾಯಿಯ ಹರಕೆ ಬಾರೋ.
ಹಿಂದೆಂದೂ ಕಾಣದ ರೂಪ ನೀ ತೋರೋ.||

ಬಾ ಗಣಪ ಬಾರೋ...
ಬಾ ಬೆನಕ ಬಾರೋ...
ಭಕ್ತ-ಭಾಂದವರ ಕೈ ಹಿಡಿದು ನೆಡಸು ಬಾರೋ.....||

✍ ಭಾಸ್ಕರ್ ಭಂಡಾರಿ. ಸಿ.ಆರ್
ಶಿರಾಳಕೊಪ್ಪ

No comments:

Post a Comment