ತಂತ್ರಜ್ಞಾನ ಮನುಷ್ಯ ಜೀವನದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದೆ. ಯಾಂತ್ರಿಕರಣದತ್ತ ದಾಪುಗಾಲಿಟ್ಟ ಬದುಕು "ಸರ್ವಂ ತಂತ್ರಜ್ಞಾನ ಮಯಂ" ಅನ್ನುವಷ್ಟರ ಮಟ್ಟಿಗೆ ಬದಲಾಗಿದೆ. ಪರಿವರ್ತನೆ ಜಗದ ನಿಯಮ ಅನ್ನೋ ಹಾಗೆ ಆ ಬದಲಾವಣೆ ಕೇವಲ ಐಷಾರಾಮಿಯಾಗದೆ ದಿನನಿತ್ಯದ ಅವಶ್ಯಕತೆಯಾಗಿ ಮಾರ್ಪಾಡು ಹೊಂದಿದೆ. ಹಾಗದರೆ ತಂತ್ರಜ್ಞಾನದ ಸರಿಯಾದ ಬಳಕೆ ಹಾಗು ಸಮಾಜಕ್ಕೆ ಅದರ ಉಪಯುಕ್ತತೆ ಹಾಗು ಅದರ ಪರಿಣಾಮ ತಿಳಿಯೋಣ.
ಯಂತ್ರಗಳ ಅವಿಷ್ಕಾರದಲ್ಲಿ ಕಂಪ್ಯೂಟರ್ ಹಾಗು ಮೊಬೈಲ್ ಸಂಶೋಧನೆ ಪ್ರಾಯಶಃ ಅತ್ಯುತ್ತಮವಾದದ್ದು ಅನ್ನೊದರಲ್ಲಿ ಸಂಶಯವಿಲ್ಲ.. ಕೇವಲ ಒಂದಷ್ಟು ಬಳಕೆಗೆ ಮಾತ್ರ ಕಂಡುಹಿಡಿದ ಕಂಪ್ಯೂಟರ್ ಹಾಗು ಒಬ್ಬರಿಂದ ಇನ್ನೊಬ್ಬರ ಜೊತೆ ಮಾತನಾಡಲು ಅವಿಷ್ಕರಿಸಿದ ಫೋನ್ ಮುಂದೇ ಈ ಮಟ್ಟದಲ್ಲಿ ನಿತ್ಯ ಬದುಕಿನ ಅಂಗವಾಗಬಲ್ಲದು ಅನ್ನೊ ಪರಿಕಲ್ಪನೆ ಕೂಡ ಯಾರಿಗು ಇರಲಿಲ್ಲ.
ಕಣ್ಣು ಮುಚ್ಚಿ ಯಾವ ಧ್ಯಾನ ಹಾಗು ತಪಸ್ಸು ಮಾಡದೇ ಕುಳಿತಲ್ಲೇ ತನ್ನ ಕೈಯಲ್ಲಿ ಇರೊ ಸ್ಮಾರ್ಟ್ ಮೊಬೈಲ್ ಹಿಡಿದು ತನಗೆ ಬೇಕಾದ ಹೆಚ್ಚಿನ ಕೆಲಸವನ್ನು ತಾನು ಕ್ಷಣ ಮಾತ್ರದಲ್ಲಿ ಮಾಡಬಹುದು. ಒಬ್ಬ ವ್ಯಕ್ತಿಯ ಖಾತೆಗೆ ಹಣ ವರ್ಗಾವಣೆ, ಬಸ್, ರೈಲ್, ವಿಮಾನ , ಟಿಕೆಟ್ ಕಾಯ್ದಿರುಸುವುದು, ದಿನ ನಿತ್ಯದ ವಸ್ತುಗಳ ಖರೀದಿ, ದಿನ ನಿತ್ಯ ನಡೆಯೋ ಘಟನೆಗಳ ಸುದ್ದಿ , ತನಗೆ ಬೇಕಾದ ಪುಸ್ತಕ ಓದುವುದು, ಯಾವುದೇ ವಿಷಯಗಳ ಬಗ್ಗೆ ಮಾಹಿತಿ.... ಒಂದೇ ಎರಡೇ ಪಟ್ಟಿ ಮುಗಿಯದಷ್ಟು ಕೆಲಸಗಳನ್ನು ಅಂತರ್ಜಾಲ ಅನ್ನೊ ವ್ಯವಸ್ಥೆ ಮುಖೇನ ಮಾಡಬಹುದು.
