ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಸಂಗೀತ ಕ್ಷೇತ್ರದಲ್ಲಿ ಪ್ರತಿಭೆಯೊಂದು ಅರಳುತ್ತಿದೆ. ಮುಂಬಯಿ ರಂಜಿತ್ ಸೀತಾರಾಂ ಭಂಡಾರಿ ಮತ್ತು ಶ್ರಿಮತಿ ಪಲ್ಲವಿ ದಂಪತಿಯ ಸುಪುತ್ರಿ ರಿಯಾ ರಂಜಿತ್ ಈ ಉದಯೋನ್ಮುಖ ತಾರೆ.
ಮಂಗಳೂರಿನ ಪ್ರಸಿದ್ಧ ಖಾಸಗಿ ಟಿ.ವಿ. ಚಾನೆಲ್ ‘ ದಾಯಿಜಿ ವರ್ಲ್ಡ್ ’ ಆಯೋಜಿಸಿದ ಪ್ರತಿಷ್ಠಿತ ಫೋನ್ ''ಸಂಗೀತ ತಾರೆ" ಪ್ರತಿಸ್ಪರ್ಧೆಯಲ್ಲಿ ರಿಯಾ ರಂಜಿತ್ ತೃತೀಯ ಸ್ಥಾನ ಪಡೆದು ಎಲ್ಲರ ಗಮನ ಸೆಳೆದಿದ್ದಾಳೆ
.
ದಾಯಿಜಿ ವರ್ಲ್ಡ್ ಚಾನೆಲ್‌ನ ಈ ಫೋನ್ "ಸಂಗೀತ ತಾರೆ" ಕಾರ್ಯಕ್ರಮದ ಮೊದಲನೆಯ ಹಂತದ ಆಡಿಷನ್ 2020ರ ಜೂನ್ 22 ರಂದು ರಂದು ಪ್ರಾರಂಭವಾಗಿತ್ತು. ದೇಶ, ವಿದೇಶದ 400ಕ್ಕೂ ಹೆಚ್ಚು ಸ್ಪರ್ಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಹಲವು ತಿಂಗಳ ಕಾಲ ನಡೆದ ಈ ಆಡಿಷನ್ ನಲ್ಲಿ ಅಂತಿಮ ಘಟ್ಟಕ್ಕೆ 16 ಸ್ಪರ್ಧಿಗಳು ಆಯ್ಕೆಯಾಗಿದ್ದರು. ಇವೆಲ್ಲಾ ಸ್ಪರ್ಧೆಯ ಆಯ್ಕೆ ಪ್ರಕ್ರಿಯೆಯು ಫೋನ್ ರೆಕಾರ್ಡ್ ಕಳುಹಿಸುವ ಮೂಲಕ ನಡೆಸಲಾಗಿತ್ತು. ಅಂತಿಮ ಸುತ್ತಿನ ಸ್ಪರ್ಧೆ ಮಂಗಳೂರು ದಾಯಿಜಿ ವರ್ಲ್ಡ್ ವಾಹಿನಿಯ ಸ್ಟುಡಿಯೋದಲ್ಲಿ ನಡೆಸಲಾಗಿತ್ತು.
ತೀವ್ರ ಕುತೂಹಲ ಮೂಡಿಸಿದ್ದ ಈ ಸ್ಪರ್ಧೆಯಲ್ಲಿ ತೀರ್ಪುಗಾರರ ಮೆಚ್ಚುಗೆ ಮತ್ತು ಪ್ರಶಂಸೆಗೆ ಪಾತ್ರಳಾದ ರಿಯಾ ರಂಜಿತ್ ಭಂಡಾರಿ ಫೈನಲ್ ನಲ್ಲಿ ಮೂರನೇ ಸ್ಥಾನ ಪಡೆದು ಎಲ್ಲರ ಮನಗೆದ್ದಿದ್ದಾರೆ.
ಈ ಸಂಗೀತ ತಾರೆ ಅಂತಿಮ ಸುತ್ತಿನ ಸ್ಪರ್ಧೆ ಏಪ್ರಿಲ್ 10ರಂದು ರಾತ್ರಿ 9.00 ಗಂಟೆಯಿಂದ 10.00ರವರಿಗೆ ದಾಯಿಜಿ ವರ್ಲ್ಡ್ ಚಾನಲ್‌ನಲ್ಲಿ ಪ್ರಸಾರ ಆಗಲಿದೆ.
ರಿಯಾ ರಂಜಿತ್ ಸಂಗೀತ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವಂತ ಶಕ್ತಿಯನ್ನು ಶ್ರೀ ನಾಗೇಶ್ವರ ದೇವರು ಅನುಗ್ರಹಿಸಲಿ ಇನ್ನಷ್ಟು ದೊಡ್ಡ ವೇದಿಕೆಗಳಲ್ಲಿ ರಿಯಾ ರಂಜಿತ್ ಮಿಂಚಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಶುಭ ಹಾರೈಸುತ್ತದೆ.
- ಭಂಡಾರಿ ವಾರ್ತೆ
No comments:
Post a Comment