ಮಂಗಳೂರು ಪಂಪ್ ವೆಲ್ ದಂಬೆ ದಿವಂಗತ ಪರಮೇಶ್ವರ ಭಂಡಾರಿ ಮತ್ತು ದಿವಂಗತ ಸೋಮಕ್ಕ ದಂಪತಿಯ ಪುತ್ರಿ ಹಾಗೂ ಪಾಂಗಾಳ ದಿವಂಗತ ಜನಾರ್ದನ ಭಂಡಾರಿಯವರ ಧರ್ಮಪತ್ನಿಶ್ರೀಮತಿ ಕಮಲಾ ಟೀಚರ್ (86 ವರ್ಷ ) ಜೂನ್ 11 ನೇ ಶುಕ್ರವಾರ ಸಾಯಂಕಾಲ ಹೆಬ್ರಿಯ ಪುತ್ರನ ಮನೆಯಲ್ಲಿ ವಯೋಸಹಜ ಅಸೌಖ್ಯದಿಂದ ನಿಧನರಾದರು.
ಸುರತ್ಕಲ್ ಕೃಷ್ಣಾಪುರ ಕಾಟಿಪಳ್ಳ ಸರಕಾರಿ ಶಾಲೆಯಲ್ಲಿ ಸರಿಸುಮಾರು ನಲವತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದರು ವೃತ್ತಿಜೀವನ ಮತ್ತು ನಿವೃತ್ತಿಯ ಬಳಿಕ ಕೃಷ್ಣಾಪುರ ಚೊಕ್ಕಬೆಟ್ಟುವಿನಲ್ಲಿ ಸಾಂಸಾರಿಕ ಜೀವನ ನಡೆಸುತ್ತಿದ್ದರು ಪ್ರಸ್ತುತ ಕೆಲವು ವರ್ಷಗಳ ಹಿಂದೆ ತನ್ನ ಪುತ್ರ ಪ್ರಸಾದ್ ಭಂಡಾರಿ ಇವರೊಂದಿಗೆ ಹೆಬ್ರಿಯಲ್ಲಿ ವಾಸಿಸುತ್ತಿದ್ದರು .
ಸಮಾಜ ಬಂಧುಗಳ ಮನೆಯಲ್ಲಿ ಯಾವುದೇ ಶುಭ ಸಮಾರಂಭ ಆಗಲಿ ಅಥವಾ ದುಃಖದ ಕಾರ್ಯಕ್ರಮವೇ ನಡೆಯಲಿ ಮುಂದೆ ನಿಂತು ಅಚ್ಚುಕಟ್ಟಾಗಿ ನಡೆಸುತ್ತಿದ್ದರು ಕಮಲ ಟೀಚರ್.
ಮುಂಬೈಯ ಥಾಣೆಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಪ್ರವೀಣ್ ಭಂಡಾರಿ ಮತ್ತು ಹೆಬ್ರಿಯಲ್ಲಿ ಉದ್ಯಮಿಯಾಗಿರುವ ಪ್ರಸಾದ್ ಭಂಡಾರಿ , ಶ್ರೀಮತಿ ಪ್ರಭಾ ಮತ್ತು ಶ್ರೀಮತಿ ಪ್ರೇಮಾ ಅಳಿಯಂದಿರು ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ
ಇವರ ನಿಧನದ ದುಖವನ್ನು ಸಹಿಸುವ ಶಕ್ತಿಯನ್ನು ಮಕ್ಕಳು ಮತ್ತು ಕುಟುಂಬಸ್ಥರಿಗೆ ಭಗವಂತನು ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಅಂತಿಮ ನಮನ.
-ಭಂಡಾರಿ ವಾರ್ತೆ
No comments:
Post a Comment