BhandaryVarthe Team

BhandaryVarthe Team
Bhandary Varthe Team

Saturday, 12 August 2017

ಸಾಲುಮರದ ತಿಮ್ಮಕ್ಕ

ಸಾವಿರಾರು ಸಸಿ ನೆಟ್ಟು, ನೀರೆರೆದು ಹೆಮ್ಮರವಾಗಿಸಿ...ಬದುಕಿನ ಮುಸ್ಸಂಜೆಯಲ್ಲಿ ಒಂಟಿಯಾಗಿ ಬದುಕು ಸವೆಸುತ್ತಿರುವ ವೃಕ್ಷಮಾತೆ ಸಾಲುಮರದ ತಿಮ್ಮಕ್ಕನವರಿಗೆ ಈ ಸಾಲುಗಳು  ಅರ್ಪಣೆ...

ಸಾಲುಮರದ ತಿಮ್ಮಕ್ಕ
ಕಂಡುಕೊಂಡಿರಿ ನೀವು ಜೀವನ ಸಾರ್ಥಕ್ಯ||ಪ||
ಮಕ್ಕಳಿಲ್ಲದ ಕೊರಗು
ಗಿಡಸಸಿಯಲ್ಲಿ ಹುಡುಕುತ.
ಬಂಜೆಯೆಂಬ ಪದಕೆ
ಅಂಜದೇ ಮುಂದೆ ನೆಡೆಯುತ...||ಪ||
ಮರವೇ ಮಂದಿರವೆಂದು
ಆಲವೇ ಆಲಯವೆಂದು.
ಗಿಡಮರಗಳೇ ಕರುಳ ಬಳ್ಳಿಗಳೆಂದು,
ಕಾಡುಮೇಡು ಒಡಹುಟ್ಟಿದವರೆಂದು.||ಪ||
ಅನ್ನ ನೀಡಲಾಗದಿದ್ದರೂ
ಅರಿವು ನೀಡುವೆನೆಂದು.
ನೆರವು ನೀಡಲಾಗದಿದ್ದರೂ
ನೆರಳು ನೀಡುವೆನೆಂದು.||ಪ||
ಗಿಡ ನೆಟ್ಟ ಕರವಿಂದು
ಮರಗಟ್ಟಿ ಹೋಗಿದೆ.
ನೆರಳುಂಡ ಜನರಿಗೂ
ಮರೆವು ಬಂದೆರಗಿದೆ.
ತಾಯಿ ತಿಮ್ಮಕ್ಕನ ನಾವು ಮರೆತರೆ
ಅವಳು ತಬ್ಬಲಿಯಲ್ಲ.
ಅವಳದೋ ವಂಶ ವೃಕ್ಷ ಸಂಕುಲಗಳು..
ಕಡೆಗೂ ನಾವೇ ತಬ್ಬಲಿಗಳು...
ಕಡೆಗೂ ನಾವೇ ತಬ್ಬಲಿಗಳು....
ಸಾಲುಮರದ ತಿಮ್ಮಕ್ಕ
ಕಂಡುಕೊಂಡಿರಿ ನೀವು ಜೀವನ ಸಾರ್ಥಕ್ಯ...||
ಭಾಸ್ಕರ ಭಂಡಾರಿ ಸಿ.ಆರ್
ಶಿರಾಳಕೊಪ್ಪ

5 comments: