ಕಟ್ಟುಪಾಡುಗಳ
ಕಟ್ಟೋಲೆಗಳನ್ನು ಕಟ್ಟಿ
ಸ೦ಕೋಲೆಯೆ೦ಬ ಹೃದಯ ಬ೦ಧನದಿ
ಹೊರಬರಲು
ತುಡುಕಿ ಮಿಸುಕಾಡುತ್ತಿದೆ.
ನೋಡ-ಲೀ ಶತಮಾನದ ಹೆಣ್ಣು
ಇದರಿಂದ
ಹೊರಗುರುಳುವ ಕಣ್ಣು ಕೇವಲ, ಕೆಲವೇ
ಲೌಕಿಕದ
ಆಸೆ, ಆಕಾಂಕ್ಷೆಗಳಿಗೆ
ಅಬ್ಬರದ
ಅಲೆಗಳು ಬಡಿಯಲು
ಎಲ್ಲೋ ಕೇಳಿ ಬರುವ ನಾದಕ್ಕೆ
ತಡವರಿಸದೆ
ಕಾಲ್ಗೆಜ್ಜೆ ಕುಣಿದು ಕುಪ್ಪಳಿಸಿ,
ನೆಲಕ್ಕಪ್ಲಳಿಸಿ
ಸಿಡಿದು ಕುಪ್ಪಳಿಸಿ,
ಸ್ವರ ಬೇರೆ, ಬೇರೆಯಾಗಿ ಕೇಳಿ
ಬರಲು ಎಚ್ಚೆತ್ತಿತ್ತು ಮನ
ಓಡಿ ಬರುವ ಗಾಳಿಗೆ ಸಿಕ್ಕ
ತರಗೆಲೆಗಳು
ಒ೦ದುಗೂಡಿ ಮೂಲೆ ಸೇರುವ೦ತೆ
ಮನಸ್ಸು
ಮುದುಡಿ ಹಿ೦ದೆ ಸರಿಯಿತು.
✍:ನಿರ್ಮಲ ಶೇಷಗಿರಿ, ಕುಂಜಿಬೆಟ್ಟುಉಡುಪಿ |
ಭಾವನೆಗಳ ಬಂಧಿಸಲಾಗುವುದೇ...?
ReplyDeleteಕಾಮನೆಗಳ ಕಟ್ಟಿಡಲಾಗುವುದೇ...?
ಕಟ್ಟು-ಪಾಡು
ಈಗಿನವರ ಬಾಯಲ್ಲಿ...
CUT- ಮಾಡು...!!!