ಉಡುಪಿ ತೋಟದ ಮನೆ ದಿವಂಗತ ರಾಜು ಗುಜರನ್ ಮತ್ತು ದಿವಂಗತ ಯಶೋದಾ ದಂಪತಿಯ ಪುತ್ರಿ ಹಾಗೂ ಉಡುಪಿ ಸಿಟಿ ಬಸ್ ಸ್ಟ್ಯಾಂಡ್ ಸಮೀಪದ ಶಾಶ್ವತ್ ಡೆಂಟಲ್ ಕ್ಲಿನಿಕ್ ಮಾಲೀಕ ಮಣಿಪಾಲ ವಿಜಯನಗರದ ನಿವಾಸಿ ಶ್ರೀ ಗೋವಿಂದ ಭಂಡಾರಿ ಅವರ ಧರ್ಮಪತ್ನಿ ಶ್ರೀಮತಿ ಶಕುಂತಲಾ ಗೋವಿಂದ (61ವರ್ಷ)ಮೇ 8 ನೇ ಶನಿವಾರ ರಾತ್ರಿ 11 ಗಂಟೆಗೆ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಬಂಧು ಮಿತ್ರರಲ್ಲಿ ಶಕು ಎಂದು ಚಿರಪರಿಚಿತರಾಗಿ ಎಲ್ಲರೊಂದಿಗೆ ಆತ್ಮೀಯರಾಗಿ ಪ್ರೀತಿ ವಿಶ್ವಾಸಗಳಿಸಿದ್ದರು.
ಸಹೋದರ ಶ್ರೀ ಪ್ರಶಾಂತ್ ಕುಮಾರ್ ಮುಂಬೈ , ಪತಿ ಶ್ರೀ ಗೋವಿಂದ ಭಂಡಾರಿ , ಪುತ್ರಿಯರಾದ ಶ್ರೀಮತಿ ಶ್ರುತಿ ರೋಹಿತ್ ಬೆಹರಿನ್ , ಅಳಿಯ ಶ್ರೀ ರೋಹಿತ್ ಬೆಹರಿನ್ ಮತ್ತು ಡಾ॥ ಶ್ವೇತಾ , ಮೊಮ್ಮಗಳು ಬೇಬಿ ॥ ಆದ್ಯಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಇವರ ಅಕಾಲಿಕ ನಿಧನದ ಶೋಕತಪ್ತ ಪತಿ ಮಕ್ಕಳು ಮೊಮ್ಮಗಳು ಹಾಗೂ ಕುಟುಂಬಸ್ಥರಿಗೆ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತನು ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.
-ಭಂಡಾರಿ ವಾರ್ತೆ
No comments:
Post a Comment