BhandaryVarthe Team

BhandaryVarthe Team
Bhandary Varthe Team

Monday, 14 August 2017

ಮರೆತೆಯಾ ನಮ್ಮನ್ನ


ತೊಟ್ಟಿಲು ತೂಗಿದ ಕೈಗಳು ಮರೆತು ಹೋದವಾ ನಿನಗೆ?
ಮನದೊಳಗೆ ಜೋಕಾಲಿ ಆಡಿಸುವವಳು ಬಂದಾಗ||
ನೀ ಅತ್ತಾಗ ಆಟಿಕೆ ಕೊಡಿಸಿ ಕಣ್ಣೀರು ಒರೆಸಿದ ಹೃದಯಗಳು ಮರೆತುಹೋದವಾ ನಿನಗೆ?
ಪ್ರೇಮದ ಆಟ ಆಡುವವಳು ಬಂದಾಗ||

ಹೊಟ್ಟೆಗೆ ಬಟ್ಟೆಕಟ್ಟಿ ನಿನ್ನ ಹೊಟ್ಟೆತುಂಬಿಸಿದ ಹಸಿದ ಹೊಟ್ಟೆಗಳು ಮರೆತುಹೋದವಾ ನಿನಗೆ?
ನಿನ್ನ ತಟ್ಟೆಯಲ್ಲಿನ ಮೃಷ್ಟಾನ್ನ ಭೋಜನವ ನೋಡುವಾಗ||
ನಿನ್ನ ಉತ್ತಮ ಭವಿಷ್ಯಕ್ಕೆ ಮನೆ ಮಾರಿದವರ ನೆನಪಾಗಲ್ಲಿಲವೇ ನಿನಗೆ?
ನೀ ನಮ್ಮನ್ನು ಮನೆಯಿಂದ ಹೊರಹಾಕಿದಾಗ||

ನಿನ್ನ ಮುದ್ದಿಸಿ ಆಡಿಸಿದವರು ನೆನಪಾಗಲಿಲ್ಲವೇ ನಿನಗೆ ?
ನಿನ್ನ ಮಗನ ನೀನು ಮುದ್ದು ಮಾಡುವಾಗ ||
ನಾವು ಸತ್ತರೆ ನಮ್ಮ ಅಸ್ಥಿಯ ಮರೆಯದಿರು ಮಗಾ
ನಾವು ಮಾಡಿಟ್ಟ ಆಸ್ತಿಯ ನೆನಪಾಗಿಯಾದರು!!


✍:ದೀಪಕ್ ಭಂಡಾರಿ ಮುಚ್ಚೂರು

1 comment: