ಮೈಸೂರಿನಲ್ಲಿ ನಡೆದಿರುವ ಮೊದಲ ರಾಜ್ಯ ಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ 2021 ರಲ್ಲಿ ಮಂಗಳೂರಿನ ವಾಮಂಜೂರಿನ ಆದಿತ್ಯ ಕಿರಣ್ ರವರು ಎರಡು ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ. ಇತ್ತೀಚೆಗೆ ಮೈಸೂರು ವಿಶ್ವವಿದ್ಯಾಲಯದಲ್ಲಿ ನಡೆದ ಸ್ಪರ್ಧೆಯಲ್ಲಿ ಜ್ಯೂನಿಯರ್ ವಿಭಾಗದ 74 ಕೆ ಜಿ ವಿಭಾಗದ ಸ್ಪರ್ಧಿಗಳ ಪೈಕಿ ಆದಿತ್ಯ ಕಿರಣ್ ಚಿನ್ನದ ಪದಕ ತನ್ನದಾಗಿಸಿಕೊಂಡಿದ್ದು ಈಗಾಗಲೇ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಕೂಡಾ ಭಾಗವಹಿಸಿದ್ದಾರೆ.ಕಳೆದ ಒಂಭತ್ತು ವರ್ಷಗಳಿಂದ ಕರಾಟೆ ಸೇರಿ ವಿವಿಧ ವಿದ್ಯೆಗಳನ್ನೂ ತನ್ನಾದಾಗಿಸಿಕೊಳ್ಳುತ್ತಿದ್ದಾರೆ. ಆದಿತ್ಯ ಕಿರಣ್ ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗಿಯಾಗಿ ಭಾರತಕ್ಕೆ ತನ್ನದೇ ಆದ ಕೊಡುಗೆ ನೀಡಬೇಕೆಂದು ಆದಿತ್ಯ ಕಿರಣ್ ರವರ ಮಹಾದಾಸೆಯಾಗಿದೆ. ಆದಿತ್ಯ ಕಿರಣ್ ರವರು ಹರಿಯಾಣದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿದ್ದರು.
ಮಂಗಳೂರಿನ ನೀರುಮಾರ್ಗ ದ ಪಾಲ್ದನೆ ಕ್ಯಾಂಬ್ರಿಡ್ಜ್ ಶಾಲೆಯಲ್ಲಿ 10 ನೇ ತರಗತಿಯಲ್ಲಿ ಓದುತ್ತಿರುವ ಆದಿತ್ಯ ಕಿರಣ್ ಮಂಗಳೂರಿನ ಇನ್ಸ್ಟಿಟ್ಯೂಟ್ ಒಫ್ ಐ ಕೆ ಎಂ ಎ (ಕರಾಟೆ ಮತ್ತು ಮಾರ್ಷಲ್ ಆರ್ಟ್ಸ್ )ಸಂಸ್ಥೆಯಲ್ಲಿ ನಿತಿನ್ ಎನ್ ಸುವರ್ಣ ಮತ್ತು ಸಂಪತ್ ಕುಮಾರ್ ಅವರಿಂದ ತರಭೇತಿ ಪಡೆಯುತ್ತಿದ್ದಾರೆ. ಕರಾಟೆ, ಕಿಕ್ ಬಾಕ್ಸಿಂಗ್, ಬಾಕ್ಸಿಂಗ್ ಡಬ್ಲ್ಯೂ ಯು ಎಸ್ ಎಚ್ ಯು ನಲ್ಲಿ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದು ಇನ್ನಷ್ಟು ಪ್ರಶಸ್ತಿಗಳನ್ನು ಗಳಿಸುವ ಉತ್ಸಾಹದಲ್ಲಿದ್ದಾರೆ. ಆದಿತ್ಯ ಕಿರಣ್ ರವರು ಮಂಗಳೂರಿನ ಗುರುಪುರದ ಶ್ರೀ ಕಿರಣ್ ಕುಮಾರ್ ಮತ್ತು ಶ್ರೀಮತಿ ಸಿ ಎಸ್ ಲೀಲಾವತಿ ದಂಪತಿಯ ಪುತ್ರ.
ಆದಿತ್ಯ ಕಿರಣ್ ಕರಾಟೆ ಮತ್ತು ಬಾಕ್ಸಿಂಗ್ ನಲ್ಲಿ ಇನ್ನಷ್ಟು ಸಾಧನೆ ಮಾಡಲಿ ಆ ಮೂಲಕ ಸಮಾಜ ಮತ್ತು ಕುಟುಂಬಕ್ಕೆ ಇನ್ನಷ್ಟು ಕೀರ್ತಿ ತರಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿಕೊಂಡು ಶುಭ ಹಾರೈಸುತ್ತದೆ.
ಮಾಹಿತಿ : ಶ್ರೀಪಾಲ್ ಭಂಡಾರಿ ನೆಲ್ಯಾಡಿ
ವರದಿ: ವನಿತಾ ಅರುಣ್ ಭಂಡಾರಿ ಬಜ್ಪೆ
No comments:
Post a Comment