BhandaryVarthe Team

BhandaryVarthe Team
Bhandary Varthe Team

Sunday 6 August 2017

ಖಂಡಗ್ರಾಸ ಚಂದ್ರಗ್ರಹಣ

             ದಿನಾಂಕ 07/08/2017 ಸೋಮವಾರ ಶ್ರವಣ ನಕ್ಷತ್ರ ಮಕರರಾಶಿಯಲ್ಲಿ ಚಂದ್ರನಿಗೆ ಕೇತುಗ್ರಹಣ. ಗ್ರಹಣದಿಂದ ವ್ಯಾಪಾರಸ್ಥರಿಗೆ, ಹಿಂದುಳಿದ ಜನರಿಗೆ ಹಾಗೂ ಎಮ್ಮೆ, ಕೋಣ, ಆನೆಗಳಿಗೆ ಮುಂದಿನ 6 ತಿಂಗಳವರೆಗೆ ವಿಪರೀತ ಪೀಡೆ ಇದೆ. ಮಕರರಾಶಿಯಲ್ಲಿ ಗ್ರಹಣವಾಗಿರುವುದರಿಂದ ಉತ್ತರಭಾರತದಲ್ಲಿ ಭಾರೀ ಅನಾಹುತ, ನೆರೆಹಾವಳಿ, ಯುದ್ಧಭೀತಿ ಎದುರಾಗಬಹುದು. ಮಧ್ಯಭಾರತ, ಚೀನಾ, ಮುಸ್ಲಿಂ ದೇಶಗಳು, ಗ್ರೀಕ್ ದೇಶಕ್ಕೆ ತೊಂದರೆ ಇದೆ. ದೇಶದ ಓರ್ವ ಶ್ರೇಷ್ಠ ಸ್ತ್ರೀಯಳಿಗೆ ಅರಿಷ್ಠವಿದೆ. ವಿದ್ಯಾಜೀವಿಗಳಿಗೆ ಕೆಟ್ಟಕಾಲವಾಗಲಿದೆ. ಭಾರತ ದೇಶದ ವಾಯುವ್ಯ ದಿಕ್ಕಿಗೆ ದುರ್ಭಿಕ್ಷೆ ಇದೆ.
ಕಳ್ಳಕಾಕರು ದರೋಡೆಕೋರರ  ಉಪದ್ರವ ಹೆಚ್ಚಾಗಲಿದೆ. ಮಂತ್ರಿಗಳಿಗೆ, ನೀಚರಿಗೆ, ಗೋವುಗಳಿಗೆ, ಸೈನಿಕರಿಗೆ ಅನಿಷ್ಠ. ದಕ್ಷಿಣದೇಶಿಯರಿಗೆ ಬರದ ತೊಂದರೆ ಇದೆ. ಮಕರ, ತುಲಾ, ಮಿಥುನ, ಕುಂಭಾ ರಾಶಿಯವರಿಗೆ ಅಶುಭ. ರಾತ್ರಿ 10:53 ಕ್ಕೆ ಗ್ರಹಣ ಸ್ಪರ್ಶ. ರಾತ್ರಿ 12:48 ಕ್ಕೆ ಗ್ರಹಣ ಮೋಕ್ಷ. ಚೂಡಾಮಣಿಯೋಗವಿರು ಕಾರಣ ಗ್ರಹಣಕಾಲದಲ್ಲಿ ಸ್ನಾನ, ಧ್ಯಾನ, ಜಪ ಮಾಡಿದರೆ  ಕಾರ್ಯಸಿದ್ದಿ. 07/08/2017 ರಂದು ಮದ್ಯಾಹ್ನ 1:53 ವರೆಗೆ ಭೋಜನ ಮಾಡಬಹುದು. ರೋಗಿಗಳು, ವೃದ್ದರು, ಮಕ್ಕಳು 3:53 ವರೆಗೆ ಊಟ ಮಾಡಬಹುದು. ಗ್ರಹಣಕಾಲಕ್ಕೆ 6 ಗಂಟೆ ಮೊದಲು ಊಟ ಬಿಡಬೇಕಾಗಿರುವುದರಿಂದ 4:53 ಒಳಗೆ ಊಟ ಮುಗಿಸಲೇಬೇಕು
            ವೃಶ್ಚಿಕ, ಸಿಂಹ, ಮೀನ, ಮೇಷ ರಾಶಿಯವರಿಗೆ ಗ್ರಹಣ ಶುಭಕಾರಕವಿದೆ. ಧನು, ಕನ್ಯಾ, ಕರ್ಕ, ವೃಷಭ ರಾಶಿಗೆ ಮಧ್ಯಮಫಲವಿದೆ. ದೇಶದಲ್ಲಿ ಬೆಲೆಗಳು ಗಗನಕ್ಕೇರಲಿದೆ. ನೋಟು ಅಮಾನ್ಯೀಕರಣದಂತಹ  ಸನ್ನಿವೇಶಗಳು ಇನ್ನೊಮ್ಮೆ ಬರಲಿದೆ. ಬ್ಯಾಂಕ್ ಗಳಲ್ಲಿ ಹಣವನ್ನು ಜಮೆ ಮಾಡಲು ಜನ ಹಿಂಜರಿಯುವ ಸ್ಠಿತಿ ಬರಲಿದೆ. ಅಲ್ಲಲ್ಲಿ ಕೋಮುಗಲಭೆಗಳು ಜಾಸ್ತಿಯಾಗುತ್ತದೆ. ಮೀನರಾಶಿಯ ದಕ್ಷಿಣಕನ್ನಡ ಜಿಲ್ಲೆಗೆ ಶಾಂತಿಯ ವಾತಾವರಣ ಬರಲಿದೆ. ವೃಷಭ ರಾಶಿಯ ಉಡುಪಿ ಜಿಲ್ಲೆಯಲ್ಲಿ ಅತೀ ಹೆಚ್ಚು ಅಕಾಲಮರಣ ಸಂಭವವಿದೆ. ಕರ್ನಾಟಕದಲ್ಲಿ ಆಡಳಿತ ವಿಚಾರದಲ್ಲಿ ಆಳುವ ಪಕ್ಷದಲ್ಲಿ ಒಡಕು ಹುಟ್ಟಬಹುದು.
 ತೇಜಿ : ತೆಂಗಿನಕಾಯಿ, ಮಸಾಲೆ, ಆಲುಗಡ್ಡೆ, ಬೆಲ್ಲ, ಶೇಂಗಾ, ಎಣ್ಣೆ, ಉತ್ತುತ್ತೆ, ಸಕ್ಕರೆ, ಉಪ್ಪು, ಜೋಳ.
     ಮಂದಿ : ಅಕ್ಕಿ, ಅಡಿಕೆ, ಬಂಗಾರ, ಬೆಳ್ಳಿ, ಕಂಚು, ಹಿತ್ತಾಳೆ, ವೀಳ್ಯದೆಲೆ, ಹಣ್ಣುಹಂಪಲು, ತರಕಾರಿ.
     ಸಮ : ಮೊಸರು, ಕಾಯಿಪಲ್ಲೆ ಇತ್ಯಾದಿ..

                ಇತೀ ಶುಭಂ.
: ಕೆ. ಅನಂತರಾಮ ಬಂಗಾಡಿ





3 comments: