BhandaryVarthe Team

BhandaryVarthe Team
Bhandary Varthe Team

Sunday 3 September 2017

ಗೀತಾ ಮಹಾತ್ಮ :

               
 "ಶ್ರೀ ಮದ್ಭಗವದ್ಗೀತಾ" ಆನಂದಚಿತ್ತ, ಷಟ್ ಐಶ್ವರ್ಯ ಪೂರ್ಣ, ಚರಾಚರವಂದಿತ, ಪರಮ ಪುರುಷೋತ್ತಮ, ಸಾಕ್ಷತ್ ಶ್ರೀ ಕೃಷ್ಣ ನ ದಿವ್ಯವಾಣಿಯಾಗಿದೆ. ಇದು ಅನಂತ ರಹಸ್ಯಗಳಿಂದ ಪೂರ್ಣವಾಗಿದೆ. ಪರಮ ದಯಾಮಯಿ ಭಗವಾನ್‌ ಶ್ರೀ ಕೃಷ್ಣನ ಕೃಪೆಯಿಂದಲೇ ಕೆಲವೇ ಅಂಶದಲ್ಲಿ ಇದರ ರಹಸ್ಯ ತಿಳುವಳಿಕೆಗೆ ಬರಬಲ್ಲುದು. ಯಾವ ಪುರುಷನು (ಮಾನವನು)ಅತ್ಯಂತ ಶ್ರದ್ಧೆ ಮತ್ತು ಪ್ರೀತಿಯಿಂದ ಭಗವದ್ಗೀತೆಯ ಮನನ ಮಾಡುತ್ತಾನೋ ಅವನು ಭಗವಂತನ ಸ್ವರೂಪವನ್ನು ಇಣುಕಿ ನೋಡಬಲ್ಲನು. ಆದುದರಿಂದ ಯಾವ ಮನುಷ್ಯರು ತಮ್ಮ ಶ್ರೇಯಸ್ಸನ್ನು ಬಯಸುತ್ತಾರೋ ಅವರು ಭಕ್ತಿ ಪೂರ್ವಕವಾಗಿ ತಮ್ಮ ಸಾಧನೆಯಲ್ಲಿ ತೊಡಗಿಸಿಕೊಳ್ಳಬೇಕು.

ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ|
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ||
ಶ್ರೀ ಮದ್ಭಗವದ್ಗೀತಾ-೪ನೇ ಅಧ್ಯಾಯ ೮ನೇ ಶ್ಲೋಕ
               
            ಯಾವ ಪುರುಷನು (ಮನುಷ್ಯನು) ಅಹಿಂಸಾ, ಸತ್ಯ, ಅಸ್ತೀಯಾ, ಬ್ರಹ್ಮಚರ್ಯ ಮೊದಲಾದ ಸಮಸ್ತ ಸಾಮಾನ್ಯ ಧರ್ಮಗಳ ಹಾಗೆಯೇ ಯಜ್ಞ, ದಾನ, ತಪ ಹಾಗೂ ಅಧ್ಯಾಪನ, ಪ್ರಜಾಪಾಲನ ಮೊದಲಾದ ತಮ್ಮ ತಮ್ಮ ವರ್ಣಾಶ್ರಮ ಧರ್ಮಗಳನ್ನು ಚೆನ್ನಾಗಿ ಪಾಲಿಸುತ್ತಾರೋ, ಬೇರೆಯವರಿಗೆ ಹಿತವನ್ನು ಮಾಡುವುದೇ ಯಾರ ಸ್ವಭಾವ ಆಗಿದೆಯೋ ಯಾರ ಸದ್ಗುಣಗಳ ಭಂಡಾರ ಮತ್ತು ಸದಾಚಾರಿಗಳಾಗಿದ್ದಾರೋ ಹಾಗೆಯೇ ಶ್ರದ್ಧೆ ಮತ್ತು ಪ್ರೇಮ ಪೂರ್ವಕ ಭಗವಂತನ ರೂಪ, ಗುಣ, ಕೀರ್ತನ, ಮೊದಲಾದವುಗಳನ್ನು ಮಾಡುವ ಭಕ್ತರಿದ್ದಾರೋ ಅವರ ರಕ್ಷಣೆ ಭಗವಂತನ ಹೊಣೆ. ನಾವೆಲ್ಲರೂ  ಭಗವದ್ಗೀತೆಯ ಸಂದೇಶವನ್ನು ನಮ್ಮ ಜೀವನದಲ್ಲಿ ಆಳವಡಿಸಿಕೊಳ್ಳೋಣ. ಅದರ ಮೊದಲು ಅಧ್ಯಯನ, ಅಧ್ಯಾಪನದ ಕಡೆ ನಮ್ಮ ಮನವಿರಲಿ.
 ''ಜಾತಸ್ರಹಿ ಧ್ರುವೋ ಮೃತ್ಯು". ಹುಟ್ಟಿದವನ ಮರಣವು ನಿಶ್ಚಿತವಾಗಿದೆ. ಇದರಲ್ಲಿ ನಾವು ಶೋಕ ಪಡಲು ಏನೂ ಇಲ್ಲ. ಹುಟ್ಟು ಸಾವಿನ ನಡುವಿನಲ್ಲಿ ನಮ್ಮ ಕಾರ್ಯ ಸಾಧನೆಗಳನ್ನು ಪರಿಗಣಿಸಬೇಕು. ಸುಖ, ದು:ಖ, ಕಷ್ಟ ,ಸಂತೋಷ ಮನುಷ್ಯನ ಸಹಜ ಲಕ್ಷಣಗಳು. ಇದನ್ನು ಸಮತೋಲನದಿಂದ ತೂಗಿಸಿ ಬಾಳೋಣ, ಆನಂದದಿಂದ ಜೀವನ ಸಾಗಿಸೋಣ.
" ಕೃಷ್ಣ ನುಡಿದಂತೆ ನಮ್ಮ ನಡೆಯಿರಲಿ"

 
ನಿರುಪಮಾ ರಾಯಿ




ಭ್ರೂಣದ ಕನಸು

ನಿನ್ನ ಬೆಚ್ಚನೆಯ ಗಭ೯ದೊಳಿರಲು ಅಮ್ಮ ;
ಬರಲಿಲ್ಲ ನನಗೆ ಏಕಾಂಗಿ ತನದ ಭಾವನೆ
ನಿನ್ನೂಧರವ ಭೇದಿಸಿ ಭೂಮಿಗೆ ಧುಮುಕಲು
ಬಾಯಿತುಂಬಾ ನಿನ್ನ ಅಮ್ಮ ಎನ್ನಲು ನಾನು ಕಾತರಳಾಗಿದ್ಧೆ.
ಮನೆಯೊಳಗೆ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಓಡಾಡಬೇಕು,
ಅಪ್ಪನ ಹೆಗಲೇರಬೇಕುಅಜ್ಜನ ಕಥೆ  ಕೇಳಬೇಕು
ಮನೆ ಮನ ಬೆಳಗೊ ನಂದಾದೀಪವಾಗಬೇಕು
ನಿಮ್ಮೆಲ್ಲರ ಮುದ್ದಿನ ಕಂದಮ್ಮನಾಗಬೇಕು
ಸಾಯೋ ತನಕ ನಿಮ್ಮ ಉಸಿರಾಗಬೇಕುಎಂಬ
ನೂರಾರು ಕನಸುಗಳನ್ನು ನಿನ್ನ ಗಭ೯ದೊಳಗಿದ್ಧು ಹೆಣೆದಿದ್ಧೆ.
ಆದರೆ ಅಮ್ಮ ಚಿವುಟಿ ಹಾಕಿದಿರಲ್ಲ  ನನ್ನ ಆಸೆಗಳನ್ನು, ಕನಸುಗಳನ್ನು........
ನಿಮ್ಮ ಉಸಿರಾಗೋ ನನ್ನ ಉಸಿರನ್ನೇ ನಿಲ್ಲಿಸಿಬಿಟ್ಟಿರಲ್ಲ....
"ಅಬಾಷ೯ನ್"ಎಂಬ ರಾಕ್ಷಸನಿಗೆ ನನ್ನ ಬಲಿಕೊಟ್ಟರಲ್ಲ
ಹೆಣ್ಣು ಮಗು ಎಂದು ತಿಳಿದು ನೀವು ಮಾಡಿದಿರಿ "ಭ್ರೂ‌ಣಹತ್ಯೆ ".
ಕೊನೆಗೊ ಗೆದ್ದಿತಲ್ಲ ಅಪ್ನನ ಹಠ,ನಿನ್ನ ತಾತ್ಸಾರಅಜ್ಜಿ ನಿಷ್ಠುರಣೆ
ಹೆಣ್ಣೆಂದರೆ ಮೂಗು ಮುರಿಯುವ ಅಪ್ನನಿಗೇಕೆ
ತಿಳಿಯಲಿಲ್ಲ ತನ್ನನ್ನು ಹೆತ್ತವಳು ಹೆಣ್ಣೆಂದು
ಅಕ್ಕಅಮ್ಮಅತ್ತಿಗೆಹೆಂಡತಿಯಾಗಿಹೆಣ್ಣು ಬೇಕಿರುವಾಗ ಮಗಳಾಗಿ ನಾನು ಬರಬಾರದೇನು?
ನನಗೂ ಭೂಮಿಯಲ್ಲಿ ಬದುಕುವ ಹಕ್ಕಿಲ್ಲ ವೇನು?
ಅಮ್ಮಾ.... ನೀನು ಮನಸ್ಸು ಮಾಡಿದರೆ ನಾನು ಬದಕಬಹುದಿತ್ತೇನೋ.....?
ಆದರೆ ಮಗನ ಹಂಬಲದಿಂದ ನನ್ನ  ಬಲಿಕೊಟ್ಟೆಯಲ್ಲ.?.
ಆಗ ನಿನಗೂ ತಿಳಿಯಲಿಲ್ಲವೇ ನೀನು ಒಂದು
         "ಹೆಣ್ಣೆಂದು"?

 
ರಮ್ಯ ಶ್ರೀ ಪಾಲ್ ಭಂಡಾರಿ, ತೊಕ್ಕೊಟ್ಟು.
              
                      


ಮದುವೆ

ಮದುವೆಯ ಈ  ಬಂಧ ಅನುರಾಗದ ಸಂಬಂಧ ಎನ್ನುವ ಹಾಡಿನ ಮೂಲಕ "ಮದುವೆ” ಯ ಬಗ್ಗೆ ಲೇಖನ  ಆರಂಭಿಸುತ್ತಿದ್ದೇನೆ .          ಮದುವೆ ಎಂದರೆ ಜನ್ಮ ಜನ್ಮಗಳ ಅನುಬಂಧ ಅಲ್ಲವೇ ಮಾನವ ಜೀವನದಲ್ಲಿ ವಿವಾಹ ಎಂಬುದು ಒಂದು ಪ್ರಮುಖ ಘಟ್ಟ . ಎರಡು ಜೀವಗಳನ್ನು ಹತ್ತಿರ ತಂದು ಜೀವನವಿಡೀ ಜೊತೆಯಾಗಿ  ಬದುಕಿ ಬಾಳುವಂತೆ ಹರಸುವ ಒಂದು ಸಾಮಾಜಿಕ ವಿಧಿ . ಹಾಗಾಗಿ ಮದುವೆ ಎಂಬ ಈ  ಬಂಧ ಪ್ರಮುಖ  ಸ್ಥಾನ ಪಡೆದಿದೆ.

