ಭಂಡಾರಿ ಸಮಾಜ ಸಂಘ ಸೊರಬ - ಶಿರಾಳಕೊಪ್ಪ ಘಟಕದ ಮಾಜಿ ಅಧ್ಯಕ್ಷರುಗಳಾದ ಶ್ರೀಯುತ ಗೋಪಾಲ ಭಂಡಾರಿ ಶಿರಾಳಕೊಪ್ಪ ಮತ್ತು ಶ್ರೀಯುತ ಬಾಬು ಭಂಡಾರಿ ಸೊರಬ ಇವರು ದಿನಾಂಕ 22-04-2021 ರಂದು ತಮ್ಮ 25ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡರು.
ಹಿಲಿಯಾಣ ಜಡ್ಡುವಿನ ದಿವಂಗತ ನಾರಾಯಣ ಭಂಡಾರಿ ದಂಪತಿಯ ಎರಡನೇ ಪುತ್ರ ಶ್ರೀ ಗೋಪಾಲ ಭಂಡಾರಿ ಇವರು ಅಸೋಡಿನ ದುಗ್ಗ ಭಂಡಾರಿ ಯವರ ದ್ವಿತೀಯ ಪುತ್ರಿ ಶಾರದ (ಬೇಬಿ) ಹಾಗೂ ಅಸೋಡಿನ ದಿವಂಗತ ದುಗ್ಗ ಭಂಡಾರಿಯವರ ದ್ವಿತೀಯ ಪುತ್ರ ಶ್ರೀ ಬಾಬು ಭಂಡಾರಿ ಇವರು ಹಿಲಿಯಾಣ ಜಡ್ಡುವಿನ ದಿವಂಗತ ನಾರಾಯಣ ಭಂಡಾರಿಯವರ ತೃತೀಯ ಪುತ್ರಿ ಶಶಿಕಲಾ ಇವರ ವಿವಾಹವು ದಿನಾಂಕ: 22-04-1996 ರಂದು ನಾರಾಯಣ ಭಂಡಾರಿ ಯವರ ಸ್ಚಗೃಹ "ಮಾತೃಕೃಪ" ದಲ್ಲಿ ನೆರವೇರಿತ್ತು.
25 ವರ್ಷ ಸುಖ ಸಂಸಾರ ಮಾಡಿದ ಜೋಡಿಗಳ ವಿವಾಹ ವಾರ್ಷಿಕೋತ್ಸವವನ್ನು ಭಂಡಾರಿ ಸಮಾಜ ಸಂಘ ಬೆಂಗಳೂರು ವಲಯದ ಪ್ರಧಾನ ಕಾರ್ಯದರ್ಶಿ ಶಿರಾಳಕೊಪ್ಪದ ಸುಧಾಕರ ಆರ್ ಭಂಡಾರಿಯವರ ಮನೆಯಲ್ಲಿ ಆಚರಿಸಲಾಯಿತು.
ಈ ಶುಭ ಸಂದರ್ಭ ದಲ್ಲಿ ಸುಧಾಕರ ಭಂಡಾರಿಯವರ ಪತ್ನಿ ಗೀತಾ, ಮಕ್ಕಳಾದ ವೈಷ್ಣವಿ ಮತ್ತು ಅಧಿತಿ ಜೊತೆಗಿದ್ದು ದಂಪತಿಗಳನ್ನು ಸತ್ಕರಿಸಿ ಸಂತೋಷ ಪಟ್ಟರು.
ದಂಪತಿಗಳ ಮಕ್ಕಳಾದ ತನುಶ್ರೀ, ತೇಜಸ್ವಿನಿ, ಚಿರಂಜೀವಿ ಮತ್ತು ಚೈತ್ರ ಇವರು ಹಾಜರಿದ್ದು ದಂಪತಿಗಳಿಗೆ ಶುಭ ಹಾರೈಸಿದರು.
No comments:
Post a Comment