ಮಂಗಳೂರಿನ ದೈಜಿ ವರ್ಲ್ಡ್ ಖಾಸಗಿ ಚಾನೆಲ್ ನ ಫೋನ್ ಇನ್ "ಸಂಗೀತ ತಾರೆ" ಸ್ಪರ್ಧೆಯಲ್ಲಿ ಕುಂದಾಪುರದ ಲಿಷಾ ಕೊಕ್ಕರ್ಣೆ ದ್ವಿತೀಯ ಸ್ಥಾನ ಗಳಿಸಿದ್ದಾರೆ .
ದೈಜಿ ವರ್ಲ್ಡ್ ಚಾನೆಲ್ 2020 ರ ಜೂನ್ ನಲ್ಲಿ ಮೆಗಾ ಆಡಿಷನ್ ನಡೆಸಿತ್ತು. ದೇಶ ವಿದೇಶಗಳಿಂದ ಸುಮಾರು 400 ಕ್ಕೂ ಹೆಚ್ಚು ಸ್ಪರ್ಧಿಗಳು ಇದರಲ್ಲಿ ಭಾಗವಹಿಸಿದ್ದರು. ಸ್ಪರ್ಧೆಯು ಫೋನ್ ಇನ್ ಮೂಲಕ ನಡೆದಿತ್ತು.ಅಂತಿಮ ಸುತ್ತಿನಲ್ಲಿ 16 ಸ್ಪರ್ಧಿಗಳು ಭಾಗವಹಿಸಿದ್ದರು ಮತ್ತು ಅಂತಿಮ ಸುತ್ತು ದೈಜಿ ವರ್ಲ್ಡ್ ನ ಮಂಗಳೂರಿನ ಸ್ಟುಡಿಯೋ ದಲ್ಲಿ ನಡೆದಿತ್ತು.ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಲಿಷಾ ಕೊಕ್ಕರ್ಣೆಯವರು ದ್ವಿತೀಯ ಸ್ಥಾನ ಪಡೆದು ಸಮಾಜದ ಮನ್ನಣೆಗೆ ಪಾತ್ರರಾಗಿದ್ದಾರೆ.
ಕುಂದಾಪುರ ಕೊಕ್ಕರ್ಣೆಯ ಶ್ರೀ ಲವಕರ ಭಂಡಾರಿ ಮತ್ತು ಶ್ರೀಮತಿ ಶೈಲಜಾ ಭಂಡಾರಿ ಯವರ ಏಕೈಕ ಪುತ್ರಿ ಲಿಷಾ ಕೊಕ್ಕರ್ಣೆ.
ದಿನಾಂಕ 12-8-2006ರಲ್ಲಿ ಜನಿಸಿದ ಇವರು L. K. G. ಯಿಂದ ಬ್ರಹ್ಮಾವರದ ಹಾರಾಡಿ G. M. ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಹೈಸ್ಕೂಲ್ ನಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದು, ಪ್ರಸ್ತುತ 8 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಇವರ ಅಜ್ಜಿ ಸೀತಾ ಭಂಡಾರಿ ಯವರು ಹಳ್ಳಿಯಲ್ಲಿ ಸಣ್ಣ ಪುಟ್ಟ ಕಾರ್ಯಕ್ರಮಗಳಲ್ಲಿ ಹಾಡುತ್ತಿದ್ದುದನ್ನು ಬಿಟ್ಟರೆ ಬೇರೆ ಯಾವುದೇ ಸಂಗೀತದ ಹಿನ್ನೆಲೆಯಿಲ್ಲದ ಕುಟುಂಬದಿಂದ ಬಂದ ಇವರು ಸುಮಾರು 25 ಪ್ರಶಸ್ತಿಗಳ ಸರದಾರೆ. ಒಂದನೇ ತರಗತಿಯ ಗುರುಗಳಾದ ಗೀತಾ ರವರಿಂದ ಪ್ರೇರಣೆಗೊಂಡ ಇವರು ನಂತರ ಉಡುಪಿಯ ಮುಕುಂದ ಕೃಪಾ ಸಂಗೀತ ಶಾಲೆಯಲ್ಲಿ ಪ್ರತೀ ಶನಿವಾರ ಮತ್ತು ಭಾನುವಾರ ಸಂಗೀತ ಅಭ್ಯಾಸ ಪ್ರಾರಂಭಿಸಿದರು. ಶಾಲೆಯಲ್ಲಿ ಪ್ರತೀ ವಾರ ನಡೆಯುವ Talent hour ನಲ್ಲಿ ಹಾಡುತ್ತಿದ್ದ ಇವರು ಶಿಕ್ಷಕರ ಮೆಚ್ಚುಗೆಯನ್ನು ಪಡೆಯುತ್ತಿದ್ದರು.
ಸಂಗೀತದಲ್ಲಿ ಅಪಾರ ಆಸಕ್ತಿ ಹೊಂದಿರುವ ಕು. ಲಿಷಾರವರು ಅತಿ ಚಿಕ್ಕ ವಯಸ್ಸಿನಲ್ಲಿಯೇ ಇಷ್ಟೊಂದು ಮಧುರ ಕಂಠ ವನ್ನು ಹೊಂದಿದ್ದು ಮುಂದೆ ಅತ್ಯುತ್ತಮ ಗಾಯಕಿಯಾಗಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಲಿ. ಭಂಡಾರಿ ಸಮಾಜದ ಸಂಗೀತ ಪ್ರತಿಭೆ ಮುಂದೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದು ಹೊರಹೊಮ್ಮಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಹಾರೈಸುತ್ತದೆ.
ಕು. ಲಿಷಾ ಸಂಗೀತ ನೋಡಲು CLICK ಮಾಡಿ
-ರಮೇಶ್ ಭಂಡಾರಿ ಪಾಂಗಾಳ
No comments:
Post a Comment