ಈ ಅಂತರ್ಜಾಲದ ಶಕ್ತಿಯೇ ಅದು. ಹಾಗಿದಲ್ಲಿ ಇದು ನಮ್ಮ ಅವಶ್ಯಕತೆ. ಕಾರಣವಿಷ್ಟೆ ಬದುಕು ಯಾಂತ್ರಿಕವಾದಷ್ಟು ಸಮಯದ ಅಭಾವ ಮನುಷ್ಯನನ್ನು ಕಾಡುತ್ತಿದೆ. ಹೆಚ್ಚುತ್ತಿರುವ ಸ್ಪರ್ಧೆ, ವ್ಯವಹಾರ ತನ್ನ ಊರಿಗಾಗಲಿ ಅಥವಾ ದೇಶಕ್ಕಾಗಲಿ ಸೀಮಿತವಾಗಿರದೆ ಪ್ರಪಂಚದ ಮೂಲೆ ಮೂಲೆಗು ಪಸರಿಸಿದೆ.. ಯಾವುದೇ ದೇಶದ ವ್ಯಕ್ತಿಯ ಜೊತೆ ಮಾತನಾಡಬಹುದು , ವಸ್ತುಗಳನ್ನು ಖರೀದಿಸಬಹುದು ಹಾಗು ಸಂಭಂದ ಬೆಳೆಸಬಹುದು.ಇಂಥಹ ಸ್ಪರ್ಧಾತ್ಮಕ ಜಗತ್ತಿನಲ್ಲಿ ತನ್ನ ಇರುವಿಕೆಯನ್ನು ಗಟ್ಟಿಪಡಿಸಬೇಕಾದರೆ ಅಂತರ್ಜಾಲದಂತಹ ತಂತ್ರಜ್ಞಾನದ ಮೊರೆ ಹೋಗಲೇಬೇಕು. ಈ ಒಟ್ಟು ವ್ಯವಸ್ತೆಯನ್ನು ನಾವು ಸರಳವಾಗಿ ಡಿಜಿಟಲೀಕರಣ ಎಂದು ಕರೆಯುತ್ತೇವೆ.
ಈಗಾಗಲೇ ಹೇಳಿದಂತೆ ನಾವು ಕುಳಿತಲ್ಲೇ ಯಾವ ಶ್ರಮ ಪಡದೆ ಸಮಯ ವ್ಯರ್ಥಗೈಯದೆ ಅಂತರ್ಜಾಲ ಬಳಕೆ ಮೂಲಕ ನಿತ್ಯ ಅವಶ್ಯಕ ಕೆಲಸ ಮಾಡೊ ನಾವು ನಮ್ಮ ಸಮಾಜದ ಬೆಳವಣಿಗೆ, ನಮಗೆ ಬೇಕಾದ ನಮ್ಮ ಸಮಾಜದ ವಧು ವರರ ಮಾಹಿತಿ ಉದ್ಯೊಗ ಮಾಹಿತಿ ನಮ್ಮ ಪ್ರತಿಭೆಗಳ ಕಾರ್ಯಕ್ರಮ ಹೀಗೆ ಎಲ್ಲವನ್ನೂ ನಮ್ಮ ಮೊಬೈಲ್, ಕಂಪ್ಯೂಟರ್, ಮೂಲಕ ವೆಬ್ ಸೈಟ್ ಮೂಲಕ ಯಾವಗ ಬೇಕಾದರು ಎಲ್ಲಿ ಬೇಕಾದರು ಹಳೆಯದನ್ನೂ, ಹೊಸದನ್ನು ತಿಳಿಯಬಹುದು
ಡಿಜಿಟಲಿಕರಣ ಈ ವ್ಯವಸ್ಥೆಯನ್ನು ಸರಿಯಾದ ರೀತಿಯಲ್ಲಿ ನಾವು ಬಳಸಿಕೊಂಡರೆ ಅದರ ಪ್ರಯೋಜನ ಎಲ್ಲರಿಗೂ ನೀಡಬಹುದು. ಪ್ರಪಂಚ ಡಿಜಿಟಲ್ ಯುಗದತ್ತ ಮುಖ ಮಾಡಿದೆ. ನಮ್ಮ ಪ್ರಧಾನಿಗಳು ಅದರ ಮಹತ್ವವನ್ನು ಸಾರಿ ಆ ನಿಟ್ಟಿನಲ್ಲಿ ಸಾಗಿದ್ದಾರೆ. ನಾವು ಅವರ ಜೊತೆ ಒಂದು ಹೆಜ್ಜೆ ಮುಂದೇ ಇಡೋಣ.
✍:ಕೃಷ್ಣಾನಂದ ಭಂಡಾರಿ ಕುತ್ತೆತ್ತೂರು
|
Good article anna
ReplyDeleteGood article anna
ReplyDeleteThank u
DeleteSuper bro...mahithi😍
ReplyDeleteInformative article.... Good.
ReplyDelete