ಮೂಡಬಿದ್ರೆ ಅಲಂಗಾರಿನ ಶ್ರೀ ಮಾಧವ ಭಂಡಾರಿ ( MR Bhandary) ಮತ್ತು ಶ್ರೀಮತಿ ಶಾರದ ಮಾಧವ ಭಂಡಾರಿ ದಂಪತಿ ತಮ್ಮ ವೈವಾಹಿಕ ಜೀವನದ 50ನೇ ವರ್ಷದ ವಾರ್ಷಿಕೋತ್ಸವವನ್ನು ತಾ 06.05.2021ರ ಗುರುವಾರ ಕುಟುಂಬ ಸದಸ್ಯರೊಡಗೂಡಿ ಸಂತೋಷದ ಸಂಭ್ರಮದಿಂದ ಆಚರಿಸಿದರು.
ಶ್ರೀ ಮಾಧವ ಭಂಡಾರಿ ( MR Bhandary) ಯವರು ಮುಂಬಯಿ ಭಂಡಾರಿ ಸೇವಾ ಸಮಿತಿಯ ಮಾಜೀ ಅಧ್ಯಕ್ಷರಾಗಿ ,ಭಂಡಾರಿ ಸಮಾಜ ಸಂಘ ಮೂಡುಬಿದಿರೆಯ ಸ್ಥಾಪಕ ಅದ್ಯಕ್ಷ ರಾಗಿ, ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಒಂದು ಕಾಲದಲ್ಲಿ ನಿರ್ಜೀವವಾಗಿದ್ದ ಮುಂಬೈ ಭಂಡಾರಿ ಸೇವಾ ಸಮಿತಿಗೆ ಹೊಸ ಕಾಯಕಲ್ಪ ಕೊಟ್ಟ ಕೀರ್ತಿ ಶ್ರೀ ಮಾಧವ ಭಂಡಾರಿ ( MR Bhandary) ಗೆ ಸಲ್ಲುತ್ತದೆ. ಅದನ್ನು ಪುನರುತ್ಥಾನ ಮಾಡುವಲ್ಲಿ ಸಮಾಜದ ಎಲ್ಲಾ ಸದಸ್ಯರ ಜೊತೆಗೆ ಶ್ರೀ ಮಾಧವಣ್ಣನವರ ಕೊಡುಗೆ ಅಪಾರ.
ಇವರ ಐವತ್ತು ಸಂವತ್ಸರದ ದೀರ್ಘ ಕಾಲದ ವಿವಾಹ ಸಂಬಂಧ ನಮಗೆಲ್ಲರಿಗೂ ಒಂದು ಪ್ರೇರಣೆ.
ಭಗವಂತ ಈ ಆದರ್ಶ ದಂಪತಿಗಳಿಗೆ ಆಯುಷ್ಯ ಅರೋಗ್ಯ ಭಾಗ್ಯ ಸುಖ ಸಂಪತ್ತಿನ ಜೊತೆಗೆ ಸಂತೋಷ ಭರಿತ ನೆಮ್ಮದಿಯ ಜೀವನ ದಯಪಾಲಿಸಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಈ ಸಂದರ್ಭದಲ್ಲಿ ಪ್ರಾರ್ಥಿಸಿಕೊಂಡು ಶುಭ ಹಾರೈಸುತ್ತಿದೆ.
-ಭಂಡಾರಿ ವಾರ್ತೆ
No comments:
Post a Comment