         ಯವ್ವನಕ್ಕೆ ಬಂದ ಪ್ರತಿಯೊಬ್ಬರು ತನಗೆ ತಕ್ಕ ಸಂಗಾತಿಗಾಗಿ ಕಾತರದಿಂದ ಕಾಯುವುದು ಸಹಜ ಅಲ್ಲವೇ ..?? ಅಂದವಾದ ಯುವತಿಯರ ಕುರಿತು ಯುವಕರು , ಮನ್ಮಥರನ್ನು ಬಯಸುವ ಕನ್ಯೆಯರು ಹೀಗೆ ನೂರಾರು ಕನಸು ಕಾಣುತ್ತ ತೇಲಾಡುವುದು ಸಾಮಾನ್ಯ ಬಿಡಿ!! ಎಲ್ಲೊ ಹುಟ್ಟಿ ಎಲ್ಲೊ ಬೆಳೆದು ಕೆಲವೇ ಗಂಟೆಗಳಲ್ಲಿ ಬಂಧದೊಂದಿಗೆ ವಧುವರರಾಗುತ್ತಾರೆ .ಮದುವೆ ಪರಿಪೂರ್ಣವಾಗಬೇಕಾದರೆ  ಇಲ್ಲಿ ಅನೇಕ ವಿಧಿ-ವಿಧಾನಗಳಿವೆ ಅದನ್ನು ಮಾಡಲೇಬೇಕು. ನಾನು ಅನೇಕ ಮದುವೆ ಕಾರ್ಯಕ್ರಮದಲ್ಲಿ ಈ ರೀತಿಯ ವಿಧಾನಗಳನ್ನು ಗಮನಿಸಿದ್ದೇನೆ.. ಆದರೆ ಅದರ ವಿಶಾಲಾರ್ಥ ತಿಳಿದಿರಲಿಲ್ಲ..ಯಾಕೆ ಈ ಕ್ರಮ ಅನುಸರಿಸುತ್ತಾರೆ ಎಂದು   ನಿಮಗೂ ತಿಳಿಸಿಕೊಡುತ್ತೇನೆ...
          ನಮ್ಮ ಹತ್ತಿರದ ಸಂಬಂಧಿಕರ ಮದುವೆಗಳಿದ್ದಾಗ ನಮಗೆ ಅದೆಷ್ಟು ಸಂಭ್ರಮ ಅಲ್ವೇ ?  ನಮ್ಮದು ಅದೇನು ಓಡಾಟ ...ಆದರೆ ನಮಗಿಂತ  ಮದುವೆಮನೆಯವರಿಗೆ  ಜವಾಬ್ದಾರಿಗಳು ಹೆಚ್ಚು  ಅಬ್ಬಾ!  ಅದೆಲ್ಲ ಮದುವೆ ಮನೆಯವರಿಗೆ ಗೊತ್ತು. ಆದರೂ ಅದೆಷ್ಟೇ ಜವಾಬ್ದಾರಿ ಚಿಂತೆ  ಇದ್ದರೂ ನಮ್ಮನ್ನು ನಗು ಮೊಗದಿಂದ  ಮಾತ್ರ  ಸ್ವಾಗತಿಸಲು ಮರೆಯೋದಿಲ್ಲ .
      ಮದುವೆಯ ದಿನ ವಧುವರರಿಗೆ ಕಾತರ ,ಖುಷಿ ಹಾಗೂ ಆತಂಕ  ಇನ್ನೇನು ಸ್ವಲ್ವ ಸಮಯದಲ್ಲಿ ಮದುವೆಯಾಗುತ್ತದೆ ಎಂದು.  ಮದುವೆ ಸಂತೋಷದ  ವಿಚಾರ ಅಲ್ಲವೇ ಇಲ್ಲಿ ಆತಂಕ  ಯಾಕೆ? ಅಂತ ಮಾತ್ರ ಕೇಳಬೇಡಿ! ಯಾಕಂದ್ರೆ ನನಗೂ ಗೊತ್ತಿಲ್ಲ ಬಹುಶಃ ಇದು ಕೆಲವರ  ಭಾವನೆಗೆ ಸಂಬಂಧಪಟ್ಟಿದ್ದು ... ಆದರು ನಿರ್ದಿಷ್ಟ ಅಲ್ಲದೆ ಅಂದಾಜು ಪ್ರಕಾರ ಹೇಳುದಾದರೆ ವರನಿಗೆ .. ಪತ್ನಿಯಾಗಿ ಬರುವ ಹೆಣ್ಣು ತನ್ನೊಂದಿಗೆ ತನ್ನ  ಮನೆಯವರೊಂದಿಗೆ ಹೊಂದಿಕೊಳ್ಳುವಳೇ ಎಂಬ ಆತಂಕ ಇದ್ದರೆ .. ವಧುವಿಗೆ ಹೊಸಮನೆಯನ್ನು ಬೆಳಗಿಸಬೇಕಾದವಳು ನಾನು ನನ್ನಿಂದ ತಪ್ಪಾದರೆ ಅಮ್ಮನ ತರ ತಿಳಿ ಹೇಳುವ ಅತ್ತೆ  ಆಗಿರದಿದ್ದರೆ?  ಹಾಗೂ ಆ ಮನೆಯಲ್ಲಿ ನ ಇತರ ಸದಸ್ಯರು ಹೇಗೋ ಎನೋ? ಎಂಬ  ಯೋಚನೆ ಇದ್ದೇ ಇರುತ್ತದೆ .
      ಈಗ ಅವರ ವಿಚಾರ ಬಿಟ್ಟು,  ಮದುವೆಯ ಸಂಭ್ರಮ ಕ್ಕೆ ಬರೋಣ. ಮದುವೆ ಸಮಾರಂಭ ದಲ್ಲಿ ವಧು-ವರರನ್ನು ಬಿಟ್ಟರೆ ಹೈಲೈಟ್ ಯಾರು ಹೇಳಿ?.  ಹಾ! ಮತ್ತೆ ಇನ್ಯಾರು ನಾವೇ ಅಲ್ಲವೇ?. ವಸ್ತ್ರಭರಣ   ಧರಿಸಿಕ್ಕೊಂಡು ಒಡಾಡುವ ಹೆಂಗಳೆಯರು, ಯುವತಿಯರು ಹಾಗೂ ಮಕ್ಕಳು ಇವರಿಗೆ ಕಡಿಮೆಯೇ ನೋಡಲೇಬೇಕು . ಯಾಕೆಂದರೆ ಮಾರುಕಟ್ಟೆಯಲ್ಲಿ ಯಾವ ಯಾವ ತರಹದ ಡಿಸೈನರ್ ಸೀರೆ ದುಪ್ಪಟ್ಟ ಇತ್ಯಾದಿ ಬಂದಿದೆ ಎಂಬುದನ್ನು ಇವರಿಂದಲೇ ತಿಳಿದುಕೊಳ್ಳಬಹುದು ಆ ರೀತಿ ಅಲಂಕೃತರಾಗಿ ಇರುತ್ತಾರೆ ಅವರಿದ್ದರೇನೇ ಮದುವೆಗೊಂದು ಕಲೆ ಅಲ್ವ. ಅವರನ್ನು ಯಾರಿಗೂ ಮೀರಿಸೋಕೆ ಆಗದು ಅನ್ನೋದು ಅಷ್ಟೇ ಸತ್ಯ.  ಹುಡುಗಿಯರು ಹಿಂದೂ ಸಂಪ್ರದಾಯ ಪ್ರಕಾರ ಭಾರತೀಯ ನಾರಿಯಾಗಿ ಸೀರೆ ಉಟ್ಟು ಕೊಂಡರೆ ಅದೇ ನೋಡೋಕೆ ಚಂದ ಮಾರಾರ್ರೆ. ಇದನ್ನು ಯಾವುದೇ ಇಥರೇ ಬಟ್ಟೆಗಳಿಗೆ ಹೋಲಿಸಿಕೊಂಡರು ಅಷ್ಟೇ. ಸೀರೆ ಉಟ್ಟ ನಾರಿಯರಂತೂ ಹುಡುಗರ ಮನ ಗೆಲ್ಲದಿರೊಲ್ಲ.
                 ಒಂದೆಡೆ ಜೋಡಿ ಒಂದಾಗಲು ಕಾತರದಿಂದ ಕಾಯುತ್ತಿದ್ದರೇ ಇನ್ನೊಂದೆಡೆ ಮದುವೆಗೆ ಬಂದಿರುವ  ಮಗ/ಮಗಳ ಹೆತ್ತವರು ವಧು ವರರ ಅನ್ವೇಷಣೆಯಲ್ಲಿ ಇರುತ್ತಾರೆ ..ಅದರಲ್ಲೂ ಇನ್ನು ಕೆಲವರು (ಹುಡುಗ/ಹುಡುಗಿಯರು ) ತನಗೆ ಇಷ್ಟ ಆದವರ ಮುಂದೆ ಕೆಲಸವಿಲ್ಲದಿದ್ದರು ಹತ್ತಾರು ಬಾರಿ ಓಡಾಡುತ್ತಾರೆ. ಹೀಗೆ ಅನೇಕ ತರಹದ ಚಿಕ್ಕ ಪುಟ್ಟ ಸನ್ನಿವೇಶಗಳು ಬರುವುದು ಸಹಜ ಅಲ್ಲವೇ.
ಈಗ ಮದುವೆಯ ವಿಧಾನಗಳತ್ತ ಬರೋಣ.
ಅನುಬಂಧ ಮಾಲಾ
         ಮೊದಲು  ಅನುಬಂಧ ಮಾಲಾ ಎಂಬ ಕ್ರಮ ಇದೆ. ವಧು-ವರರು ತಮ್ಮ ಕೈಯ್ಯಲ್ಲಿ ಒಂದೊಂದು ಹೂವಿನ ಹಾರ ಹಿಡಿದುಕೊಳ್ಳುವುದು ಒಂದು ಕಡೆಯಿಂದ ವಧು ಮತ್ತೊಂದು  ಕಡೆಯಿಂದ ವರನು ಬಂದು ಪರಸ್ಪರ ನೀರಿಕ್ಷಿಸುವುದು ( ಮಂತ್ರೋಚ್ಚಾರಣೆ  ಮಾಡುತ್ತ ) ನೀರಿಕ್ಷಿಸಿದ ಕುರುಹಾಗಿ ವಧು ತನ್ನ ಕೈಯಲ್ಲಿರುವ ಪುಷ್ಪಹಾರವನ್ನು ವರನ ಕೊರಳಿಗೂ , ವರನು ತನ್ನ ಕೈಯ್ಯಲ್ಲಿರುವ ಪುಷ್ಪಹಾರವನ್ನು ವಧುವಿನ ಕೊರಳಿಗೆ ಹಾಕುವುದು . ನಂತರ...
 ಕನ್ಯದಾನ 
          ಏನಿದು ಕನ್ಯಾದಾನ? ವಧುವಿನ ಮಾತಾ ಪಿತೃಗಳು ವಧುವಿನ ಪ್ರವರವನ್ನು ಹೇಳಿ ವಧುವನ್ನು ವರನಿಗೆ ಪ್ರತಿಪಾದನೆ ಮಡುತ್ತಾರೆ.ಆಮೇಲೆ ವಧುವಿನ ಪಿತೃವು ವರನಿಗೆ ಈ ವಧುವು ಧರ್ಮದಲ್ಲಾಗಲಿ, ಅರ್ಥದಲ್ಲಾಗಲಿ,  ಕಾಮದಲ್ಲಾಗಲಿ ಅತಿಕ್ರಮಿಸಲ್ಪಡಬಾರದು ಎಂದು ಹೇಳುತ್ತಾರೆ  ವರನು ಅದಕ್ಕನುಸಾರವಾಗಿ ನಾನು ಅವಳನ್ನು  ಧರ್ಮದಲ್ಲಾಗಲಿ ಅರ್ಥದಲ್ಲಾಗಲಿ ಕಾಮದಲ್ಲಾಗಲಿ   ಆತಿಕ್ರಮಿಸುದಿಲ್ಲ ಎಂದು ಮೂರು ಬಾರಿ ಹೇಳುತ್ತಾನೆ.ಈ ಮೂರು ಬಾರಿ ಹೇಳಿಕೆಗೆ ಮಹತ್ತರ ಸ್ಥಾನವಿದೆ. ಇದು ಪ್ರತಿಜ್ಞೆ ನೀಡಿದ ಹಾಗೆ...
ಮಾಂಗಲ್ಯಧಾರಣೆ
            ವಿವಾಹ ಬಂಧನಕ್ಕೆ ಪ್ರಬಲವಾದ ನಿದರ್ಶನವೆಂದೇ ಭಾವಿಸುವ  ಮಾಂಗಲ್ಯಧಾರಣೆ ಎಂಬ ಸಂಪ್ರದಾಯ ಇಂದು ನಿನ್ನೆಯದಲ್ಲ.. ವಧು ಮಂಗಳಸೂತ್ರ ಧರಿಸುವುದು ಹಿಂದೂ ಮದುವೆಯ ಸಂಪ್ರದಾಯ . ಮಂಗಳಸೂತ್ರ ಅಥವಾ ತಾಳಿ ಎನ್ನುವ ಪದಗಳು ಸಂಸೃತದಿಂದ ಬಂದಿದೆ .ಸಂಸೃತದಲ್ಲಿ ಮಂಗಳ ಎಂದರೆ ಆಶೀರ್ವಾದ/ ಸಂತೋಷ ಎಂದು ಸೂತ್ರವೆಂದರೆ ದಾರ ಎಂದು ಅರ್ಥ.
             ಮಾಂಗಲ್ಯವು ವಧುವಿನ ದಾಸ್ಯದ ಸಂಕೇತವಲ್ಲ ಬದಲಾಗಿ ವರನ ಭಾದ್ಯತೆಯ ಸಂಕೇತ ಈ ಮಾಂಗಲ್ಯ ತಂತುವನ್ನು ಸಕಲ ಸೌಭಾಗ್ಯ ನಿಧಿಯು ಮಂಗಳಗಳ ವಿಧಿಯು ಆದ  ವಧುವಿನ ಕೊರಳಿನಲ್ಲಿ ಕಟ್ಟಿ ವರನು ತನ್ಮೂಲಕ ತನ್ನ ಬಾಳಿಗೆ ದೃಢತೆಯನ್ನು ಅವಲ ಜೀವನಕ್ಕೆ ಶಾಶ್ವತೆಯನ್ನು ತುಂಬಿಕೊಡುತ್ತಾನೆ ನೂರು ಶರತ್ಕಾಲ ಆಕೆಗೆ ಸುಂದರ ಜೀವನ ನೀಡುವ ಭರವಸೆ ಮೂಡಿಸುತ್ತಾನೆ.
"ಮಾಂಗಲ್ಯಮ್ ತಂತು ನಾನೇನಾ
ಮಾಮ ಜೀವನ ಹೇತುನಾ
ಕಂಠೇ ಭಾದ್ನಾಮಿ ಸುಭಗೇ
ತ್ವಂ ಜೀವ ಶರದಾಂ ಶತಂ''  
              ಈ ಶ್ಲೋಕವನ್ನು ವಿವರಿಸಿ ನೋಡಿದರೆ "ನನ್ನ ಜೀವನಕ್ಕೆ  ಆಧಾರವಾದ ಮಾಂಗಲ್ಯವನ್ನು ಧರಿಸಿ ನನ್ನ  ಆಯುಸ್ಸುನ್ನು ತಡೆಯುತ್ತಿರುವ ನೀನು ಮುತ್ತೈದೆಯಾಗಿ ನೂರು ವರ್ಷ ಬಾಳು"...ಎಂದು
ಸಪ್ತಪದಿ
           ಇವೆಲ್ಲ ಶಾಸ್ತ್ರವಾದ   ಬಳಿಕ ಸಪ್ತಪದಿಗಳಲ್ಲಿ ವಧು ನಡೆಯುವಳು . ಹೀಗೆ ಪ್ರತಿಯೊಂದು  ಹಿಂದು ಸಮುದಾಯದ  ಮದುವೆಯಲ್ಲಿ ಮದುವೆ ಹೆಣ್ಣು ಗಂಡು ಸಪ್ತಪದಿ ತುಳಿಯಲೇಬೇಕು .  ಈ ಏಳು ಹೆಜ್ಜೆಗಳಲ್ಲೂ ತಮ್ಮ ಮುಂದಿನ ಜೀವನಕ್ಕುಸಾರವಾಗಿ ವಚನಗಳನ್ನು ನೀಡುವ ಮಂತ್ರಗಳನ್ನು ಇಬ್ಬರು ಪ್ರಮಾಣ ಪೂರ್ವಕವಾಗಿ ನುಡಿಯುವ ಸಂಪ್ರದಾಯ.
          ಪತಿ ಪತ್ನಿ ತಮ್ಮ ಮುಂದಿನ ಜೀವನ ಸುಖಮಯಕರವಾಗಿ ಕಳೆದು ಸಾರ್ಥಕತೆಯನ್ನು ಪಡೆದು ಸಂತಾನಾಭಿವೃದ್ಧಿ ಮಾಡಿ ವಂಶವನ್ನು ಉದ್ಧರಿಸಿ ಕೊನೆಗೆ ಮೋಕ್ಷದತ್ತ ಸಾಗುವ ಮಂತ್ರವೇ ಸಪ್ತಪದಿ ಮಂತ್ರಗಳು . ಸಪ್ತಪದಿಗಳಿಗಿರುವ ಮಹತ್ವ ಹಿಂದು ಸಂಪ್ರಾಯದಲ್ಲಿ ಅಲ್ಲದೇ ಬೇರೆ ಯಾವ ಸಂಪ್ರದಾಯದಲ್ಲೂ ಇಲ್ಲ.
ಸಪ್ತಪದಿ ಅಂದರೆ ಏಳು ಹೆಜ್ಜೆ. ಪ್ರತಿಯೊಂದು ಹೆಜ್ಜೆಗೂ ಒಂದೊಂದು ಅರ್ಥವಿದೆ.

1 .ಒಂದನೆಯ ಹೆಜ್ಜೆ:- ಈ ಹೆಜ್ಜೆ ಮದುಮಗಳಿಗೆ ಪ್ರಾಮುಖ್ಯತೆಯನ್ನು ನೀಡುತ್ತದೆ. ನಿನ್ನೊಡನೆ ನನ್ನ ಜೀವನದ ಮೊದಲ ಹೆಜ್ಜೆ ಇಡುವೇ ಇದಕ್ಕೆ ಆ ದೇವರೇ ಸಾಕ್ಷಿ .
2.ಎರಡನೇಯ ಹೆಜ್ಜೆ :- ಸ್ವರ್ಗ ಸಮಾನ ಸುಖವ ನೀಡೆಂದು ಕೈಗಳನ್ನು ಮುಗಿವೆ ಎಂದು ದಂಪತಿಗಳು ಇಡುವ ಹೆಜ್ಜೆ
3 .ಮೂರನೆಯ ಹೆಜ್ಜೆ :- ಮೂರು ಕಾಲದಲ್ಲೂ ಏಕ ರೀತಿ ನಾ ಸಹಚರನಾಗಿರುವೆ.ಅಂದರೆ ಜೀವನದ ಏಳಿಗೆ ಸುಖ ಹಾಗೂ ಸಂಪತ್ತು ರಕ್ಷಿಸುದರ ಜೊತೆಗೆ ತೃಪ್ತಿಯ ಜೀವನ ನೀಡುವಂತೆ ಮೂರನೇ ಹೆಜ್ಜೆ ಇಡಲಾಗುತ್ತದೆ.
4.ನಾಲ್ಕನೇಯ ಹೆಜ್ಜೆ :- ಮಮತೆ ಮೋಹ ಸುಖದುಃಖದಲ್ಲಿ ಜೊತೆಯಲ್ಲೇ ಇರುವೆ
5.ಐದನೆಯ ಹೆಜ್ಜೆ:- ಜೊತೆಯಾಗಿ ನಾವು ಅಜ್ಞಾನದಿಂದ ಮುಕ್ತರಾಗೋಣ ಅಂದರೆ ನಾವಿಬ್ಬರು ಒಬ್ಬರೊನ್ನೊಬ್ಬರು ದೂಷಿಷಬಾರದು
6.ಆರನೆಯ ಹೆಜ್ಜೆ :- ಋತುಗಳಲ್ಲಿ ನಲಿವ ಪ್ರಕೃತಿಯು ಸ್ವಾಗತ ನೀಡಲಿ ಎಂದು ಹಾರೈಸು ನಮ್ಮನು ದೇವಾ ಎಂದು
7 .ಏಳನೆಯ ಹೆಜ್ಜೆ :- ಋಷಿಗಳ ಸ್ಮರಣೆ ಮಾಡುತ ಹರಸಿ ನಮ್ಮನು ಎಂದು ಬೇಡುವೆ .ಈ ಮೂಲಕ ನೀನು ಸಂಪೂರ್ಣ ನನ್ನವಳಾಗಿರುವೆ.ಈ ವಿವಾಹ ಸದಾಕಾಲ ಅರಳುತ್ತಿರಲಿ ಎಂದು ಹೆಳುತ್ತಾನೆ ಅದೇ ರೀತಿ ಪತ್ನಿ ಪತಿಗೆ ಈಗ ವೇದಾನುಸಾರವಾಗಿ ನಾನು ನಿನ್ನ ಪತ್ನಿಯಾಗಿರುವೆ ನಾವಿಬ್ಬರು ನಿಷ್ಠೆಯಿಂದ ಬಾಳೋಣ ಎಂದು .
             ಹೀಗೆ ಇಂತಹ ಸಾಂಪ್ರದಾಯಿಕ ಮದುವೆಗಳು ನಮ್ಮ ಆಧುನಿಕ ಜಗತ್ತಿನಲ್ಲಿ ಮರೆಯಾಗಿ ಉಳಿಯದಿದ್ದರೆ ಸಾಕು. ಹಿಂದೂಗಳು ಮದುವೆ ಸಂಬಂಧಕ್ಕೆ ಬಹಳಷ್ಟು ಮಹತ್ತ್ವ ನೀಡುತ್ತಾರೆ. ಈ ಮದುವೆಗೆ ಪ್ರಮುಖ ಸಾಕ್ಷಿ "ಅಗ್ನಿ ದೇವ " ಯಾವ ಸಂಪ್ರದಾಯವನ್ನು ಅನುಸರಿಸಿದರೂ ಈ ಪವಿತ್ರ "ಅಗ್ನಿಸಾಕ್ಷಿ " ಯ  ಸುತ್ತಲೂ  ಏಳು ಬಾರಿ ಪ್ರದಕ್ಷಿಣೆ ಬರದೆ  ಪವಿತ್ರ ಸಂಬಂಧಕ್ಕೆ  ಕಾರಣರಾಗದೇ  ಮದುವೆ ಪರಿಪೂರ್ಣವಾಗದು ಎಂಬುದು ಅಕ್ಷರಃ ನಿಜ.
           ಸಂತೃಪ್ತಿಯ ವೈವಾಹಿಕ ಜೀವನವೆಂದರೆ ಭಾವನಾತ್ಮಕ ಒಂದುಗೂಡುವಿಕೆ, ಅನ್ಯೋನ್ಯತೆ ಮತ್ತು ನಡುವಿನ ಪ್ರೀತಿ ಸಂಬಂಧದೊಂದಿಗೆ ಜೀವನದುದ್ದಕ್ಕೂ ಆತ್ಮ ಸಂಗತಿಗಳಾಗಿರುವುದು.
ಸುಪ್ರೀತ ಭಂಡಾರಿ,
ಸೂರಿಂಜೆ



ಮರ್ಕಟ ಮನಸ್ಸು

ಬಂದ ಕನಸು‌ ನಿಜವಾಗಬಾರದೆ

ಹೊದ ಯಶಸ್ಸು ತಿರುಗಿ ಬರಬಾರದೆ
ಕಳೆದುಕೊಂಡಿರೊದ್ದನ್ನ ನೆನೆದು ಇರುವುದನ್ನ ಕಳೆದುಕೊಳ್ಳುವ ಭೀತಿ ಇಲ್ಲದೆ
ವಾಸ್ತವ ಅತ್ಮ ತೃಪ್ತಿ ಅನುಭವಿಸದೆ 
ವಿಧಿಯನ್ನು ದೂರುವ ಈ ಮರ್ಕಟ ಮನಸ್ಸನ್ನ ನಾನು ಹೇಗೆ  ಅರ್ಥೈಸಲಿ...??

ನಿನ್ನ ಸೌಂದರ್ಯ ವರ್ಣಿಸಲು ಪದಗಳೆ ಸಾಲುತ್ತಿಲ್ಲ
ನಿನ್ನ ಅಂಧದ ಗಣಿಯೆದುರು ನನ್ನ ಪದಕೋಶಗಳು ಮಂಡಿಯೂರಿ ಕುಳಿತಿವೆ
ತುಸು ಮೆಲ್ಲಗೆ ಹೇಳುವೆ ಗೆಳತಿ ಕೋಟಿಗೊಬ್ಬಳು ನೀನು
ಅದರೂ ನಿನ್ನ ಸೌಂದರ್ಯಕ್ಕೆ ಟ್ಯಾಕ್ಸ್ ಕಟ್ಟಲು ಅಗದು ನನಗೆ
ನಾನೊಬ್ಬ ಬಡ ನಿನ್ನ ಸೌಂದರ್ಯ ಆರಾಧಕ


ಶ್ರೀಶ ಭಂಡಾರಿ,ಮಾಡವು

ಜನರಶನ್ ಗ್ಯಾಪ್

ಅಪ್ಪ ನೆಟ್ಟ ಆಲದ ಮರ ಅಂತಲೋ
ಮಾವಿನ ಮರ ಅಂತಲೋ
ನಾನು ನೇಣು ಹಾಕಿ ಕೊಳ್ಳಲಾರೆ
ಅಂದ ನನ್ನ ಮಗ
ನಾನು ದಂಗಾದೆ
ಟ್ವಿಟ್ಟರ್ ವಾಟ್ಸಪ್ ಫೇಸ್ಬುಕ್
ಅಂತ 24ಗಂಟೆ ಇರಬೇಡ
ಮೊಬೈಲ್ ನಲ್ಲಿ
ಸ್ವಲ್ಪ ಓದು ಅಂದದ್ದಕ್ಕೆ

ನಿಮ್ಮ ಕಾಲದಲ್ಲಿ ಅದೆಲ್ಲಾ
ಇರಲಿಲ್ಲ
ಅದಕ್ಕೆ ಹೊಟ್ಟೆ ಕಿಚ್ಚು ಅಂದ
ನಾನು ದಂಗಾದೆ

ಹಿರಿಯರಾಗಿ ಕಿರಿಯರಿಗೆ
ಬುದ್ದಿ ಹೇಳಿದ್ರೆ
ಅದು ಹೊಟ್ಟೆ ಕಿಚ್ಚೇ

ಸಕ್ಕರೆ ಕಾಯಿಲೆಯವ
ಸಕ್ಕರೆ ತಿನ್ನುವವರ ಕಂಡು
ಜಾಸ್ತಿ ಸಕ್ಕರೆ ತಿನ್ನಬೇಡಿ
ಅಂದರೆ
ಕುಡಿದು ಲಿವರ್ ಕಳಕೊಂಡವ
ಕುಡಿಯುವವರಿಗೆ
ಕುಡಿಯಬೇಡಿ
ಅಂದರೆ
ಓದದೆ ಫೇಲ್ ಆದವ
ಓದದವರಿಗೆ ಓದಿ
ಅಂದರೆ
ಹೊಟ್ಟೆ ಕಿಚ್ಚೇ
ಕೇಳಿದರೆ ಸಾಕು ಅಂತಾನೆ
ಜನರೇಶನ್ ಗ್ಯಾಪ್

ನಮ್ಮಪ್ಪ ನಮ್ಮಮ್ಮ
ಹೇಳಿದ್ದನ್ನು ನಾವು
ಕೇಳಿದ್ದೇವೆ
ಆದರೆ ನಮ್ಮ ಮಕ್ಕಳೇಕೆ
ಕೇಳೋಲ್ಲ

ಸುಮ್ಮನೆ ಇದ್ದೀಯಾ
ನನ್ ಶರ್ಟ್ ಗೆ
ಇಸ್ತ್ರಿ ಮಾಡು
ಮಗ ಅಂದಾಗ ಪೆಚ್ಚಾಗಿ
ನಗು ತಂದುಕೊಂಡು ಎದ್ದೆ
ನನ್ ಅಪ್ಪನ ಬಾರುಕೋಲು
ನೆನಪಾಯಿತು
ಆದರೆ ಏನು ಮಾಡುವುದು
ಫೀಸ್ ಫಿಲ್ಮ್ ಪಾಸ್
ಬಟ್ಟೆ ಬರೆಗೆ
ದುಡ್ಡು ಕೊಡುವುದು
ಮಾತ್ರ ನನ್ನ ಕೆಲಸ
ನಾನು ಹಣ ಇರಲೇ ಬೇಕಾದ
ಎಟಿಎಂ
ಏನ್ ಮಾಡೋದು
ಜನರೇಶನ್ ಗ್ಯಾಪ್
 
ಸುಧಾಕರ್ ಬನ್ನಂಜೆ


Friday 25 August 2017

ಸ್ವಾಗತ

ಬಾ ಗಣಪ ಬಾರೋ...
ಬಾ ಬೆನಕ ಬಾರೋ...
ಭಾದ್ರಪದ ಚೌತಿಯ ಬಂಧುವೇ ಬಾರೋ.||
ಒಂದನೆಯ ದಿನ ನಾ ವಂದಿಸುವೆ ಬಾರೋ.
ಒಂದು ವರವ ನೀ ನೀಡೆನಗೆ ಬಾರೋ.||
ಎರಡನೆಯ ದಿನ ನಾ ಎಡೆಯಿಡುವೆ ಬಾರೋ.
ಒಡಗೂಡಿ ಬಾಳುವ ವರವ ನೀ ತಾರೋ.||
ಮೂರನೆಯ ದಿನ ನಿನಗೆ ಮುಡಿಪಿಡುವೆ ಬಾರೋ.
ಮೂಜಗವನಾಳುವ ದೊರೆಯೆ ನೀ ಬಾರೋ.||
ನಾಲ್ಕನೆಯ ದಿನವೂ ನಾ ನಮಿಸುವೆನು ಬಾರೋ.
ನಾಮಾಮೃತವ ಜಪಿಸೊ ಭಾಗ್ಯ ನೀ ತಾರೋ.||
ಐದನೆಯ ದಿನ ನಾ ಕೈಮುಗಿವೆ ಬಾರೋ.
ಐಸಿರಿಯ ನೀ ನೀಡಿ ಹರಸೆನಗೆ ಬಾರೋ.||
ಆರನೆಯ ದಿನ ಹರಳೆ ಆರತಿಯು ಬಾರೋ.
ಆರದಿರುವ ಜ್ಞಾನ ಜ್ಯೋತಿಯನು ತಾರೋ.||
ಏಳನೆಯ ದಿನ ಎಳ್ಳುಬೆಲ್ಲದ ನೈವೇದ್ಯ ಬಾರೋ.
ಏಳೇಳು ಜನ್ಮಕೂ ಆರೋಗ್ಯ ಭಾಗ್ಯ ತಾರೋ.||
ಎಂಟನೆಯ ದಿನ ಬಾಳೆ ಮಂಟಪವು ಬಾರೋ.
ಎಂಟು ದಿಕ್ಕುಗಳಿಂದ ಅಷ್ಟೈಶ್ವರ್ಯ ತಾರೋ.||
ಒಂಬತ್ತನೆಯ ದಿನವೂ ಹಂಬಲಿಸುವೆನು ಬಾರೋ.
ಒಂದಾಗಿ ನವಧಾನ್ಯ ಸಿರಿಯ ನೀ ತಾರೋ.||
ಹತ್ತನೆಯ ದಿನ ತುಪ್ಪದಾರತಿಯು ಬಾರೋ.
ಉತ್ತು-ಬಿತ್ತುವ ಶಕ್ತಿಯನು ನನಗೆ ನೀ ತಾರೋ.||
ಹನ್ನೊಂದನೆಯ ದಿನ ಹಣ್ಣುಕಾಯಿಯ ಹರಕೆ ಬಾರೋ.
ಹಿಂದೆಂದೂ ಕಾಣದ ರೂಪ ನೀ ತೋರೋ.||

ಬಾ ಗಣಪ ಬಾರೋ...
ಬಾ ಬೆನಕ ಬಾರೋ...
ಭಕ್ತ-ಭಾಂದವರ ಕೈ ಹಿಡಿದು ನೆಡಸು ಬಾರೋ.....||

✍ ಭಾಸ್ಕರ್ ಭಂಡಾರಿ. ಸಿ.ಆರ್
ಶಿರಾಳಕೊಪ್ಪ

ಜನರ ಭಕ್ತಿ ಭಾವದ ಪ್ರತೀಕವಾಗುತ್ತಿದೆ ಗಣೇಶೋತ್ಸವ...

ಹಿಂದೂ ಪರಂಪರೆಯಲ್ಲಿ ಧಾರ್ಮಿಕ ಆಚರಣೆಗಳಿಗೆ ವಿಶೇಷ ಮಹತ್ವವಿದೆ. ತಮ್ಮ ಎಷ್ಟೇ ಕಾರ್ಯದೊತ್ತಡ ಇದ್ದರೂ, ದೇವರ ಕಾರ್ಯಕ್ರಮಗಳು ಇದೆ ಎಂದರೆ ಅವೆಲ್ಲವನ್ನು ಬದಿಗೊತ್ತಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಹೀಗಾಗಿ ಧಾರ್ಮಿಕ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆಯುವುದು ತುಳುನಾಡಿನ ವಾಡಿಕೆಯಾಗಿದೆ..
                 ಇಂತಹ ಹತ್ತುಹಲವು ಆಚರಣೆಗಳಲ್ಲಿ ಶ್ರೀ ಗಣೇಶೋತ್ಸವವು ಪ್ರಮುಖ ಆಚರಣೆ ಎನಿಸಿಕೊಂಡಿದೆ. ಇಲ್ಲಿ ಪ್ರಮುಖವಾಗಿ ಗಣೇಶೋತ್ಸವವು ಆರಂಭದಲ್ಲಿ ಒಂದು ಧಾರ್ಮಿಕ ಆಚರಣೆಯಾಗಿರಲಿಲ್ಲ. ದೇಶದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಭಾರತೀಯರನ್ನು ಒಟ್ಟು ಸೇರಿಸುವ ನೆಪದಲ್ಲಿ ಬಾಲಗಂಗಾಧರ ತಿಲಕರಿಂದ ಆರಂಭಗೊಂಡ ಈ ಉತ್ಸವು ಇಂದು ದೇಶದ ಮೂಲೆ ಮೂಲೆಯಲ್ಲಿ ಅದ್ದೂರಿಯ ಅಚರಣೆಯಾಗಿ ವೈಭವ ಸಾಗುತ್ತಿದೆ.                  ಅಂದು ಸಂಘಟನೆಯ ಉದ್ದೇಶದಿಂದ ಆರಂಭದಿಂದ ಆಚರಣೆ ಇಂದು ಧಾರ್ಮಿಕತೆಯ ರೂಪ ಪಡೆದುಕೊಂಡಿದೆ. ಅದರಲ್ಲೂ ಊರಿನ ಹತ್ತು ಸಮಸ್ತರು ಸೇರಿಕೊಂಡು ಶ್ರದ್ಧಾಭಕ್ತಿಯಿಂದ ಸಾರ್ವಜನಿಕವಾಗಿ ಗಣೇಶನ ಹಬ್ಬವನ್ನು ಆಚರಿಸುವುದು ವಿಶೇಷವಾಗಿದೆ. ಇಂತಹ ಹಬ್ಬಗಳು ಕೇವಲ ಒಂದೇ ದಿನಕ್ಕೆ ಸೀಮಿತಗೊಳ್ಳದೆ ಹಲವು ದಿನಗಳ ಕಾಲ ನಡೆಯುವುದು ಹಬ್ಬದ ಮತ್ತೊಂದು ವಿಶೇಷವಾಗಿದೆ.
                  ಇಲ್ಲಿ ಒಂದೆಡೆ ಹೋಮ ಹವನಾದಿಗಳು ನಡೆದರೆ, ಮತ್ತೊಂದೆಡೆ ಧಾರ್ಮಿಕ ಸಭೆಯಲ್ಲಿ ಜನರಿಗೆ ಒಂದಷ್ಟು ಧರ್ಮದ ವಿಚಾರವನ್ನು ತಿಳಿಸುವ ಕಾರ್ಯ ನಡೆಯುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡಾ ಭಕ್ತಾಭಿಮಾನಿಗಳಿಗೆ ರಸದೌತಣ ನೀಡುವುದು ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡುತ್ತದೆ.
                  ಹಬ್ಬವನ್ನು ಸಾರ್ವಜನಿಕವಾಗಿ ಆಚರಿಸುವ ಜತೆಗೆ ಕೆಲವೊಂದೆಡೆ ಕುಟುಂಬದ ಸದಸ್ಯರು ಸೇರಿ ಮನೆಯಲ್ಲೂ ಆಚರಿಸುವ ಸಂಪ್ರದಾಯ ಬೆಳೆದು ಬಂದಿದೆ. ಇವುಗಳಲ್ಲಿ ಬಹುತೇಕ ಮನೆಗಳಲ್ಲಿ ಗಣೇಶನ ಮೂರ್ತಿಯನ್ನಿಟ್ಟು ಪೂಜಿಸುವ ಸಂಪ್ರದಾಯವೂ ಬೆಳೆದು ಬಂದಿದೆ. ಇನ್ನು ಕೆಲವೆಡೆ ಚೌತಿ ಬಡಿಸುವುದು ಎಂಬ ಆಚರಣೆಯಾಗಿಯೂ ಆಚರಿಸುತ್ತಾರೆ. ಈ ರೀತಿಯಲ್ಲಿ ಮನೆ ಮನೆಯಲ್ಲೂ ಹಬ್ಬದ ವಾತಾವರಣ ಕಂಡುಬರುತ್ತದೆ.
               ಗಣೇಶನಿಗೆ ಧಾರ್ಮಿಕ ವಿಧಿ ವಿಧಾನಗಳು ನಡೆದ ಬಳಿಕ ಶೋಭಾಯಾತ್ರೆಯ ಮೆರವಣಿಗೆಯಲ್ಲೇ ಚೌತಿಯ ವೈಶಿಷ್ಟ್ಯತೆ ಅಡಗಿರುತ್ತದೆ. ತಮ್ಮ ಊರಿನ ಬೀದಿಯುದ್ದಕ್ಕೂ ಸಾಗುವ ಈ ಮೆರವಣಿಗೆಯು ಭಕ್ತಾಧಿಗಳ ಸಂಭ್ರಮವನ್ನು ಇಮ್ಮಡಿಗೊಳಿಸುತ್ತದೆ ಎಂದರೆ ತಪ್ಪಾಗಲಾರದು. ಹಾಡು, ಕುಣಿತ, ಬ್ಯಾಂಡ್ ವಾದ್ಯದ ಸದ್ದು ಗದ್ದಲ, ಒಂದಷ್ಟು ಸ್ತಬ್ದಚಿತ್ರಗಳು ಭಕ್ತರ ಭಕ್ತಿಯ ಪ್ರತೀಕವಾಗಿ ಮೂಡಿಬರುತ್ತದೆ. ಇಂತಹ ಗಣೇಶೋತ್ಸವ ಮತ್ತೆ ಬಂದಿದೆ. ಎಲ್ಲರೂ ಸಂಭ್ರಮದಿಂದ ಈ ಹಬ್ಬದಲ್ಲಿ ಪಾಲ್ಗೊಳ್ಳೋಣ. ಎಲ್ಲರಿಗೂ ಹಬ್ಬದ ಶುಭಾಶಯಗಳು...
 
 
ಕಿರಣ್ ಸರಪಾಡಿ, ಭಂಡಾರಿ ವಾರ್ತೆ

Tuesday 22 August 2017

ಬಾಲ ಪ್ರತಿಭೆ ಅಕ್ಷಜ್ ಗೆ ಬ್ಯಾಡ್ಮಿಂಟನ್ ನಲ್ಲಿ ದ್ವಿತೀಯ ಸ್ಥಾನ.

ದಿ.ಆಗಸ್ಟ್ 22 ಬೆಂಗಳೂರು: ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಖೇಲ್ ಇಂಡಿಯಾ ಬೆಂಗಳೂರು ಆಯೋಜಿಸಿದ ಹತ್ತು ವರ್ಷದೊಳಗಿನ ಬ್ಯಾಡ್ಮಿಂಟನ್ ಟೂರ್ನಮೆಂಟ್ ನಲ್ಲಿ ಅಕ್ಷಜ್ ಪಿ. ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ‌. ಇವರು ಭಂಡಾರಿ ಸಮಾಜದ ದಂಪತಿಗಳಾದ ಪದ್ಮನಾಭ ಕೆ.ಬಿ. ಮತ್ತು ಪ್ರೀತಿ ಪಿ ಭಂಡಾರಿ ಇವರ ಪುತ್ರರಾಗಿದ್ದು, ಬೆಂಗಳೂರಿನ ಕ್ರಿಷ್ಟ್ ಅಕಾಡೆಮಿ ಸ್ಕೂಲ್ ನ ನಾಲ್ಕನೇ ತರಗತಿಯ ವಿದ್ಯಾರ್ಥಿಯಾಗಿರುತ್ತಾರೆ. ಇವರು 3 ವರ್ಷಗಳಿಂದ ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ಕೋಚ್ ದರ್ಶನ್ ಎಂಬವರ ಬಳಿ ತರಬೇತಿ ಪಡೆಯುತ್ತಿದ್ದಾರೆ.
ಇವರ ಮುಂದಿನ ಭವಿಷ್ಯ ಉಜ್ವಲವಾಗಿರಲೆಂದು ಭಂಡಾರಿವಾರ್ತೆ ತಂಡವು ಶುಭ ಹಾರೈಸುತ್ತದೆ.

ವರದಿ : ವೆಂಕಟೇಶ ಭಂಡಾರಿ ಕುಂದಾಪುರ, ಸಂಪಾದಕರು ಭಂಡಾರಿವಾರ್ತೆ

Master Akshaj  Son of Sri K.B Padmanabh and Smt. Preethi Padmanabh, Bengaluru. Recently won the runner-up trophy in  U-10 Category of Open Badminton Tournament organized by Khel India on 20th Aug 2017 at  Bengaluru. For the past 3 years. Akshaj is being coached by Mr. Darshan Varnekar who was trained at Prakash Padukone Badminton Academy.  Akshaj studing in 4th std and  student of Christ Academy, Bengaluru has won several tournaments in the past.

God bless you Master Akshaj

Team bhandary varthe

Monday 21 August 2017

ಕರಾಟೆಯಲ್ಲಿ ಚಿನ್ನದ ಪದಕ ಗೆದ್ದ ಆದಿ ಯಶವಂತ್ ಭಂಡಾರಿ

        ಮಹಾರಾಷ್ಟ್ರ:  ನಲ್ಲಸೋಪರ ಈಸ್ಟ್ ಸಂತ ಅಲೋಶಿಯಸ್ ಪ್ರೌಢಶಾಲೆ(ಸಂತ ಕ್ಸೇವಿಯರ್ಸ್ ಗ್ರೂಪ್‌ ಅಫ್ ಸ್ಕೂಲ್) ನ 5ನೇ ತರಗತಿ ವಿದ್ಯಾರ್ಥಿ ಆದಿ ಯಶವಂತ್ ಭಂಡಾರಿ ಅವರು ಆಂದೇರಿ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆದ 5ನೇ ನ್ಯಾಷನಲ್ ಕರಾಟೆ ಟೂರ್ನಮೆಂಟ್‌ನಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಗಳಿಸಿದ್ದಾರೆ.
          ಮೂಲತಃ ಮುಲ್ಕಿಯವರಾದ, ಪ್ರಸ್ತುತ ನಲ್ಲಸೋಪರ ಈಸ್ಟ್ ನಲ್ಲಿ ನೆಲೆಸಿರುವ ಯಶವಂತ ಎಂ.ಭಂಡಾರಿ ಹಾಗು ಚಿತ್ರಕಲಾ ವೈ.ಭಂಡಾರಿ ದಂಪತಿಯ ಪುತ್ರ ಆದಿ ತನ್ನ 7ನೇ ವಯಸ್ಸಿನಲ್ಲೇ ಕರಾಟೆ ಕಲಿಯಲು ಆರಂಭಿಸಿದ್ದರು. ಕರಾಟೆ ಅಕಾಡೆಮಿ ಆಫ್ ಶೊಟೊಕಾನ್ ನಲ್ಲಿ ಸಂತೋಷ್ ಎಸ್.ಚೌವಾಣ್ ಅವರಿಂದ ಕರಾಟೆ ಕಲಿಯುತ್ತಿದ್ದಾನೆ. ಈಗಾಗಲೇ 3 ಚಿನ್ನ, 4 ಬೆಳ್ಳಿ ಹಾಗೂ 9 ಕಂಚಿನ ಪದಕಗಳನ್ನು ಪಡೆದು ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದಾರೆ.
ವರದಿ:  ಶ್ರೀಪಾಲ್ ಭಂಡಾರಿ, ನೆಲ್ಯಾಡಿ
            ಕಿರಣ್ ಸರಪಾಡಿ, ಭಂಡಾರಿ  ವಾರ್ತೆ

Aadi Yashwanth Bhandary  5th class student of Nallasopar East St. Aloysius High School (St. Xavier's Group of School)Mumbai won the gold medal in the 5th National Karate Tournament of Anderi Sports Academy Mumbai.


Aadi, Son of Mr Yashwanth M Bhandary and Mrs Chithrakala Y Bhandary, from native place of Mulki.  Aadi started learning Karate at age of 7. He is learning karate from Santhosh S Chauhan at karate academy "Shotokan". 

He has already won 3 gold,  4 silver and 9 bronze medal at the state,  national and international level.

Translation - Shruthi Bhandary Mangalore

Sunday 20 August 2017

ತುಳುವರು‌ ಅಡ್ಡನಾಮದಾರಿಗಳು

ತುಳುವರ ನಾಗಾರಾಧನೆಯಲ್ಲಿ‌ ಅಡ್ಡನಾಮ: 

             ಪ್ರಕೃತಿ ನಿರ್ಮಿತ ತುಳುನಾಡನ್ನು ಕುಡು-ಅರಿ‌ ಎಸೆದು ಸೃಷ್ಟಿಸಲಾಯಿತು. ಪ್ರಕೃತಿ‌ ಆರಾಧಕರಾದ ಶೂದ್ರರು‌ ಇಲ್ಲಿ ನಾಗಕುಲದ‌ ಆರಾಧನೆಗಾಗಿ, ನಾಗವಂಶಾಭಿವೃದ್ದಿಗಾಗಿ ಮತ್ತು ನಾಗದಫನಕ್ಕಾಗಿ ನಾಗಬನವನ್ನು ನಿರ್ಮಿಸಿದರು. ಹೊಲಗದ್ದೆಗಳನ್ನು ರಚಿಸುವಾಗ ನಾಗಬನಕ್ಕಾಗಿ‌ ಎಕ್ರೆಗಟ್ಟಲೆ ಭೂಮಿಯನ್ನು ಮೀಸಲಾಗಿಟ್ಟರು. ನಾಗಬನದ ಭೂಮಿಯ ನಕ್ಷೆಯನ್ನು ಕಲ್ಲುಮಣ್ಣಿನ ಗೋಡೆಯಿಂದ ತೋರಿಸಿದರು. ನಾಗರಾಧನೆಯನ್ನು ಪ್ರಕೃತಿ‌ ಆರಾಧನೆಯೊಂದಿಗೆ ಮಾಡುತ್ತಿದ್ದರು. ನಾಗದಫನ ಮಾಡಿ ನಾಗಪ್ರೇತಗಳಿಗೆ ಕಲ್ಲುಹಾಕಿ ನಂಬಿದರು. ಹಾಸಿದ ಕಲ್ಲುಗಳಿಗೆ ತಾಂಬೂಲ‌ ಇಟ್ಟು ನಾಗತಂಬಿಲ‌ ಎಂದು‌ ಆಚರಿಸಿದರು. ನಾಗಕಲ್ಲುಗಳಿಗೆಹಾಲು - ನೀರು ‌ಎರೆದು ನಾಗಪ್ರೇತಗಳನ್ನು ಶಾಂತಿಗೊಳಿಸಿದರು‌. ಮಾನವನ ಶರೀರಕ್ಕೆ ನಾಗಪ್ರೇತಗಳನ್ನು ‌ಆಹ್ವಾನಿಸಿ ‘ನಾಗೆದರ್ಪುನು’ ಅಥವಾ ‘ನಾಗವಸಾಯಿ’ ಎನ್ನುತ್ತಿದ್ದರು. ಈಗ‌ ಅದನ್ನೆ ನಾಗದರ್ಶನ‌ ಎನ್ನುತ್ತಾರೆ. ನಂತರದ ದಿನಗಳಲ್ಲಿ ವೇಷಧರಿಸಿ ‘ಮಾನಿಚ್ಚಿಲ್’ (ಮಾನವ ಶರೀರದಲ್ಲಿ ನಾಗಪ್ರೇತ‌ ಆಹ್ವಾನವಾಗುವುದು) ಭರಿಸಿ ‘ನಾಗಕೋಲ’ ನಾಗವೇಷ‌ ಎಂಬ‌ ಆರಾಧನಾ ಪದ್ದತಿಯೂ‌ ಆಚರಣೆಯಲ್ಲಿತ್ತು. ಈಗ ‘ನಾಗಮಂಡಲ’ ಎಂಬ ಹೆಸರಿನಲ್ಲಿ‌ ಅದ್ಧೂರಿಯಾಗಿ ನಡೆಯುತ್ತಿದೆ. ಈ ರೀತಿಯ‌ ಆರಾಧನೆಗಳನ್ನು‌ ಆರಂಭಿಸಿದ ತುಳುವರು ನಾಗಬನದ ಮಣ್ಣನ್ನೆ ಪ್ರಸಾದ‌ ಎಂದು ಹಣೆಗೆ‌ ಅಡ್ಡವಾಗಿ ಧರಿಸುತ್ತಿದ್ದರು. ನಾಗರಕಲ್ಲಿಗೆ ಧೂಪ ತೋರಿಸಿ ನಂತರ‌ ಅದರ ಭಸ್ಮವನ್ನು ಹಣೆಗೆ ‌ಅಡ್ಡವಾಗಿ ಧರಿಸುತ್ತಿದ್ದರು. ಧೂಪ ತೋರಿಸುವ‌ ಆರಾಧನೆಗೆ ‘ಪುಗೆಪತ್ತುನು’ ಎನ್ನಲಾಗುತ್ತಿತ್ತು. ಈಗಿನ‌ ಆರತಿ ಮತ್ತು ‌ಅರಿಶಿನ ಪ್ರಸಾದ ಹಿಂದೆ ‌ಆಚರಣೆಯಲ್ಲಿರಲಿಲ್ಲ, ಕೇವಲ ಧೂಪದ ವಿಭೂತಿಯೇ ಪ್ರಸಾದವಾಗಿತ್ತು.

ಭೂತರಾಧನೆಯಲ್ಲಿ‌ ಅಡ್ಡನಾಮ:

             ತುಳುನಾಡಿನ ಭೂತರಾಧನೆ‌ ಆರಂಭವಾದ ಬಳಿಕ ನಾಗಕಲ್ಲಿಗೆ ಪೂಜೆ ಸಲ್ಲಿಸುವಂತೆ ಭೂತಕಲ್ಲುಗಳಿಗೂ ತಂಬಿಲ, ಪನಿಯಾರ, ಮಾನಿಚ್ಚಿಲ್, ಕೋಲಗಳ ರೀತಿಯಲ್ಲಿ‌ ಆರಾಧನೆ ನಡೆಯುತ್ತಾ ಬಂದಿತು. ಇಲ್ಲಿ ಭೂತರಾಧನೆ ಮತ್ತು ನಾಗರಾಧನೆಗೆ‌ ಒಂದಕ್ಕೊಂದು ಸಾಮ್ಯತೆಯಿತ್ತು. ಇಂದು ಭೂತರಾಧನೆಯಲ್ಲಿ ಪಾಲಿಸುವ ಚರ್ವ (ಅನ್ನ) ಮತ್ತು ಕುರಿನೀರ್ (ಅರಿಶಿನ ಮತ್ತು ಸುಣ್ಣ ಬೆರೆತ ನೀರು) ಇಟ್ಟು ಪೂಜಿಲಾಗುತ್ತಿತ್ತು. ಬತ್ತಿ ‌ಆರತಿ ಕೂಡಾ‌ ಇರಲಿಲ್ಲ. ಕೇವಲ ಧೂಪದಾರತಿ ಮತ್ತು ಧೂಪದ ಭಸ್ಮಪ್ರಸಾದವಾಗಿತ್ತು. ಇಲ್ಲೂ ಕೂಡಾ‌ ಆದಿತುಳುವರು‌ ಅಡ್ಡನಾಮ ಧರಿಸುತ್ತಿದ್ದರು. 

ತುಳುನಾಡಿನ ಜೈನರ‌ ಆರಾಧನೆಯಲ್ಲಿ‌ ಅಡ್ಡನಾಮ: 

             ತುಳುನಾಡಿನಲ್ಲಿ ಜೈನ ಧರ್ಮ‌ ಉಗಮವಾದ ನಂತರ ಮುಡಾಂಬಿ‌ ಊರುಗಳಲ್ಲಿ ಪ್ರಥಮವಾಗಿ ಜೈನಬಸದಿಗಳು ನಿರ್ಮಾಣವಾಯಿತು. ಜೈನರು ಬಸದಿ ದೇವರುಗಳ ಜೊತೆಗೆ ತಮ್ಮಮೂಲ‌ ಆಚರಣೆಗಳಾದ ಪ್ರಕೃತಿ‌ ಆರಾಧನೆ, ನಾಗ-ಭೂತರಾಧನೆಯನ್ನು ಮುಂದುವರೆಸಿದರು. ಜೈನ ಧರ್ಮದ ಸಂಸ್ಥಾಪಕ ವೃಷಭದೇವ(ಆಧಿನಾಥ)ನು ಶಿವನಂತೆ ಮಹಾಯೋಗಿ‌ಯಾಗಿದ್ದನು. ಶಿವನಂತೆ‌ ಆಧಿನಾಥನು ಕೈಲಾಸದಲ್ಲಿ ತಪಸ್ಸು ಮಾಡಿದವನು. ಇವನಿಗೂ ಕೈಲಾಸದಲ್ಲೇ ಜ್ಞಾನೋದಯವಾಗಿತ್ತು. ನಂದಿ‌ ಇವರಿಬ್ಬರ ಚಿಹ್ನೆಯಾಗಿತ್ತು. ಇವರಿಬ್ಬರ ತಪಸ್ಸಿನ ಭಂಗಿ, ಭೋದಿಸಿದ ತತ್ವಗಳು‌ ಒಂದೇ ರೀತಿಯಲ್ಲಿತ್ತು ‌ಎಂಬುದು ಗಮನಾರ್ಹ. ಜೈನರೂ ‌ಅಡ್ಡನಾಮದಾರಿಗಳಾಗಿದ್ದರು.

ಶಿವಶರಣರ‌ ಅಡ್ಡನಾಮ: 

             ತುಳುನಾಡಿಗೆ ‌ಆಗಮಿಸಿದ ಶಿವಶರಣರು (ಶೈವರು) ಶಿವಾಲಯವನ್ನು ಕಟ್ಟಿ ‘ಆಲಡೆ’ ಯನ್ನು‌ ಆರಂಭಿಸಿದರು. ತುಳುನಾಡಿನಲ್ಲಿ ದೇವರ‌ ಆರಾಧನೆಯನ್ನು ಪ್ರಾರಂಭಿಸಿದರು. ಈ ಶಿವಶರಣರು ಕೂಡಾ‌ ಅಡ್ಡನಾಮ ಧರಿಸುತ್ತಿದ್ದರು. ತುಳುವರು ನಾಗ-ಭೂತರಾಧನೆಯೊಂದಿಗೆ ಶಿವರಾಧನೆಯನ್ನೂ ಮಾಡಲು‌ ಆರಂಭಿಸಿದರು. ಜೈನ ತುಳುವರು ಕೂಡಾ ಜೈನಧರ್ಮದೊಂದಿಗೆ ನಾಗ , ಭೂತ ಮತ್ತು ಶಿವರಾಧನೆಯನ್ನುಮಾಡುತ್ತಾರೆ. ಜೈನ ರಾಜರು‌ ಎಲ್ಲ ಜನಾಂಗದ‌ ಆಚರಣೆಗಳನ್ನು ಸಮಾನಾಗಿ ಗೌರವಿಸಿ ತಾವೂ ‌ಆರಾಧಿಸಿಕೊಂಡು ಬಂದರು. ಹೀಗಾಗಿ‌ ಇಲ್ಲಿ ಯಾವೊಬ್ಬನ ಧಾರ್ಮಿಕತೆಗೂ ತೊಡಕಾಗಲಿಲ್ಲ.

ವೈಷ್ಣವರ‌ ಆಗಮನ ಮತ್ತು ‌ಅಡ್ಡನಾಮದ ಪತನ:

                ತುಳುನಾಡಿಗೆ‌ ಆಗಮಿಸಿದ ವಿಷ್ಣು ‌ಆರಾಧಕರಾದ ವೈಷ್ಣವರು ಬುದ್ದಿವಂತರು ಮತ್ತು ಮಡಿವಂತರು. ಅವರ ಧರ್ಮ ಪ್ರಚಾರ ತುಳುನಾಡಿನಲ್ಲಿ ವ್ಯಾಪಕವಾಯಿತು. ಜೈನಧರ್ಮದ ಸಂಸ್ಥಾಪಕ ವೃಷಭದೇವನು ವಿಷ್ಣುವಿನ‌ ಅವತಾರವೆಂದು ವರ್ಣಿಸಿ ಪ್ರಚಾರ ಮಾಡಿ, ಶಿವಾಲಯಗಳು ಜೈನರ‌ ಅಧೀನಕ್ಕೆ ಬರುವಂತೆ ಮಾಡಿದರು. ಕ್ರಮೇಣ ಜೈನರು ವೈಷ್ಣವರ‌ ಆಚರಣೆಗಳನ್ನು ರೂಢಿಸಿಕೊಂಡು‌ ಉದ್ದ ನಾಮಧಾರಿಗಳಾಗುತ್ತಾರೆ. ಹೀಗಾದಾಗ ಶಿವಶರಣರು ವೈಷ್ಣವರಿಂದ ತೊಂದರೆಗೊಳಪಟ್ಟು ತುಳುನಾಡನ್ನು ಬಿಟ್ಟು ಹೋದರು. ಆಲಡೆಗಳ ಪೂಜಾದಿ ಕಾರ್ಯಕ್ರಮಗಳು ವೈಷ್ಣವರ ವಶಕ್ಕೆ ಹೋಯಿತು. ತುಳುವರು ವೈಷ್ಣವರ ಮಡಿವಂತಿಕೆಗೆ ಬಲಿಯಾಗಿ ಶೂದ್ರರೆನಿಸಿಕೊಂಡರು. ಹೀಗಾಗಿ‌ ಆಲಡೆಗಳಿಗೆ ತುಳುವರು ಹೋಗುವುದನ್ನು ನಿಲ್ಲಿಸಿದರು. ತಮ್ಮ ನಾಗ ಮತ್ತು ಭೂತರಾಧನೆಯನ್ನು ಮಾಡುತ್ತಾ ‌ಅಡ್ಡನಾಮದಾರಿಗಳಾಗಿ‌ ಉಳಿದರು. ಆದರೆ ಕ್ರಮೇಣ‌ ವೈಷ್ಣವರು ನಾಗರಾಧನೆ, ಭೂತರಾಧನೆ ಮುಂತಾದ‌ ಎಲ್ಲಾ ತುಳುವರ‌ ಆಚರಣೆಯನ್ನು‌ ಆಲಡೆಯಲ್ಲಿ ಸ್ಥಾಪಿಸಿದರು. ಹೀಗಾಗಿ ಶೂದ್ರರೆನಿಸಿಕೊಂಡ ತುಳುವರಿಗೆ‌ ಆಲಡೆಗೆ ಹೋಗುವುದು‌ ಅನಿವಾರ್ಯವಾಯಿತು. ಕ್ರಮೇಣ‌ ಆಚರಣೆಗಳು ಬೆರೆತು ಮೂಲನಾಗಬನ, ನಾಗಬನ ಮತ್ತು ಭೂತಾಲಯಗಳಿಗೂ ವೈಷ್ಣವರೇ ‌ಅರ್ಚಕರಾಗುತ್ತಾರೆ. ವಿವಿಧ ನಂಬಿಕೆಯಿಂದ ತುಳುವರನ್ನು ಭಯಪಡಿಸಿ ತಮ್ಮ ವಶದಲ್ಲಿ‌ ಇರಿಸಿಕೊಳ್ಳುತ್ತಾರೆ. ಕ್ರಮೇಣ ತುಳುವ ನಾಗರಾಧನೆ ಮತ್ತು ಭೂತರಾಧನೆ ಪದ್ದತಿ ವೈಷ್ಣವರ‌ ಆರಾಧನಾ ಪದ್ದತಿಯಂತೆ ಬದಲಾಗುತ್ತದೆ. ಇದೇ ರೀತಿ‌ ಅಡ್ಡನಾಮದ ತುಳುವರು ವೈಷ್ಣವರ‌ ಆಚರಣೆಗಳಿಗೆ ಬಲಿಯಾಗಿ‌ ಉದ್ದನಾಮದಾರಿಗಳಾಗುತ್ತಾರೆ.             ತುಳುವ‌ ಅಡ್ಡನಾಮದಾರಿಗಳು ವೈಷ್ಣವರಿಗೆ ತಲೆಬಾಗಿ ವೈಷ್ಣವರ‌ ಆರಾಧನೆಗೆ ಭಯದಿಂದಲೇ ಬೆಂಬಲಿಸಿದರು. ಪ್ರತೀ ಮನೆಯಲ್ಲಿ ತುಳಸಿಕಟ್ಟೆ, ಮುಡಿಪು ಕಟ್ಟುವ ಪದ್ದತಿ‌ ಆರಂಭವಾಗುತ್ತದೆ. ‘ಮುಡಿಪು’ ಎಂದರೆ ‘ತರೆತುರಪುನು’ ( ನಾಣ್ಯದಿಂದ ತಲೆಯನ್ನು ಪ್ರದಕ್ಷಣೆ ಮಾಡಿ ಹುಂಡಿ ಸಂಗ್ರಹಿಸುವುದು) ಎಂದರ್ಥ. ಸಂಗ್ರಹಿಸಿದ ಹುಂಡಿಯನ್ನು ತಿರುಪತಿಗೆ ಸಮರ್ಪಿಸುವ ಕ್ರಮವಿದು. ನಾಗ, ಭೂತರಾಧನೆಯಲ್ಲಿ ವಿವಿಧಹೋಮ, ಪೂಜಾ ಪದ್ದತಿಗಳ ಸೇರ್ಪಡೆಯಾಗುತ್ತದೆ. ಅಷ್ಟಮಂಗಲ, ನಾಗದರ್ಶನ, ನಾಗಮಂಡಲ, ಬ್ರಹ್ಮಕಲಶ‌ ಇತ್ಯಾದಿ ಕಾರ್ಯಕ್ರಮಗಳು ವೃದ್ಧಿಯಾಗುತ್ತಾ ಬಂತು. ಭೂತಗಳ ಹೆಸರು ಬದಲಾಯಿಸುತ್ತಾ ದೇವರ ಹೆಸರಿನಲ್ಲಿ ಆಚರಿಸಲಾಗುತ್ತದೆ. ಆರಾಧನೆ ಕ್ರಮ ಬದಲಾಗುತ್ತಾ ಹಳೆಯ ಭೂತರಾಧನೆಯ ಪದ್ದತಿ ನಾಶವಾಗಿ ತುಳು ಸಂಸ್ಕೃತಿಯ ಶಕ್ತಿ ಕುಂದುತ್ತಾ ಸಾಗಿದೆ. ನಾಗಬನ, ಭೂತಾಲಯಗಳಲ್ಲಿ ತದ್ವಿರುದ್ದ‌ ಎಂಬಂತೆ ಶನಿಪೂಜೆ , ಗಣಹೋಮ, ಸತ್ಯನಾರಾಯಣಪೂಜೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆಯೇ ಹೊರತು ಹಳೆಯ‌ ಆಚರಣೆಗಳು ವರ್ಷದ‌ ಒಂದು ದಿನವೂ ನಡೆಯುವುದಿಲ್ಲ. ನಾಗಬ್ರಹ್ಮನ ಕಲ್ಲಲ್ಲಿ ಶಿವಮೂರ್ತಿ ಪ್ರತಿಷ್ಠೆ ನಡೆಯುತ್ತದೆ. ಆದಿಮೂಲದಲ್ಲಿ ಹಾಕಿದ ಕಲ್ಲುಗಳನ್ನು ನಾಶಮಾಡಿ ಬನಗಳಲ್ಲಿ ಕಟ್ಟೆ ಕಟ್ಟುವ ಹುಚ್ಚು ಸಮೂಹಸನ್ನಿಯಾಗಿ ಬೆಳೆಯುತ್ತಿದೆ. ಪ್ರಕೃತಿ ಆರಾಧನೆಗಾಗಿ ಪ್ರಾರಂಭವಾದ ನಾಗಬನ, ಬೂತಾಲಯಗಳು ಕೇವಲ ಕಾಂಕ್ರೀಟ್ ದೇವಾಲಯವಾಗಿ‌ ಪ್ರಕೃತಿ ನಾಶ ಹೆಚ್ಚಾದ ಕಾರಣ, ಮಳೆಯೂ ಕಡಿಮೆಯಾಗಿದ್ದು ಬರಗಾಲ‌ ಎದುರಿಸುವ ಕಾಲ ಬಂದೊದಗಿದೆ. ಹೊಲಗದ್ದೆಗಳು ಬೆಳೆ ಬೆಳೆಯದೆ ಹಡೀಲು ‌ಬಿದ್ದಿದೆ..ಪ್ರಕೃತಿ ‌ಆರಾಧನೆಯ ತುಳು ಸಂಸ್ಕೃತಿ ಬಿಟ್ಟು ‌ಆಡಂಬರದ‌ ಆಚರಣೆಗಳಿಗೆ ಮಾರು ಹೋಗಿರುವುದು ‌ಇದಕ್ಕೆ ಕಾರಣ. ಒಟ್ಟಾರೆ, ವೈಷ್ಣವ ಪಂಥದ‌ ಆಗಮನ ತುಳುವರ ಸಂಸ್ಕೃತಿಯನ್ನು ನಾಶಮಾಡಿತು. ನಾಗರಾಧನೆ , ಭೂತರಾಧನೆಯಲ್ಲಿ ಮೂಗು ತೂರಿಸಿ ಜ್ಯೋತಿಷ್ಯವನ್ನು‌ ಅವರ‌ ಅನುಕೂಲಕ್ಕೆ ತಕ್ಕಂತೆ ಹೇರಿ ತಮ್ಮ ಹಿಡಿತದಲ್ಲಿರಿಸಿಕೊಂಡರು. ತುಳುನಾಡಿನ ಮೂಲ‌ ಅರ್ಚಕರು ಮೂಲೆಗುಂಪಾದರು. ಸರಳ, ಕೃಷಿಪ್ರಧಾನ ಮತ್ತು ಪ್ರಕೃತಿ‌ ಆರಾಧಕರನ್ನು ಕೇವಲ ಮೂರ್ತಿ ಪೂಜಕರಾಗಲು ಕಾರಣಕರ್ತರಾದರು. ಜೈನರಂತೆ ‌ಆದಿತುಳುವರಲ್ಲೂ ಪ್ರತ್ಯೇಕ ಬಲಿಷ್ಠಪಂಥವಿದ್ದಿದ್ದರೆ‌ ಇಂತಹ ಸ್ಥಿತಿಗೆ ತುಳುವರು ಬರುತ್ತಿರಲಿಲ್ಲ. ಪೂಜಾದಿ ಕ್ರಮಗಳಿಗೆ ವೈಷ್ಣವ‌ ಅರ್ಚಕರನ್ನು ‌ಅವಲಂಬಿಸಬೇಕಾಗಿ ಬರುತ್ತಿರಲಿಲ್ಲ. ಈಗ ಚಿಂತಿಸಿ ಫಲವಿಲ್ಲ.


: ಇರ್ವತ್ತೂರು ಗೋವಿಂದ ಭಂಡಾರಿ

ಕಟ್ಟು ಪಾಡು

ಕಟ್ಟುಪಾಡುಗಳ ಕಟ್ಟೋಲೆಗಳನ್ನು ಕಟ್ಟಿ
ಸ೦ಕೋಲೆಯೆ೦ಬ ಹೃದಯ ಬ೦ಧನದಿ 
ಹೊರಬರಲು ತುಡುಕಿ ಮಿಸುಕಾಡುತ್ತಿದೆ.
ನೋಡ-ಲೀ ಶತಮಾನದ ಹೆಣ್ಣು
ಇದರಿಂದ ಹೊರಗುರುಳುವ ಕಣ್ಣು ಕೇವಲಕೆಲವೇ
ಲೌಕಿಕದ ಆಸೆಆಕಾಂಕ್ಷೆಗಳಿಗೆ
ಅಬ್ಬರದ ಅಲೆಗಳು ಬಡಿಯಲು
ಎಲ್ಲೋ ಕೇಳಿ ಬರುವ ನಾದಕ್ಕೆ ತಡವರಿಸದೆ
ಕಾಲ್ಗೆಜ್ಜೆ ಕುಣಿದು ಕುಪ್ಪಳಿಸಿ,
ನೆಲಕ್ಕಪ್ಲಳಿಸಿ ಸಿಡಿದು ಕುಪ್ಪಳಿಸಿ,
ಸ್ವರ ಬೇರೆ, ಬೇರೆಯಾಗಿ ಕೇಳಿ ಬರಲು ಎಚ್ಚೆತ್ತಿತ್ತು ಮನ
ಓಡಿ ಬರುವ ಗಾಳಿಗೆ ಸಿಕ್ಕ ತರಗೆಲೆಗಳು
ಒ೦ದುಗೂಡಿ ಮೂಲೆ ಸೇರುವ೦ತೆ
ಮನಸ್ಸು ಮುದುಡಿ ಹಿ೦ದೆ ಸರಿಯಿತು.


:ನಿರ್ಮಲ ಶೇಷಗಿರಿ, ಕುಂಜಿಬೆಟ್ಟುಉಡುಪಿ

Wednesday 16 August 2017

ಭಂಡಾರಿ ವಾರ್ತೆ ಮುದ್ದು ಮಕ್ಕಳ ಸೆಲ್ಪಿ ಸ್ಪರ್ಧೆ 2017

ಫಿನಿಶಿಂಗ್ ಟಚ್ ಹಾಗೂ ಶ್ರೀ ದುರ್ಗಾ ಇಂಜಿನಿಯರಿಂಗ್ ವರ್ಕ್ಸ್ ಪ್ರಾಯೋಜಕತ್ವದಲ್ಲಿ , ಭಂಡಾರಿ ವಾರ್ತೆ ಹಮ್ಮಿಕೊಂಡಿದ್ದ ಮುದ್ದು ಮಕ್ಕಳ ಸೆಲ್ಫೀ ಸ್ಪರ್ಧೆಯ ವಿಜೇತರು.
                        

ಸುಧಾಕರ ಭಂಡಾರಿ ಮುಕ್ಕಗೆ ಸನ್ಮಾನ

ಉಡುಪಿ:  ಬ್ರಾಹ್ಮಿ ಮೋಟರ್ಸ್ ಹಾಗೂ ಬುಲೆಟ್ ಕ್ಲಬ್ ಉಡುಪಿ ಇವರ ಸಹಯೋಗದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ 20 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿನ ಉತ್ತಮ ಸೇವೆಯನ್ನು ಗುರುತಿಸಿ ಸುಧಾಕರ ಭಂಡಾರಿ ಮುಕ್ಕರವರನ್ನು  ಸನ್ಮಾನಿಸಲಾಯಿತು. 
            ಇವರು ಮೂಲತಃ ಮುಕ್ಕದವರಾಗಿದ್ದು, 1997 ರಲ್ಲಿ ಪೊಲೀಸ್  ಇಲಾಖೆಗೆ ಸೇರಿ ಬ್ರಹ್ಮಾವರ, ಮಣಿಪಾಲ,  ಉಡುಪಿಯಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿದರು. ಕಳೆದ 1 ವರ್ಷದಿಂದ ಕಾಪು ಪೊಲೀಸ್  ಠಾಣೆಯಲ್ಲಿ ಹೆಡ್ ಕಾನ್ಸ್ ಟೇಬಲ್ ಆಗಿ ವಾರೆಂಟ್ ವಿಭಾಗದಲ್ಲಿ ಸೇವೆಸಲ್ಲಿಸುತ್ತಿದ್ದಾರೆ. ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಹಲವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿರುವ ಇವರು ಶ್ಲಾಘನೆಗೆ ಪಾತ್ರರಾಗಿದ್ದಾರೆ.
ವರದಿ: ಎಸ್.ಕೆ.ಬಂಗಾಡಿ, ಸಂಪಾದಕರು ಭಂಡಾರಿ ವಾರ್ತೆ

ಸುಧಾಕರ ಭಂಡಾರಿ, ಮುಕ್ಕ


Mr. Sudhakar Bhandary Mukka was honored for good service in the police department for last 20 years, during the Independence Day celebration jointly organized by  Brahmi Motors and Bullet Club Udupi.



He is originally from mukka, joined the police department in 1997 and served in Brahmavar, Manipal, Udupi. He worked as Head Constable for the past one year in the warrant department at Kaupu police station.


Reporter: S.K.Bangady, Bhandary Varthe
Translation:  Divya Ujire, Bhandary Varthe

ತನ್ನನ್ನು ತಾನು ತಿಳಿಯುವುದು ನಿರಂತರವಾದ ಕೆಲಸ

(ಧ್ಯಾನ- 5)

ಳವಾದ ಮಾನಸಿಕ ಕ್ರಾಂತಿಯನ್ನು ಬಯಸುವಾತ ಅಧಿಕಾರದಿಂದ ಮುಕ್ತನಾಗಬೇಕಲ್ಲವೇ? ಆತ ತಾನೇ ಸೃಷ್ಟಿಸಿಕೊಂಡ ಅಥವಾ ಇತರರು ತನ್ನ ಮೇಲೆ ಹೇರಿದ ಅಧಿಕಾರದ ಆಶ್ರಯವನ್ನು ನಿರಾಕರಿಸಬಬೇಕು,ಇದು ಸಾಧ್ಯವೇ? ನಾನು ನನ್ನದೇ ಅನುಭವವನ್ನು, ಅನುಭವದ ಅಧಿಕಾರವನ್ನು, ಆಶ್ರಯಿಸದೆ ಇರುವುದು ಹೇಗೆ ಸಾಧ್ಯ? ಪುಸ್ತಕ ಗುರುಗಳು, ಮೇಷ್ಟರು,ಚರ್ಚ್, ಮಠ, ನಂಬಿಕೆಗಳು ಇಂಥ ಬಾಹ್ಯ ಅಧಿಕಾರ ರೂಪಗಳನ್ನೆಲ್ಲ ನಿರಾಕರಿಸಿದಾಲೂ ನನ್ನ ಸ್ವಂತ ತೀರ್ಮಾನ, ಸ್ವಂತ ಅನುಭವ, ಸ್ವಂತ ವಿಶ್ಲೇಷಣೆಗಳನ್ನು ಅವಲಂಬಿಸಬಹುದೆಂಬ ಭಾವನೆ ಇರುತ್ತದೆ. ಆದರೆ ಹೀಗೆ ಸ್ವಂತ ಅನುಭವ, ತೀರ್ಮಾನ, ವಿಶ್ಲೇಷಣೆಗಳನ್ನು ನೆಚ್ಚಿಕೊಳ್ಳುವುದು ಸಾಧ್ಯವೇ?  ನನ್ನ ಅನುಭವವೆಂಬುದು ನನ್ನ ಬದುಕಿನ ರೂಢಿಯ ಫಲಿತಾಂಶ, ಹಾಗೆಯೇ ನಿಮ್ಮದು ಕೂಡ ನಿಮ್ಮ ರೂಢಿಯ ಫಲಿತಾಂಶ. ನಾನು  ಮುಸ್ಲಿಂ, ಹಿಂದೂ ಅಥವಾ ಬೌದ್ಧನಾಗಿ ಬೆಳೆದಿರುವುದು. ನನ್ನ ಅನುಭವವೆಂಬುದು ನನ್ನ ಸಂಸ್ಕೃತಿ  ಸಮಾಜ,ಧರ್ಮ ಮತ್ತು ಆರ್ಥಿಕ ಸಂಗತಿಗಳ ಆಧಾರದ ಮೇಲೆ ರೂಪಗೊಂಡಿರುತ್ತದೆ.ನಿಮ್ಮ  ಅನುಭವವು ಹಾಗೆಯೇ. ನನ್ನ ತೀರ್ಮಾನಗಳು ಕೂಡ ಸಂಗ್ರಹಗೊಂಡ ನೆನಪುಗಳ,ಅನುಭವಗಳ,ವರ್ತಮಾನವನ್ನು ಸಂಧಿಸುವ ಭೂತಕಾಲದ ಪರಿಣಾಮವೇ ಅಲ್ಲವೇ ?  ಹೀಗೆ ನನ್ನನ್ನೇ ಪ್ರಶ್ನಿಸಿಕೊಂಡಾಗ,ನನ್ನ ಸಮಸ್ಯೆಯನ್ನು ಅರ್ಥಮಾಡಿಕೊಂಡಾಗ,ಕೇವಲ ಒಂದು ಸ್ಥಿತಿಯಲ್ಲಿ ಮಾತ್ರ ಸತ್ಯದ,ಹೊಸತನದ,ಕ್ರಾಂತಿಕಾರಿ ದರ್ಶನ ಸಾಧ್ಯವೆಂದು ಹೊಳೆಯುತ್ತದೆ‌.  ಆ ಸ್ಥಿತಿ ಅಂದರೆ ಮನಸ್ಸು  ಪೂರ್ಣವಾಗಿ ಖಾಲಿಯಾಗಿರುವ ಸ್ಥಿತಿ.
"ಭೂತಕಾಲವೆಂಬುದಿಲ್ಲದೆ,ವಿಶ್ಲೇಷಕನಿಲ್ಲದೆ,ಅನುಭವವಿಲ್ಲದೆ,ತೀರ್ಮಾನವಿಲ್ಲದೆ,ಯಾವುದೇ ಬಗೆಯ ಅಧಿಕಾರವಿಲ್ಲದೆ,ಮನಸ್ಸು ಪೂರಾ ಖಾಲಿಯಾಗಿರುವ ಸ್ಥಿತಿಯಲ್ಲಿ ಸತ್ಯ ಹೊಳೆಯುತ್ತದೆ"...
            ನಮ್ಮಲ್ಲಿ ಎಲ್ಲರಿಗೂ ಅಸಂಖ್ಯಾತವಾದ ಸಮಸ್ಯೆಗಳಿವೆ.ಅವನ್ನು ಅರ್ಥಮಾಡಿಕೊಳ್ಳಬೇಕಾದರೆ ನಮ್ಮ ಬಗ್ಗೆ ನಮಗೆ ಅರಿವು ಇರಬೇಕಲ್ಲವೇ? ನಮ್ಮನ್ನು ನಾವು ತಿಳಿಯುವುದು ಬಹಳ ಕಷ್ಟದ ಕೆಲಸ.ಈ ಕೆಲಸ ಏಕಾಂತದಲ್ಲಿ,ಲೋಕದಿಂದ ದೂರವಾಗಿದ್ದು ಒಂಟಿತನದಲ್ಲಿ ಸಾಧಿಸಬಹುದಾದ ಕೆಲಸವಲ್ಲ.ನಮ್ಮನ್ನು ನಾವು ತಿಳಿಯುವುದು ಮುಖ್ಯ. ಆದರೆ ಅದಕ್ಕಾಗಿ ನಾವು ಸಂಬಂಧಗಳನ್ನು ಕಡಿದುಕೊಳ್ಳಬೇಕಾಗಿಲ್ಲ.ಒಂಟಿಯಾಗಿದ್ದು, ಏಕಾಂತವಾಸದಲ್ಲಿದ್ದು.ಅಥವಾ ಪುಸ್ತಕಗಳನ್ನು ಓದಿ ನಮ್ಮನ್ನು ನಾವು ಸಂಪೂರ್ಣವಾಗಿ, ನಿಜವಾಗಿ ತಿಳಿದುಕೊಳ್ಳಲು ಸಾಧ್ಯ ಎಂಬುದು ತಪ್ಪು ಕಲ್ಪನೆ. ನಮ್ಮ ಬಗ್ಗೆ  ನಾವು ಪಡೆಯುವ ಅರಿವು ಒಮ್ಮೆ ಸಾಧಿಸಿ ಮುಗಿಸಿಬಿಡಬಹುದಾದ ಗುರಿಯಲ್ಲ. ಅದೊಂದು ನಿರಂತರವಾದ ಕೆಲಸ. ನಮ್ಮನ್ನು ನಾವು ತಿಳಿಯ ಬೇಕಾದರೆ ಕ್ರಿಯೆಗಳಲ್ಲಿ ನಮ್ಮನ್ನು ನಾವು ನೋಡಿಕೊಳ್ಳಬೇಕು. ನಮ್ಮ ಸಮಾಜದೊಡನೆ, ಮನುಷ್ಯರೊಡನೆ, ಗಂಡನೊಡನೆ, ಹೆಂಡತಿಯೊಡನೆ, ಸಹೋದರ ಸಹೋದರಿಯೊಡನೆ ನಿಮ್ಮ ಸಂಬಂಧ ಹೇಗಿದೆ ಎಂದು ನೋಡಿಕೊಳ್ಳಿ, ನೀವು ಹೇಗೆ ಪ್ರತಿಕ್ರಿಯೆ ತೋರುತ್ತಿರಿ ಎಂಬುದನ್ನು ಗಮನಿಸಿ. ಆದರೆ ಹೀಗೆ ನಮ್ಮನ್ನು ನಾವು ನೋಡಿಕೊಳ್ಳುವುದಕ್ಕೆ ಮನಸ್ಸು ಬಹಳ ಎಚ್ಚರವಾಗಿರಬೇಕು, ನಮ್ಮಲ್ಲಿ ತೀಕ್ಷ್ಣವಾದ ಗ್ರಹಿಕೆ  ಇರಬೇಕು..
              ನಾವು ಹೇಗಿದ್ದೇವೆಯೋ ಹಾಗೆಯೇ ನಮ್ಮನ್ನು ತಿಳಿಯಬೇಕೇ ಹೊರತು ನಾವು ಏನಾಗಬೇಕೆಂದಿದ್ದೇವೆ ಎಂಬುದನ್ನಲ್ಲ. ನಾವು ಏನಾಗಬೇಕೆಂದಿದ್ದೇವೆ ಎಂಬುದು ಆದರ್ಶ, ಅದ್ದರಿಂದೇ ಕಾಲ್ಪನಿಕವಾದದ್ದು, ನಿಜವಲ್ಲದ್ದು. ಏನು ಇದೆಯೋ ಅದನ್ನು ಮಾತ್ರ ಬದಲಾಯಿಸಬಹುದಲ್ಲದೆ, ಏನು ಆಗಬೇಕೆಂದಿದ್ದೇವೆಯೋ ಅದನ್ನು ಬದಲಿಸಲು ಸಾಧ್ಯವಿಲ್ಲ. ನಾವು ಹೇಗಿದ್ದೇವೆಯೋ ಹಾಗೆಯೇ ನಮ್ಮನ್ನು ಕಾಣಲು ಮನಸ್ಸು ಬಹಳ ಬಹಳ ಎಚ್ಚರವಾಗಿರಬೇಕು. ಏಕೆಂದರೆ ಏನು ಇದೆಯೋ ಅದು ಸದಾ ಬದಲಾಗುತ್ತಿರುತ್ತದೆ. ಈ ಬದಲಾವಣೆಯನ್ನು ಅರಿಯಲು ಮನಸ್ಸು ಸ್ವತಂತ್ರವಾಗಿರಬೇಕು, ಯಾವುದೇ ನಂಬಿಕೆ,ವರ್ತನೆಯ ವಿನ್ಯಾಸ, ಧರ್ಮಗಳಿಗೆ ಕಟ್ಟುಬಿದ್ದಿರಬಾರದು. ಕಟ್ಟುಬಿದ್ದಿರುವ ಮನಸ್ಸು ಏನನ್ನೂ ಅದು ಇರುವಂತೆಯೇ ಗ್ರಹಿಸಲಾರದು. ನಮ್ಮನ್ನು ನಾವು ತಿಳಿಯಬೇಕಾದರೆ ನಮ್ಮ ಮನಸ್ಸು ಎಲ್ಲ ಆದರ್ಶ,ಎಲ್ಲ ನಂಬಿಕೆಗಳಿಂದ ಮುಕ್ತವಾಗಿರಬೇಕು. ಅವು ನಮ್ಮ ನೋಟಕ್ಕೆ ಬಯಕೆಯ ಬಣ್ಣವನ್ನು ತಂದುಬಿಡುತ್ತವೆ. ನಾನು ದುರಾಸೆಯವನು, ಅಸೂಯೆ ತುಂಬಿದವನು, ಕ್ರೂರಿ, ಇತ್ಯಾದಿ ಏನೇನೋ ಆಗಿದ್ದರೆ ಆಗ ಅಹಿಂಸೆ, ಔದಾರ್ಯಗಳ ಆದರ್ಶವನ್ನು ಇಟ್ಟುಕೊಂಡು ಫಲವೇನು? ನಿಮ್ಮನ್ನು ನೀವು ಹೇಗಿದ್ದಿರೋ ಹಾಗೆ ನೋಡುಕೊಳ್ಳಿ, ಕುರೂಪಿ ಅಥವಾ ಸುಂದರ,ದುಷ್ಟ ಅಥವಾ ತರಲೆ, ಏನಾದರೂ ಆಗಿರಿ,ಯಾವುದೇ ವಿಕೃತಿ ಇಲ್ಲದೆ,ನೀವು ಹೇಗಿದ್ದೀರೋ ಹಾಗೆ ನಿಮ್ಮನ್ನು ಕಾಣಲು ಸಾಧ್ಯವಾದರೆ ಅದೇ ಗುಣ‌. ಗುಣವಿಲ್ಲದೆ ಮನಸ್ಸು ಸ್ವತಂತ್ರವಾಗಲಾರದು.
             ನಮ್ಮ ಬಗ್ಗೆ ನಮಗೆ ಜ್ಞಾನವಿಲ್ಲದಿದ್ದರೆ ಆಗ ಎಲ್ಲಾ ಅನುಭವಗಳು ಭ್ರಮೆಯನ್ನು ಮಾತ್ರ ಹುಟ್ಟಿಸುತ್ತವೆ.ನಮ್ಮ ಬಗ್ಗೆ ನಮಗೆ ಅರಿವಿದ್ದರೆ ಆಗ ಅನುಭವವು ನೆನಪುಗಳ  ಗತಿಯನ್ನು ಉಳಿಸುವುದಿಲ್ಲ.ನಮ್ಮ ಬಗ್ಗೆ ನಾವು ಅರಿಯುವುದೆಂದರೆ ಕ್ಷಣ ಕ್ಷಣವೂ ನಮ್ಮ ಉದ್ದೇಶ, ಹಂಬಲ,ಆಲೋಚನೆ, ಹಸಿವುಗಳ ಬಗ್ಗೆ ಇರುವುದನ್ನು ಇರುವಂತೆ ಕಂಡುಕೊಳ್ಳುವುದು.  ನನ್ನ ಅನುಭವ ಎಂಬ ಮಾತೇ ಮೌಢ್ಯ ಮತ್ತು ಭ್ರಮೆಗಳನ್ನು ನಾವು ಒಪ್ಪಿಕೊಂಡಿದ್ದೇವೆ ಎಂದು ಸೂಚಿಸುತ್ತದೆ, ಅದ್ದರಿಂದ ನಮ್ಮನ್ನು ನಾವು ಅರಿಯುವುದು ನಿರಂತರ ಪ್ರಕ್ರಿಯೆಯಾಗಿದೆ ‌......
ಮೂಲ: ಜಿಡ್ಡು ಕೃಷ್ಣಮೂರ್ತಿ ಪುಸ್ತಕಗಳು



✍: ಕಣಬ್ರಹ್ಮವೆಂಕಿ (ವೆಂಕಟೇಶ ಭಂಡಾರಿ), ಭಂಡಾರಿ ವಾರ್ತೆ


Tuesday 15 August 2017

ಭಂಡಾರಿ ಸಮಾಜ ಬಾಂಧವರ ಗಮನಕ್ಕೆ

ವಿಷನ್ 2020 ಯ ಅಭಿವೃದ್ಧಿಯ ಕೆಲಸಗಳು ಪ್ರಗತಿಯಲ್ಲಿದೆ .
ಇದರ ಮೊದಲ ಅಂಗವಾದ ಭಂಡಾರಿ ವಾರ್ತೆಯ ವೆಬ್ಸೈಟು ಇದೇ ಬರುವ ಆಗಸ್ಟ್ 27 ರಂದು ಮಂಗಳೂರಿನಲ್ಲಿ ಅನಾವರಣಗೊಳ್ಳಲಿದೆ.
ಭಂಡಾರಿ ಸಮಾಜದ ಅಭಿವೃದ್ಧಿಯನ್ನು ಒಳಗೊಂಡಿರುವ ವಿಷನ್ 2020 ಮುಂದಿನ ಕಾರ್ಯ ಚಟುವಟಿಕೆಗಳಿಗೆ ಕಾನೂನು ತಜ್ಞರ ಅವಶ್ಯಕತೆ ಇದೆ ಎಂದು ಮನಗಂಡಿದ್ದೇವೆ. ಆದ್ದರಿಂದ ನಾವು ಇಬ್ಬರು ಗೌರವಾನ್ವಿತ ವ್ಯಕ್ತಿಗಳನ್ನು ವಿಷನ್ 2020 ಕಾರ್ಯಕ್ರಮಗಳ ಕಾನೂನು ತಜ್ಞರಾಗಿ ನೇಮಕ ಮಾಡಿಕೊಳ್ಳುತ್ತಿದ್ದೇವೆ.

             ಪ್ರಕಾಶ್ ಭಂಡಾರಿ ಕಟ್ಲ
ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಾಹಕರು
      ಭಂಡಾರಿ ವಾರ್ತೆ ಮತ್ತು ವಿಷನ್ 2020

Monday 14 August 2017

ಡಿಜಿಟಲೀಕರಣ ಪರಿಣಾಮ ಹಾಗು ಸಮಾಜಕ್ಕೆ ಪ್ರಯೋಜನ

             ತಂತ್ರಜ್ಞಾನ ಮನುಷ್ಯ ಜೀವನದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದೆ. ಯಾಂತ್ರಿಕರಣದತ್ತ ದಾಪುಗಾಲಿಟ್ಟ ಬದುಕು "ಸರ್ವಂ ತಂತ್ರಜ್ಞಾನ ಮಯಂ" ಅನ್ನುವಷ್ಟರ ಮಟ್ಟಿಗೆ ಬದಲಾಗಿದೆ. ಪರಿವರ್ತನೆ ಜಗದ ನಿಯಮ ಅನ್ನೋ ಹಾಗೆ ಬದಲಾವಣೆ ಕೇವಲ ಐಷಾರಾಮಿಯಾಗದೆ ದಿನನಿತ್ಯದ ಅವಶ್ಯಕತೆಯಾಗಿ ಮಾರ್ಪಾಡು ಹೊಂದಿದೆ. ಹಾಗದರೆ ತಂತ್ರಜ್ಞಾನದ ಸರಿಯಾದ ಬಳಕೆ ಹಾಗು ಸಮಾಜಕ್ಕೆ ಅದರ ಉಪಯುಕ್ತತೆ ಹಾಗು ಅದರ ಪರಿಣಾಮ ತಿಳಿಯೋಣ.
             ಯಂತ್ರಗಳ ಅವಿಷ್ಕಾರದಲ್ಲಿ ಕಂಪ್ಯೂಟರ್ ಹಾಗು ಮೊಬೈಲ್ ಸಂಶೋಧನೆ ಪ್ರಾಯಶಃ ಅತ್ಯುತ್ತಮವಾದದ್ದು ಅನ್ನೊದರಲ್ಲಿ ಸಂಶಯವಿಲ್ಲ.. ಕೇವಲ ಒಂದಷ್ಟು ಬಳಕೆಗೆ ಮಾತ್ರ ಕಂಡುಹಿಡಿದ ಕಂಪ್ಯೂಟರ್ ಹಾಗು ಒಬ್ಬರಿಂದ ಇನ್ನೊಬ್ಬರ ಜೊತೆ ಮಾತನಾಡಲು ಅವಿಷ್ಕರಿಸಿದ ಫೋನ್ ಮುಂದೇ ಮಟ್ಟದಲ್ಲಿ ನಿತ್ಯ ಬದುಕಿನ ಅಂಗವಾಗಬಲ್ಲದು ಅನ್ನೊ ಪರಿಕಲ್ಪನೆ ಕೂಡ ಯಾರಿಗು ಇರಲಿಲ್ಲ.
              ಕಣ್ಣು ಮುಚ್ಚಿ ಯಾವ ಧ್ಯಾನ ಹಾಗು ತಪಸ್ಸು ಮಾಡದೇ ಕುಳಿತಲ್ಲೇ ತನ್ನ ಕೈಯಲ್ಲಿ ಇರೊ ಸ್ಮಾರ್ಟ್ ಮೊಬೈಲ್ ಹಿಡಿದು ತನಗೆ ಬೇಕಾದ ಹೆಚ್ಚಿನ ಕೆಲಸವನ್ನು ತಾನು ಕ್ಷಣ ಮಾತ್ರದಲ್ಲಿ ಮಾಡಬಹುದು. ಒಬ್ಬ ವ್ಯಕ್ತಿಯ ಖಾತೆಗೆ ಹಣ ವರ್ಗಾವಣೆ, ಬಸ್,  ರೈಲ್, ವಿಮಾನ , ಟಿಕೆಟ್  ಕಾಯ್ದಿರುಸುವುದು, ದಿನ ನಿತ್ಯದ  ವಸ್ತುಗಳ ಖರೀದಿ, ದಿನ ನಿತ್ಯ ನಡೆಯೋ ಘಟನೆಗಳ ಸುದ್ದಿ , ತನಗೆ ಬೇಕಾದ ಪುಸ್ತಕ ಓದುವುದು, ಯಾವುದೇ ವಿಷಯಗಳ ಬಗ್ಗೆ ಮಾಹಿತಿ.... ಒಂದೇ ಎರಡೇ ಪಟ್ಟಿ ಮುಗಿಯದಷ್ಟು ಕೆಲಸಗಳನ್ನು  ಅಂತರ್ಜಾಲ ಅನ್ನೊ ವ್ಯವಸ್ಥೆ ಮುಖೇನ ಮಾಡಬಹುದು.

ಅಂತರ್ಜಾಲದ ಶಕ್ತಿಯೇ ಅದು. ಹಾಗಿದಲ್ಲಿ ಇದು ನಮ್ಮ ಅವಶ್ಯಕತೆ. ಕಾರಣವಿಷ್ಟೆ ಬದುಕು ಯಾಂತ್ರಿಕವಾದಷ್ಟು ಸಮಯದ ಅಭಾವ ಮನುಷ್ಯನನ್ನು ಕಾಡುತ್ತಿದೆ. ಹೆಚ್ಚುತ್ತಿರುವ ಸ್ಪರ್ಧೆ, ವ್ಯವಹಾರ ತನ್ನ ಊರಿಗಾಗಲಿ ಅಥವಾ ದೇಶಕ್ಕಾಗಲಿ ಸೀಮಿತವಾಗಿರದೆ ಪ್ರಪಂಚದ ಮೂಲೆ ಮೂಲೆಗು ಪಸರಿಸಿದೆ.. ಯಾವುದೇ ದೇಶದ ವ್ಯಕ್ತಿಯ ಜೊತೆ ಮಾತನಾಡಬಹುದು , ವಸ್ತುಗಳನ್ನು ಖರೀದಿಸಬಹುದು ಹಾಗು ಸಂಭಂದ ಬೆಳೆಸಬಹುದು.ಇಂಥಹ ಸ್ಪರ್ಧಾತ್ಮಕ ಜಗತ್ತಿನಲ್ಲಿ ತನ್ನ  ಇರುವಿಕೆಯನ್ನು ಗಟ್ಟಿಪಡಿಸಬೇಕಾದರೆ ಅಂತರ್ಜಾಲದಂತಹ ತಂತ್ರಜ್ಞಾನದ ಮೊರೆ ಹೋಗಲೇಬೇಕು. ಒಟ್ಟು ವ್ಯವಸ್ತೆಯನ್ನು ನಾವು ಸರಳವಾಗಿ ಡಿಜಿಟಲೀಕರಣ ಎಂದು ಕರೆಯುತ್ತೇವೆ.
        
 ಸಮಾಜದ ಅಭಿವೃದ್ಧಿಗಾಗಿ ನಾವು ಅನೇಕ ರೀತಿಯ ಕಾರ್ಯಕ್ರಮಗಳನ್ನು ಕೊಡುತ್ತೇವೆ. ಅದು ನಮ್ಮ ಸಮಾಜ ಇನ್ನಿತರ ಸೋದರ ಸಮಾಜದೊಂದಿಗೆ ಸರಿಸಮನಾಗಿ ಬೆಳೆಯಬೇಕು. ಧಾರ್ಮಿಕವಾಗಿ ಶೈಕ್ಷಣಿಕವಾಗಿ ಹಾಗು ಸಾಮಾಜಿಕವಾಗಿ ಅಭಿವೃದ್ಧಿಯ ದಾಪುಗಾಲು ಇಡುತ್ತಿದ್ದೇವೆ. ಆದರೆ ಕೆಲವೊಂದು ಕೊರತೆಗಳು ನಮ್ಮನ್ನು ಕಾಡುತ್ತಿದೆ. ಔದ್ಯೋಗಿಕವಾಗಿ ಉತ್ತಮ ಬದುಕನ್ನ ಕಾಣಬೇಕಾದರೆ ಅದರ ಮಾಹಿತಿ ತರಬೇತಿ ಹೊಸ ತಂತ್ರಜ್ಞಾನದ ಅರಿವು ನಮಗೆ ತಿಳಿದಿರಬೇಕು. ನಮ್ಮ ಸಮಾಜದ ಆಗುಹೋಗುಗಳು ಕ್ಷಣ ಮಾತ್ರದಲ್ಲಿ ನಮಗೆ ದೊರಕಬೇಕು. ನಮ್ಮ ಸಮಾಜದ ಪ್ರತಿಭೆಗಳ ಅನಾವರಣ ಪ್ರಪಂಚಾದ್ಯಂತ ಪಸರಿಸಬೇಕು.. ಇಂಥಹ ಸಮಸ್ಯೆಗಳಿಗೆ ಪರಿಹಾರ ನೀಡುವ ಸರಿಯಾದ ವ್ಯವಸ್ಥೆಯನ್ನು ನಾವು ಕಂಡುಕೊಂಡಿದ್ದು ಅಂತರ್ಜಾಲದ ತಂತ್ರಜ್ಞಾನದ ಮುಖೇನ ನಮ್ಮದೇ ಆದ ವೆಬ್ಸೈಟ್ ನಿರ್ಮಾಣ.
                ಈಗಾಗಲೇ ಹೇಳಿದಂತೆ ನಾವು ಕುಳಿತಲ್ಲೇ ಯಾವ ಶ್ರಮ ಪಡದೆ ಸಮಯ ವ್ಯರ್ಥಗೈಯದೆ ಅಂತರ್ಜಾಲ ಬಳಕೆ ಮೂಲಕ ನಿತ್ಯ ಅವಶ್ಯಕ ಕೆಲಸ ಮಾಡೊ ನಾವು ನಮ್ಮ ಸಮಾಜದ ಬೆಳವಣಿಗೆ, ನಮಗೆ ಬೇಕಾದ ನಮ್ಮ ಸಮಾಜದ ವಧು ವರರ ಮಾಹಿತಿ ಉದ್ಯೊಗ ಮಾಹಿತಿ ನಮ್ಮ ಪ್ರತಿಭೆಗಳ ಕಾರ್ಯಕ್ರಮ ಹೀಗೆ ಎಲ್ಲವನ್ನೂ ನಮ್ಮ  ಮೊಬೈಲ್, ಕಂಪ್ಯೂಟರ್, ಮೂಲಕ  ವೆಬ್ ಸೈಟ್ ಮೂಲಕ ಯಾವಗ ಬೇಕಾದರು ಎಲ್ಲಿ ಬೇಕಾದರು ಹಳೆಯದನ್ನೂ, ಹೊಸದನ್ನು ತಿಳಿಯಬಹುದು
                ಡಿಜಿಟಲಿಕರಣ ವ್ಯವಸ್ಥೆಯನ್ನು ಸರಿಯಾದ ರೀತಿಯಲ್ಲಿ ನಾವು ಬಳಸಿಕೊಂಡರೆ ಅದರ ಪ್ರಯೋಜನ ಎಲ್ಲರಿಗೂ ನೀಡಬಹುದುಪ್ರಪಂಚ ಡಿಜಿಟಲ್ ಯುಗದತ್ತ ಮುಖ ಮಾಡಿದೆ. ನಮ್ಮ ಪ್ರಧಾನಿಗಳು ಅದರ ಮಹತ್ವವನ್ನು ಸಾರಿ ನಿಟ್ಟಿನಲ್ಲಿ ಸಾಗಿದ್ದಾರೆ. ನಾವು ಅವರ ಜೊತೆ ಒಂದು ಹೆಜ್ಜೆ ಮುಂದೇ ಇಡೋಣ.

✍:ಕೃಷ್ಣಾನಂದ ಭಂಡಾರಿ ಕುತ್ತೆತ್ತೂರು